ಕಿರುತೆರೆ ನಟಿಯರ ತಾಯಂದಿರು: ಕಿರುತೆರೆ ನಟಿಯರ ಅಮ್ಮಂದಿರು ಇವರೇ ನೋಡಿ

By ಎಸ್ ಸುಮಂತ್

ಮಾರ್ಚ್ 8ರಂದು ವಿಶ್ವ ತಾಯಂದಿರ ದಿನಾಚರನೆಯನ್ನು ಆಚರಣೆ ಮಾಡಲಾಯಿತು. ಪ್ರತಿದಿನವೂ ಅಮ್ಮಂದಿರ ದಿನವೇ ಆಗಿದ್ದರು ಮದರ್ಸ್ ಡೇ ಅಂದರೆ ಸ್ವಲ್ಪ ಸ್ಪೆಷಲ್. ಹೀಗಾಗಿ ಜನಸಾಮಾನ್ಯರಿಂದ ಹಿಡಿದು, ಸೆಲೆಬ್ರೆಟಿಗಳು ಕೂಡ ತಮ್ಮ ತಾಯಂದಿರ ಫೋಟೊಗಳನ್ನು ಶೇರ್ ಮಾಡಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ.

ಕಿರುತೆರೆ ನಟಿಯರು ಎಂದರೆ ಮನೆ ಮನೆ ಮಾತಾಗಿದ್ದಾರೆ. ಸಿನಿಮಾಗಿರುವಷ್ಟೇ ಸ್ಕೋಪ್ ಈಗ ಧಾರಾವಾಹಿಗೂ ಇದೆ. ಅದರಂತೆ ಫ್ಯಾನ್ ಫಾಲೋವರ್ಸ್ ಕೂಡ ಹಿರಿತೆರೆಗಿಂತ ಕಿರುತೆರೆಯಲ್ಲಿ ನಟಿಸುವವರಿಗೆ ಹೆಚ್ಚಾಗಿದ್ದಾರೆ. ಹೀಗಾಗಿ ಕಿರುತೆರೆ ನಟಿಯರ ಅಮ್ಮಂದಿರು ಹೇಗಿದ್ದಾರೆ..? ಅವರ ಜೊತೆ ಮಕ್ಕಳು ಹೇಗೆಲ್ಲಾ ಇರುತ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿ ಬಳಗಕ್ಕೆ ಇದ್ದೆ ಇರುತ್ತದೆ. ಆ ಕುತೂಹಲವನ್ನು ತಣಿಸುವ ಕೆಲಸವನ್ನು ಮಾರ್ಚ್ 8ರಂದು ಎಲ್ಲಾ ನಟಿಯರು ಮಾಡಿದ್ದಾರೆ.

