Lakshmi nivasa: ಜಯಂತ್ ಬಗ್ಗೆ ಅಜ್ಜಿಗೆ ಅನುಮಾನ, ಅಜ್ಜಿ ಎಚ್ಚರ ಎಂದು ವೀಕ್ಷಕರ ಸಲಹೆ

By ಎಸ್ ಸುಮಂತ್

ಜಯಂತ್ ಹೇಗೆ ಎಂಬುದನ್ನು ಪ್ರೇಕ್ಷಕರು ಈಗಾಗಲೇ ಜಡ್ಜ್‌ ಮಾಡುವ ಹಂತಕ್ಕೆ ಬಂದಿದ್ದಾರೆ. ಜಾಹ್ನವಿ ವಿಚಾರಕ್ಕೆ ಒಬ್ಬರ ಜೀವ ತೆಗೆಯುವುದಕ್ಕೂ ಯೋಚನೆ ಮಾಡಲ್ಲ ಜಯಂತ್. ಅದರಲ್ಲೂ ಜಾಹ್ನವಿಯನ್ನು ತನ್ನಿಂದ ಯಾರೂ ದೂರ ಮಾಡಬಾರದು ಎಂಬುದು ಜಯಂತ್ ಆಸೆ. ಜಾಹ್ನವಿಗೆ ಯಾರು ಕಾಂಟ್ಯಾಕ್ಟ್‌ನಲ್ಲಿ ಇಲ್ಲದೇ ಹೋದರೆ ಅನಿವಾರ್ಯತೆಯಿಂದ ಅವಳು ತನ್ನನ್ನೇ ಪ್ರೀತಿ ಮಾಡುತ್ತಾಳೆ ಎಂಬುದು ಜಯಂತ್ ಆಲೋಚನೆ.

ಜಾಹ್ನವಿ ಜೊತೆಗೆ ಅತಿಯಾದ ಸಲಿಗೆಯಿಂದ ಇದ್ದ ಒಬ್ಬೊಬ್ಬರೆ ಫ್ರೆಂಡ್ಸ್‌ಗಳನ್ನೇ ಎದ್ದೇಳುವುದಕ್ಕೂ ಆಗದಂತ ಸ್ಥಿತಿಗೆ ತಂದು ಇಟ್ಟಿದ್ದಾನೆ. ಕೆಲವರ ಪ್ರಾಣವನ್ನು ತೆಗೆದಿದ್ದಾನೆ. ಈಗ ಜಾಹ್ನವಿ ತನ್ನ ತಂದೆ ತಾಯಿಯ ಜೊತೆಗೂ ಮಾತನಾಡುವಂತೆ ಇಲ್ಲ. ಅವರ ಮನೆಗೂ ಹೋಗುವಂತೆ ಇಲ್ಲ. ತಂದೆ ತಾಯಿ ಜೊತೆಗೆ ನಗು ನಗುತ್ತಾ ಇದ್ದರೆ ಅದನ್ನು ತಡೆದುಕೊಳ್ಳುವುದಿಲ್ಲ. ಈಗ ತವರು ಮನೆಗೆ ಹೋಗುವ ಜಾಹ್ನವಿಯನ್ನು ನಾಟಕವಾಡಿ ಜಯಂತ್ ತಪ್ಪಿಸಿದ್ದಾನೆ. ಆ ನಾಟಕ ಅಜ್ಜಿಗೆ ಗೊತ್ತಾಗಿದೆ.

zee kannada serial Lakshmi nivasa Written Update on May 29th episode

ಜಾಹ್ನವಿ ಕಳುಹಿಸದಂತೆ ನಾಟಕ

ಜಾಹ್ನವಿಯನ್ನು ನೋಡಿಕೊಂಡು ಬರುವುದಕ್ಕೆ ಈ ಸಲ ಅಜ್ಜಿ, ವೆಂಕಿ ಜೊತೆಗೆ ಲಕ್ಷ್ಮೀ-ಶ್ರೀನಿವಾಸ ಹೋಗಿದ್ದರು. ಮನೆಗೆ ಹೋದಾಗಲೇ ಬಾಗಿಲಲ್ಲಿಯೇ ಶಾಕ್ ಆಗಿದ್ದ ಜಯಂತ್. ಬಳಿಕ ಒಂದು ದಿನವೂ ಆಫೀಸ್‌ಗೆ ಹೋಗಲಿಲ್ಲ. ಹೆಚ್ಚು ಮಾತನಾಡಲಿಲ್ಲ. ನೋಡುವ ರೀತಿಯ ಒಂದು ಥರ ಇತ್ತು. ಇವರೆಲ್ಲಾ ಯಾವಾಗ ತೊಲಗುತ್ತಾರೆ ಎಂಬ ಭಾವನೆಯಲ್ಲಿದ್ದ. ಅದನ್ನ ಅಜ್ಜಿ ಚೆನ್ನಾಗಿಯೇ ಗಮನಿಸಿದ್ದರು.

