Lakshmi nivasa: ಜಾಹ್ನವಿಯ 'ಗೂಬೆ' ಹುಡುಕಾಟದಲ್ಲಿ ಜಯಂತ್!: ಆ ಸೈಕೋಗೆ ಮಾತ್ರ ಸಿಗಬೇಡ ವಿಶ್ವ ಎಂದ ನೆಟ್ಟಿಗರು!
ಜೀ ಕನ್ನಡದಲ್ಲಿ ಬರುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಎರಡು ಭಾಗವಾಗಿ ಪ್ರಸಾರವಾಗುತ್ತಿದೆ. ಒಂದು ಲಕ್ಷ್ಮೀ ಶ್ರೀನಿವಾಸರ ಕುಟುಂಬದ ಕಥೆಯಾದರೆ ಮತ್ತೊಂದು ಜಯಂತ್-ಜಾಹ್ನವಿಯ ಸಂಸಾರದ ಕಥೆಯಾಗಿದೆ. ಒಂದು ಗಂಟೆಯ ಸಂಚಿಕೆಯಲ್ಲಿ ಯಾವಾಗಲೂ ಖುಷಿಯಾಗಿಯೇ ನೋಡುವ ಪ್ರೇಕ್ಷಕರು ಜಯಂತ್-ಜಾಹ್ನವಿಯ ಎಪಿಸೋಡ್ ಬಂದರೆ ಹಲ್ಲು ಹಲ್ಲು ಕಡಿಯುತ್ತಾರೆ, ಹಾರ್ಟ್ ಜೋರಾಗಿ ಬಡಿದುಕೊಳ್ಳುವುದಕ್ಕೆ ಶುರುವಾಗುತ್ತದೆ. ಕಾರಣ ಜಯಂತ್ ನಡವಳಿಕೆ.
ಜಾಹ್ನವಿಯನ್ನು ನೋಡಿದ ಕೂಡಲೇ ಅವಳ ಮೇಲೆ ಲವ್ವಾಗಿದೆ. ಮನೆಯಲ್ಲಿ ಮಾತನಾಡಿ, ಒಪ್ಪಿಸಿ ಅದ್ದೂರಿಯಾಗಿಯೇ ಮದುವೆಯಾಗಿದ್ದಾನೆ. ಮದುವೆಯ ಬಳಿಕ ಅತ್ತೆ-ಮಾವನ ಮನೆಯವರನ್ನು ಮನೆಗೆ ಕರೆಸಿಲ್ಲ. ಪ್ರತಿದಿನ ಜಾಹ್ನವಿಗೆ ಜಯಂತ್ ನ ಮುಖವಾಡಗಳನ್ನು ನೋಡಿ ನೋಡಿ ಭಯವಾಗಿದೆ.

ಜಯಂತ್‌ನನ್ನು ಮತ್ತೆ ಕಾಡಿದ ಆತ್ಮಸಾಕ್ಷಿ
ಜಾಹ್ನವಿಯ ಮೇಲೆ ಜಯಂತ್‌ಗೆ ಅದೇಕೆ ಅಷ್ಟೊಂದು ಅನುಮಾನವೋ ಏನೋ. ತನ್ನ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಬೇಕು. ಹಾಗೇ ಹೇಳಿಕೊಳ್ಳದೆ ಹೋದರೆ ಅವಳಿಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾನೆ. ಜಯಂತ್‌ಗೆ ತನ್ನ ಹೆಂಡತಿಯಾದವಳು ನನ್ನ ಪ್ರಪಂಚದಲ್ಲಿ ಮಾತ್ರ ಬದುಕಬೇಕು, ಅವಳಿಗೆ ಬೇರೆ ಪ್ರಪಂಚವೇ ಇರಬಾರದು ಎಂಬ ಆಲೋಚನೆ. ಅವನ ಈ ಹುಚ್ಚಾಟಕ್ಕೆ ಆಗಾಗ ಟೆನ್ಷನ್ ಕೊಡುವುದಕ್ಕೆ ಅವನ ಮನಸ್ಸಾಕ್ಷಿಗಳು ಕೂಡ ಸಾಲು ಸಾಲಾಗಿ ಬಂದು ನಿಲ್ಲುತ್ತವೆ.
ಗೂಬೆ ಹುಡುಕುತ್ತಾ ಹೊರಟ ಜಯಂತ್
ಜಾಹ್ನವಿ ಕಾಲೇಜಿನಲ್ಲಿ ಇದ್ದಾಗ ಎಲ್ಲರಿಗೂ ಒಂದೊಂದು ಅಡ್ಡ ಹೆಸರು ಇಡುತ್ತಾಳೆ ಎಂಬುದು ಗೊತ್ತಾದಾಗಿಂದ ಜಯಂತ್‌ನ ನಡವಳಿಕೆಯೇ ಬದಲಾಗಿದೆ. ಅದರಲ್ಲೂ 'ಗೂಬೆ' ಎಂಬ ಹೆಸರು ಯಾರದ್ದು ಎಂದು ಹುಡುಕಾಟ ಶುರು ಮಾಡಿದ್ದಾನೆ. ಅದಕ್ಕೆ ಸಾಕಷ್ಟು ಬಾರಿ ಕಾಲ್ ಹೋಗಿದ್ದದ್ದು ನೋಡಿ, ನಂಬರ್ ಬೇರೆ ಎತ್ತುಕೊಂಡಿದ್ದಾನೆ. ಆದರೆ ಆ ನಂಬರ್ ಕನೆಕ್ಟ್ ಆಗದೇ ಸ್ವಿಚ್ಡ್ ಆಫ್ ಬರ್ತಿದೆ.

