Lakshminivasa: ಜಾನುಗಿಂತ ಭಯಪಟ್ಟವರು ವೀಕ್ಷಕರು; ಜಯಂತ್ ವರ್ತನೆಗೆ ಹಾರ್ಟ್ ಬೀಟ್ ಜೋರಾಯ್ತಲ್ಲ ಗುರು!
ಜಾಹ್ನವಿ ಸ್ನೇಹಿತ ದಿಲೀಪ್ ಅದ್ಯಾವುದೋ ಕೇಸಲ್ಲಿ ತಗಲಾಕಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಂಡು ನೇರವಾಗಿ ಜಾನು ಮನೆಗೆ ಬಂದಿದ್ದ. ಅದು ಜಾನು ಮನೆ ಎಂಬುದು ಅವನಿಗೂ ಗೊತ್ತಿರಲಿಲ್ಲ. ಕಾಲಿಗೆ ಗುಂಡೇಟು ಬೇರೆ ದಾರಿ ಇಲ್ಲದೆ ಇದ್ದ ಕಾರಣ, ಎಲ್ಲಿಯೂ ಒಂದು ಕಡೆ ಅಡಗಿಕೊಳ್ಳೋಣಾ ಎಂದು ಬಂದ. ಸ್ನೇಹಿತನ ಕಷ್ಟಕ್ಕೆ ಮರುಗಿ ಜಾಹ್ನವಿ ಸುಮ್ಮನಾಗಿ ಬಿಟ್ಟಳು.
ಗಂಡನಿಗೆ ಯಾವ ವಿಚಾರವನ್ನು ಹೇಳುವುದಕ್ಕೆ ಹೋಗಲಿಲ್ಲ. ಆದರೆ ಜಾನು ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನು ಗಮನಿಸಿದ್ದ. ಏನೆಂದು ಕೇಳಿದರೂ ಜಾನುಗೆ ಹೇಳುವಷ್ಟು ಧೈರ್ಯ ಇರಲಿಲ್ಲ. ಬದಲಾಗಿ ಸ್ನೇಹಿತನಿಗೆ ಆದಷ್ಟು ಬೇಗ ಇಲ್ಲಿಂದ ಹೊರಡು ಅಂತಾನೇ ಹೇಳುತ್ತಿದ್ದಳು. ಹೊರಡುವುದಕ್ಕೂ ಮುನ್ನವೇ ಜಾನು ಲಾಕ್ ಆಗಿದ್ದಾಳೆ. ಈ ಎಪಿಸೋಡ್ ನೋಡುವಾಗ ಜಾನುಗಿಂತ ವೀಕ್ಷಕರಿಗೆ ಹಾರ್ಟ್ ಬೀಟ್ ಜೋರಾಗಿದೆ.

ಗಂಡನಿಂದ ಜಾನು ಗಾಬರಿ
ಜಯಂತ್‌ಗೆ ಜಾನು ಮೇಲೆ ಅನುಮಾನ ಮೂಡಿದ್ದ ಕಾರಣ, ಇಂದು ಆಫೀಸ್‌ಗೆ ಹೋಗುವುದನ್ನು ತಡ ಮಾಡಿದ. ಅದರಲ್ಲೂ ದಿಲೀಪ್ ಅವಿತಿದ್ದ ಕಡೆಯಲ್ಲಿಯೇ ಕುಳಿತಿದ್ದ ಜಯಂತ್ ಕಂಡು ಹೆದರಿಕೆಯಲ್ಲಿಯೇ ಇದ್ದಳು ಜಾನು. ಇವರ್ಯಾಕೆ ಇನ್ನು ಹೋಗ್ತಾ ಇಲ್ಲ ಎಂದು ಜಾನು, ತನ್ನನ್ನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಳು. ಇದು ಜಯಂತ್ ಗೆ ಇನ್ನಷ್ಟು ಅನುಮಾನ ಮೂಡಿಸಿತ್ತು.
ಮೊಬೈಲ್‌ನಲ್ಲಿ ಸಿಕ್ತು ದಿಲೀಪನ ಸುಳಿವು
ಜಯಂತ್ ಅಲ್ಲಿಂದ ಎದ್ದು ಮೊದಲ ಫ್ಲೋರ್‌ಗೆ ಹೋದ. ಅಲ್ಲಿ ನಿಂತು ಸೆಲ್ಫಿ ಕ್ಯಾಮೆರಾ ಆನ್ ಮಾಡಿದ. ಅದರಲ್ಲಿ ಜಾಹ್ನವಿ ಗಾಬರಿಯಾಗಿದ್ದಿದ್ದು ಕಾಣಿಸಿತು. ಹಾಗೆ ರೈಟ್‌ಗೆ ಕ್ಯಾಮೆರಾ ತಿರುಗಿಸಿದಾಗ ದಿಲೀಪ್, ಸೋಫಾ ಮರೆಯಲ್ಲಿ ಅಡಗಿದ್ದಿದ್ದು ಕಾಣಿಸಿತು. ಒಂದು ಕ್ಷಣ ಜಯಂತ್ ಕೂಡ ಶಾಕ್ ಆಗಿದ್ದ. ಯಾರಿದು ಎಂಬ ಅನುಮಾನ ಮೂಡಿತ್ತು. ತಕ್ಷಣ ಕೇಳದೆ, ಸಮಾಧಾನವಾಗಿ ಕೆಳಗೆ ನಡೆದ.
