Lakshminivasa: ಭಾವನಾ ಜಾತಕ ದೋಷ ಕಳೀತಾ? ಅದೃಷ್ಟ ಎಂದೇಳಿಸಿದ ನಿರ್ದೇಶಕರಿಗೊಂದು ಸಲಾಂ!

By ಎಸ್ ಸುಮಂತ್

ಸಿದ್ದೇಗೌಡ್ರಿಗೆ ಭಾವನಾ ತನ್ನ ಪ್ರೀತಿಯನ್ನ ಒಪ್ಪುತ್ತಿಲ್ಲ, ಸರಿಯಾಗಿ ಮಾತನಾಡಿಸುತ್ತಿಲ್ಲ ಎಂಬ ಟೆನ್ಶನ್ ಬೇಸರ ಒಂದು ಕಡೆ. ಇತ್ತ ಮನೆಯವರು ಕೂಡ ಸಿದ್ದು ಜೊತೆಗೆ ಸರಿಯಾಗಿ‌ ಮಾತನಾಡುತ್ತಿಲ್ಲ.

ಭಾವನಾಳನ್ನ ಸೊಸೆಯೆಂದು ಒಪ್ಪಿಕೊಳ್ಳುವುದಕ್ಕೆ ಮನೆಯವರು ರೆಡಿ ಇಲ್ಲ. ಒಳ್ಳೆ ನಾಲಿಗೆ ಮೇಲೆ ಬಿಸಿ ತುಪ್ಪವನ್ನಿಟ್ಟುಕೊಂಡಂತ ಬದುಕು ಸಿದ್ದೇಗೌಡ್ರದ್ದಾಗಿತ್ತು. ಸಿದ್ದೇಗೌಡರ ಪರಿಸ್ಥಿತಿ ನೋಡಿದಾಗ ನೋಡುಗರಿಗೇನೆ ಸಾಕಷ್ಟು ಸಲ ಸಿಂಪಥಿ ಉಂಟಾಗಿದ್ದು ಇದೆ. ಆದರೆ ಅಮ್ಮನ ಮನಸ್ಸು ಮಾತ್ರ ಕರಗಿರಲಿಲ್ಲ.

Zee kannada serial Lakshmi nivasa Written Update on November 28th episode

ಅಮ್ಮನ ಬೇಸರಕ್ಕೆ ಅಪ್ಪನ ಕೋಪಕ್ಕೆ ಸಿಂಚನಾ ನೀರೆರೆಯುತ್ತಿದ್ದಳು. ಭಾವನಾ ಕುಂತ್ರು ನಿಂತ್ರು ತಪ್ಪು ಎಂದು ವಾದಿಸುತ್ತಿದ್ದಳು. ಎಲೆಕ್ಷನ್ ಒಂದು ಕಳೀಲಿ ಮನೆಯಿಂದ ಹೊರಗೆ ಹಾಕೋದೆ ಅಂತ ಎಲ್ಲಾ ನಿರ್ಧಾರವಾಗಿತ್ತು. ಆದರೆ ತ್ರಿಕಾಲ ಜ್ಞಾನಿಗಳು ಬಂದು ಎಲ್ಲದನ್ನು ಸರಿ ಮಾಡಿಬಿಟ್ಟರು.

ಭಾವನಾಳಿಂದ ಅದೃಷ್ಟ

ಭಾವನಾಳಿಗೆ ತಾಳಿ ಕಟ್ಟಿದ ರೀತಿ ತಪ್ಪೇ ಆದರೂ ಈಗ ಮನೆಯ ಬೆಳವಣಿಗೆ ನೋಡಿದರೆ ಅದು ಸರಿಯಾಗಿದೆ ಎಂದೇ ತೀರ್ಮಾನವಾಗಿದೆ. ಮಗಳನ್ನು ಮದುವೆಯಾಗಲಿಲ್ಲ ಎಂದು ಕೋಪಗೊಂಡಿದ್ದ ಮುನಿಸ್ವಾಮಿ ಅದೇಗೆ ಗೆಲ್ತೀಯಾ? ನೋಡಿಯೇ ಬಿಡ್ತೀನಿ ಎಂದು ಹಠ ತೊಟ್ಟಿದ್ದ. ಆದರೂ ಒಳ್ಳೆ ಲೀಡ್‌ನಲ್ಲಿ ಜವರೇಗೌಡರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಭಾವನಾಳ ಕಾಲು ಗುಣದಿಂದ ಎಂದು ತಿಳಿದು ಕೋಪ ಮಾಡಿಕೊಳ್ಳಬೇಕಾ? ಖುಷಿ ಪಡಬೇಕಾ ಎಂಬುದು ತಿಳಿಯದೇ ಗೊಂದಲದಲ್ಲಿದ್ದಾನೆ.

