Zee Kutumba Awards: ಭಾವನಾಳ ನ್ಯೂ ಲುಕ್ ಕಂಡು ಗೌಡ್ರು ಫಿದಾ: ಸಖತ್ತಾಗ್ ಕಥೆ ಹೇಳಿದ್ರು!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾಳನ್ನ ನೋಡಿದ್ರೆ ಕಲ್ಲು ಮನಸ್ಸಿನವರಿಗೂ ಸಿಂಪಥಿ ಹುಟ್ಟಿ ಬಿಡುತ್ತದೆ. ಯಾಕಂದ್ರೆ ಅಷ್ಟು ಸಾಧು ರೀತಿಯ ಪಾತ್ರಧಾರಿ. ಯಾರಿಗೂ ಕೆಟ್ಟದು ಬಯಸಲ್ಲ, ಯಾರಿಗೂ ಹರ್ಟ್ ಮಾಡಲ್ಲ, ಬೇರೆಯವರ ವಿಚಾರಕ್ಕೆ ಮೂಗು ತೂರಿಸಲ್ಲ.

ಇಷ್ಟು ಒಳ್ಳೊಳ್ಳೆ ಗುಣವಿರುವ ಭಾವನಾ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.‌ ಇನ್ನು ನಮ್ಮ ಸಿದ್ದೇಗೌಡ್ರಿಗೆ ಇಷ್ಟವಾಗದೆ ಇರುವುದಕ್ಕೆ ಸಾಧ್ಯನಾ..? ಅದ್ಕೆ ಕದ್ದು ತಾಳಿ ಕಟ್ಟಿ, ಈಗ ಮನೆಗೆ ಕರೆದುಕೊಂಡು ಬಂದಿದ್ದಾರೆ.

Zee kannada serial Lakshmi nivasa Zee kutumba awards promo highlights

ಭಾವನಾಗೆ ಆ ಪ್ರೀತಿಯ ಅಗತ್ಯವಿರಲಿಲ್ಲ. ಮನೆಯವರ ಮಾತಿಗೆ ಕಟ್ಟು ಬಿದ್ದು ಸಿದ್ದು ಜೊತೆಗೆ ಬಂದಿರುವ ಭಾವನಾ, ಜವರೇಗೌಡ ಎಷ್ಟೇ ಕೋಪ ಮಾಡಿಕೊಂಡರು, ಎಷ್ಟೇ ನೋವಾದರೂ ತುಟಿಕ್ ಪಿಟಿಕ್ ಎನ್ನದೇ ಸುಮ್ಮನೆ ನಿಂತು ಬಿಟ್ಟಿದ್ದಾಳೆ. ಆ ಮೌನದಲ್ಲೇ ಗೊತ್ತಾಗುತ್ತಿದೆ ಭಾವನಾಳ ಮನಸ್ಸಲ್ಲಿ ಎಷ್ಟು ನೋವಿದೆ ಎಂಬುದು.

ಜೀ ಕುಟುಂಬ ಅವಾರ್ಡ್

ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮುಂದೆ ಬರಲಿದೆ. ಈಗಾಗಲೇ ಕಾರ್ಯಕ್ರಮ ನಡೆದಿದೆ ಎಂಬುದು ಈಗಷ್ಟೇ ಬಿಡ್ತಾ ಇರುವ ಪ್ರೋಮೋದಿಂದ ಗೊತ್ತಾಗುತ್ತಿದೆ. ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮಕ್ಕೆ ಸಿದ್ದೇಗೌಡ್ರು ಹಾಗೂ ಭಾವನಾ ಒಟ್ಟಿಗೆ ಬಂದಿದ್ದಾರೆ. ಭಾವನಾ ರಿಯಲ್ ಸ್ಟೈಲ್ ನೋಡಿ, ಗೌಡ್ರು ಬಿದ್ದೋಗಿದ್ದಾರೆ.

