For Quick Alerts
  ALLOW NOTIFICATIONS  
  For Daily Alerts

  ಮೋಕ್ಷಿತಾ ಪೈ: ಪಾರು ತೊಟ್ಟ ಈ ಬ್ಲೌಸ್ ಬೆಲೆ 12 ಸಾವಿರವಂತೆ: ರೆಡಿಯಾಗಿದ್ದು ಎಲ್ಲಿ?

  |

  ಪಾರು ಸದ್ಯ ಎಲ್ಲರ ಅಚ್ಚುಮೆಚ್ಚಿನ ಮನೆ ಮಗಳು. ಪ್ರೀತಿಸಿದವನನ್ನೇ ಕೈ ಹಿಡಿದಳು. ಕೆಲಸದವಳಾಗಿದ್ದವಳು ಈಗ ಅರಸನಕೋಟೆಯ ಮೊದಲ ಸೊಸೆ. ಸರಳಾತಿ ಸರಳ ಪಾರು ಇತ್ತೀಚೆಗೆ ದೊಡ್ಡ ದೊಡ್ಡ ಜ್ಯುವೆಲ್ಕರಿ ಹಾಕಿಕೊಂಡು ರಾಣಿಯಂತೆ ಅಲಂಕಾರ ಮಾಡಿಕೊಳ್ಳುತ್ತಿದ್ದಳು. ಆದರೆ ಪಾರುಗೆ ಆ ಮೇಕಪ್, ಒಡವೆಗಿಂತ ತುಂಬಾ ಸಿಂಪಲ್ ಆಗಿ ಇರುವುದೇ ಎಲ್ಲರ ಕಣ್ಣಿಗೆ ಸುಂದರವಾಗಿ ಕಂಡದ್ದು. ಪಾರು ಹೀಗಿದ್ದರೇನೆ ಚೆಂದ ಎಂದು ಅಭಿಮಾನಿಗಳೆಲ್ಲ ಮನ ತುಂಬಿ ಹಾರೈಸಿದ್ದರು. ಆದರೆ ಪಾರು ರಿಯಲ್ ಲೈಫ್‌ನಲ್ಲೂ ಅಷ್ಟೇ ಸಿಂಪಲ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರು ಹಾಕುವ ಒಂದು ಬ್ಲೌಸ್ ಬೆಲೆ ಕೇಳಿದರೆ ಶಾಕ್ ಆಗಿ ಹೋಗುತ್ತೀರಿ.

  ಒಂದು ಕ್ಷಣ ಅತ್ತೆ ಕೊಟ್ಟ ಎಲ್ಲಾ ಸವಾಲುಗಳನ್ನು ಗೆದ್ದಿದ್ದ ಪಾರು ಈಗ ಯಾರದ್ದೋ ಕುತಂತ್ರಕ್ಕೆ ಬಲಿಯಾಗಿದ್ದಾಳೆ. ಅಧಿಕಾರ ಕೊಟ್ಟಿದ್ದ ಅತ್ತೆಯೆ ಇದೀಗ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ. ಒಂದು ಕ್ಷಣ ಯೋಚಿಸಿದ್ದರೆ ಎಲ್ಲವೂ ಸರಿಯಾಗುತ್ತಿತ್ತು. ಒಂದೇ ಒಂದು ಕ್ಷಣ ಯಾಮಾರಿದ್ದಕ್ಕೆ ಎಲ್ಲವನ್ನು ಕಳೆದುಕೊಂಡು ಮತ್ತೆ ಮನೆಕೆಲಸಕ್ಕೆ ಮರಳಿದ ಪಾರು ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಇಲ್ಲಿದೆ.

  'ಜೇನುಗೂಡು' ಧಾರಾವಾಹಿಯಲ್ಲಿ ಮದುವೆ ಸಂಭ್ರಮ: ಹೆಂಗೈತೆ ಪ್ರೀ ವೆಡ್ಡಿಂಗ್ ಫೋಟೊಶೂಟ್?'ಜೇನುಗೂಡು' ಧಾರಾವಾಹಿಯಲ್ಲಿ ಮದುವೆ ಸಂಭ್ರಮ: ಹೆಂಗೈತೆ ಪ್ರೀ ವೆಡ್ಡಿಂಗ್ ಫೋಟೊಶೂಟ್?

