Namratha Gowda: ಹಾಟ್ ಗರ್ಲ್, ಅಪ್ಸರೆ.. ಕಿರುತೆರೆ ನಟಿ ನಮ್ರತಾ ಗೌಡಗೆ ಅದೆಷ್ಟು ಫ್ಯಾನ್ಸ್ !

By ಎಸ್ ಸುಮಂತ್

ನಮ್ರತಾ ಗೌಡ ಸ್ಮೈಲ್‌ಗೆ ಅದೆಷ್ಟು ಹಾರ್ಟ್‌ಗಳು ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಆಗಿದ್ದಾವೋ ಗೊತ್ತಿಲ್ಲ. 'ನಾಗಿಣಿ 2' ಧಾರಾವಾಹಿಯಲ್ಲಿ ನಾಗಿಣಿಯಾಗಿ ಅಬ್ಬರಿಸಿದಾಗ ಹುಟ್ಟುವ ಭಯಕ್ಕಿಂತ, ತ್ರಿಶೂಲ್ ಜೊತೆ ರೋಮ್ಯಾಂಟಿಕ್ ಆಗಿ ಕಂಡಾಗ ಆಗುವ ಕ್ರಶ್‌ ಹೆಚ್ಚು. ನಮ್ರತಾ ಗೌಡ ನೋಡಿದ ಪಡ್ಡೆ ಹೈಕ್ಳು ಒಂದು ಕ್ಷಣ ಡಿಸ್ಟರ್ಬ್ ಆಗಿಲ್ಲ ಎನ್ನುವ ಹಾಗಿಲ್ಲ. ಮನಮೋಹಕ ನೋಟ, ಕಿಲ್ಲಿಂಗ್ ಸ್ಮೈಲ್ ಒಂದಾ, ಎರಡಾ ಬೇಕಾದಷ್ಟು ಇಂತಹ ಗುಣಗಳು ನಮ್ರತಾ ಗೌಡರಲ್ಲಿ ಒಟ್ಟಾಗಿ ಅಡಗಿ ಕುಳಿತಿದೆ.

ಅದರಲ್ಲೂ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬ್ಯಾಕ್ ಟು ಬ್ಯಾಕ್ ಶೇರ್ ಮಾಡುತ್ತಿರುವ ವಿಡಿಯೋ ಫೋಟೊಗಳು ಫ್ಯಾನ್ಸ್ ಮನಸ್ಸನ್ನು ಅಲುಗಾಡಿಸಿದೆ. ಏನು ಬ್ಯೂಟಿ ಮೆಂಟೈನ್ ಮಾಡಿದ್ದಾರೆ ಗುರು ಅಂತ ಬಾಯಿ ತುಂಬಾ ಹೊಗಳುತ್ತಾ, ಎದೆ ಮೇಲೆ ಕೈ ಇಟ್ಟುಕೊಂಡು, ಹಾಗೇ ಕನಸಿನ ಲೋಕದಲ್ಲಿ ಒಂದು ರೌಂಡು ಹೊಡೆದುಕೊಂಡು ಬರುವಂತೆ ಮಾಡುತ್ತಿದೆ. ನಮ್ರತಾ ಗೌಡ ಅವರ ಇನ್‌ಸ್ಟಾಗ್ರಾಂ ವಿಡಿಯೋ ಫೋಟೊದಲ್ಲಿ ಅಂತಹದ್ದೇನು ವಿಶೇಷ ಅನ್ನೋ ಅನುಮಾನ ನಿಮಗೆ ಬರೋದು ಸಹಜ. ನಮ್ರತಾ ಫೋಟೊ ವಿಡಿಯೋ ನೋಡುತ್ತಿದ್ದರೆ ಪಡ್ಡೆ ಹೈಕ್ಳು ಮಾತ್ರ ಅಲ್ಲ ಹೆಣ್ಣು ಮಕ್ಕಳಿಗೆ ಒಂದು ಕ್ಷಣ ಹೊಟ್ಟೆಕಿಚ್ಚು ಬಂದು ಬಿಡುತ್ತೆ.