'ಪುಟ್ಟಕ್ಕನ ಮಕ್ಕಳು' ತಾಯಿಯ ಫೋಟೊ ಹಂಚಿಕೊಂಡ ನಟಿ

'ಪುಟ್ಟಕ್ಕನ ಮಕ್ಕಳು' ತಾಯಿಯ ಫೋಟೊ ಹಂಚಿಕೊಂಡ ನಟಿ

ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ನಂಬರ್ ಒನ್ ಧಾರಾವಾಹಿಯಾಗಿದೆ. ಆರಂಭದಿಂದಲೂ ನಂಬರ್ ಒನ್ ಸ್ಥಾನವನ್ನು ಬೀಟ್ ಮಾಡುವುದಕ್ಕೆ ಬೇರೆ ಧಾರಾವಾಹಿಗಳಿಂದ ಸಾಧ್ಯವಾಗಿಲ್ಲ. ಪುಟ್ಟಕ್ಕನಂತ ತಾಯಿಗೆ ಮುದ್ದಾದ ಮೂರು ಹೆಣ್ಣು ಮಕ್ಕಳಿರುವುದು ಧಾರಾವಾಹಿ ಪ್ರಿಯರ ಕಣ್ಣನ್ನು ಆಗಾಗಾ ಕುಕ್ಕುತ್ತಲೇ ಇದೆ. ನಮ್ಮ ಮನೆಯಲ್ಲೂ ಇಂಥ ಹೆಣ್ಣು ಮಕ್ಕಳಿರಬಾರದಿತ್ತಾ ಅಂತ ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಿರುತ್ತಾರೆ. ಪುಟ್ಟಕ್ಕನಿಗೂ ಆಗಾಗ ಅನ್ನಿಸಿರುತ್ತದೆ. ಆದರೆ ಈ ಮೂವರು ಮಕ್ಕಳ ನಿಜವಾದ ಪುಟ್ಟಕ್ಕ ಯಾರು ಗೊತ್ತಾ..? ಅಮ್ಮಂದಿರ ದಿನಾಚರಣೆಯಂದು ತಮ್ಮ ತಾಯಂದಿರ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಬಂಗಾರಮ್ಮನ ಅಮ್ಮ, ಕಂಠಿ ಅಮ್ಮ, ವಸು ಅಮ್ಮ ಎಲ್ಲರೂ ಈ ವಿಡಿಯೋದೊಳಗೆ ಅಡಗಿದ್ದಾರೆ.

ಅಮ್ಮನ ವಿಡಿಯೋ ಹಂಚಿಕೊಂಡ ನಟಿಯರು

ಅಮ್ಮನ ವಿಡಿಯೋ ಹಂಚಿಕೊಂಡ ನಟಿಯರು

ಪಾರು ಇತ್ತೀಚೆಗೆ ಒಂದು ಫೋಟೊ ಹಂಚಿಕೊಂಡಿದ್ದರು. ಅದರ ಮುಂದುವರೆದ ಭಾಗವಾಗಿ ಪಾರು ಅಲಿಯಾಸ್ ಮೋಕ್ಷಿತಾ ಪೈ ತನ್ನ ತಾಯಿಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸ್ನೋ ಸಿಟಿಯಲ್ಲಿ ಪಾರು ಅಮ್ಮನ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಪಾರು ಬಿಡುವು ಸಿಕ್ಕಾಗೆಲ್ಲಾ ಮುದ್ದಿನ ತಮ್ಮ ಮತ್ತು ಅಮ್ಮನ ಜೊತೆ ಟ್ರಿಪ್ ಹೋಗುತ್ತಿರುತ್ತಾರೆ. ಇನ್ನು ಸತ್ಯ ಧಾರಾವಾಹಿಯ ಕೀರ್ತನಾ ಅಲಿಯಾಸ್ ಅನು ಜನಾರ್ಧನ್ ಕೂಡ ಅವರ ತಾಯಿಯ ಫೋಟೊ ಹಂಚಿಕೊಂಡು ಶುಭಕೋರಿದ್ದಾರೆ. 'ಗಟ್ಟಿಮೇಳ'ದ ಪ್ರಿಯಾ ಆಚಾರ್ ಕೂಡ ಅವರ ತಾಯಿ ಫೋಟೊ ಹಾಕಿ ಸಂಭ್ರಮಿಸಿದ್ದಾರೆ. ಕಿರುತೆರೆ ನಟಿಯರ ಜೊತೆಗೆ ಅವರ ಜನ್ಮದಾತರನ್ನು ನೋಡಿ ಅಭಿಮಾನಿಗಳು ಖುಷಿಯಿಂದ, ಪ್ರೀತಿಯಿಂದ, ಗೌರವದಿಂದ ತಾವು ಕೂಡ ವಿಶ್ ಮಾಡಿದ್ದಾರೆ.

