ನಮ್ರತಾ ಗೌಡ: ಪ್ರೇಮ ಕಾಶ್ಮೀರದಲ್ಲಿ ಜಾಲಿ ಮೂಡ್‌ಗೆ ಜಾರಿದ ನಾಗಿಣಿ
ನಮ್ರತಾ ಗೌಡ ಬ್ಯೂಟಿಗೆ ಅನೇಕ ಜನ ಮಾರು ಹೋಗಿದ್ದಾರೆ. ಅವರೆಂದರೆ ಅದೇನೋ ಮೋಹ. ಅವರ ನಗು, ಅವರ ಸ್ಟೈಲ್‌ಗೆ ಹಲವರು ಕ್ಲೀನ್ ಬೋಲ್ಡ್. 'ನಾಗಿಣಿ 2' ಧಾರಾವಾಹಿಯಲ್ಲಿ ಶಿವಾನಿಯಾಗಿ ಎಲ್ಲರ ಹಾರ್ಟ್ ಬ್ರೇಕ್ ಮಾಡಿದ್ದ ನಮ್ರತಾ ಇದೀಗ ಶೈಲೂ ಆಗಿ ಮತ್ತೆ ರಂಜಿಸುತ್ತಿದ್ದಾರೆ. ಈ ಮಧ್ಯೆ ಆ ಊರು, ಈ ಊರು ಅಂತ ದೂರದೂರುಗಳಲ್ಲಿ ರೌಂಡ್ ಹಾಕುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಮ್ರತಾ ಗೌಡ, ವಿಡಿಯೋ, ಫೋಟೊಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಶೂಟಿಂಗ್ ಸ್ಪಾಟ್‌ನಲ್ಲಿ ಸೈಕಲ್ ಗ್ಯಾಪ್ ಸಿಕ್ಕಿದರೆ ಸಾಕು ರೀಲ್ಸ್ ಮಾಡುವುದರಲ್ಲಿ ಮುಳುಗಿ ಹೋಗುತ್ತಾರೆ. ಇದೀಗ ಒಂದಷ್ಟು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಹಾರ್ಟ್ ಸಿಂಬಲ್ ಹಾಕಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಕಾಶ್ಮೀರದಲ್ಲಿ ನಾಗಿಣಿ ಸಿಕ್ಕಾಪಟ್ಟೆ ಮಸ್ತಿ
ನಮ್ರತಾ ಗೌಡ ಸದ್ಯ 'ನಾಗಿಣಿ 2' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಮ್ರತಾ ಪ್ರವಾಸಿ ಪ್ರಿಯೆ. ಆಗಾಗ ಸ್ನೇಹಿತರ ಜೊತೆಗೆ ಸುತ್ತಾಡಲು ಹೋಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಅವರ ಹುಟ್ಟುಹಬ್ಬದ ಪ್ರಯುಕ್ತ ವಿದೇಶಕ್ಕೂ ಹೋಗಿ ಬಂದಿದ್ದರು. ಇದೀಗ ಕಾಶ್ಮೀರಕ್ಕೆ ತನ್ನ ಸೈನ್ಯದೊಂದಿಗೆ ಲಗ್ಗೆ ಇಟ್ಟಿದ್ದು, ಅಲ್ಲಿನ ಪ್ರವಾಸಿ ತಾಣ, ದೇವಸ್ಥಾನಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಕಾಶ್ಮೀರದ ಬೆಟ್ಟದ ಕಣಿವೆ ಬಳಿ ನಿಂತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಆ ಸುಂದರ ಜಗತ್ತನ್ನು ತಮ್ಮ ಬಂಧು-ಬಾಂಧವರಿಗೂ ಸೋಶಿಯಲ್ ಮೀಡಿಯಾ ಮೂಲಕವೇ ತೋರಿಸಿದ್ದಾರೆ.

ಕಾಶ್ಮೀರದಲ್ಲಿ ನಮ್ರತಾ ಮೋಜು ಮಸ್ತಿ
ನಮ್ರತಾ ಗೌಡಗೆ ಸ್ನೇಹಿತರು ಕೂಡ ಸ್ವಲ್ಪ ಹೆಚ್ಚಾಗಿಯೇ ಇದ್ದಾರೆ. ಅವರೆಲ್ಲರ ಜೊತೆ ನಮ್ರತಾ ತುಂಬಾ ಕ್ಲೋಸ್ ಆಗಿ, ಖುಷಿ ಖುಷಿಯಾಗಿ ಇರುತ್ತಾರೆ. ಸ್ನೇಹಿತರೆಲ್ಲಾ ಒಟ್ಟುಗೂಡಿ ಟ್ರಿಪ್‌ಗಳಿಗೆಲ್ಲಾ ಹೋಗುತ್ತಿರುತ್ತಾರೆ. ಇದೀಗ ಕಾಶ್ಮೀರಕ್ಕೆ ನಮ್ರತಾಗೆ ಪ್ರಿಯಾಂಕಾ ಜೊತೆಯಾಗಿದ್ದಾರೆ. ಅದ್ಭುತವೆನಿಸುವ ಜಾಗದಲ್ಲಿ ಇಬ್ಬರು ರೀಲ್ಸ್ ಮಾಡುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ.

