Lakshminivasa: ಭಾವನಾ ಅಪ್ಪನ ಮುಂದೆ ಜವರೇಗೌಡನ ಅಹಂಕಾರದ ಮಾತು; ವೀಕ್ಷಕರಿಂದ ಬುದ್ದಿ ಮಾತು
ಮದುವೆ, ಡಿವೋರ್ಸ್ ಎಂಬ ವಿಚಾರ ಬಂದಾಗ ಯಾವಾಗಲೂ ದೂಷಣೆ ಬರೋದು ಹೆಣ್ಣು ಮಕ್ಕಳ ಮೇಲೆ. ಹೆಣ್ಣಿನದ್ದೇ ತಪ್ಪು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಅದರ ಪರಿಣಾಮ ಹೆಣ್ಣು ಮಕ್ಕಳನ್ನ ದೂರುವುದು, ಅವಮಾನಿಸುವುದನ್ನೆ ಮಾಡುತ್ತಾರೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಲಕ್ಷ್ಮೀ ನಿವಾಸ ಧಾರಾವಾಹಿ. ಇದರಲ್ಲೂ ಭಾವನಾಳನ್ನೇ ಎಲ್ಲರೂ ದೂಷಿಸುತ್ತಿದ್ದಾರೆ. ಏನೂ ಮಾತನಾಡದೆ ಇದ್ದು, ಸಿದ್ದೇಗೌಡ್ರನ್ನ ಬುಟ್ಟಿಗೆ ಹಾಕಿಕೊಂಡು ಬಿಟ್ಟಳು ಎಂಬ ಅಪವಾದ ಗೌಡರ ಮನೆಯವರದ್ದು.
ಭಾವನಾ ಮೊದಲೇ ನೋವಿನಲ್ಲಿ ಇದ್ಲು. ಮದುವೆ ಆಗಿಲ್ಲ ಅಂತ ಭಾವನಾಳ ತಂದೆ ತಾಯಿ ನೋವು ಪಟ್ಟುಕೊಳ್ಳುತ್ತಿದ್ದರು. ಅದನ್ನು ನೋಡಿಯೇ ಭಾವನಾ ಸಂಕಟ ಪಡುತ್ತಿದ್ದಳು. ಕುತ್ತಿಗೆಯಲ್ಲಿ ತಾಳಿ ಬಂದ ಮೇಲೆ ಆಗಲೂ ಭಾವನಾ ಸಂಕಟ ಪಡುವಂತೆ ಆಯ್ತು. ಇದೀಗ ಗಂಡನ ಮನೆಯಲ್ಲೂ ಅವಳದ್ದೇ ತಪ್ಪು ಎನ್ನುವಂತೆ ಆಡುತ್ತಿದ್ದಾರೆ.

ಗೌಡ್ರ ಮನೆಯಲ್ಲಿ ಒಂಟಿಯಾದ ಭಾವನಾ
ಜವರೇಗೌಡನ ಮನೆಯಲ್ಲಿ ಈಗಲೂ ಒಂದೇ ನಿರ್ಧಾರ, ಮಗ ಬೇಕಾದರೆ ಮನೆಗೆ ಬರಲಿ, ಆದರೆ ಮಗ ತಾಳಿ ಕಟ್ಟಿರುವ ಭಾವನಾ ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತೆ ಇಲ್ಲ. ಆದರೆ ಸಿದ್ದೇಗೌಡ್ರು ಅದಕ್ಕೆ ಒಪ್ಪುತ್ತಿಲ್ಲ. ಭಾವನಾಳನ್ನು ಬಿಡಲ್ಲ ಎನ್ನುತ್ತಿದ್ದಾರೆ. ಆದರೆ ಮನೆಯಲ್ಲಿ ಒಂಟಿಯಾಗಿದ್ದಾಳೆ. ಗೌಡ್ರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದರು, ಅದನ್ನು ಸ್ವೀಕರಿಸುವ ಮನಸ್ಸಲ್ಲಿ ಭಾವನಾ ಇಲ್ಲ.
