Lakshminivasa: ನಡೆದೇ ಹೋಯ್ತು ಸಿದ್ದೇಗೌಡ್ರು - ಪೂರ್ವಿ ಎಂಗೇಜ್ಮೆಂಟ್; ಜವರೇಗೌಡನ ಮೇಲೆ ಅಭಿಮಾನಿಗಳ ಆಕ್ರೋಶ!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿನ ಇವತ್ತಿನ ಸನ್ನಿವೇಶ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಸಿದ್ದೇಗೌಡರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಸಿದ್ದೇಗೌಡ್ರು-ಭಾವನಾ ಒಂದಾಗುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದರು. ಭಾವನಾಗೆ ಪ್ರಪೋಸ್ ಮಾಡುವುದಕ್ಕೆ ಸಿದ್ದೇಗೌಡ್ರಿಗೆ ಧೈರ್ಯ ತುಂಬಿದ್ದು ಆಯ್ತು.

ಅಭಿಮಾನಿಗಳ ಕೊಟ್ಟ ಧೈರ್ಯ, ವಿಶ್ವಾಸಕ್ಕೆ ಸಿದ್ದೇಗೌಡ್ರು ಪ್ರಪೋಸ್ ಮಾಡುವುದಕ್ಕೂ ರೆಡಿಯಾಗಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಸಿದ್ದೇಗೌಡ್ರ ಎಂಗೇಜ್ಮೆಂಟ್ ನಡೆದೆ ಹೋಗಿದೆ.

zee kannada serial Lakshmi nivasa Written Update on may 30th episode

ಪೂರ್ವಿ ಚೆನ್ನಾಗಿ ಓದಿ ಕೊಂಡಿರುವ ಹುಡುಗಿ. ಆದರೆ ಸಿದ್ದೇಗೌಡ್ರು ಎಸ್ಎಸ್ಎಲ್ಸಿ ಅಷ್ಟೇ. ಅದನ್ನು ಸತ್ಯವೇ ಹೇಳಿದ್ದಾನೆ. ಸಿದ್ದೇಗೌಡ್ರ ಜೊತೆಗೆ ಇದ್ದರೆ ಎಂಥವರಿಗೆ ಆಗಲಿ ಬೇಸರ ಆಗುವುದಕ್ಕೆ ಸಾಧ್ಯವೇ ಇಲ್ಲ. ಖುಷಿ ಖುಷಿಯಾಗಿಯೇ ಇರುತ್ತಾರೆ‌. ಮೊನ್ನೆ ಪೂರ್ವಿ ಕೂಡ ಸಿದ್ದೇಗೌಡ್ರ ಜೊತೆಗೆ ಇದ್ದಾಗ ನಗು ನಗುತ್ತ ಇದ್ದಳು. ಅಪ್ಪ ಅಮ್ಮನ ಮಾತಿಗೆ ಇಬ್ಬರು ಒಪ್ಪಿಯೇ ಬಿಟ್ಟರು.

ಪ್ರೀತಿ ಹೇಳುವುದಕ್ಕೆ ಸಿದ್ದು ಧೈರ್ಯ

ಸಿದ್ದುಗೆ ಇಬ್ಬರು ಫ್ರೆಂಡ್ಸ್ ಇದ್ದಾರೆ. ಎಲ್ಲವನ್ನು ಅವರ ಬಳಿ ಹೇಳಿಕೊಳ್ಳುತ್ತಾನೆ. ಭಾವನಾಳನ್ನು ಲವ್ ಮಾಡುತ್ತಿರುವ ವಿಚಾರ ತಿಳಿದಿದೆ. ಅಣ್ಣನಿಗೆ ಫ್ರೆಂಡ್ಸ್ ಫುಲ್ ಸಪೋರ್ಟ್ ಮಾಡುತ್ತಾರೆ. ಅದಕ್ಕೆ ಮೊದಲು ನಿಮ್ಮ ಪ್ರೀತಿಯನ್ನ ಹೇಳಿಬಿಡಿ ಎಂದಿದ್ದಾರೆ. ಅದಕ್ಕೆ ಸಿದ್ದು ಕೂಡ ಒಪ್ಪಿದ್ದ. ನಾಳೆ ಪ್ರಪೋಸ್ ಮಾಡಬೇಕು ಎಂಬ ಖುಷಿಯಲ್ಲಿರುವಾಗಲೇ ಮನೆಯಲ್ಲಿ ರಾದ್ದಾಂತ ಶುರುವಾಗಿದೆ.

ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ

ಮೊನ್ನೆ ಮೊನ್ನೆಯಷ್ಟೇ ಮುನಿಸ್ವಾಮಿ ಮನೆಗೆ ಹೋಗಿ ಹೆಣ್ಣು ನೋಡುವ ಶಾಸ್ತ್ರ ಮಾಡಿಕೊಂಡು ಬಂದಿದ್ದರು. ಅದು ಕೂಡ ಸಿದ್ದೇಗೌಡ್ರಿಗೆ ತಿಳಿದಿಲ್ಲ. ಮುನಿಸ್ವಾಮಿ ಹೇಗೋ ಮಗಳನ್ನು ಮದುವೆಗೆ ಒಪ್ಪಿಸಿದ. ಈಗ ಮುನಿಸ್ವಾಮಿ, ಹೆಂಡತಿ ಮಗಳು ಪೂರ್ವಿ, ಜವರೇಗೌಡರ ಮನೆಗೆ ಬಂದಿದ್ದಾರೆ. ಸಿದ್ದೇಗೌಡ್ರ ತಾಯಿಗಂತು ಇನ್ನಿಲ್ಲದ ಸಂಭ್ರಮ. ಮಗನಿಗೆ ಇಷ್ಟಪಟ್ಟಂತ ಹುಡುಗಿಯೇ ಸಿಕ್ಕಿದ್ದಾಳೆ‌. ಮಗನ ಎಂಗೇಜ್ಮೆಂಟ್ ಎಂಬ ಸಂತಸ. ಭಾವನಾಗೆ ಪ್ರಪೋಸ್ ಮಾಡಬೇಕೆಂಬ ಪ್ಲ್ಯಾನ್‌ನಲ್ಲಿ ಬಂದ ಸಿದ್ದೇಗೌಡ್ರಿಗೆ ಮನೆಯ ವಾತಾವರಣ ನೋಡಿ ಶಾಕ್ ಆಗಿದೆ.

zee kannada serial Lakshmi nivasa Written Update on may 30th episode

ಉಂಗುರು ತೊಡಿಸಿದ ಸಿದ್ದು

ಸಿದ್ದೇಗೌಡ್ರಿಗಾಗಿಯೇ ಎಲ್ಲರೂ ಕಾಯುತ್ತಿದ್ದರು. ಆ ಸಮಯಕ್ಕೆ ಗೌಡ್ರು ಕೂಡ ಬಂದರು. ಹೊಸ ಬಟ್ಟೆ ಹಾಕಿಕೊಂಡು ಬಾ ಎಂದಾಗಲೂ ಅನುಮಾನ. ಯಾಕೆ‌ ಎಂದು ಪ್ರಶ್ನೆ ಮಾಡಿದರೆ ಅದಕ್ಕೂ ಉತ್ತರವಿಲ್ಲ. ಮನೆಯಲ್ಲೇನಾದರೂ ಪೂಜೆನ ಎಂದಾಗ ಅಜ್ಜಿ ಬಾಯ್ಬಿಟ್ಟಿದ್ದಾರೆ. ಆಮೇಲೆ ಜವರೇಗೌಡ ಕೂಡ ನಿಮ್ಮಿಬ್ಬರ ನಿಶ್ಚಿತಾರ್ಥ ಎಂದು ಹೇಳಿದ್ದಾರೆ. ಬೇಡ ಎಂದು ಹೇಳುವುದಕ್ಕೂ ಆಗುತ್ತಿಲ್ಲ ಸಿದ್ದೇಗೌಡ್ರಿಗೆ. ಕಾರಣ ಅಪ್ಪ ಹಾಗೂ ಮುನಿಸ್ವಾಮಿ ಸ್ನೇಹ ಕಣ್ಣೆದುರು ಬರುತ್ತಿದೆ. ಮನೆಯವರ ಒತ್ತಡಕ್ಕೆ ಸಿಲುಕಿ ಉಂಗುರ ಬದಲಿಸಿಕೊಂಡಿದ್ದಾರೆ.

ಸಿದ್ದು ಅಭಿಮಾನಿಗಳಿಗೆ ಬೇಸರ

ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮವಿರುವುದನ್ನು ಸಿದ್ದೇಗೌಡ್ರಿಗೆ ಹೇಳಿಯೇ ಇರಲಿಲ್ಲ. ಅಂದು‌ ಮನೆ ನೋಡುವ ಶಾಸ್ತ್ರಕ್ಕೂ ಹೇಳದೇ ಕರೆದುಕೊಂಡು ಹೋಗಿದ್ದರು. ಇದು ಸಿದ್ದು ಫ್ಯಾನ್ಸ್‌ಗೆ ಬೇಸರ ತರಿಸಿದೆ. ಜವರೇಗೌಡನಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲ ಗೌಡ್ರೇ, ಸಿದ್ದೇಗೌಡ್ರಿಗೆ ಹೇಳದೇ ಕೇಳದೆ ಹೀಗೆ ನಿಶ್ಚಿತಾರ್ಥ ಮಾಡುವುದು ತಪ್ಪು ಅಲ್ವಾ ಅಂತ ಒಬ್ಬರು ಅಂದ್ರೆ, ಇದು ಜಸ್ಟ್ ಎಂಗೇಜ್ಮೆಂಟ್ ಅಷ್ಟೇ.. ಮದುವೆ ಭಾವನಾ ಜೊತೆಗೇನೆ ಆಗೋದು ಅನ್ನೋ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Zee kannada serial Lakshmi nivasa Written Update on may 30th episode. Here is the details about Siddegowdru Purvi's engagement went on;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X