ನೀವೂ ಪಾರುನಾ ಅಂತ ಕೇಳಿದ ಮುದ್ದು ಮಕ್ಕಳಿಗೆ ಅಖಿಲಾಂಡೇಶ್ವರಿ ಸೊಸೆ ಹೇಳಿದ್ದೇನು?

By ಎಸ್ ಸುಮಂತ್

ಮೋಕ್ಷಿತಾ ಪೈ ಇತ್ತೀಚೆಗೆ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಅರೆ.. ಯಾರ ಬಗ್ಗೆ ಹೇಳುತ್ತಿದ್ದಾರೆ ಅ‌‌ನ್ನೋ ಅನುಮಾನ ಕೆಲವರಿಗೆ ಖಂಡಿತ ಬಂದಿದೆ. ನಾವೂ ಹೇಳೋದಕ್ಕೆ ಹೊರಟಿದ್ದು ಪಾರು ವಿಚಾರ. ಸಾಕಷ್ಟು ಜನರು ಪಾರು ನಿಜವಾದ ಹೆಸರು ಮೋಕ್ಷಿತಾ ಪೈ ಅನ್ನೋದನ್ನೇ ಮರೆತು ಹೋಗಿದ್ದಾರೆ. ಅವರ ಬಗ್ಗೆ ಮಾತಾಡುವಾಗ, ಹೇಳುವಾಗ, ಹೊಗಳುವಾಗ ಬಳಕೆ ಮಾಡುವ ಹೆಸರು ಪಾರು. ಅದು ಎಲ್ಲರ ಪ್ರೀತಿಯ ಪಾರು. ಇದೀಗ ಪಾರು ಅಲಿಯಾಸ್ ಮೋಕ್ಷಿತಾ ಪೈ ಹೊಸ ಫೋಟೊ ಹಾಗೂ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಜನ ಪಾರು ಹಿಂದೆ ಬಿದ್ದಿದ್ದಾರೆ.

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅತಿ ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ ಮೋಕ್ಷಿತಾ ಪೈ. ಬ್ಯುಸಿ ಶೆಡ್ಯೂಲ್ ನಡುವೆ ಸಮಯ ಸಿಗುವುದೆ ಕಡಿಮೆ. ಆ ಕಡಿಮೆ ಸಮಯದಲ್ಲೂ ಪಾರು ತಮ್ಮವರನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಆ ಫೋಟೊಗೆ ಮೆಚ್ಚುಗೆಯ ಮಹಾಪೂರವೇ ಸಿಕ್ಕಿದೆ.

ಅಮ್ಮ ಜೊತೆ ಪಾರು ರೌಂಡ್ಸ್

ಅಮ್ಮ ಜೊತೆ ಪಾರು ರೌಂಡ್ಸ್

ಪಾರು ಅಲಿಯಾಸ್ ಮೋಕ್ಷಿತಾ ಪೈಗೆ ಫ್ಯಾಮಿಲಿ ಎಂದರೆ ಪಂಚಪ್ರಾಣ. ಕುಟುಂಬದೊಂದಿಗೆ ಕಾಲ ಕಳೆಯಲು ಇಷ್ಟ ಪಡುತ್ತಾರೆ. ಅಮ್ಮ ತಮ್ಮನನ್ನು ಬಿಟ್ಟಿಲಾರದಷ್ಟು ನಂಟು. ಅದರಲ್ಲೂ ಸಮಯ ಸಿಕ್ಕಾಗಲೆಲ್ಲಾ ತಮ್ಮನೊಂದಿಗೆ ಸಮಯ ಕಳೆಯುವ ಪ್ರೀತಿಯ ಅಕ್ಕ. ಇದೀಗ ಅಮ್ಮನ ಜೊತೆ ರೌಂಡ್ ಹೊಡೆದಿದ್ದಾರೆ. ಅಮ್ಮ ಮಗಳ ಸಮಯವಿದು ಅಂತ ಬರೆದು ಮೋಕ್ಷಿತಾ ಫೋಟೊ ಶೇರ್ ಮಾಡಿಕೊಂಡಿದ್ದಾರೆ. ಅಮ್ಮನ ಜೊತೆ ಸ್ನೋ ಪಾರ್ಕಿಗೆ ಹೋಗಿದ್ದಾರೆ. ಇನ್ನು ಸ್ನೋ ಪಾರ್ಕ್ ದಷ್ಟೇ ಫೋಟೊ ಶೇರ್ ಆಗಿದ್ದು, ಬೇರೆ ಬೇರೆ ಸ್ಥಳಗಳಲ್ಲೂ ರೌಂಡ್ ಹೊಡೆದಿದ್ದಾರೆ ಅಂತ ಅಭಿಮಾನಿಗಳು ಆ ಫೋಟೋಗಳ ನೋಡಲು ಕಾಯುತ್ತಿದ್ದಾರೆ.

