Lakshminivasa: ಈಗಲೇ ಕೆಲ ಹೆಣ್ಣು ಮಕ್ಕಳ‌ ಸಂಸಾರ ಸರಿ ಇಲ್ಲ, ಜಯಂತ್ ಥರ ಆದ್ರೆ ಏನ್ಮಾಡೋದು, ವೀಕ್ಷಕರ ಬೇಸರ!

By ಎಸ್ ಸುಮಂತ್

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಓದುತ್ತಿದ್ದಾಗಲೇ ಜಾಹ್ನವಿಯ ಮದುವೆಯಾಗಿದೆ. ಜಯಂತ್ ಗೆಸ್ಟ್ ಆಗಿ ಕಾಲೇಜಿಗೆ ಹೋಗಿ, ಜಾಹ್ನವಿಯನ್ನು ಇಷ್ಟಪಟ್ಟು, ಮನೆಯವರನ್ನೆಲ್ಲ ಒಪ್ಪಿಸಿಯೇ ಮದುವೆಯಾಗಿದ್ದಾನೆ.

ಮದುವೆ ಬಳಿಕ ಜಾಹ್ನವಿಗೆ ಆಗಾಗ ನರಕದ ದರ್ಶನ ಮಾಡಿಸುತ್ತಿದ್ದಾನೆ. ಗಂಡನ ಮನೆಯಲ್ಲಿ ಏನೇ ನೋವಾದರೂ ಜಾನು ಮಾತ್ರ ತನ್ನ ತವರು ಮನೆಯವರಿಗೆ ಕಿಂಚಿತ್ತು ಹೇಳುವುದಿಲ್ಲ. ಹೇಳುವುದಕ್ಕೆ ಜಯಂತ್ ನೆಟ್ವರ್ಕ್ ಅನ್ನು ಬಿಟ್ಟಿಲ್ಲ.

Zee kannada serial Lakshmi nivasa Written Update on September 26th episode

ಭಾವನಾ ಮನೆಗೆ ಬಂದಾಗಲೂ ಜಾಹ್ನವಿಯ ಜೀವನ ಅವಳಿಗೆ ವಿಚಿತ್ರ ಎನಿಸಿತ್ತು. ಇಡೀ ಮನೆಯನ್ನು ಒಬ್ಬಳೇ ಕ್ಲೀನ್ ಮಾಡಿಕೊಳ್ಳಬೇಕು, ಭಯ ಭಯದಲ್ಲಿಯೇ ಬದುಕುತ್ತಾಳೆ, ಸ್ವಂತ ಖರ್ಚಿಗೂ ಹಣವಿಲ್ಲ, ಹೊರಗಡೆ ಏನಿದೆ ಅನ್ನೋದು ಅವಳಿಗೆ ತಿಳಿದಿಲ್ಲ. ಜಾನು ಅದೇಗೆ ಬದುಕುತ್ತಿದ್ದಾಳೆ ಎಂಬ ಪ್ರಶ್ನೆ ಇತ್ತು. ಜಯಂತ್ ಸೈಕೋ ಮನಸ್ಥಿತಿ ಮಾತ್ರ ಯಾರಿಗೂ ಅರ್ಥವಾಗಿಲ್ಲ.

ಗಂಡನೆಂದು ಹೋದವಳಿಗೆ ಶಾಕ್

ಜಾಹ್ನವಿಯನ್ನು ತನ್ನ ಕೋಟೆಯಲ್ಲಿಯೇ ಬಂಧಿಸಿಟ್ಟಿದ್ದಾನೆ ಜಯಂತ್. ಈ ಮೊದಲೆಲ್ಲಾ ಕೋಟೆ ಬಿಟ್ಟು ಬಾಗಿಲು ಕೂಡ ದಾಟುವಂತೆ ಇರಲಿಲ್ಲ. ಈಗಿಗ ಜಾನು ಬಲವಂತಕ್ಕೆ ಗಾರ್ಡನ್‌ಗೆ ಹೋಗುವುದಕ್ಕೆ ಅನುಮತಿ ನೀಡಲಾಗಿದೆ. ಆದರೆ ಜಾನು ಒಬ್ಬಳೇ ಇರುವಾಗ ಬಾಗಿಲು ತೆಗೆದು ಯಾರೋ ಒಳ ಬಂದಂತೆ ಆಗಿದೆ.

