Lakshmi nivasa: ಸಿದ್ದು-ಭಾವನಾ ಸ್ಥಿತಿಗೆ ಮರುಕ: ನಮ್ಮೂರಿಗೆ ಬನ್ನಿ ಎಂದು ಆಹ್ವಾನ!
ಸಿದ್ದುಗೆ ಲವ್ ಅಟ್ ಸೈಟ್ ಅಂತಾರಲ್ಲ ಅದು ಭಾವನಾಳನ್ನ ನೋಡಿದ ಮೊದಲ ನೋಟದಲ್ಲಿಯೇ ಆಗಿ ಹೋಯ್ತು. ಸಿದ್ದು ಬೇರೆಯವರ ಥರ ಅಲ್ಲ. ಅಪ್ಪ-ಅವ್ವ ಅಂದ್ರೆ ಪ್ರಾಣ ಕೂಡ ಬಿಡುತ್ತಾನೆ. ಈಗ ಪ್ರೀತಿಸಿ ಮದುವೆಯಾಗಿರುವ ಹುಡುಗಿಯನ್ನು ಹೊರಗೆ ಕರೆದುಕೊಂಡು ಹೋಗಿ, ಬೇರೆ ಮನೆ ಮಾಡಿ ಬದುಕುವುದಕ್ಕೆ ಆಗಲ್ಲ ಅಂತ ಏನಿಲ್ಲ. ಆದರೆ ಅಪ್ಪ ಅವ್ವನನ್ನು ಬಿಟ್ಟು ಬದುಕುವ ಶಕ್ತಿ ಅವನಲ್ಲಿ ಇಲ್ಲ. ಅಷ್ಟು ಒಳ್ಳೆಯ ಹುಡುಗ ಕೂಡ ಸಿದ್ದು. ಸಿಟ್ಟು, ಕೋಪ, ಆಕ್ರೋಶಗಳು ಜವರೇಗೌಡನಿಗೆ ಸಿದ್ದು ಪ್ರೀತಿಯನ್ನು ಮರೆಮಾಚುವಂತೆ ಮಾಡಿದೆ.
ಸಿದ್ದೇಗೌಡನ ಬದುಕು ಇಷ್ಟೊಂದು ಕ್ರಿಟಿಕಲ್ ಆಗುತ್ತಿರಲಿಲ್ಲ. ಅತ್ತಿಗೆಯನ್ನು ಎರಡನೇ ತಾಯಿ ಅಂತಾರೆ. ಸಿದ್ದು ಕೂಡ ತನ್ನ ಅತ್ತಿಗೆಯನ್ನು ನಂಬಿದ. ನೀಲೂ ಬಳಿಯೇ ಎಲ್ಲವನ್ನು ಹೇಳಿಕೊಂಡ. ಆದರೆ ಅದನ್ನೆಲ್ಲ ತನ್ನ ಲಾಭಕ್ಕೇನೆ ಬಳಸಿಕೊಂಡಳು ನೀಲು. ಯಾಕಂದ್ರೆ ನೀಲೂ ಗಂಡ ದೊಡ್ಡ ಮಗನೇ ಆದರೂ ಎಲ್ಲಾ ಹಕ್ಕು, ಎಲ್ಲಾ ಗೌರವ ಸಿಗುತ್ತಾ ಇದ್ದದ್ದು ಸಿದ್ದುಗೆ. ಇದನ್ನ ನೀಲೂಗೆ ಸಹಿಸಲು ಆಗಿರಲಿಲ್ಲ.

