Lakshminivasa: ನಿನ್ನೆ ಜಯಂತ್.. ಇವತ್ತೆಲ್ಲಾ ಸಿದ್ದೇಗೌಡ್ರು; ವೀಕ್ಷಕರಿಗೆ ಟೆನ್ಶನ್ ಕೊಡ್ತಿದೆ 'ಲಕ್ಷ್ಮೀ ನಿವಾಸ'
ಲಕ್ಷ್ಮೀ ಮತ್ತು ಶ್ರೀನಿವಾಸನಿಗೆ ನೆಮ್ಮದಿಯೇ ಇಲ್ಲದಂತೆ ಆಗಿದೆ. ಒಬ್ಬ ಮಗ ದೊಡ್ಡ ಸ್ವಾರ್ಥಿ, ಇನ್ನೊಬ್ಬ ಮಗನ ದುಡಿಮೆ ಅಷ್ಟಕ್ಕೆ ಅಷ್ಟೇ. ದೊಡ್ಡ ಮಗಳಂತು ಅಪ್ಪನ ಮನೆಯಿಂದ ಏನನ್ನ ಹೊತ್ತೊಯ್ಯಬೇಕು ಎಂಬುದರ ಬಗ್ಗೆಯೇ ಯೋಚನೆ ಇರುತ್ತದೆ. ಚಿಕ್ಕ ಮಗಳು ಒಳ್ಳೆ ಮನೆ ಸೇರಿದ್ದಾಳೆ ಎಂದೇ ಲಕ್ಷ್ಮೀ - ಶ್ರೀನಿವಾಸ್ ಬಯಸಿದ್ದಾರೆ. ಆದರೆ ಜಾಹ್ನವಿ ಯ ಬದುಕು ಯಾರೂ ಊಹೆ ಮಾಡಿಕೊಳ್ಳುವುದಕ್ಕೂ ಆಗದಷ್ಟು ಖರಾಬಾಗಿ ಇದೆ.
ಸದ್ಯಕ್ಕೆ ಭಾವನಾ ಜೀವನದ ಬಗ್ಗೆಯೇ ತುಂಬಾ ಯೋಚನೆ ಶುರುವಾಗಿದೆ. ಭಾವನಾಗೆ ಒಂದು ಮದುವೆ ಮಾಡಿಬಿಡಬೇಕೆಂಬ ಯೋಚನೆ ಇಷ್ಟು ದಿನ ಇತ್ತು. ಆದರೆ ಈಗ ಮದುವೆ ಆಗಿ ಹೋಗಿದೆ. ತಾಳಿ ಕಟ್ಟಿದವನು ಯಾರೆಂಬ ಹುಡುಕಾಟವೇ ದೊಡ್ಡ ಸಾಹಸವಾಗಿದೆ.

ಸಮಸ್ಯೆಗೆ ಪರಿಹಾರ ಕೊಡಲು ನಿರ್ಧಾರ
ಸಾಕಷ್ಟು ಸಲ ಭಾವನಾ ತನ್ನ ಕುತ್ತಿಗೆಯಲ್ಲಿನ ತಾಳಿಯನ್ನು ತೆಗೆಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಆಗೆಲ್ಲ ಗೌಡ್ರು ತಾನಿದ್ದೇನೆ ಎಂಬ ಭರವಸೆಯನ್ನು ನೀಡಿದ್ದಾರೆ. ಇಷ್ಟರಲ್ಲೇ ಅವನನ್ನ ನಿಮ್ಮ ಮುಂದೆ ತಂದು ನಿಲ್ಲಿಸುತ್ತೀನಿ ಎಂದು ಹೇಳಿದ್ದಾನೆ. ಆ ಕಾಲ ಹತ್ತಿರವಾಗಿದೆ. ಭಾವನಾ ಕೂಡ ಸಾಕಷ್ಟು ಸಲ ನೆನಪಿಸಿದ್ದಾಳೆ. ಹೀಗೆ ಇದ್ದರೆ ಆಗುವುದಿಲ್ಲ ಅಂತ ಸತ್ಯ ಒಪ್ಪಿಕೊಳ್ಳಲು ಗಟ್ಟಿ ಮನಸ್ಸು ಮಾಡಿದ್ದಾನೆ.
