'ನಂ.1 ಸೊಸೆ'ಗೆ 400 ಸಂಚಿಕೆಯ ಸಂಭ್ರಮ: ಸರಸು ಒಳ್ಳೆತನಕ್ಕೆ ಫಿದಾ ಆದ ಪ್ರೇಕ್ಷಕರು

By ಪೂರ್ವ

ಜೀ ಕನ್ನಡದಲ್ಲಿ ಪ್ರಸಾರವಾಗುವ ನಂ.1 ಸೊಸೆ ಧಾರವಾಹಿ ಪ್ರೇಕ್ಷಕರ ಮನಗೆದ್ದಿದೆ. ಮಧ್ಯಾಹ್ನ 1 ಕ್ಕೆ ಪ್ರಸಾರವಾಗುವ ಈ ಧಾರಾವಾಹಿಯ ಮುಖ್ಯ ನಟಿ ಸರಸ್ವತಿ, ಭಾಷಿಣಿ ಆಗಿ ಇದೀಗ ರಾಹುಲ್ ಮನಗೆದ್ದಿದ್ದಾಳೆ. ಅದೆಷ್ಟೆ ಕಷ್ಟ ಬಂದರೂ ಅದನ್ನೆಲ್ಲ ಸಹಿಸಿ ತನ್ನ ತಂಗಿ ಮಗುವಿನ ರಕ್ಷಣೆ ಮಾಡುತ್ತಿದ್ದಾಳೆ.

ಇತ್ತ ಸರಸುನ ನೋಡಿದರೆ ಆಕೆಯ ಅತ್ತೆ ವಾಗ್ದೆವಿ ಕೆಂಡಾಮಂಡಲವಾಗುತ್ತಿದ್ದಾಳೆ. ಸರಸು ತಂದೆ ಜೈಲು ಪಾಲಾದರೆ ತಾಯಿಯನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಳ್ಳುತ್ತಾಳೆ. ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಇದ್ದ ಇಕೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು ಜೀವನ ಸಾಗಿಸುತ್ತಾಳೆ.

ಬಳಿಕ ವಾಗ್ದೇವಿ ಮಗ ರಾಹುಲ್‌ ಅನ್ನು ಮದುವೆಯಾಗಿ ಸುಖ ಸಂಸಾರದಲ್ಲಿ ತೊಡಗಿರಬೇಕಾದರೆ ಅನೇಕ ಅಡೆ ತಡೆಗಳು ಬರುತ್ತದೆ. ಸರಸು ಅನ್ನು ಕೊಲ್ಲುವ ಪ್ರಯತ್ನಗಳು ನಡೆಯುತ್ತವೆ. ಪ್ರೀತಿಯ ಸಂಚಿಗೆ ಸರಸು ಸಿಲುಕಿಕೊಳ್ಳುತ್ತಾಳೆ. ಭಾಷಿನಿ ಎಂಬ ಕ್ಯಾರೆಕ್ಟರ್ ಮೂಲಕ ಆಕೆ ರಾಹುಲ್‌ ಅನ್ನು ಕೈ ಹಿಡಿಯುತ್ತಾಳೆ, ಇಲ್ಲವಾಗಿದ್ದರೇ ರಾಹುಲ್ ಸಾಯುವ ಸಂದರ್ಭ ಸೃಷ್ಟಿಯಾಗಿರುತ್ತಿತ್ತು. ಇದೀಗ ಸ್ವಂತ ಮಗುವನ್ನು ಕಳೆದುಕೊಂಡಿರುವ ಸರಸು ಆ ಮಗು ಎಲ್ಲಿದೆ ಎಂಬ ಹುಡುಕಾಟದಲ್ಲಿ ಇದ್ದಾಳೆ.

ಮಗು ಸಿಕ್ಕ ಖುಷಿಯಲ್ಲಿ ಸರಸು

ಮಗು ಸಿಕ್ಕ ಖುಷಿಯಲ್ಲಿ ಸರಸು

ಇದೀಗ ನಂ.1 ಸೊಸೆ 400 ಎಪಿಸೋಡ್‌ಗಳನ್ನು ಪೂರ್ಣಗೊಳಿಸಿದೆ. ಮಗು ಬದುಕಿದೆ ಎಂಬ ವಿಚಾರ ಸರಸುಗೆ ತಿಳಿದಿದೆ ಹೀಗಾಗಿ ಸರಸು ಕೊಂಚ ಸಮಾಧಾನ ಪಟ್ಟುಕೊಂಡಿದ್ದಾಳೆ, ರಾಹುಲ್ ಇತ್ತ ದತ್ತು ಮಗುವನ್ನು ಬಹಳ ಪ್ರೀತಿಯಿಂದ ಬೆಳೆಸುತ್ತಿದ್ದಾನೆ. ತನ್ನ ಮಗು ತನ್ನಿಂದಲೇ ಸತ್ತು ಹೋಯಿತು ಎಂಬ ಕೊರಗಿನಲ್ಲಿ ಇದ್ದ ರಾಹುಲ್‌ಗೆ ಕೊಂಚ ಮಟ್ಟಿಗೆ ದತ್ತು ಮಗುವಿನ ಪ್ರೀತಿಯಿಂದ ಕಡಿಮೆಯಾಗುತ್ತಿದೆ. ಇವರಿಬ್ಬರು ಇದೀಗ ಖುಷಿಯಲ್ಲಿದ್ದಾರೆ ಆದರೆ ಇವರಿಬ್ಬರ ಖುಷಿಗೆ ಪ್ರೀತಿ, ಕೊಳ್ಳಿ ಇಡುವುದಂತು ಪಕ್ಕ, ರಾಹುಲ್ ಮೇಲೆ ಪ್ರೀತಿಗೆ ಅತಿಯಾದ ವ್ಯಾಮೋಹವೇ ಇದಕ್ಕೆಲ್ಲ ಕಾರಣ.