ಪಾರು ಅಮ್ಮನ ಚಿತ್ರಾನ್ನ ಕೇಳಿದ ಫ್ಯಾನ್

ಪಾರು ಅಮ್ಮನ ಚಿತ್ರಾನ್ನ ಕೇಳಿದ ಫ್ಯಾನ್

ಪಾರು ತಮ್ಮ ಅಮ್ಮನ ಜೊತೆಗಿನ ಫೋಟೊಶೇರ್ ಮಾಡಿಕೊಂಡಿದ್ದೆ ತಡ, ಲೈಕ್ಸ್ ಮೇಲೆ ಸಿಕ್ಕಿದೆ. ಅಭಿಮಾನಿಗಳು ಮಗಳ ಜೊತೆಗೆ ಅಮ್ಮನನ್ನು ಹೊಗಳಿದ್ದಾರೆ. ನೀವಿಬ್ಬರೂ ನಮ್ಮ ಹಾರ್ಟ್ ನಲ್ಲಿದ್ದೀರಿ, ಬೆಸ್ಟ್ ಮಾಮ್ ಅಂತ ಒಬ್ಬರು ಕಮೆಂಟ್ ಮಾಡಿದ್ದರೆ, ಅಮ್ಮನ ಕೈಯ್ಯಾರೆ ಮಾಡಿದ ಚಿತ್ರಾನ್ನ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಹಾರ್ಟ್ ಸಿಂಬಲ್ ಹಾಕಿ ಕಮೆಂಟ್ ಮಾಡಿರುವವರೇ ಹೆಚ್ಚಾದರೆ, ಪ್ರೀತಿಯಿಂದ ಗಣಿ ಕರೆದಂತೆ ಅಕ್ಕ ಎಂದು ಕರೆದಿರುವವರೂ ಇದ್ದಾರೆ.

ಪಾರು ಜೊತೆಗೊಂದು ಸೆಲ್ಫಿ

ಪಾರು ಜೊತೆಗೊಂದು ಸೆಲ್ಫಿ

ಪಾರು ಈಗ ಎಲ್ಲರ ಅಚ್ಚುಮೆಚ್ಚಿನ ಹುಡುಗಿ. ಅಷ್ಟೇ ಅಲ್ಲ ಮೆಚ್ವಿನ ಮಗಳು ಕೂಡ. ಎಲ್ಲರೂ ಗುರುತಿಸುವಂತಹ ನಟಿ. ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಫ್ಯಾನ್ಸ್ ಪೇಜ್‌ಗಳು ಈಗಾಗಲೇ ಕ್ರಿಯೇಟ್ ಆಗಿವೆ. ಹೀಗಾಗಿ ಎಲ್ಲಿಯೇ ಹೋದರೂ ಫ್ಯಾನ್ಸ್ ತುಂಬಿಕೊಳ್ಳುತ್ತಾರೆ. ಇದೀಗ ಅಂತದ್ದೇ ವಿಡಿಯೋವೊಂದನ್ನು ಮೋಕ್ಷಿತಾ ಶೇರ್ ಮಾಡಿಕೊಂಡಿದ್ದಾರೆ. ಪಾರು ಯಾವುದೋ ಕಾರ್ಯಕ್ರಮದ ಉದ್ಘಾಟನೆಗೆ ಹೋಗಿದ್ದು, ಅಲ್ಲಿಯೂ ಅಭಿಮಾನಿಗಳು ಪಾರು ಜೊತೆ ಫೋಟೊಗಾಗಿ ಸುತ್ತುವರೆದಿದ್ದಾರೆ. ಪಾರು ಕೂಡ ತಮ್ಮ ಫ್ಯಾನ್ಸ್‌ಗೆ ಬೇಸರ ಮಾಡದೆ ಫೋಟೊಗೆ ನಗು ನಗುತ್ತಾ ಪೋಸ್ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಕ್ಯೂಟ್ ಪಾರುಗೆ ಮುದ್ದು ಮಕ್ಕಳ ಪ್ರಶ್ನೆ

ಕ್ಯೂಟ್ ಪಾರುಗೆ ಮುದ್ದು ಮಕ್ಕಳ ಪ್ರಶ್ನೆ

ಪಾರು ಅದೆಷ್ಟು ಖ್ಯಾತಿ ಪಡೆದಿದೆ ಎಂದರೆ, ಮಕ್ಕಳಿಗೂ ಇದು ಪಾರು ಎನಿಸಬೇಕು ಅಷ್ಟು ಖ್ಯಾತಿ ಪಡೆದಿದೆ. ಮೋಕ್ಷಿತಾ ಪೈ ಕಂಡ ಮಕ್ಕಳು ನೀವೂ ಪಾರೂನಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಖಿಲಾಂಡೇಶ್ವರಿ ಸೊಸೆ, ಪಾರು‌ ಹೇಗಿರ್ತಾಳೆ ಹೇಳಿ ಅಂತ ಆ ಮಕ್ಕಳನ್ನೇ ಮತ್ತೆ ಕೇಳಿದ್ದಾರೆ. ನೀವೂ ಪಾರೂನೇ. ಇಲ್ಲಿ ಸೀರೆ ಉಟ್ಟಿದ್ದೀರಿ ಅಷ್ಟೇ. ಧಾರಾವಾಹಿಯಲ್ಲಿ ಲಂಗ ಧಾವಣಿ ಹಾಕುತ್ತೀರಾ ಅಂತ ಮಕ್ಕಳು ಪಾರುಳನ್ನು ಗುರುತಿಸಿದ್ದಾರೆ. ಮಕ್ಕಳ ಜೊತೆ ಮಕ್ಕಳಾಗಿ ಪಾರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

More from Filmibeat

English summary
Zee Kannada Serial Paaru Actress Mokshitha Pai Biography and Life Style. Here is the details about Mokshitha Pai share some special moments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X