Lakshmi Nivasa: ತವರಿನಿಂದ ಹೊರಟ ಭಾವನಾ; ಸಿದ್ದು ಮನೆಯಲ್ಲಿ ಹೇಗಿದ್ದಾಳೆ ಗೊತ್ತಾ?

By ಎಸ್ ಸುಮಂತ್

ಲಕ್ಷ್ಮೀ ಹಾಗೂ ಶ್ರೀನಿವಾಸನಿಗೆ ಮಗಳ ಬದುಕಿನದ್ದೇ ಚಿಂತೆಯಾಗಿತ್ತು. ಎಲ್ಲಾ‌ ಮಕ್ಕಳಿಗೂ ಮದುವೆಯಾಗಿ ಆಯ್ತು. ಆದರೆ ಮೂಲ‌ ನಕ್ಷತ್ರದಲ್ಲಿ ಹುಟ್ಟಿದ್ದ ಭಾವನಾಗೆ ಮದುವೆಯೇ ಕಷ್ಟವಾಗಿತ್ತು. ಯಾರನ್ನಾದರೂ ನೋಡಿ ಮದುವೆ ಮಾಡೋಣಾ ಎನ್ನುತ್ತಿದ್ದಾಗಲೆ ಭಾವನಾಳ ಕುತ್ತಿಗೆಗೆ ತಾಳಿ ಬಂದಿತ್ತು. ಭಾವನಾಗೂ ಏನು ಗೊತ್ತಾಗದೆ ಮನೆಯವರಿಂದ ಆ ತಾಳಿಯನ್ನು ಕಾಪಾಡುವುದೇ ದೊಡ್ಡ ಸಾಹಸವಾಗಿತ್ತು.

ಈಗ ಮನೆಯವರಿಗೆಲ್ಲ ಗೊತ್ತಾಗಿದೆ. ತಾಳಿ ಕಟ್ಟಿದವನು ಮನೆ ಮುಂದೆ ಬಂದು ನಿಂತಿದ್ದಾನೆ. ಆದರೆ ಲಕ್ಷ್ಮೀಗೆ ಅದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಿದ್ದುನ ತನ್ನ ಸ್ನೇಹಿತ ಎಂದೇ ನಂಬಿದ್ದಳು. ನಂಬಿಕೆಗೆ ದ್ರೋಹ ಮಾಡಿದವನು ಮಗಳನ್ನು ಹೇಗೆ ಬಾಳಿಸುತ್ತಾನೆ ಎಂಬ ಅನುಮಾನ ಅವಳದ್ದು. ಹಾಗೋ ಹೀಗೋ ಶ್ರೀನಿವಾಸ್ ಇದೆಲ್ಲವನ್ನು ತಿಳಿಗೊಳಿಸಿ, ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದಾರೆ. ಸಿದ್ದು ಮನೆಯಲ್ಲಿ ಈಗ ಭಾವನಾ ಹೇಗಿದ್ದಾಳೆ ಗೊತ್ತಾ..?

zee kannada serial Lakshmi nivasa Written Update on October 9th episode

ಅಳಿಯನ ಜೊತೆಗೆ ಹೊರಟ ಮಗಳು

ಭಾವನಾಗೆ ತಾನೇ‌ ತಾಳಿ ಕಟ್ಟಿದ್ದು ಎಂಬುದನ್ನು ಎಲ್ಲರ‌ ಎದುರು ಸಿದ್ದು ಹೇಳಿದ್ದ. ಇದನ್ನು ಕೇಳಿ ಭಾವನಾ ಮನೆಯವರು ಶಾಕ್ ಆಗಿದ್ದಾರೆ. ಅತ್ತ ಸಿದ್ದು ಮನೆಯಲ್ಲಿ ನಡೆದದ್ದು ಕೆಟ್ಟ ಘಟನೆಯೆಂದು ಮರೆತು ಬಿಡು ಎನ್ನುತ್ತಿದ್ದಾರೆ. ಆದರೆ ಹಠ ಬಿಡದ ಸಿದ್ದು, ಭಾವನಾ ಮನೆ ಮುಂದೆ ಕೂತಿದ್ದ. ಶ್ರೀನಿವಾಸನಿಗೆ ಮಾತ್ರ ಸಿದ್ದು ಪ್ರೀತಿ ಅರ್ಥವಾಗಿದ್ದು. ಲಕ್ಷ್ಮೀಗೆ ಸಮಾಧಾನ ಮಾಡಿ, ಭಾವನಾಳನ್ನು ಗಂಡನ ಮನೆಗೆ ಕಳುಹಿಸಿದ್ದಾನೆ.