ವಾಗ್ದೇವಿಯನ್ನು ಎತ್ತಿ ಕಟ್ಟಿದ ಪ್ರೀತಿ

ವಾಗ್ದೇವಿಯನ್ನು ಎತ್ತಿ ಕಟ್ಟಿದ ಪ್ರೀತಿ

ಇದೀಗ ವಾಗ್ಧೇವಿಯನ್ನು ಕೂಡ ಸರಸು ವಿರುದ್ಧ ಎತ್ತಿ ಕಟ್ಟಿದ್ದಾಳೆ. ಆದರೆ ರಾಹುಲ್ ಇರೋ ತನಕ ಸರಸ್ವತಿಯನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದಿದೆ, ಇದಕ್ಕಾಗಿಯೇ ಬಹುದೊಡ್ಡ ಮಾಸ್ಟರ್ ಪ್ಲಾನ್‌ ಅನ್ನು ಕೂಡ ಮಾಡುತ್ತಿದ್ದಾಳೆ ಪ್ರೀತಿ. ರಾಹುಲ್ ಮನದಲ್ಲಿ ಸರಸು ಯಾವತ್ತೊ ಸತ್ತು ಹೋಗಿದ್ದಾಳೆ ಎಂಬ ಭಾವನೆ ಇದೆ ಆದರೆ ಅವನ ಬಳಿ ಇರುವ ಭಾಷಿಣಿಯೇ ಸರಸು ಎಂಬ ಯೋಚನೆ ಮಾತ್ರ ಆತನಿಗೆ ಇಲ್ಲ, ಆತನ ಬಳಿ ಇರುವ ದತ್ತು ಪುತ್ರನೇ ಆತನ ಮಗು ಎಂಬ ಸುಳಿವು ಇಲ್ಲ. ರಾಹುಲ್ ಹೇಳುತ್ತಾನೆ ಸರಸು ಇಲ್ಲದ ಜಾಗವನ್ನು ನೀನು ಅಷ್ಟೇ ಪ್ರೀತಿಯಿಂದ ತುಂಬುತ್ತಿದ್ದಿಯಾ, ನಿನ್ನ ಮಗುವಿನ ಸ್ಥಾನವನ್ನು ದತ್ತು ಮಗು ತುಂಬುತ್ತಿದೆ ಇನ್ನೇನು ಬೇಕು ಭಾಷಿಣಿ ಎಂದಾಗ ಸರಸುಗೆ ಬಹಳ ಖುಷಿಯೂ ಆಗುತ್ತದೆ, ನೋವು ಆಗುತ್ತದೆ.

ಗೊಂದಲದಲ್ಲಿರುವ ಸರಸು

ಗೊಂದಲದಲ್ಲಿರುವ ಸರಸು

ತನ್ನ ಗಂಡನ ಬಳಿ ನಾನು ಭಾಷಿಣಿ ಅಲ್ಲ ಸರಸು ಎಂಬ ವಿಚಾರ ಹೇಳಲು ಆಗದೇ ಸರಸು ತೊಳಲಾಡುತ್ತಿದ್ದಾಳೆ. ಅದೆಷ್ಟೇ ಪ್ರೀತಿ ಮಾಡಿದರು ಗಂಡನನ್ನು ಅರ್ಥ ಮಾಡಿಕೊಳ್ಳದೇ ಆತನನ್ನು ನಿಂದಿಸಿದೆ ಎನ್ನುವ ಬೇಸರ ಬಹಳವಾಗಿ ಸರಸುವನ್ನು ಕಾಡುತ್ತಿದೆ. ಇದೀಗ ಇರುವ ಮಗು ನಮ್ಮ ಮಗು ರಾಹುಲ್ ಎಂದು ಹೇಳಲು ಆಗದೇ ಏನು ಮಾಡಬೇಕೆಂಬ ಯೊಚನೆಯಲ್ಲಿ ಸರಸು ಸಿಕ್ಕಿಬಿದ್ದಿದ್ದಾಳೆ.

ಸರಸು ಒಳ್ಳೆತನ ಗೆಲ್ಲುತ್ತಾ ?

ಸರಸು ಒಳ್ಳೆತನ ಗೆಲ್ಲುತ್ತಾ ?

ಅದೆಷ್ಟೇ ಮನಸ್ಸಿಗೆ ಬೇಸರವಾದರೂ ರಾಹುಲ್ ಮಾತ್ರ ಭಾಷಿಣಿಯ ಮೇಲೆ ಪ್ರೀತಿಯ ಸುರಿಮಳೆ ಸುರಿಸುತ್ತಿದ್ದಾನೆ ಇದೆಲ್ಲ ವೀಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗುತ್ತಿದೆ. ಇದೀಗ ನಂ.1 ಸೊಸೆ ಧಾರವಾಹಿಯನ್ನು ಅನೇಕ ಜನರು ವೀಕ್ಷಿಸುತ್ತಿದ್ದಾರೆ. ವಾಗ್ದೇವಿಯ ದರ್ಪ ಗೆಲ್ಲುತ್ತೋ ಅಥವಾ ಸರಸು ಒಳ್ಳೆತನ ಗೆಲ್ಲುತ್ತಾ ಅಥವಾ ಪ್ರೀತಿಯ ಕುತಂತ್ರ ಗೆಲ್ಲುತ್ತದಾ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial No.1 sose written update on 13th Jun. Hear is more details about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X