  ಪಾರು ಬ್ಲೌಸ್ ಮೇಲೆ ಹೆಣ್ಮಕ್ಕಳ ಕಣ್ಣು

  ಪಾರು ಬ್ಲೌಸ್ ಮೇಲೆ ಹೆಣ್ಮಕ್ಕಳ ಕಣ್ಣು

  ಫ್ಯಾಷನ್, ಮೇಕಪ್, ಟ್ರೆಂಡಿಂಗ್ ಹೀಗೆ ನಾನಾ ವಿಚಾರಗಳಿಗೆ ಸಂಬಂಧಿಸಿದಂತೆ ಸೆಲೆಬ್ರೆಟಿಗಳನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚು. ಪಾರು ಹಾಕುವ ಡ್ರೆಸ್‌ಗಳನ್ನು ಸ್ಕ್ರೀನ್ ಶಾಟ್ ತೆಗೆದು ಗೂಗಲ್‌ನಲ್ಲಿ ಹುಡುಕಿರುವವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಇದೀಗ ಪಾರು ಅಲಿಯಾಸ್ ಮೋಕ್ಷಿತಾ ಧರಿಸಿರುವ ಬ್ಲೌಸ್ ಮೇಲೆ ಎಲ್ಲರ ಚಿತ್ತ ಬಿದ್ದಿದೆ. ಯಾಕೆಂದರೆ ಅದು ನಾರ್ಮಲ್ ಬ್ಲೌಸ್ ಅಲ್ಲ. ನೋಡುವುದಕ್ಕೆ ಗ್ರ್ಯಾಂಡ್ ಆಗಿದೆ. ಆದರೆ ಅದರ ಬೆಲೆ ಕೇಳಿದರೆ ಒಮ್ಮೆ ತಲೆ ತಿರುಗುವುದು ಗ್ಯಾರಂಟಿ. ಆ ಬ್ಲೌಸ್‌ನ ಬೆಲೆ 12 ಸಾವಿರ.

  ನಾನು ನನ್ನಪ್ಪ: ಜೀ ಕನ್ನಡ ಸೆಲೆಬ್ರೆಟಿಗಳ ರಿಯಲ್ ಲೈಫ್ ತಂದೆ ಹೇಗಿದ್ದಾರೆ ನೋಡಿ?ನಾನು ನನ್ನಪ್ಪ: ಜೀ ಕನ್ನಡ ಸೆಲೆಬ್ರೆಟಿಗಳ ರಿಯಲ್ ಲೈಫ್ ತಂದೆ ಹೇಗಿದ್ದಾರೆ ನೋಡಿ?

  ಕಾಸಿನ ಬ್ಲೌಸ್ ಬಗ್ಗೆ ಕೇಳಿದ್ದೀರಾ?

  ಕಾಸಿನ ಬ್ಲೌಸ್ ಬಗ್ಗೆ ಕೇಳಿದ್ದೀರಾ?