ಗೌಡ್ರ ಕಾಲೆಳೆದ ಭಾವನಾ

ಸ್ಟೇಜ್‌ಗೆ ಹೋಗುವ ಮುನ್ನ ಆಂಕರ್ ಕೈಲಿ ಇಬ್ಬರು ತಗಲಾಕಿಕೊಂಡಿದ್ದಾರೆ. ಈ ವೇಳೆ ಭಾವನಾ, ಗೌಡ್ರ ಕಾಲೆಳೆದಿದ್ದಾರೆ. ಭಾವನಾ ಮೇಡಂ ಇಷ್ಟೊಂದು ಸ್ಟ್ರಿಕ್ಟ್ ಆಗಿದ್ರೆ ಹೇಗೆ ಅಂತ ಆಂಕರ್ ಕೇಳಿದ್ರೆ, 'ಇನ್ನೇನು ಮತ್ತೆ ಮಲಗಿದ್ದ ಟೈಮ್‌ನಲ್ಲಿ ಬಂದು ತಾಳಿ ಕಟ್ಟಿ ಹೋದ್ರೆ. ಅಂತ ಕೆಲಸ ಮಾಡಿ ಈಗ ಪ್ರೀತಿ ಮಾಡಿ ಅಂದ್ರೆ ಮಾಡೋಕೆ ಆಗುತ್ತಾ' ಎಂದು ಭಾವನಾ ಸಖತ್ತಾಗೇ ಕಾಲೆಳೆದಿದ್ದಾರೆ. ಇದರ ನಡುವೆ ಆ ಮಾತಿಗೆ ಬೀದಿಗಿಳಿದ್ ಬಿಟ್ರಾ ನನ್ನ ಮಾನ ಮರ್ಯಾದೆ ಕಳೆಯೋಕೆ ಅನ್ನೋ ಡೈಲಾಗ್ ಹಾಕಿ ಸಖತ್ ಎಡಿಟಿಂಗ್ ಮಾಡಿದ್ದಾರೆ.

ಕಥೆ ಹೇಳಲು ಹೇಳಿದ ಆಂಕರ್

ನೆಕ್ಸ್ಟ್ ಸ್ಟೆಪ್ ಇಬ್ಬರಿಗೂ ಕಥೆ ಹೇಳಲು ಒಂದಷ್ಟು ಚಿತ್ರಗಳನ್ನು ನೀಡಲಾಗಿತ್ತು. ಅದರಲ್ಲಿ ಭಾವನಾಗೆ ಸಿಕ್ಕಿದ್ದು, ಓಲೆ ಶೇಪ್‌ಗಳ ಚಿತ್ರ. ಆದರೆ ಅದರಲ್ಲಿ ಭಾವನಾ ಕಟ್ಟಿದ ಕಥೆ, 'ಒಂದು ಸಲ ಮೂರು ಜನ ಫ್ರೆಂಡ್ಸ್ ಸೇರಿ ಟ್ರಿಪ್ ಪ್ಲ್ಯಾನ್ ಮಾಡ್ತಾರೆ. ಬೆಟ್ಟದ ತುದಿಗೆ ಹೋಗಿ ಕ್ಯಾಂಪ್ ಫೈಯರ್ ಹಾಕಿ, ಎಂಜಾಯ್ ಮಾಡುವ ಪ್ಲ್ಯಾನ್. ಆದರೆ ಅದು ವರ್ಕೌಟ್ ಆಗದೆ ಮನೆಗೆ ಬಂದು ನಾಲ್ಕು ಗೋಡೆಯ ನಡುವೆ ಪಾರ್ಟಿ ಮಾಡ್ತಾರೆ' ಎಂದಿದ್ದಾರೆ.

ಗೌಡ್ರ ಕಥೆ ಇನ್ನು ಅದ್ಭುತ

ಗೌಡ್ರು ತಮಗೆ ಸಿಕ್ಕಿದ್ದ ಚಿತ್ರಗಳನ್ನು ಜೋಡಿಸಿ ಹತ್ತಿರತ್ತಿರ ಕಥೆ ಹೆಣೆದಿದ್ದರು. 'ದೂರದಲ್ಲಿ ಒಂದು ಮನೆ ಇರುತ್ತೆ. ಅಲ್ಲೊಬ್ಬ ಹುಡುಗ ಇರ್ತಾನೆ ಗೌಡರ ರೀತಿ. ಒಂದು ಹುಡುಗಿ ಮೇಲೆ ಲವ್ ಆಗಿರುತ್ತದೆ. ಹುಡುಗಿಯನ್ನು ನೆನೆಸಿಕೊಂಡಾಗ ಮನೆ ಮೇಲೆ ಹೆಲಿಕಾಪ್ಟರ್ ಹೋಗುತ್ತೆ' ಈ ಕಥೆ ಕೇಳಿ ಶಾಕ್ ಆದ ಆಂಕರ್, ಆ ಹುಡುಗಿಗೂ ಹೆಲಿಕಾಪ್ಟರ್‌ಗೂ ಏನ್ ಸಂಬಂಧ ಗೌಡ್ರೆ ಅಂತ ಕೇಳಿದ್ರೆ ಇಲ್ಲಿಗೆ ನಮ್ಮ ಕಥೆ ಮುಗಿಯಿತು ಎಂದಿದ್ದಾರೆ.

More from Filmibeat

English summary
Zee kutumba awards promo; Here is the details about Siddegowdru is happy with Bhavana's new look;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X