ಮನೆಬಿಟ್ಟು ಹೊರಟ ಸಿದ್ದು

ಮನೆಯವರೆಲ್ಲರೂ ಒಟ್ಟಿಗೆ ಸೇರಿ ಮಾತನಾಡುತ್ತಿದ್ದರು. ಆಗ ಒಳಗೆ ಬಂದ ಸಿದ್ದು ಯಾರನ್ನು ಮಾತಾಡಿಸದೇ ಒಳ ಹೋಗುವುದಕ್ಕೆ ಪ್ರಯತ್ನಿಸಿದ. ಅಮ್ಮ ಕರೆದು, ನಮ್ಮೆಲ್ಲರ ಜೊತೆಗೆ ಕೂತು ಐದು ನಿಮಿಷ ಮಾತಾಡುವುದಕ್ಕೂ ಇಷ್ಟವಿಲ್ವಾ ಸಿದ್ದು. ನಿನ್ನ ಹೆಂಡತಿಯನ್ನ ಕರೆದುಕೊಂಡು ಹೋಗಿ ಮೊದಲು ಬಿಟ್ಟು ಬಾ ಎಂದಳು. ಇದು ಗೌಡ್ರಿಗೆ ಕೋಪ ತರಿಸಿತ್ತು. ನನ್ನ ಹೆಂಡತಿ ಇರೋದು ಬೇಡ ಅಂದ್ರೆ ನಾನು ಇರಲ್ಲ ಎಂದು ಅಪ್ಪಾಜಿ ಆಶೀರ್ವಾದ ಪಡೆದು ಹೊರಡುವುದಕ್ಕೆ‌ ಹೊರಟರು.

ಮಗನನ್ನು ತಡೆದ ಜವರೇಗೌಡ

ತ್ರಿಕಾಲ ಜ್ಞಾನಿಗಳು ಹೇಳಿದ ಮಾತು ಜವರೇಗೌಡನಿಗೆ ಭಯ ಹುಟ್ಟಿಸಿದೆ. ಅದೃಷ್ಟ ದೇವತೆ, ಮನೆಯಿಂದ ಹೊರಗೆ ಹೋದರೆ ದರಿದ್ರ ಬರುತ್ತೆ ಎಂಬ ಆತಂಕ ಇದೆ. ಜೊತೆಗೆ ಭಾವನಾ ಕಾಲು ದಸೆಯಿಂದಾನೇ ಮಂತ್ರಿಯಾಗುವ ಸಾಧ್ಯತೆ ಇದೆ ಎಂಬ ಮಾತನ್ನು ಹೇಳಿದ್ದಾರೆ. ಇದೆಲ್ಲವನ್ನು ನೆನೆಸಿಕೊಂಡು ತಾನೂ ಮಂತ್ರಿಯಾಗದೇ ಹೋದರೆ ಹೇಗೆ ಎಂದು ಯೋಚಿಸಿ ಸಿದ್ದು ಜಾಗೂ ಭಾವನಾಳನ್ನು ಮನೆಯಲ್ಲಿಯೇ ಇರುವಂತೆ ತಿಳಿಸಿದ್ದಾರೆ. ಈ ಮಾತು ಕೇಳಿ ಗೌಡ್ರು ಫುಲ್ ಖುಷಿಯಾಗಿದ್ದಾರೆ.

ಭಾವನ ದೋಷಮುಕ್ತಳಾದಳಾ?

ಭಾವನಾಳದ್ದು ಮೂಲ ನಕ್ಷತ್ರ. ಈ ನಕ್ಷತ್ರದಲ್ಲಿ ಹುಟ್ಟಿದವರನ್ನು ಮದುವೆಯಾದರೆ ಗಂಡನ ಪ್ರಾಣಕ್ಕೆ ತೊಂದರೆ ಎಂದೇ ಆರಂಭದಲ್ಲಿ ಹೇಳಲಾಗಿತ್ತು. ಆ ಕಾರಣದಿಂದಾನೇ ಭಾವನಾಗೆ ಮದುವೆಯಾಗುತ್ತಿಲ್ಲ ಎಂದು ಬಿಂಬಿಸಲಾಗಿತ್ತು. ಶ್ರೀಕಾಂತ್ ಜಾತಕ ನಂಬದೇ ಮದುವೆಯಾಗಲು ಬಂದಾಗ ಅವನ ಆಕ್ಸಿಡೆಂಟ್ ಮಾಡಿಸಿ ಜಾತಕವೇ ಸತ್ಯ ಎಂಬಂತೆ ಧಾರಾವಾಹಿ ನಿರ್ದೆರಶಕರು ಪ್ರೂವ್ ಮಾಡಿದ್ದರು. ಜವರೇಗೌಡರ ಮನೆಗೆ ಭಾವನಾ ಬಂದ ದಿನವೇ ಸಮಸ್ಯೆಯೂ ಎದುರಾಗಿತ್ತು. ಆದರೆ ಈಗ ಭಾವನಾಳನ್ನು ಅದೃಷ್ಟವೆಂದು ಬಿಂಬಿಸಿದ್ದಾರೆ. ತ್ರಿಕಾಲ ಜ್ಞಾನಿಗಳು ಶ್ರೀನಿವಾಸ್ ಮನೆಗೆ ಮಾತ್ರ ಬಂದಿರುವುದನ್ನು ತೋರಿಸಿದ್ದರು. ಈಗ ಭಾವನಾ ಬದುಕಲ್ಲಿ ಅವರ ಮಾತೇ ಅವಳ ಬದುಕನ್ನು ಬದಲಾಯಿಸುವಂತೆ ಮಾಡಿದೆ.

More from Filmibeat

English summary
Lakshmi nivasa Serial: Here is the details about The director compared Bhavana to the goddess of fortune
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X