  ಪಾರು ಹಾಕಿದ್ದ ರೆಡ್ ಕಲರ್ ಬ್ಲೌಸ್ ಈಗಾಗಲೇ ನಿಮ್ಮನ್ನೆಲ್ಲಾ ಅಟ್ರ್ಯಾಕ್ಟ್ ಮಾಡಿರುತ್ತೆ. ಕೆಂಪು ಬಣ್ಣದ ಬ್ಲೌಸ್‌ಗೆ ಗೊಲ್ಡನ್ ಕಲರ್ ಟಚ್ ಕೊಡಲಾಗಿದೆ. ಹೀಗಾಗಿ ಲುಕ್ ದುಪ್ಪಟ್ಟಾಗಿದೆ. ಆ ಬ್ಲೌಸ್‌ ಅನ್ನು ಅತಿ ಸೂಕ್ಷ್ಮತೆಯಿಂದ ಗಮನಿಸಿದರೆ ನಿಮಗೆ ಒಂದಷ್ಟು ಸ್ಪೆಷಲ್ ವಸ್ತುಗಳು ಕಾಣಸಿಗುತ್ತವೆ. ಈ ವಸ್ತುಗಳಿಂದಲೂ ಬ್ಲೌಸ್ ತಯಾರಿಸಬಹುದಾ ಎಂಬ ಆಶ್ಚರ್ಯವೂ ಉಂಟಾಗುತ್ತದೆ. ಅದುವೆ ಕಾಯಿನ್. ಈ ಬ್ಲೌಸಿನ ಹೆಸರೇ ಕಾಯಿನ್ ಬ್ಲೌಸ್. ಕೇಳುವುದಕ್ಕೆ ಒಂದು ರೀತಿಯಲ್ಲಿ ವಿಭಿನ್ನ, ವೈಶಿಷ್ಟ್ಯತೆ ಇದೆ ಅನ್ನಿಸುತ್ತೆ ಅಲ್ಲವಾ. ಬ್ಲೌಸಿನ ಮುಂದೆ, ಹಿಂದೆ, ತೋಳುಗಳಿಗೆ ಕಾಯಿನ್‌ಗಳನ್ನು ಜೋಡಿಸಲಾಗಿದೆ. ಬಹಳ ಬೇಗದಲ್ಲಿ ಅದು ಗೊತ್ತಾಗದೆ ಇದ್ದರೂ, ಸೂಕ್ಷ್ಮವಾಗಿ ನೋಡಿದಾಗ ಆ ಕಾಯಿನ್‌ಗಳ ಅಲಂಕಾರ ಕಾಣುತ್ತೆ.

  ಇಂತಹ ಬ್ಲೌಸ್ ಎಲ್ಲಿ ಸಿಗುತ್ತೆ?

  ಇಂತಹ ಬ್ಲೌಸ್ ಎಲ್ಲಿ ಸಿಗುತ್ತೆ?

  ಒಮ್ಮೊಮ್ಮೆ ಆನ್ಲೈನ್‌ನಲ್ಲಿ ನೋಡಿದ್ದು, ಸೆಲೆಬ್ರೆಟಿಗಳು ಹಾಕಿಕೊಂಡಿದ್ದು ಸಿಗದೆ ಹೋಗುತ್ತದೆ. ಆದರೆ ಈ ಬ್ಲೌಸ್ ಬೇಕು ಎಂದು ಬಯಸಿದರೆ ಖಂಡಿತವಾಗಿಯೂ ಸಿಕ್ಕೆ ಸಿಗುತ್ತೆ. ಇದು ಟೈನಾಟ್ ಎಂಬ ಕಾಸ್ಟ್ಯೂಮ್ ಡಿಸೈನ್ ಸಂಸ್ಥೆ ಮಾಡಿರುವ ಡಿಸೈನ್. ಇವರು ಸಾಕಷ್ಟು ಸೆಲೆಬ್ರೆಟಿಗಳ ಡಿಸೈನರ್ ಕೂಡ ಹೌದು. ಇದರ ಓನರ್ ಶಿಲ್ಪಾ ತುಂಬಾ ವೆರೈಟಿ ವೆರೈಟಿ ಡ್ರೆಸ್‌ಗಳನ್ನು ಡಿಸೈನ್ ಮಾಡುತ್ತಾರೆ. ಅವರ ಟೈನಾಟ್ ಇನ್‌ಸ್ಟಾಗ್ರಾಂನಲ್ಲೂ ನಾವೂ ಕಾಣಬಹುದು. ಶಿಲ್ಪಾ ಹೇಳುವ ಪ್ರಕಾರ, ಈ ಬ್ಲೌಸ್ ಕಾಯಿನ್ ವಿತ್ ಎಂಬ್ರಾಯ್ಡರಿಯಿಂದ ಮಾಡಿರುವುದು. ಇದನ್ನು ಟ್ರೆಡಿಷನಲ್ ಮತ್ತು ಫ್ಯಾನ್ಸಿ ಸ್ಯಾರಿ ಎರಡಕ್ಕೂ ವೇರ್ ಮಾಡಬಹುದು. ಹಾಗೇ ಇದರ ಬೆಲೆ 12 ಸಾವಿರ ಆದರೂ ಕೇಳುಗರ ಡಿಮ್ಯಾಂಡ್ ಮೇಲೆ ರೇಟ್ ಫಿಕ್ಸ್ ಮಾಡುತ್ತೇವೆ ಎನ್ನುತ್ತಾರೆ. ಟೈನಾಟ್ ಸಂಸ್ಥೆ ಸದ್ಯ ಬಸವೇಶ್ವರ ನಗರದ ಕೆಎಚ್‌ಬಿ ಕಾಲೋನಿಯಲ್ಲಿದೆ. ಇನ್ನು ಹೆಚ್ಚು ಹೆಚ್ಚು ಬ್ರಾಂಚ್‌ಗಳನ್ನು ತೆರೆಯುವ ಯೋಜನೆಯಲ್ಲೂ ಶಿಲ್ಪಾ ಇದ್ದಾರೆ.