ಭಾವನಾಳನ್ನು ಒಪ್ಪದ ಸಿದ್ದು ಮನೆ ಮಂದಿ

ಇತತ್ ಸಿದ್ದು ಮನೆಯಲ್ಲಿ ಯಾವುದೇ ಕಾರಣಕ್ಕೂ ಭಾವನಾಳನ್ನು ಒಪ್ಪಲು ರೆಡಿ ಇಲ್ಲ. ಅವಳನ್ನು ಬಿಟ್ಟು ಬಿಡಿ ಎಂದೇ ಬುದ್ದಿ ಮಾತು ಹೇಳಿದ್ದಾರೆ. ಸಿದ್ದು ಅಮ್ಮನಿಗೆ ತನ್ನ ಸೊಸೆಯಾಗಿ ಬರುವವಳು ಹೀಗೆ ಇರಬೇಕೆಂಬ ಆಸೆ ಇತ್ತು. ಅದಕ್ಕೆ ತಕ್ಕನಾಗಿ ಪೂರ್ವಿ ಜೊತೆಗೆ ಮದುವೆ ಫಿಕ್ಸ್ ಆಗಿತ್ತು. ಆದರೆ ಸಿದ್ದು ತಾಯಿಯ ಆಸೆಗೆ ತದ್ವಿರುದ್ಧವಾಗಿ ಭಾವನಾ ಇದಾಳೆ. ಹೀಗಾಗಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ.

zee kannada serial Lakshmi nivasa Written Update on October 9th episode

ಅತ್ತೆ-ಸೊಸೆಯಂದಿರ ಅನ್ಯೋನ್ಯತೆ

ಧಾರಾವಾಹಿಯಲ್ಲಿ ಎಲ್ಲರೂ ಪಾತ್ರಧಾರಿಗಳೇ. ನಿರ್ದೇಶಕರ ಕಥೆಗೆ ತಕ್ಕಂತೆ ನಟಿಸುತ್ತಾರೆ. ಕ್ಯಾಮರಾ ಆನ್ ಇದ್ದಾಗ ಮಾತ್ರ ಅವರು ದ್ವೇಷ ಎಲ್ಲವೂ. ಕ್ಯಾಮರ ಆಫ್ ಆದರೆ ಎಲ್ಲರೂ ದೋಸ್ತರೇ. ಅದು ಈಗಾಗಲೇ ಸಾಕಷ್ಟು ಸಲ ಪ್ರೂವ್ ಆಗಿದೆ. ಈಗ ಭಾವನಾ ಅಲಿಯಾಸ್ ದಿಶಾ ಮದನ್ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅತ್ತೆ, ವಾರಗಿತ್ತಿ, ಭಾವ, ಸಿದ್ದು ಜೊತೆಗೆ ಸಮಯ ಕಳೆಯುತ್ತಿರುವ ಫೋಟೋ ಅದು. ಅದರಲ್ಲೂ ತುಂಬಾ ಆತ್ಮೀಯವಾಗಿರುವಂತ ಫೋಟೋ ಅದಾಗಿದೆ.

ಡೈರೆಕ್ಟ್ರೇ ಈ ದಿನ ಯಾವಾಗ ಬರುತ್ತೆ?

ಇಂದಿನ ಎಪಿಸೋಡಿ‌ಲ್ಲೂ ಭಾವನಾ ತವರು ಮನೆಯಿಂದ ಹೊರಟಾಗ ಅದೇ ಸೀರೆಯನ್ನು ಹುಟ್ಟಿದ್ದಾರೆ. ಈಗ ಫೋಟೋದಲ್ಲೂ ಅದೇ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಇವತ್ತಿನ ಎಪಿಸೋಡಿನಲ್ಲಿ ಗಂಡನ ಮನೆಗೆ ಹೋಗುತ್ತಾಳೆ. ರಿಯಾಲಿಟಿಯಲ್ಲಿ ಭಾವನಾಳನ್ನು ಸಿದ್ದು ಮನೆಯವರು ಒಪ್ಪಿಕೊಂಡಿದ್ದು ಅಷ್ಟರಲ್ಲೇ ಇದೆ. ಆದರೆ ಫೋಟೋ ನೋಡಿದ ವೀಕ್ಷಕರು ನಿಜಕ್ಕೂ ಖುಷಿಯಾಗಿದ್ದಾರೆ. ನಿರ್ದೇಶಕರ ಬಳಿ ಮನವಿ ಮಾಡಿದ್ದಾರೆ. ಆದಷ್ಟು ಬೇಗ ಇಂಥ ಅದ್ಭುತ ದೃಶ್ಯ ನಮ್ಮ ಕಣ್ಣಿಗೆ ಕಾಣುವಂತೆ ಮಾಡಿ ಎಂದಿದ್ದಾರೆ. ಈ ರೀತಿಯ ಸನ್ನಿವೇಶ ಜವರೇಗೌಡರ ಮನೆಯಲ್ಲಿ ಕಾಣಿಸುವುದು ಸಾಧ್ಯವಾ ಎಂಬ ಪ್ರಶ್ನೆಯ ಜೊತೆಗೆ, ಭಾವನಾ ತಾಳ್ಮೆಯೇ ಅದಕ್ಕೆಲ್ಲ ಉತ್ತರ ನೀಡುತ್ತದೆ ಎನ್ನುತ್ತಿದ್ದಾರೆ.

More from Filmibeat

English summary
Zee kannada serial Lakshmi nivasa Written Update on October 9th episode. Here is the details about It is difficult for Siddegowda to tell the truth about Dishamadan shared a special photo;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X