ಸಿದ್ದು ಪಾಡು ಅತಂತ್ರ
ಸಿದ್ದು ತನ್ನ ಪ್ರೀತಿ ಉಳಿಸಿಕೊಳ್ಳುವ ಮಾರ್ಗ ತಿಳಿಯದೇ ಭಾವನಾಗೆ ತಾಳಿ ಕಟ್ಟಿದ. ಭಾವನಾಗೆ ಅನ್ಯಾಯವಾಗಬಾರದು, ಅಬಳಿಗೆ ಏನು ಆಗಬಾರದು ಅಂತ ಇಡೀ ಸಮಾಜದ ಮುಂದೆ ಆ ಸತ್ಯವನ್ನ ಹೇಳಿದ. ಆದರೆ ಸಿದ್ದು ಪ್ರೀತಿ ಯಾರಿಗೂ ಅರ್ಥವಾಗುತ್ತಿಲ್ಲ. ಶ್ರೀನಿವಾಸನಿಗೆ ಮಾತ್ರ ಅದು ಅರ್ಥವಾಗಿರುವುದು. ಅಪ್ಪ ಅಮ್ಮನು ಕ್ಷಮಿಸ್ತಿಲ್ಲ. ಭಾವನಾ ಅಂತು ಸಮಾಧಾನದ ಮಾತುಗಳನ್ನು ಆಡುತ್ತಿಲ್ಲ. ಇದರಿಂದ ಸಿದ್ದು ಅಡ್ಡಕತ್ತರಿಯಲ್ಲಿ ಸಿಕ್ಕಿದವನಂತಾಗಿದ್ದಾನೆ.
ಸಿಂಚನಾಳಿಂದ ನೆಮ್ಮದಿಯಿಲ್ಲ
ಸಿಂಚನಾ ತನ್ನ ಗಂಡನ ಮನೆಯವರನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ತನ್ನ ತಮ್ಮಮಾಡಿದ್ದು ತಪ್ಪು ಅಂತ ಅವಳಿಗೆ ಅನ್ನಿಸಲೇ ಇಲ್ಲ. ಭಾವನಾಳನ್ನ ಗಂಡನ ಮನೆಗೆ ಯಾಕೆ ಕಳುಹಿಸಿದ್ದೀರಿ ಎಂಬುದೇ ಅವಳ ಪ್ರಶ್ನೆ. ಈಗ ತವರು ಮನೆಯ ಸಮಸ್ಯೆಯಿಂದಾಗಿ ಗಂಡನ ಮನೆಯನ್ನು ಒಡೆಯುತ್ತಿದ್ದಾಳೆ. ಇಲ್ಲಿ ಮನೆಯಲ್ಲಿ ಊಟ ಮಾಡದೆ, ಹೊರಗಿಂದ ತರಿಸಿಕೊಂಡು ನೋವು ಕೊಡುವುದಲ್ಲದೆ, ಬೇರೆ ಮನೆ ಮಾಡುವುದಕ್ಕೆ ಹರೀಶನಿಗೆ ಒತ್ತಡ ಹಾಕುತ್ತಿದ್ದಾಳೆ.
ನೀಲೂ ಮುಖದಲ್ಲಿ ಖುಷಿ
ಜವರೇಗೌಡನಿಗೆ ತನ್ನ ರಾಜಕೀಯ ಭವಿಷ್ಯದ ಬಗ್ಗೆಯೇ ಹೆಚ್ಚು ಚಿಂತೆಯಾಗಿದೆ. ಅದಕ್ಕೆ ಮಗನ ಬಗ್ಗೆ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಿದ್ದಾನೆ. ಮಗನನ್ನು ಕ್ಷಮಿಸುವ ಉಸಾಬರಿಗೆ ಹೋಗುತ್ತಿಲ್ಲ. ಈಗ ಮಗ ಇನ್ನು ಮನೆಗೆ ಬಂದಿಲ್ಲ ಎಂದರು ಮನೆಯ ಬಾಗಿಲನ್ನು ಹಾಕಿಸಿದ್ದಾನೆ. ತಾಯಿಗೆ ಎಷ್ಟೇ ಕೋಪವಿದ್ದರು, ಅದಕ್ಕೆ ಒಪ್ಪಲಿಲ್ಲ. ಆದರೆ ಜವರೇಗೌಡನ ಮಾತು ಮೀರುವವರು ಯಾರು.

ಸಿದ್ದು ಪರಿಸ್ಥಿತಿಗೆ ಕರಗಿದ ವೀಕ್ಷಕರು
ಬಾಗಿಲು ಹಾಕಿದ್ದರ ಪರಿಣಾಮ ಭಾವನಾ ಕೂಡ ಮನೆಯಿಂದ ಹೊರಗೆ ನಿಂತಿದ್ದಳು. ಅಷ್ಟರಲ್ಲಿ ಬಂದ ಸಿದ್ದು, ಭಾವನಾಳ ಬಗ್ಗೆ ವಿಚಾರಿಸಿದ್ದಾನೆ. ಆದರೆ ಭಾವನಾಳ ಮುಖದಲ್ಲಿ ಕೋಪವಿನ್ನು ಕಡಿಮೆಯಾಗಿರಲಿಲ್ಲ. ಸರಿ ಮನೆಯೊಳಗೆ ಹೋಗೋಣ ಬನ್ನಿ ಎಂದು ಹೊರಟಿದ್ದಾನೆ. ಎಷ್ಟು ಬಡಿದರೂ ಮನೆಯ ಬಾಗಿಲನ್ನು ತೆಗೆಯುವುದಕ್ಕೆ ಯಾರೂ ರೆಡಿ ಇಲ್ಲ. ಹೊರಗಡೆ ಮದುವೆಯಾದ ಹುಡುಗಿ ಇದ್ದಾಳೆ. ರಾತ್ರಿ ಸಮಯ ಬೇರೆ. ಸಿದ್ದುಗೆ ಆತಂಕ ಹೆಚ್ಚಾಗಿ, ಆ ಕಡೆ ಒಮ್ಮೆ ಈ ಕಡೆ ಒಮ್ಮೆ ಕಿರುಚಿದ್ದಾನೆ. ಆದರೆ ಉತ್ತರವಿಲ್ಲ. ಇದನ್ನು ಕಂಡ ವೀಕ್ಷಕರು ಸಿದ್ದುಗೆ ಕಮೆಂಟ್ ಮಾಡಿದ್ದಾರೆ. ಭಾವನಾಳನ್ನ ಕರೆದುಕೊಂಡು ಹೊರಟು ಬಿಡು. ನಮ್ಮೂರಿಗೆ ಬಂದು ಬಿಡು. ಇಲ್ಲಿ ನೆಮ್ಮದಿಯಾಗಿ ಜೀವನ ಮಾಡಿವ್ರಂತೆ ಅಂತ.


Click it and Unblock the Notifications











