Lakshmi nivasa: ಜಯಂತ್‌ನನ್ನು ಮದ್ವೆ ಆಗಿದ್ದೇನೋ ಜಾಹ್ನವಿ; ಹಿಂಸೆ ಅನುಭವಿಸುತ್ತಿರುವುದು ಮಾತ್ರ ವೀಕ್ಷಕರು!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್, ಶ್ರೀಮಂತ, ಒಳ್ಳೆ ಹುಡುಗ ಎಂದುಕೊಂಡು ಜಾಹ್ನವಿ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ಅವನ ಮನೆಯನ್ನು ಸಹ ನೋಡಿಲ್ಲ. ಅವನೆಲ್ಲಿದ್ದಾನೆ ಗೊತ್ತಿಲ್ಲ, ಮನೆಗೆ ಕರೆಯದೇ ಇದ್ದರೂ ಯಾಕೆ ಎಂಬ ಅನುಮಾನವಿಲ್ಲ. ಹೆಣ್ಣು ಮಕ್ಕಳೆಂದರೆ ಮದುವೆ ಮಾಡಿ ಕಳುಹಿಸಿದರೆ ಮುಗಿದು ಹೋಯ್ತಾ ಎಂಬುದೇ ಈ ಧಾರಾವಾಹಿ ನೋಡಿದಾಗ ಮೂಡುವಂತ ಪ್ರಶ್ನೆಯಾಗಿದೆ.

ಎಷ್ಟೋ ಹೆಣ್ಣು ಮಕ್ಕಳು ಗಂಡ ಸೈಕೋಪಾತ್ ಅಂತ ಡಿವೋರ್ಸ್ ಕೊಟ್ಟಿರುವ ಉದಾಹರಣೆಗಿಳಿವೆ. ಸಾಮಾನ್ಯ ಜನರಷ್ಟೇ ಅಲ್ಲ ಸೆಲೆಬ್ರೆಟಿಗಳೇ ಸೈಕೋಪಾತ್‌ಗಳ ರೀತಿ ವರ್ತಿಸಿ ಕಟ್ಟಿಕೊಂಡವರನ್ನು ಕೂಡಿ ಹಾಕಿ, ನೆಮ್ಮದಿಯೇ ಇಲ್ಲದಂತೆಯೂ ಮಾಡಿದ್ದಾರೆ. ಈಗ ಅದನ್ನು ಧಾರಾವಾಹಿಯಲ್ಲಿ ತೋರಿಸುವಾಗ ಎಷ್ಟೋ ಜನರಿಗೆ ಸೈಕೋ ಅಂದರೆ ಹೇಗೆ ವರ್ತಿಸುತ್ತಾರೆ ಎಂಬುದು ಅರ್ಥವಾಗಿದೆ.

Zee kannada serial Lakshmi nivasa Written Update on May 6th episode

ಕೋತಿ ಎನ್ನುವಂತೆ ಬಲವಂತ

ಜಾಹ್ನವಿಯ ಗ್ರಹಚಾರ ಕೆಟ್ಟಿದ್ದು ಆಫೀಸ್ ಪಾರ್ಟಿಗೆ ಹೋದಾಗ. ಅಲ್ಲಿ ಜಾಹ್ನವಿ ಕ್ಲಾಸ್ ಮೇಟ್ ಒಬ್ಬ ಮಾಮೂಲಿಯಂತೆ ಮಾತನಾಡಿದ. ಅದರಲ್ಲೂ ಜಯಂತ್‌ಗೆ ಆ ವಿಚಾರವೆಲ್ಲಾ ಕುತೂಹಲ ಹುಟ್ಟಿಸಿತ್ತು. ಎಲ್ಲವನ್ನು ಕೇಳಿಸಿಕೊಂಡ. ಮನೆಗೆ ಬಂದವನೇ ನನಗೂ ಒಂದು ಅಡ್ಡ ಹೆಸರಿಡಿ ಎಂದಾಗ. ನಿಮಗೆಲ್ಲಿ ಹೆಸರಿಡುವುದಕ್ಕೆ ಆಗುತ್ತೆ ಎಂದಾಗ ಅವನೇ ಕೋತಿ ಎಂದು ಹೆಸರಿಟ್ಟುಕೊಂಡ. ಜಾಹ್ನವಿಗೂ ಅದೇ ಹೆಸರಿನಿಂದ ಕರೆಯುವುದಕ್ಕೆ ಹೇಳಿದ್ದಾನೆ. ಬೇಡವೆಂದರೂ ಬಲವಂತ ಮಾಡಿದ್ದಾನೆ. ಕರೆದಾಗ ಕೋಪ ಮಾಡಿಕೊಂಡಿದ್ದಾನೆ.

