ಅಣ್ಣಾವ್ರ ಹುಟ್ಟುಹಬ್ಬದ ದಿನ ಅಪ್ಪು ಟ್ಯಾಟೂ ಶೇರ್ ಮಾಡಿಕೊಂಡ ನಮ್ರತಾ ಗೌಡ
ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ. ಹೊಸ ಹೊಸ ಫೋಟೊ ಹಾಕಿ ಪಡ್ಡೆ ಹೈಕ್ಳ ಹೃದಯವನ್ನು ಆಗಾಗ ಡಿಸ್ಟರ್ಬ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡಗೆ ಸಿಕ್ಕಾಪಟ್ಟೆ ಅಭಿಮಾನಿ ಬಳಗವಿದೆ. ಅವರಿಗಾಗಿಯೇ ಫ್ಯಾನ್ ಪೇಜ್‌ಗಳು ಕೂಡ ಹುಟ್ಟಿಕೊಂಡಿವೆ. ಇದರ ನಡುವೆಯೇ ನಮ್ರತಾ ಗೌಡ ಹೊಸ ಫೋಟೊ ಮತ್ತು ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಸ್ಪೆಷಲ್ ಫೋಟೊಗಳಿಗೆ ಹೊಗಳಿಕೆಯ ಮಹಾಪೂರವೂ ಹರಿದು ಬಂದಿದೆ.
ಧಾರಾವಾಹಿಯಲ್ಲಿ ಬ್ಯುಸಿ ಇರುವ ನಟಿ ಆಗಾಗ ತಮ್ಮ ಫಾಲೋವರ್ಸ್‌ಗೆ ಖುಷಿಯಾಗುವಂತಹ ಸಂದೇಶಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಬಿಡುವಿನ ವೇಳೆಯಲ್ಲಿ ಏನೆಲ್ಲಾ ಮಾಡುತ್ತೇವೆ? ಫ್ರೆಂಡ್ಸ್ ಯಾರು? ಎಲ್ಲೆಲ್ಲಾ ಟ್ರಿಪ್ ಹೋಗ್ತೀವಿ? ಇಂಡಸ್ಟ್ರಿಯಲ್ಲಿ ಯಾರು ಇಷ್ಟ? ಹೀಗೆ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಪ್ಪು ಬಗ್ಗೆ ಹೊಸ ವಿಚಾರ ಶೇರ್ ಮಾಡಿಕೊಂಡಿದ್ದಾರೆ.

ನಮ್ರತಾ ಕೈಯಲ್ಲಿ ಅಪ್ಪು ಟ್ಯಾಟು
ಅಪ್ಪು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅವರನ್ನು ಇಷ್ಟ ಪಡುವುದಕ್ಕೆ ಇಂಥದ್ದೆ ಕಾರಣ ಬೇಕು ಎಂದು ಏನಿಲ್ಲ. ಅವರಲ್ಲಿರುವ ಅದೆಷ್ಟೋ ಗುಣಗಳನ್ನು ಎಲ್ಲರನ್ನು ಸೆಳೆಯುತ್ತವೆ, ಎಲ್ಲರೂ ಗೊತ್ತಿಲ್ಲದೆ ಅವರ ಅಭಿಮಾನಿಗಳಾಗಿ ಬಿಡುತ್ತೀವಿ. ಅವರಿಲ್ಲ ಎಂಬುದನ್ನು ನೆನಪಿನಾಳದಿಂದ ತೆಗೆದು ಹಾಕಿ, ಅಪ್ಪುವಿನ ಜೀವಂತಿಕೆಯನ್ನು ಉಳಿಸಲು ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಯತ್ನಿಸಿದರೆ, ನಟಿಯರು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅವರ ಜೀವಂತಿಕೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ. ನಮ್ರತಾ ಗೌಡ ಕೂಡ ಇದೀಗ ಅಪ್ಪು ಟ್ಯಾಟೂ ಹಾಕಿಸಿಕೊಂಡು ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ನಮ್ರತಾ ಎಂದರೆ ಪಂಚಪ್ರಾಣ
ಮೊದಲೇ ಹೇಳಿದಂತೆ ಅಪ್ಪು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅವರ ಅಭಿಮಾನಿ ಬಳಗ ಸಿಕ್ಕಾಪಟ್ಟೆ ದೊಡ್ಡದಾಗಿದೆ. ಬರೀ ಸಿನಿಮಾ ನೋಡಿ, ಆರಾಧಿಸುವವರು ಮಾತ್ರವಲ್ಲ ನಟ-ನಟಿಯರು ಕೂಡ ಅಪ್ಪು ಅಭಿಮಾನಿಗಳೇ ಆಗಿದ್ದಾರೆ. ನಮ್ರತಾ ಗೌಡ ಕೂಡ ಅಪ್ಪು ಅಭಿಮಾನಿಯೆ. ಈ ಬಗ್ಗೆ ಇತ್ತೀಚೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಪು ಬಗೆಗಿನ ಭಾವನಾತ್ಮಕ ಸಾಲುಗಳನ್ನು ಬಿಚ್ಚಿಟ್ಟದ್ದರು. ಇಂದು ಅಣ್ಣಾವ್ರ ಹುಟ್ಟು ಹಬ್ಬ. ರಾಜರತ್ನನ ಹೆಸರಿರುವ ಟ್ಯಾಟೂದ ಫೋಟೊವನ್ನು ಹಂಚಿಕೊಂಡಿದ್ದಾರೆ.