ಜಯಂತ್ ಒಳ್ಳೆ ಗಂಡ ಎಂದು ಹೊಗಳಿಕೆ

ದೊಡ್ಡ ಸೊಸೆಗೆ ಜಾಹ್ನವಿ ಎಂದರೆ ಬಲು ಪ್ರೀತಿ. ಜಾಹ್ನವಿಯನ್ನು ಕರೆದುಕೊಂಡು ಬರ್ತೀನಿ ಎಂದಿದ್ದ ಅತ್ತೆ-ಮಾವ ಹೋದವರಷ್ಟೇ ಜನ ಬಂದಿದ್ದರು. ಈ ವೇಳೆ ಜಾಹ್ನವಿ ಯಾಕೆ ಬರಲಿಲ್ಲ ಎಂಬುದನ್ನು ಶ್ರೀನಿವಾಸ್ ಹೇಳಿದ್ದರು. ಜಯಂತ್ ಕೈಗೆ ಗಾಯವಾಯ್ತು. ಅದಕ್ಕೆ ಜಾಹ್ನವಿ ಅಲ್ಲೇ ಉಳಿದುಕೊಂಡಳು ಎಂದಾಗ ದೊಡ್ಡ ಸೊಸೆ ಎಂಥ ಒಳ್ಳೆ ಗಂಡ ಸಿಕ್ಕಿದ್ದಾನೆ ಎಂದು ಹೊಗಳುತ್ತಿದ್ದಳು.

zee kannada serial Lakshmi nivasa Written Update on May 29th episode

ವೆಂಕಿಗೆ ಸತ್ಯ ಹೇಳಿದ ಅಜ್ಜಿ

ಅಜ್ಜಿಗೆ ಅವನ ನಡವಳಿಕೆ ಮೇಲೆ ಮನೆಯಲ್ಲಿಯೇ ಅನುಮಾನ ಬಂದಿತ್ತು. ಮಗ, ಸೊಸೆ ಹೊಗಳುತ್ತಿದ್ದರೆ ಅಜ್ಜಿಗೆ ಕೋಪ ಬರುತ್ತಿತ್ತು. ಮನಸ್ಸಲ್ಲಿಯೇ ಅವನ ನಡವಳಿಕೆ ಬಗ್ಗೆ ಬೈದುಕೊಳ್ಳುತ್ತಿದ್ದರು. ಜಾಹ್ನವಿಯನ್ನು ಕಳುಹಿಸಬೇಕಾಗುತ್ತದೆ ಎಂದು ಆ ರೀತಿ ಜಯಂತನೇ ಮಾಡಿಕೊಂಡಿದ್ದಾನೆ ಎಂದುಕೊಂಡರು. ಅದೇ ರೀತಿ ವೆಂಕಿ ಬಂದಾಗಲೂ ಅಜ್ಜಿ ಅದನ್ನೇ ಹೇಳಿದ್ದಾರೆ. ಆದರೆ ವೆಂಕಿಗೆ ಅರ್ಥವಾದರೂ ಏನು ಮಾಡುವುದಕ್ಕೆ ಸಾಧ್ಯ ಹೇಳಿ.

ಅಜ್ಜಿ ಎಚ್ಚರವಾಗಿರಬೇಕಂತೆ!

ವೀಕ್ಷಕರು ಈ ಪ್ರೋಮೋಗೆ ವಿಭಿನ್ನವಾದ ಕಮೆಂಟ್ ಜೊತೆಗೆ ಅಜ್ಜಿಗೆ ಎಚ್ಚರಿಕೆ ನೀಡಿದ್ದಾರೆ. 'ಅಜ್ಜಿ ನಿಮಗೆ ಸತ್ಯ ಗೊತ್ತಾಗಿದೆ ಎಂದು ಜಯಂತ್‌ಗೆ ಗೊತ್ತಾದರೆ ಏನು ಮಾಡಿಬಿಡುತ್ತಾನೋ ಹುಷಾರಾಗಿ ಇರಿ' ಎಂದು ಫನ್ನಿ ಕಾಮೆಂಟ್ ಮಾಡಿದ್ದಾರೆ. 'ಅಜ್ಜಿ ನೀನಿಗ ಮನೆಯವರಿಗೆ ಈ ಸತ್ಯ ಹೇಳಿದರು ನಂಬುವುದಿಲ್ಲ. ಅರುಳೋ ಮರುಳೋ ಅಂತಾರೆ. ಅಜ್ಜಿ ನಿಂಗೆ ಗೊತ್ತಾದ ಸತ್ಯ ನಿಮ್ಮ ಮೊಮ್ಮಗಳಿಗೆ ತಿಳಿಯಲಿಲ್ಲವಲ್ಲ. ಅದಕ್ಕೆ ಹಳೇ ತಲೆ ಅನ್ನೋದು. ಅನುಮಾನದ ನಡೆಯನ್ನು ಹೇಗೆ ಕಂಡುಹಿಡಿದರು ನೋಡಿ' ಅಂತೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ.

More from Filmibeat

English summary
zee kannada serial Lakshmi nivasa Written Update on May 29th episode. Here is the details about Grandma knows Jayant drama;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X