ಹುಟ್ಟುಹಬ್ಬ ಆಚರಣೆಗೆ ಥೈಲ್ಯಾಂಡ್‌ಗೆ ಹಾರಿದ್ದ ನಮ್ರತಾ

ಇವತ್ತು (ಏಪ್ರಿಲ್ 15) ನಮ್ರತಾ ಫಾಲೋವರ್ಸ್‌ಗೆ ಸ್ಪೆಷಲ್ ಡೇ. ಇಂದು (ಏಪ್ರಿಲ್ 15) ಅವರ ಹುಟ್ಟುಹಬ್ಬ. 28 ವಸಂತಕ್ಕೆ ಕಾಲಿಟ್ಟ ನಮ್ರತಾ ತಮ್ಮ ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದರಂತೆ ಒಂದೊಳ್ಳೆ ಜಾಗಕ್ಕೆ ಹಾರಿದ್ದಾರೆ. ಅದುವೇ ಥೈಲ್ಯಾಂಡ್. ನಮ್ರತಾ ಈ ಬಾರಿಯ ಹುಟ್ಟುಹಬ್ಬವನ್ನು ಥೈಲ್ಯಾಂಡ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಥೈಲ್ಯಾಂಡ್ ತಲುಪಿದ್ದು, ಒಂದೊಂದೆ ಹೊಸ ವಿಡಿಯೋ ಬಿಟ್ಟು ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಿದ್ದಾರೆ.

ನಮ್ರತಾಗೆ ಹಾಟ್ ಗರ್ಲ್ ಎಂದ ನೆಟ್ಟಿಗರು

ನಮ್ರತಾಗೆ ಹಾಟ್ ಗರ್ಲ್ ಎಂದ ನೆಟ್ಟಿಗರು

ತಮ್ಮಿಷ್ಟದ ನಟ-ನಟಿಯರ ಹುಟ್ಟುಹಬ್ಬ ನೆನಪಿಟ್ಟುಕೊಳ್ಳುವುದು ಅಭಿಮಾನಿಗಳ ಅಭ್ಯಾಸ. ಬರೀ ನೆನಪಿಟ್ಟುಕೊಳ್ಳುವುದಲ್ಲ ಅದ್ಧೂರಿ ಆಚರಣೆಯನ್ನು ಮಾಡುತ್ತಾರೆ, ಬಾಯಿ ತುಂಬಾ ಹರಸಿ ಹಾರೈಸುತ್ತಾರೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಫೋಟೊ ಹಾಕಿ ವಿಶ್ ಕೂಡ ಮಾಡುತ್ತಾರೆ. ನಮ್ರತಾ ಗೌಡ ತಾವಿರುವ ಜಾಗದ ಫೋಟೊ ಹಾಕಿದ್ದೇ ತಡ ಫಾಲೋವರ್ಸ್‌ಗೆ ಅದು ಯಾವ ಉದ್ದೇಶಕ್ಕೆ ಆ ಜಾಗಕ್ಕೆ ಹೋಗಿದ್ದಾರೆಂಬ ಅರಿವು ಬಂದಾಗಿದೆ. ಬ್ಯಾಕ್ ಟು ಬ್ಯಾಕ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಅಂದರೆ ಏಪ್ರಿಲ್14 ರಂದು ಫೋಟೊ ಶೇರ್ ಮಾಡಿಕೊಂಡಿರುವ ನಮ್ರತಾ ಗೌಡಗೆ ಅಭಿಮಾನಿಗಳೆಲ್ಲಾ ವಿಶ್ ಮಾಡಿದ್ದಾರೆ. ಈ ಫೋಟೊಗಳನ್ನು ನೋಡಿ ಹಾಟ್ ಗರ್ಲ್, ಹಾಟ್ ಲುಕ್ ಹೀಗೆ ತಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಸೇರಿಸಿದ್ದಾರೆ.

ನಮ್ರತಾ ವಿಡಿಯೋ ನೋಡಿ ಫ್ಯಾನ್ಸ್ ದಿಲ್ ಖುಷ್

ಫ್ಯಾನ್ಸ್ ಹಾಟ್ ಗರ್ಲ್ ಅಂತ ಕಮೆಂಟ್ ಹಾಕಿರುವುದರಲ್ಲಿ ಯಾವುದೇ ಡೌಟ್ ಇಲ್ಲ. ಯಾಕೆಂದರೆ ನಮ್ರತಾ ಗೌಡ ಥೈಲ್ಯಾಂಡ್ ಹೋಗಿರುವ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡಿಕೊಂಡಿರುವುದನ್ನು ಒಮ್ಮೆ ಕಣ್ತುಂಬಿಕೊಂಡಾಗ ಆ ಮಾತು ಸತ್ಯ ಎನಿಸುತ್ತದೆ. ಯೆಲ್ಲೋ ಗೌನ್ ಧರಿಸಿ, ಕೂದಲು ಹಾರಾಡಲು ಬಿಟ್ಟು, ಸನ್ ಗ್ಲಾಸ್ ಹಾಕಿ ಹಾಗೆ ಲುಕ್ ಕೊಟ್ಟಿರುವ ವಿಡಿಯೋ ನೋಡುತ್ತಾ ಇದ್ದರೆ ಖಂಡಿತಾ ನಟಿಯ ಸೌಂದರ್ಯಕ್ಕೆ ಬೆರಗಾಗದವರಿಲ್ಲ ಎಂಬಂತೆ ಭಾಸವಾಗುತ್ತದೆ. ಇನ್ನು ನೀರಿನ ಒಳಗೆ ಕಪ್ಪು ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿಯೇ ಪೋಸ್ ಕೊಟ್ಟಿದ್ದಾರೆ ನಟಿ ನಮ್ರತಾ.