ದಿಲೀಪ್ ನೋಡಿ ಶಾಕ್

ಜಾನು ಕೆಲಸ ಮಾಡುವುದರಲ್ಲಿ ಮಗ್ನಳಾಗಿದ್ದಾಳೆ. ಹಿಂದೆ ಯಾರೋ ಬಂದಂತೆ ಆದಾಗ ಕೊಂಚ ಗಾಬರಿಯಾಗುತ್ತಾಳೆ. ಇನ್ಯಾರು ಬರ್ತಾರೆ ಇಲ್ಲಿ, ಅವರೇ ಅಂದುಕೊಂಡು, ರೂಮಿಗೆ ಹೋಗಿ ಬಾಗಿಲಾಕಿಕೊಂಡಿದ್ದಾಳೆ ಜಾನು. ಆದರೆ ಅಲ್ಲಿಂದ ವ್ಯಕ್ತಿಯನ್ನು ನೋಡಿ ಗಾಬರಿಯಾಗಿದ್ದಾಳೆ. ಆ ವ್ಯಕ್ತಿ ಜಯಂತ್ ಅಲ್ಲ‌ಬದಲಿಗೆ ಬಂದಿದ್ದು, ದಿಲೀಪ್. ಜಾಹ್ನವಿಗೂ ದಿಲೀಪ್‌ ಪರಿಚಯವಿದೆ. ಅವನ ಸ್ಥಿತಿ, ತನ್ನ ಮನೆಗೆ ಬಂದಿದ್ದನ್ನು ಕಂಡು ಅಕ್ಷರಶಃ ಶಾಕ್ ಆಗಿದ್ದಾಳೆ.

ಪ್ರಾಣಕ್ಕೆ ಅಪಾಯ ಬಂತಾ?

ದಿಲೀಪ್ ಕಾಲಿಗೆ ಗುಂಡೇಟು ಬೇರೆ ಬಿದ್ದಿದೆ. ಅಷ್ಟು ಸೆಕ್ಯುರಿಟಿ ಇರುವ ಮನೆಗೆ ದಿಲೀಪ್ ಬಂದಿದ್ದೇಗೆ ಎಂಬುದೇ ದೊಡ್ಡ ಪ್ತಶ್ನೆ. ಈ ದಿಲೀಪ್ ಬೇರಾರು ಅಲ್ಲ ಅಂದು ಅಂದ್ರೆ ಕಾಲೇಜು ದಿನಗಳಲ್ಲಿ ಜಾಹ್ನವಿಯ ಜೊತೆಗೆ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದಿದ್ದವ. ಅವನ ಹೆಸರನ್ನು ತಿಳಿದುಕೊಂಡ ಜಯಂತ್, ಈಗ ಪ್ರಾಣಕ್ಕೂ ಕುತ್ತು ತಂದಿದ್ದಾನೆ. ಜಾಹ್ನವಿಯ ಜೊತೆಗೆ ಹಿಂದೆ ಕೂಡ ಯಾರೂ ಫ್ರೆಂಡ್ಶಿಪ್ ಮಾಡಿರಬಾರದು, ಜೊತೆಯಲ್ಲಿ ಓಡಾಡಿರಬಾರದು. ಅವರೆಲ್ಲರ ಪ್ರಾಣ ಜಯಂತ್ ಕೈನಲ್ಲಿರುತ್ತೆ. ಈಗ ದಿಲೀಪ್ ಸ್ಥಿತಿ ಅದಕ್ಕೆ ಉದಾಹರಣೆಯಾಗಿದೆ.

ವೀಕ್ಷಕರ ಬೇಸರ ಯಾಕೆ..?

ಜಯಂತ್ ಪಾತ್ರವನ್ನು ಮಹಿಳೆಯರು ಮೊದಲಿನಿಂದಾನೂ ವಿರೋಧಿಸಿಕೊಂಡೆ‌ ಬರುತ್ತಿದ್ದಾರೆ. ಸೈಕೋ ಮನಸ್ಥಿತಿಯ ಜಯಂತ್ ಪಾತ್ರದಿಂದ ಯಾವ ಮೆಸೇಜ್ ಕೂಡ ಸಿಗಲ್ಲ. ಮೊದಲು ಕಿತ್ತು ಬಿಸಾಕಿ ಅಂತ. ಈಗ ಅದು ಅತಿರೇಕಕ್ಕೆ ಹೋಗಿದೆ. ಜಯಂತ್‌ನಿಂದಾಗಿ ದಿಲೀಪ್ ಪ್ರಾಣ ಸಂಕಟ ಅನುಭವಿಸುತ್ತಿದ್ದಾನೆ. ಇದರಿಂದ ಮತ್ತೆ ಮಹಿಳೆಯರಿಗೆ ಬೇಸರ ತರಿಸಿದೆ. ಈ ರೀತಿಯ ಹಿಂಸೆ‌ ಕೊಟ್ರೆ ಯಾರ್ ಬದುಕ್ತಾರೆ? ಹೇಳಿ ಎಂಬ ನೋವು ಹೊರ ಹಾಕುತ್ತಿದ್ದಾರೆ. ಮೊದಲೇ ಎಷ್ಟೋ ಹೆಣ್ಣು ಮಕ್ಕಳ ಜೀವನ ಸರಿ ಇಲ್ಲ. ಹೀಗಿರುವಾಗ ಈ ರೀತಿಯೆಲ್ಲಾ ತೋರಿಸಿ, ರಿಯಲ್ ಲೈಫ್‌ನಲ್ಲಿ ಸೈಕೋಗಳು ಹುಟ್ಟಿಕೊಂಡರೆ ಏನು ಮಾಡೋದು. ಮೊದಲು ಜಯಂತ್ ಪಾತ್ರ ಸಾಯಿಸಿ ಎನ್ನುತ್ತಿದ್ದಾರೆ.

More from Filmibeat

English summary
Zee kannada serial Lakshmi nivasa Written Update on September 26th episode. Here is the details about Viewers are fed up with Jayant's character;
Read more about: tv filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X