ಕಾಶ್ಮೀರದಲ್ಲೂ ನಮ್ರತಾ ವರ್ಕೌಟ್ ಶುರು
ಫಿಟ್ನೆಸ್ ಎಂಬುದು ನಟ-ನಟಿಯರಿಗೆ ಯಾವಾಗಲೂ ಇರಬೇಕಾಗುತ್ತದೆ. ಈ ಹಿಂದೆಲ್ಲಾ ಗ್ಲಾಮರ್‌ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ನಟನೆ ಚೆಂದವಾಗಿ ಬಂದರೆ ಸಾಕಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಟನೆ ಜೊತೆಗೆ ಗ್ಲಾಮರ್ ವಿಚಾರ ಸ್ವಲ್ಪ ಜಾಸ್ತಿಯೇ ಬೇಕಾಗಿದೆ. ಹೀಗಾಗಿ ಸೆಲೆಬ್ರೆಟಿಗಳು ತಮ್ಮ ಗ್ಲಾಮರ್ ಅನ್ನು ಕಾಪಾಡಿಕೊಳ್ಳಲೇಬೇಕಾಗಿದೆ. ಹೀಗಾಗಿ ನಮ್ರತಾ ಕಾಶ್ಮೀರಕ್ಕೆ ಹೋದರು ತನ್ನ ಫಿಟ್ನೆಸ್ ಕಡೆ ಗಮನ ಕೊಟ್ಟಿದ್ದಾರೆ. ಅದರಲ್ಲೂ ಬೆಳಗ್ಗೆ ಆ ಹಸಿರು ಸಿರಿಯ ನಡುವೆ, ಬೆಟ್ಟಗಳ ವೈಭವದ ಮಧ್ಯೆ, ಚುಮುಚುಮು ಚಳಿಯಲ್ಲಿ ವರ್ಕಟ್ ಮಾಡುವುದೇ ಒಂದು ಖುಷಿ. ಆ ವಾತಾವರಣವನ್ನು ನಮ್ರತಾ ಹಾಗೂ ಪ್ರಿಯಾಂಕಾ ಎಂಜಾಯ್ ಮಾಡಿದ್ದಾರೆ.
ಡ್ರೆಸ್ಸಿಂಗ್ ವಿಚಾರದಲ್ಲಿ ನಮ್ರತಾ ಸ್ಪೂರ್ತಿ
ನಟ-ನಟಿಯರನ್ನು ಅಭಿಮಾನಿಗಳು ಸಾಕಷ್ಟು ವಿಚಾರದಲ್ಲಿ ಫಾಲೋ ಮಾಡುತ್ತಾರೆ. ಒಳ್ಳೆಯತನ, ನಟನೆ ಹೀಗೆ ಹಲವು ವಿಚಾರದಲ್ಲಿ ಮಾಡೆಲ್ ಆಗಿರುವ ಸೆಲೆಬ್ರೆಟಿಗಳು ಸ್ಟೈಲ್ ವಿಚಾರದಲ್ಲೂ ಹತ್ತು ಪಟ್ಟು ಮಾದರಿಯಾಗುತ್ತಾರೆ. ಆ ವಿಚಾರದಲ್ಲಿ ನಮ್ರತಾ ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತಾರೆ. ಅವರ ಡ್ರೆಸ್ಸಿಂಗ್ ಸೆನ್ಸ್ ಸಿಕ್ಕಾಪಟ್ಟೆ ಅದ್ಭುತವಾಗಿದೆ. ಅವರ ಒಂದೊಂದು ಸ್ಟೈಲ್ ತುಂಬಾ ಇಂಪ್ರೆಸ್ ಮಾಡುತ್ತಿದೆ. ಸೀರೆ ಪ್ರಿಯರಿಗೆ ಸೀರೆಯ ವಿಭಿನ್ನತೆ, ಮಾಡರ್ನ್ ಪ್ರಿಯರಿಗೆ ಮಾಡರ್ನ್ ಡ್ರೆಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ಎಂಜಾಯ್ ಮಾಡಬೇಕೆಂಬ ಮನಸ್ಥಿತಿ ಇರುವವರಿಗೆ ನಮ್ರತಾ ತುಂಬಾ ಪಾಸಿಟಿವ್ ವೈಬ್ ನೀಡುತ್ತಾರೆ.


Click it and Unblock the Notifications