  DKD:ಅಪ್ಪು ಟ್ರೋಫಿ ನೋಡಿ ನೋಡಿದ ಕೂಡಲೇ ಗಳ ಗಳನೇ ಅತ್ತ ಶಿವಣ್ಣDKD:ಅಪ್ಪು ಟ್ರೋಫಿ ನೋಡಿ ನೋಡಿದ ಕೂಡಲೇ ಗಳ ಗಳನೇ ಅತ್ತ ಶಿವಣ್ಣ

  ಪಾರುಗೆ ಮತ್ತೆ ಸೊಸೆ ಅಧಿಕಾರ ಸಿಗುತ್ತಾ?

  ಪಾರುಗೆ ಮತ್ತೆ ಸೊಸೆ ಅಧಿಕಾರ ಸಿಗುತ್ತಾ?

  ಸದ್ಯ ಪಾರು ಅಲಿಯಾಸ್ ಮೋಕ್ಷಿತಾ ಪೈ, ತನ್ನೆಲ್ಲಾ ಅಧಿಕಾರವನ್ನು ಕಳೆದುಕೊಂಡು ಕೂತಿದ್ದಾರೆ. ಆದಿ ಅಸಹಾಯಕನಾಗಿದ್ದಾನೆ. ಚಿಕ್ಕ ಅತ್ತೆಯ ಕಿರಿಕಿರಿ, ದ್ವೇಷದಿಂದ ಮನೆಯ ಇಡೀ ಮಾಹಿತಿ ಶತ್ರುಗಳ ಪಾಲಾಗುತ್ತಿದೆ. ದಾಮಿನಿ ಕೊರಳಲ್ಲಿರುವ ಯಂತ್ರವನ್ನು ತೆಗೆಯದ ಹೊರತು ಮನೆಯಲ್ಲಿ ಸಮಸ್ಯೆಗಳು ಹೆಚ್ಚಗುತ್ತಲೆ ಇರುತ್ತವೆ. ಬೆಳವಣಿಗೆ ಕುಂಠಿತವಾಗುತ್ತದೆ, ವ್ಯಾಪಾರ, ವಹಿವಾಟಿನ ಗುಟ್ಟು ರಟ್ಟಾಗುತ್ತಲೇ ಇರುತ್ತದೆ. ಪಾರು ಕಡೆಯಿಂದಲೇ ಈ ಕೆಲಸವಾದರೆ ಅತ್ತೆಗೆ ಮತ್ತೆ ನೆಚ್ಚಿನ ಸೊಸೆಯಾಗುತ್ತಾಳೆ.

  English summary
  Zee Kannada Serial Paaru Actress Mokshitha Pai Blouse Rate Cost 12 Thousand, Know More.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X