ದಿಲೀಪ್ ಹಿಡಿದು ಗಾಬರಿಪಡಿಸಿದ ಜಯಂತ್
ಜಾನು ಮೊದಲೇ ಗಾಬರಿಯಾಗಿದ್ದಳು. ಜಯಂತ್ ಬಂದು, ಚಿನ್ನುಮರಿ ಇವತ್ತು ನಿಮ್ಮ ಜೊತೆಗೆ ಡ್ಯಾನ್ಸ್ ಮಾಡಬೇಕು ಅನ್ನಿಸ್ತಾ ಇದೆ ಮಾಡೋಣ ಅಂತ ಡ್ಯಾನ್ಸ್ ಮಾಡಿದ. ಅದರ ನಡುವೆಯೇ ಈ ಮನೆಯಲ್ಲಿ ಇರುವುದು ನಾವಿಬ್ಬರೆ ಅಲ್ವಾ ಚಿನ್ನುಮರಿ ಎಂದು ಪ್ರಶ್ನಿಸಿ, ಜಾನು ಹೌದು ಎನ್ನುತ್ತಲೇ ದಿಲೀಪನ ಶರ್ಟ್ ಹಿಡಿದು ಮೇಲಕ್ಕೆ ಎತ್ತಿದ್ದಾನೆ. ಹಾಗಾದ್ರೆ ಇವನು ಯಾರು ಎಂದು ಕೇಳಿದಾಗ ಜಾನು ಅಂಡ್ ದಿಲೀಪ್ ಇಬ್ಬರು ಶಾಕ್ ಆಗಿದ್ದಾರೆ.
ಹಾರ್ಟ್ ಬೀಟ್ ಹೆಚ್ಚಿಸಿದ ಎಪಿಸೋಡ್
ಈ ಎಪಿಸೋಡ್ ನೋಡುವಾಗ ಅರೆಕ್ಷಣ ಎಲ್ಲರ ಜೀವ ಬಾಯಿಗೆ ಬಂದಂತ ಫೀಲ್ ಆಗಿತ್ತು. ಇನ್ನು ಚಿನ್ನುಮರಿ ಕಥೆ ಮುಗಿದಂತೆ ಎಂದೇ ಅಭಿಪ್ರಾಯ ಪಟ್ಟರು. ಮೊದಲೇ ಸೈಕೋ ಈಗ ಬೇರೆ ಚಿನ್ನುಮರಿ ಗತಿ ಏನಾಗಬಹುದು ಎಂಬುದೇ ವೀಕ್ಷಕರಿಗೆ ಚಿಂತೆಯಾಗಿದೆ. ಈಗಲಾದರೂ ಜಯಂತ್ ಸೈಕೋ ಎಂಬುದು ಜಾಹ್ನವಿಗೆ ಗೊತ್ತಾಗುತ್ತಾ ಎಂಬ ಪ್ರಶ್ನೆ ಒಂದು ಕಡೆಯಾದರೆ, ಜಾಹ್ನವಿ ವಿಚಾರ ಮುಚ್ಚಿಟ್ಟ, ಕ್ಲಾಸ್ ಮೇಟ್‌ನನ್ನೇ ಮನೆಯಲ್ಲಿ ಇಟ್ಟುಕೊಂಡಿದ್ದಳು ಎಂಬ ವಿಚಾರಕ್ಕೆ ಜಯಂತ್ ಅದ್ಯಾವ ಶಿಕ್ಷೆ ಕೊಡುತ್ತಾನೋ ಎಂಬ ಭಯ ಕಾಡುತ್ತಿದೆ. ಇದನ್ನೆಲ್ಲ ನೋಡಿದ ವೀಕ್ಷಕರಿಗೆ ಎದೆ ಝಲ್ ಎಂದಿದೆ, ಜಾನು ಬಗ್ಗೆ ಕಾಳಜಿ ಶುರುವಾಗಿದೆ.


Click it and Unblock the Notifications