ನಮ್ರತಾಗೆ ಟ್ರಾವೆಲ್ ಅಂದರೆ ಪ್ರೀತಿ
ಟ್ರಾವೆಲ್ ಎಂದರೆ ತೀರಾ ಇಷ್ಟಪಡುವ ನಮ್ರತಾ ಬ್ಯುಸಿ ಲೈಫ್ ನಲ್ಲಿ ಸ್ವಲ್ಪ ಗ್ಯಾಪ್ ಸಿಕ್ಕಿದರು ಫ್ರೆಂಡ್ಸ್ ಜೊತೆ ಟ್ರಿಪ್ ಹೊರಟು ಬಿಡುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿ ಹೊರ ದೇಶಕ್ಕೆ ಹೋಗಿ ಬಂದಿದ್ದರು. ನಟಿಯ ಪ್ರಾಮುಖ್ಯತೆ ಹೆಚ್ಚಿದ್ದು, ಸ್ಪಾನ್ಸರ್ ಶಿಪ್ ಕೂಡ ಸಿಕ್ಕಿತ್ತು. ಹೊರದೇಶದಲ್ಲಿ ಸುತ್ತಾಡಿದ ಫೋಟೊ, ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳ ಹಾರ್ಟ್‌ಗೆ ಕೈ ಹಾಕಿದ್ದರು. ನಮ್ರತಾ ಗೌಡ ಅವರ ಫುಲ್ ಬೋಲ್ಡ್ ಲುಕ್ ನೋಡಿ ಫ್ಯಾನ್ಸ್ ಕಳೆದೆ ಹೋಗಿದ್ದರು.

ನಮ್ರತಾರಿಂದ ಯೂಟ್ಯೂಬ್ ಚಾನೆಲ್ ಆರಂಭ
ಇತ್ತೀಚೆಗೆ ಇದೊಂದು ಟ್ರೆಂಡ್ ಆಗೋಗಿದೆ ಎಂದರು ತಪ್ಪಾಗಿಲಿಕ್ಕಿಲ್ಲ. ಯಾಕೆಂದರೆ ಈಗಿನ ಹಲವು ಕಿರುತೆರೆ ನಟಿಯರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ತೆರೆದು ತಮಗಿರುವ ಆಸೆ, ಅನಿಸಿಕೆ, ದೈನಂದಿನ ಚಟುವಟಿಕೆಗಳನ್ನೆಲ್ಲಾ ಆ ಯೂಟ್ಯೂಬ್‌ನಲ್ಲಿ ಹಾಕಿಕೊಂಡು ಫ್ಯಾನ್ಸ್‌ಗೆ ಇನ್ನು ಹತ್ತಿರವಾಗುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಹಣ ಗಳಿಸುವ ಸುಲಭ ಹಾದಿಯಲ್ಲಿ ಸಾಗುತ್ತಿದ್ದಾರೆ. ಇಷ್ಟು ದಿನ ಆ ಸುದ್ದಿಗೆ ಹೋಗದ ನಮ್ರತಾ ಇದೀಗ ಅವರು ಕೂಡ ಒಂದು ಯೂಟ್ಯೂಬ್ ತೆರೆದು, ಜಯನಗರದಲ್ಲಿ ಶಾಪಿಂಗ್ ಮಾಡಿದ್ದಾರೆ. ಅಪ್ಪು ಬಗ್ಗೆ ಮಾತನಾಡಿದ್ದಾರೆ. ತಮ್ಮ ಧಾರಾವಾಹಿಯಿಲ್ಲದ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್‌ಗಾಗಿ ಸಮಯ ನೀಡುತ್ತಿದ್ದಾರೆ. ನಮ್ರತಾರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ರೀಲ್ಸ್ ನೋಡಿ ಖುಷಿ ಪಡುತ್ತಿದ್ದವರು ಇದೀಗ, ಯೂಟ್ಯೂಬ್‌ನಲ್ಲಿ ಮತ್ತಷ್ಟು ವೆರೈಟಿ ವಿಡಿಯೋಗಳನ್ನು ಕಾಣಬಹುದಾಗಿದೆ.


Click it and Unblock the Notifications