ಮಗಳನ್ನು ನೋಡಲು ಬಂದ ಶ್ರೀನಿವಾಸ
ಮಗಳು ಮದುವೆಯಾಗಬೇಕು, ಮಗಳು ಸಂತೋಷವಾಗಿರಬೇಕು ಎಂಬ ಆಸೆ ಲಕ್ಷ್ಮೀ-ಶ್ರೀನಿವಾಸನದ್ದು. ಸಿದ್ದೇಗೌಡ್ರ ಪ್ರೀತಿ ಶ್ರೀನಿವಾಸನಿಗೆ ಅರ್ಥವಾಗಿದೆ. ಹೀಗಾಗಿ ಮಗಳಿಗೆ ಮನವರಿಕೆ ಮಾಡಿ, ಸಿದ್ದು ಜೊತೆಗೆ ಗಂಡನ ಮನೆಗೆ ಕಳುಹಿಸಿದ. ಆದರೆ ಅಲ್ಲಿ ಮಗಳು ಹೇಗಿರಬಹುದೆಂಬ ಊಹೆ ಶ್ರೀನಿವಾಸನಿಗೆ ಇದೆ. ಯಾಕಂದ್ರೆ ಸೊಸೆ ಸಿಂಚನ ಬಂದು ಜೋರಾಗಿ ಗಲಾಟೆ ಮಾಡಿ ಹೋಗಿದ್ದಳು. ಇದೆಲ್ಲ ಬೆಳವಣಿಗೆಯ ಬಳಿಕ ಶ್ರೀನಿವಾಸ, ಮಗಳನ್ನು ನೋಡಿಕೊಂಡು ಹೋಗಲು ಬಂದಿದ್ದಾನೆ.
ಮಾವನ ನಡೆಗೆ ಭಾವನಾ ಕಣ್ಣೀರು
ಜವರೇಗೌಡ ಹೆಚ್ಚು ನಂಬಿಕೆ ಇಟ್ಟಿದ್ದದ್ದು, ಸಿದ್ದೇಗೌಡನ ಮೇಲೆ. ತಮ್ಮ ಮುಂದಿನ ರಾಜಕೀಯ ರುವಾರಿ ಸಿದ್ದೇಗೌಡ್ರೇ ಎಂದು ನಂಬಿ ಬೆಳೆಸಿದ್ದರು. ಆದರೆ ತನ್ನ ಪ್ರೀತಿಗಾಗಿ ಗೌಡ್ರು, ಮನೆಯವರನ್ನೆಲ್ಲ ತಿರಸ್ಕರಿಸಿದರು. ಈಗ ಶ್ರೀನಿವಾಸ ಮನೆಗೆ ಬಂದಾಗ ಜವರೇಗೌಡ್ರು ಅವಮಾನ ಮಾಡಿದ್ದಾರೆ. ಕುಳಿತಿದ್ದ ಸೋಫಾವನ್ನು ಸಗಣಿ ನೀರು ಹಾಕಿ ತೊಳೆಯಿರಿ ಎಂದೆಲ್ಲಾ ಹೇಳಿ ಅವಮಾನಿಸಿದ್ದಾನೆ. ಇದನ್ನು ಕಂಡ ಭಾವನಾ ಏನು ಮಾಡಲು ಆಗದ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದಾಳೆ. ತಂದೆಗೆ ಅವಮಾನವಾಗಿದ್ದನ್ನು ಕಂಡು ಏನು ಮಾಡಲು ಆಗದೇ ಕಣ್ಣೀರು ಹಾಕುತ್ತಾ ನಿಂತಿದ್ದಾಳೆ.
ವೀಕ್ಷಕರ ಬೇಸರ
ಜವರೇಗೌಡನ ಮಾತಿಗೆ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಜವರೇಗೌಡ ಎಷ್ಟೇ ದೊಡ್ಡವನಾಗಿರಬಹುದು, ಆದರೆ ಸರಿ ತಪ್ಪುಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ತಪ್ಪು ಮಾಡಿರುವುದು ತನ್ನ ಮಗ ಸಿದ್ದೇಗೌಡ. ಅವನ ತಪ್ಪಿನ ಬಗ್ಗೆ ಮಾತನಾಡುತ್ತಲೇ ಇಲ್ಲ. ಬರೀ ಭಾವನಾ ಬಗ್ಗೆ ಕೆಟ್ಟದಾಗಿ ಮಾತನಾಡುವುದೇ ಆಯ್ತು. ಮೊದಲು ನಿನ್ನ ಮಗನಿಗೆ ಒಳ್ಳೆ ಬುದ್ದಿ ಕಲಿಸು ಎಂದು ಕಿವಿ ಮಾತು ಹೇಳುತ್ತಿದ್ದಾರೆ. ಅದು ಸರಿ ಜವರೇಗೌಡರು ತಮ್ಮ ಮಗನ ಮೋಸದ ಬಗ್ಗೆ ಒಮ್ಮೆಯೂ ಮಾತನಾಡುತ್ತಿಲ್ಲ.


Click it and Unblock the Notifications











