ಇದೇ ಮೊದಲ ಬಾರಿಗೆ ಡಬ್ ಸೀರಿಯಲ್ ಹಾಗೂ ಸ್ವಮೇಕ್ ಸೀರಿಯಲ್ ಮಹಾಸಂಗಮ : ಜೀ ಕನ್ನಡದಿಂದ ಹೊಸ ಪ್ರಯತ್ನ

By ಎಸ್ ಸುಮಂತ್

ಧಾರಾವಾಹಿಗಳಲ್ಲಿ ಆಗಾಗ ಮಹಾಸಂಗಮ ನಡೆಯುವುದು ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಒಂದು ಚಾನೆಲ್ ಅಂದರೆ ಅದರಲ್ಲಿ ಬರುವ ಹತ್ತಾರು ಧಾರಾವಾಹಿಗಳು ಕೂಡ ಒಂದೇ ಕುಟುಂಬವಿದ್ದಂತೆ. ಹೀಗಾಗಿ ಮದುವೆ ಸಂದರ್ಭದಲ್ಲಿ, ಏನಾದರೂ ಸಮಸ್ಯೆಯಾದಂತಹ ಸಂದರ್ಭದಲ್ಲಿ ಅದೇ ಚಾನೆಲ್‌ನಲ್ಲಿ ಬರುವ ಮತ್ತೊಂದು ಧಾರಾವಾಹಿಯ ಪಾತ್ರಧಾರಿಗಳು ಸಂಬಂಧಿಕರೋ, ಸ್ನೇಹಿತರೋ ಆಗಿ ಬರುತ್ತಾರೆ. ಈಗಾಗಲೇ 'ಗಟ್ಟಿಮೇಳ', 'ಜೊತೆ ಜೊತೆಯಲಿ', 'ಪಾರು' ಧಾರಾವಾಹಿಗಳಲ್ಲಿ ಈ ಮಹಾಸಂಗಮದ ಅನುಭವವಾಗಿದೆ.

ಇದೆಲ್ಲಾ ಇಲ್ಲಿಯೇ ನಿರ್ಮಾಣವಾಗಿ ಇಲ್ಲಿಯೇ ಇರುವ ಕಲಾವಿದರ ನಡುವೆ ನಡೆದ ಮಹಾಸಂಗಮ. ಆದರೆ ಜೀ ಕನ್ನಡದ ತೆಲುಗು ಧಾರಾವಾಹಿ ಹಾಗೂ ಕನ್ನಡದ ಧಾರಾವಾಹಿ ಇದೇ ಮೊದಲ ಬಾರಿಗೆ ಮಹಾಸಂಗಮ ಸಂಚಿಕೆಯಾಗಿ ಬರುತ್ತಿದೆ. ತ್ರಿನಯನಿ, ಶಿವಾನಿಯ ಬದುಕಲ್ಲಿ ಬರುತ್ತಿದ್ದು, ನಾಗಮಣಿ ರಹಸ್ಯ ಬೇಧಿಸಲು ಸಹಾಯ ಮಾಡಲು ಬಂದಿದ್ದಾಳೆ. ತ್ರಿನಯನಿ ಎಂಟ್ರಿಯಿಂದ 'ನಾಗಿಣಿ' ಕಥೆ ಮಹಾ ತಿರುವು ಪಡೆದುಕೊಳ್ಳಲಿದೆ.

'ತ್ರಿನಯನಿ'ಯಿಂದ 'ನಾಗಿಣಿ'ಗೆ ಸಹಾಯ

'ತ್ರಿನಯನಿ'ಯಿಂದ 'ನಾಗಿಣಿ'ಗೆ ಸಹಾಯ

ಇತ್ತೀಚೆಗೆ ಕನ್ನಡದಲ್ಲಿ ಡಬ್ ಸೀರಿಯಲ್‌ಗಳ ಸಂಖ್ಯೆ ಹೆಚ್ಚಾಗಿದೆ. ಜೀ ತೆಲುಗಿನಲ್ಲಿ 'ತ್ರಿನಯನಿ' ಧಾರಾವಾಹಿ ಬಹಳ ಖ್ಯಾತಿ ಪಡೆದಿದೆ. ಈಗ ಅದೇ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ, ಜೀ ಕನ್ನಡದಲ್ಲಿ‌ ಮಧ್ಯಾಹ್ನ 2 ಗಂಟೆಗೆ ಪ್ರಸಾರ ಮಾಡಲಾಗುತ್ತಿದೆ. 'ತ್ರಿನಯನಿ'ಗೂ ಬಹಳ ಡಿಮ್ಯಾಂಡ್ ಇದೆ. ಅಷ್ಟು ಕುತೂಹಲ ಮೂಡಿಸುವಂತಹ ಧಾರಾವಾಹಿ ಇದಾಗಿದೆ. 'ತ್ರಿನಯನಿ'ಗೆ ವಿಶೇಷ ಶಕ್ತಿಯೊಂದಿದೆ. ಅದು ಭವಿಷ್ಯ ಕಾಣುವ ಶಕ್ತಿ. ಯಾರಿಗಾದರೂ ತೊಂದರೆಯಾಗುತ್ತೆ ಎಂದಾದರೇ 'ತ್ರಿನಯನಿ'ಗೆ ಅದು ಮುಂಚೆಯೇ ಕಾಣಿಸುತ್ತದೆ. ಆ ಮೂಲಕ ಅವರನ್ನು 'ತ್ರಿನಯನಿ' ಕಾಪಾಡುತ್ತಾಳೆ.