Recommended Video

KGF 2 Malayalam Public Opinion | ಮಲಯಾಳಂ ನಲ್ಲಿ KGF 2 ಡೈಲಾಗ್, ಸಾಂಗ್ ಹೇಳಿದ ಕೇರಳ ಜನ, | KGF 2 Review .
ಥೈಲ್ಯಾಂಡ್ ನ ಸ್ಪಾನ್ಸರ್ ಇವರೇ ನೋಡಿ

ಥೈಲ್ಯಾಂಡ್ ನ ಸ್ಪಾನ್ಸರ್ ಇವರೇ ನೋಡಿ

ನಟ-ನಟಿಯರಿಗೆ ಸ್ಪಾನ್ಸರ್ ಸಿಗೋದು ತುಂಬಾ ಸುಲಭ. ಬಟ್ಟೆ, ಫುಡ್, ಟ್ರಾವೆಲ್ ಹೀಗೆ ಅನೇಕ ವಿಚಾರದಲ್ಲಿ ಹಲವು ಕಡೆ ಸ್ಪಾನ್ಸರ್ ಸಿಗುವುದರಲ್ಲಿ ನೋ ಡೌಟ್. ತಮ್ಮ ಪ್ರಾಡೆಕ್ಟ್, ತಮ್ಮ ಪ್ಲೇಸ್, ತಮ್ಮ ಸಂಸ್ಥೆಯ ಪ್ರಮೋಷನ್‌ಗಾಗಿಯೂ ನಟ-ನಟಿಯರಿಗೆ ಸಾಕಷ್ಟು ಸ್ಪಾನ್ಸರ್‌ಗಳು ಬರುತ್ತವೆ. ಇಂದು ನಟಿ ನಮ್ರತಾ ಗೌಡ ಹುಟ್ಟುಹಬ್ಬ ಇರುವ ಕಾರಣ trawel_mart ಈ ಒಂದು ಟ್ರಿಪ್ ಅರೆಂಜ್ ಮಾಡಿ ಕೊಟ್ಟಿದೆ. ವಿಶೇಷ ದಿನದಂದು ನಮ್ರತಾ ಕೂಡ ವಿಶೇಷವಾಗಿ ಸೆಲೆಬ್ರೆಟ್ ಮಾಡುತ್ತಿದ್ದಾರೆ.

ಸ್ನೇಹಿತರೊಂದಿಗೆ ಆಚರಣೆ

ನಮ್ರತಾ ಗೌಡಗೆ ಸ್ನೇಹಿತರು ಹೆಚ್ಚಿದ್ದಾರೆ. ಕಳೆದ ಬಾರಿಯ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿಯೇ ಸೆಲೆಬ್ರೆಟ್ ಮಾಡಿದ್ದರು. ಫ್ರೆಂಡ್ಸ್ ಎಲ್ಲಾ ಸೇರಿ, ಬಲೂನ್ ಕಟ್ಟಿದ್ದರು. ಇಷ್ಟದ ಕೇಕ್ ತಂದಿದ್ದರು. ಅವರೊಂದಿಗೆ ಕಟ್ ಮಾಡಿಸಿ, ಎಂಜಾಯ್ ಮಾಡಿದ್ದರು. ಸದ್ಯ ನಾಗಿಣಿ2 ಧಾರಾವಾಹಿಯಲ್ಲಿ ಮಿಂಚುತ್ತಿರುವ ನಮ್ರತಾ ಖ್ಯಾತಿ ಬೆಳೆಯುತ್ತಿದೆ. ಹೀಗಾಗಿ ದೊಡ್ಡ ದೊಡ್ಡ ಆಫರ್‌ಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ.

More from Filmibeat

English summary
Zee Kannada Serial Nagini 2 Actress Namratha Gowda Instagram Story. Here is the details about Namratha Gowda Birthday Special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X