ಗೌಡ್ರಿಂದ ಭಾವನಾ ಬದುಕು
ಇವತ್ತು ಜವರೇಗೌಡ ಹಾಗೂ ಮುನಿಸ್ವಾಮಿಯ ರಾಜಕೀಯ ಸಮಾವೇಶ ನಡೆಯುತ್ತಿತ್ತು. ಅಲ್ಲಿಯೇ ಭಾವನಾ ಮನೆಯವರು ಸೇರಿದ್ದರು. ಪೂರ್ವಿ ಮನೆಯವರು ಹಾಜರಿದ್ದರು. ಆದರೆ ಏನು ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದ ಗೌಡ್ರಿಗೆ ಮತ್ತೆ ದೇವರಾಗಿ ಸಿಕ್ಕಿದ್ದು ತ್ರಿಕಾಲ ಜ್ಞಾನಿಗಳು. ನಿನ್ನ ಪತ್ನಿಯನ್ನ ನೀನೆ ಉಳಿಸಿಕೊಳ್ಳಬೇಕು ಕಣಪ್ಪ. ಧೈರ್ಯ ಮಾಡಿ ಸತ್ಯ ಹೇಳಬೇಕು ಅಂತಾನೇ ಮತ್ತೆ ಹೇಳಿದ್ದಾರೆ.
ಅಧಿಕೃತವಾಯ್ತು ಗೌಡ್ರ ಮದುವೆ
ದೊಡ್ಡ ಸಭೆಯಲ್ಲಿ ಎಲ್ಲರೂ ನೆರೆದಿದ್ದರು. ಕಾರ್ಯಕರ್ತರು, ಬೆಂಬಲಿಗರು, ಸಂಬಂಧಿಕರು ಎಲ್ಲಾ ಇದ್ದರು. ಈ ಸಂದರ್ಭದಲ್ಲಿ ತನ್ನ ಮುನಿಸ್ವಾಮಿ ಸ್ನೇಹ ಎಂತದ್ದು, ಸಂಬಂಧ ಹೇಗಿದೆ ಎಂಬುದನ್ನು ಹೇಳಿದ ಜವರೇಗೌಡರು, ನಮ್ಮ ಸಿದ್ದೇಗೌಡ್ರಿಗೆ ಮುನಿಸ್ವಾಮಿ ಮಗಳು ಪೂರ್ವಿಯನ್ನು ತಂದುಕೊಳ್ಳಬೇಕೆಂದುಕೊಂಡಿದ್ದೇವೆ ಎಂದು ಹೇಳುವ ಮೂಲಕ ಇಬ್ಬರು ಬೀಗರಾಗುತ್ತಿರುವ ವಿಚಾರವನ್ನು ಹೇಳಿಯೇ ಬಿಟ್ಟರು. ಇದು ಎಲ್ಲರಿಗೂ ಖುಷಿ ಕೊಟ್ಟ ವಿಚಾರವೇ ಆಗಿತ್ತು. ಆದರೆ ಸಿದ್ದೇಗೌಡ್ರು ಮಾತ್ರ ಅಂಡು ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದರು. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದರು. ಅತ್ತ ವೆಂಕಿಗೂ ಟೆನ್ಶನ್, ಭಾವನಾಗೆ ತಾಳಿ ಕಟ್ಟಿದ್ದು ನೀವೇ ಅಂತ ಹೇಳುತ್ತೀರಿ ಎಂದಿದ್ರಿ. ಆದರೆ ಯಾಕೆ ಹೇಳುತ್ತಿಲ್ಲ ಎಂದೇ ಪ್ರಶ್ನೆ ಮಾಡಿದ್ದ.
ಗೌಡ್ರ ಮುಂದಿನ ನಡೆ ಏನು?
ಬರೀ ಪ್ರೀತಿ ಮಾಡ್ತಾ ಇದ್ದೀನಿ ಅಂತ ಹೇಳಿದ್ದಕ್ಕೇನೆ ಸಿದ್ದೇಗೌಡ್ರ ಮನೆಯಲ್ಲಿ ಯುದ್ಧವೇ ನಡೆದಿತ್ತು. ಈಗ ಮಗನ ಮದುವೆಯನ್ನು ಎಲ್ಲರ ಮುಂದೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಈಗ ಸಿದ್ದೇಗೌಡ್ರು ನಿರ್ಧಾರ ಬದಲಿಸುವುದು ಬಹಳ ಕಷ್ಟವಾಗುತ್ತದೆ. ಆದರೂ ಭಾವನಾಗೆ ಅನ್ಯಾಯವಾಗುವುದಕ್ಕೆ ನಾನು ಬಿಡಲ್ಲ. ತಾಳಿ ಕಟ್ಟಿದ ವಿಷಯವನ್ನು ನಾನು ಎಲ್ಲರ ಎದುರು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಆ ಕಡೆ ತಂದೆ ಮೇಲಿನ ಭಯಕ್ಕೆ ಗೌಡ್ರು ಅದ್ಯಾವಾಗ ಹೇಳುವ ನಿರ್ಧಾರ ಮಾಡ್ತಾರೆ ಎಂಬುದನ್ನು ನೋಡಬೇಕಿದೆ.


Click it and Unblock the Notifications