ಕೇಕ್ ಕಟ್ ಮಾಡಿ ಆನಂದಿಸಿದ ಆಶಾ

ಕೇಕ್ ಕಟ್ ಮಾಡಿ ಆನಂದಿಸಿದ ಆಶಾ

'ಇಂತಿ ನಿನ್ನ ಆಶಾ' ಧಾರಾವಾಹಿ ಮೂಲಕ ಸಂಗೀತ ಮನೆ ಮಾತಾದವರು. ತೆರೆ ಮೇಲೆ ಮಾತ್ರ ಪೋಷಕ ನಟಿಯಲ್ಲ, ತೆರೆ ಹಿಂದೆಯೂ ಎಲ್ಲರ ಜೊತೆಗೂ ಅದೇ ರೀತಿ ಬೇರೆಯುವವರು. ಸಿನಿಮಾ, ಧಾರಾವಾಹಿಗಳಲ್ಲಿ ತಾಯಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಸಂಗೀತಾಗೆ ಅಮ್ಮನ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರಿಗಾಗಿ ವಿಶೇಷ ಕೇಕ್ ಒಂದನ್ನು ತಂದು ಕಟ್ ಮಾಡಿಸಿ, ತಾಯಂದಿರ ದಿನದ ಶುಭ ಹಾರೈಸಿದ್ದಾರೆ. ಸಂಗೀತಾಗೆ ಹೇಳಿ ಕೇಳಿ ಫಾಲೋವರ್ಸ್, ಫ್ಯಾನ್ಸ್ ಪೇಜ್ ಸ್ವಲ್ಪ ಹೆಚ್ಚಾಗಿಯೇ ಇದೆ. ಕೇಕ್ ಕಟ್ ಮಾಡಿಸಿರುವ ಸ್ಯಾಂಪಲ್ ಫೋಟೊ ಒಂದು ವೈರಲ್ ಆಗಿದೆ.

ಲಕ್ಷ್ಮೀ ಸಿದ್ದಯ್ಯ ಮನೆಯಲ್ಲಿ ಸರ್ಪ್ರೈಸ್ ಹೇಗಿತ್ತು?

ಲಕ್ಷ್ಮೀ ಸಿದ್ದಯ್ಯ ಮನೆಯಲ್ಲಿ ಸರ್ಪ್ರೈಸ್ ಹೇಗಿತ್ತು?

ಲಕ್ಷ್ಮೀ ಸಿದ್ದಯ್ಯ ಕೂಡ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಜೀ ಕನ್ನಡ ಡಬ್ ಸೀರಿಯಲ್ ಕೃಷ್ಣ ಸುಂದರಿಯಲ್ಲಿ ಅಖಿಲ್ ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಐಶ್ವರ್ಯ (ಶ್ಯಾಮ) ಕಂಡರೆ ಕಿಡಿಕಾರುವ ಜನರ ನಡುವೆ ಮುದ್ದು ಅಮ್ಮನಾಗಿ, ಕಾಳಜಿ ತೋರುವ ಅತ್ತೆಯಾಗಿ ಕಾವಲಾಗಿ ನಿಂತಿದ್ದಾರೆ ಈ ವಸಂತ. ಲಕ್ಷ್ಮೀ ಸಿದ್ದಯ್ಯ ಮನೆಯಲ್ಲಿ ತಾಯಂದಿರ ದಿನದ ಸೆಲೆಬ್ರೇಷನ್ ಜೋರಾಗಿಯೇ ಇತ್ತು. ಮಕ್ಕಳು ಅಮ್ಮನಿಗಾಗಿ ಸರ್ಪ್ರೈಸ್ ಕೊಟ್ಟು ಕೇಕ್ ಕಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಅದ್ಭುತವಾದ ಗಿಫ್ಟ್ ಕೂಡ ನೀಡಿದ್ದಾರೆ. ಲಕ್ಷ್ಮೀ ತನ್ನ ಅಮ್ಮ ಮತ್ತು ಮಕ್ಕಳೊಂದಿಗೆ ಫೋಟೊಗೆ ಪೋಸ್ ನೀಡಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಲಕ್ಷ್ಮೀ ಅವರ ಸೆಲೆಬ್ರೇಷನ್ ನೋಡಿ ಫ್ಯಾನ್ಸ್ ಫೂಲ್ ಖುಷಿಯಾಗಿದ್ದಾರೆ.

More from Filmibeat

English summary
Zee Kannada Serial Mothers And Daughters. Here is the details about Actress share her mother's photos and videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X