'ತ್ರಿನಯನಿ' ಕಣ್ಣಲ್ಲಿ ನಾಗರಾಜನ ಸಾವು

'ತ್ರಿನಯನಿ' ಕಣ್ಣಲ್ಲಿ ನಾಗರಾಜನ ಸಾವು

ನಾಗಿಣಿ ಮತ್ತು ನಾಗರಾಜ ತಮ್ಮದೇ ಸುಖದಲ್ಲಿದ್ದಾಗ, ನಾಗಮಣಿಯ ಆಸೆಗಾಗಿ ಬಂದವರು ದಿಗ್ವಿಜಯ ಆಂಡ್ ಟೀಂ. ಸ್ಥಳದಲ್ಲಿಯೇ ನಾಗರಾಜ‌ನನ್ನು ಸಾಯಿಸಿ, ನಾಗಮಣಿಯನ್ನು ಹೊತ್ತೊಯ್ದರು. ನಾಗಿಣಿ 23 ವರ್ಷಗಳ ಕಾಲ ಕಾದು ಮತ್ತೆ ಭೂಲೋಕಕ್ಕೆ ಬಂದು, ತನ್ನ ಆದಿಶೇಷನನ್ನು ಹುಡುಕಿದಳು. ಈ ಎಲ್ಲಾ ಕಥೆ 'ತ್ರಿನಯನಿ' ಕಣ್ಣಿನಲ್ಲಿ ಅಚ್ಚು ಹೊತ್ತಿದಂತೆ ಕಾಣುತ್ತಿದೆ.

ಶಿವಾನಿಗೆ ನಾಗಮಣಿ ಸಿಗುತ್ತಾ?

ಶಿವಾನಿಗೆ ನಾಗಮಣಿ ಸಿಗುತ್ತಾ?

ಶಿವಾನಿ ಭೂಲೋಕದಲ್ಲಿ ಎಲ್ಲವನ್ನು ಸಹಿಸಿ ಬದುಕುತ್ತಿರುವುದೇ ಹೇಗಾದರೂ ಮಾಡಿ ನಾಗಮಣಿಯನ್ನು ತಮ್ಮ ಲೋಕಕ್ಕೆ ತೆಗೆದುಕೊಂಡು ಹೋಗಬೇಕು, ಆದಿಶೇಷನನ್ನು ಕರೆದುಕೊಂಡು ಹೋಗಬೇಕು ಎಂಬ ಕಾರಣಕ್ಕೆ. ಆದರೆ ಅದೆಷ್ಟೋ ವಿಘ್ನಗಳು ಎದುರಾಗಿ ಆ ಕೆಲಸವೇ ಕೈಗೂಡುತ್ತಿಲ್ಲ. ಈಗ ತ್ರಿಯನಿಯ ಸಹಕಾರ ನಾಗಿಣಿಗೆ ಸಿಗಲಿದೆ. ತ್ರಿನಯನಿಗಿರುವ ಮೂರನೇ ಕಣ್ಣಿನ ಶಕ್ತಿಯಿಂದ ನಾಗಮಣಿಯ ರಹಸ್ಯ ತಿಳಿಯಲು ಬಹುದು. ಈ ಮೂಲಕ ಶಿವಾನಿಗೆ ಸಹಾಯ ಮಾಡಬಹುದು.

ನಾಗಿಣಿಗೆ ದುಷ್ಟರ ಪರಿಚಯ

ನಾಗಿಣಿಗೆ ದುಷ್ಟರ ಪರಿಚಯ

ನಾಗಿಣಿಗೆ ಅಪಾರವಾದಂತ ಶಕ್ತಿ ಇದೆ. ಆದರೆ ಆದಿಶೇಷನನ್ನು ಕೊಂದವರು ಯಾರು..? ದುಷ್ಟರು ಯಾರು ಎಂಬುದನ್ನು ತಿಳಿಯಲು ಆಗುತ್ತಿಲ್ಲ. ದುಷ್ಟರ ಮನೆಗೆ ಸೊಸೆಯಾಗಿ ಹೋಗಿದ್ದಾಳೆ. ಆದರೆ ಮಹಾಸಂಗಮದಲ್ಲಿ ಮಹಾ ಶಕ್ತಿ ಇರುವ ತ್ರಿನಯನಿ ಎಂಟ್ರಿ ಈ ಎಲ್ಲಾ ಸಮಸ್ಯೆಗಳಿಗೂ ಉತ್ತರವಾಗಲಿದೆ. ಹಲವು ಸೇಡಿನ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಶಿವಾನಿಯ ಬದುಕು ಬೇರೆ ಕಡೆಗೆ ತಿರುವು ಪಡೆಯಲಿದೆ. ದುಷ್ಟ ಶಕ್ತಿಗಳ ಮೇಲೆ ತ್ರಿನಯನಿ ತನ್ನ ಮೂರನೇ ಕಣ್ಣನ್ನು ನೆಟ್ಟಿದ್ದು, ಅವರ ಸಂಹಾರ ಆಗುವುದು ಸತ್ಯವಾಗಲಿದೆ. ದುಷ್ಟರ ಸಂಹಾರದ ಬಳಿಕ ಶಿವಾನಿಗೆ ಆದಿಶೇಷ ಮತ್ತು ನಾಗಮಣಿ ಎರಡು ಸಿಗುವ ಸಾಧ್ಯತೆ ಇದೆ.

More from Filmibeat

English summary
Zee kannada serial Nagini2 & Trinayani Written Update on mahasangama episode. Here is the details about Trinayani help shivani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X