ಒಂದೇ ಶಾಪ್‌ನಲ್ಲಿ ಜಯಂತ್-ವಿಶ್ವ
ಇತ್ತ ವಿಶ್ವನ ಮನೆಗೆ ಅತ್ತೆಯ ಮಗಳು ತನು ಬಂದಿದ್ದಾಳೆ. ಅವಳಿಂದ ಕೊಂಚ ಹಳೆಯ ನೆನಪುಗಳನ್ನು ಮರೆಯುವುದಕ್ಕೆ ಪ್ರಯತ್ನ ಪಡುತ್ತಿದ್ದಾನೆ. ಇವತ್ತು ತನು ಹುಟ್ಟಿದ ದಿನ ಹೀಗಾಗಿ ಶಾಪಿಂಗ್ ಅಂತ ಕರೆದುಕೊಂಡು ಬಂದಿದ್ದಾನೆ. ಅದೇ ಕಾಂಪ್ಲೆಕ್ಸ್‌ನಲ್ಲಿಯೇ ಜಯಂತ್ ಇದ್ದಾನೆ. ಆ ಶಾಪ್‌ನಲ್ಲೆಲ್ಲಾ ಗೂಬೆ ಯಾರಿರಬಹುದು ಎಂದೇ ಜಯಂತ್ ಹುಡುಕಾಟ ನಡೆಸಿದ್ದಾನೆ. ಆ ನಂಬರ್‌ಗೆ ಕರೆ ಕೂಡ ಮಾಡಿದ್ದಾನೆ. ಆದರೆ ಆಗಲೂ ಸ್ವಿಚ್ಡ್ ಆಫ್ ಬಂದಿದೆ.
ವಿಶ್ವನನ್ನು ಕಾಪಾಡಿ ಎಂದ ನೆಟ್ಟಿಗರು
ವಿಶ್ವನ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದಕ್ಕೆ ವೀಕ್ಷಕರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಜಯಂತ್ ಕೈಗೆ ಮಾತ್ರ ಸಿಗಬೇಡ ಎಂದು ಸಲಹೆ ನೀಡಿದ್ದಾರೆ. ಜಯಂತ್‌ನ ವಿಚಿತ್ರ ನಡವಳಿಕೆಗೆ ವೀಕ್ಷಕರು ಭಯಗೊಂಡಿದ್ದಾರೆ. ಈಗಾಗಲೇ ಕಾಲೇಜಿನಲ್ಲಿ ಒಮ್ಮೆ ಜಾಹ್ನವಿಯನ್ನು ಸಲುಗೆಯಿಂದ ಮಾತನಾಡಿಸಿದವನ ಪ್ರಾಣವನ್ನೇ ತೆಗೆದವನು ಜಯಂತ್.
ಜಯಂತ್‌ಗೆ ಅನುಮಾನ?
ರಸ್ತೆಯಲ್ಲಿ ರೇಗಿಸಿದವನ ಕಾರು ಆಕ್ಸಿಡೆಂಟ್ ಮಾಡಿ ಪ್ರಾಣ ತೆಗೆದವನು ಜಯಂತ್. ಇನ್ನು ವಿಶ್ವ ಸಿಕ್ಕಿದರೆ ಅವನನ್ನು ಬಿಡುತ್ತಾನಾ? ಎಂಬ ಭಯ ನೋಡುಗರಲ್ಲಿ ಇದೆ. ಅದರಲ್ಲೂ ವಿಶ್ವ, ಜಾಹ್ನವಿಯ ಹಾಡು ಕೇಳಿದೊಡನೆ ಕಲ್ಲು ಕಂಬದಂತೆ ನಿಂತಿದ್ದಾನೆ. ಇದು ಜಯಂತ್‌ಗೆ ಅನುಮಾನವೆಲ್ಲಿ ಬರುತ್ತೋ ಏನೋ.


Click it and Unblock the Notifications