ಮುಚ್ಚಿಟ್ಟಿದ್ದು ತಪ್ಪು ಎಂದು ಹಿಂಸೆ

ಜಾಹ್ನವಿ ಬಳಿ ನಾನೇನು ನಿಮ್ಮ ಕಣ್ಣಿಗೆ ಕೋತಿ ಥರ ಕಾಣ್ತಾ ಇದ್ದೀನಾ? ಎಂದು ಕೇಳಿದಾಗ ಜಾಹ್ನವಿ ಗಾಬರಿಯಾಗಿದ್ದಾಳೆ. ತಕ್ಷಣ ಬದಲಾದ ಜಯಂತ್, ನಕ್ಕಿದ್ದು, ತಮಾಷೆ ಮಾಡಿದೆ ಎಂದಿದ್ದಾನೆ. ನಗಿ ನಗಿ ಅಂತ ನಗಿಸಿದ್ದಾನೆ. ಆ ಖುಷಿ ಹೆಚ್ಚು ಸಮಯ ಇರುವುದಕ್ಕೂ ಬಿಡದೇ ಕಾಲೇಜು ವಿಚಾರ ಪ್ರಸ್ತಾಪಿಸಿದ್ದಾನೆ. ಅದು ತಪ್ಪು ಅಲ್ವಾ? ನೀವೂ ನನ್ನ ಹತ್ರ ಎಲ್ಲಾ ಹೇಳಬೇಕಿತ್ತು ಅಲ್ವಾ. ಯಾಕೆ ಮುಚ್ಚಿಟ್ರಿ. ನಾನು ಎಲ್ಲಾ ಹೇಳಿದಂತೆ ನೀವೂ ಹಳೇ ವಿಚಾರಗಳನ್ನು ಹೇಳಬೇಕು ಅಲ್ವಾ ಎಂದಿದ್ದಾನೆ.

Zee kannada serial Lakshmi nivasa Written Update on May 6th episode

ಒಮ್ಮೆ ನಗು.. ಒಮ್ಮೆ‌ಕೋಪ

ಜಾಹ್ನವಿಗೆ ಜಯಂತ್ ವರ್ತನೆ ಗಾಬರಿ ಹುಟ್ಟಿಸಿದೆ. ಒಮ್ಮೆ ಸೀರಿಯಸ್ ಆಗಿ ಕೇಳುತ್ತಾನೆ ಇನ್ನೊಮ್ಮೆ ಜೋರು ನಗುತ್ತಾನೆ. ಜಾಹ್ನವಿ ಕಣ್ಣಲ್ಲಿ ನೀರು ಬರುತ್ತಿದೆ. ಕಾಲೇಜಲ್ಲಿ ತಮಾಷೆಗಾಗಿ ಮಾಡಿದ್ದು. ನಿಮ್ಮ ಬಳಿ ಹೇಳಿಕೊಳ್ಳಬೇಕು ಎನಿಸಲಿಲ್ಲ ಎಂದಾಗ ಇನ್ನು ಕೋಪ ಮಾಡಿಕೊಂಡಿದ್ದಾನೆ. ಅಂದರೆ ನನ್ನ ಬಳಿ ನಿಮಗೆ ಏನನ್ನು ಹೇಳಿಕೊಳ್ಳಬೇಕು ಅನ್ನಿಸಲ್ಲ ಅಲ್ವಾ. ನೀವೂ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದಿದ್ದಾನೆ. ಇದು ಕೂಡ ಜಾಹ್ನವಿಗೆ ಗಾಬರಿ ಹುಟ್ಟಿಸಿದೆ.

ಶಿಕ್ಷೆ ನೀಡಿದ ಜಯಂತ್

ಜಾಹ್ನವಿ ಕಾಲೇಜಲ್ಲಿ ಇದ್ದ ರೀತಿಗೆ ಜಯಂತ್ ಶಿಕ್ಷೆ ಕೊಟ್ಟಿದ್ದಾನೆ. ಮಂಡಿಯೂರಿ ನಿಲ್ಲುವಂತೆ ಹೇಳಿದ್ದಾನೆ. ಗದರಿದ್ದಾನೆ. ಇದೆಲ್ಲಾ ಧಾರಾವಾಹಿಯೇ ಸರಿ. ಆದರೆ ನಿಜ ಜೀವನದಲ್ಲೂ ಇಂಥ ಕ್ರೂರ ನಡವಳಿಕೆ ಇರುವ ಗಂಡಂದಿರು ಅದೆಷ್ಟೋ ಹೆಣ್ಣು‌ಮಕ್ಕಳಿಗೆ ಸಿಕ್ಕಿದ್ದಾರೆ. ಆದರೆ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ಇಂಥವರಿಂದ ಈಗಲೂ ಹೆಣಗುವ ಹೆಣ್ಣು ಮಕ್ಕಳಿದ್ದಾರೆ. ಜಯಂತ್ ನಡವಳಿಕೆ ವೀಕ್ಷಕರಿಗೆ ಭಯ ಹುಟ್ಟಿಸಿದೆ. ಇನ್ನು ಜಾಹ್ನವಿಯ ಸ್ಥಿತಿ ಹೇಗೋ ಅಂತ ವೀಕ್ಷಕರು ಮರುಗುತ್ತಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about The audience was shocked to see Jayant acting like a psycho near Jahnavi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X