ಚಾಮರಾಜನಗರದಲ್ಲಿ 'ಪಾರು' ನೋಡಲು ಮುಗಿಬಿದ್ದ ಫ್ಯಾನ್ಸ್! ವಿಡಿಯೋ ವೈರಲ್

By ಎಸ್ ಸುಮಂತ್

ಪಾರು ಅಲಿಯಾಸ್ ಮೋಕ್ಷಿತಾ ಎಲ್ಲರ ಮನೆ ಮಗಳಾಗಿಬಿಟ್ಟಿದ್ದಾರೆ. 'ಪಾರು' ಧಾರಾವಾಹಿ ಶುರುವಾದಾಗಿನಿಂದ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದಾರೆ. ಈಗ ಅರಸನ ಕೋಟೆಯ ಹಿರಿ ಸೊಸೆಯಾಗಿ ತನ್ನ ಕರ್ತವ್ಯ ನಿರ್ವಹಿಸುವ ಕಾಲ ಬಂದಿದೆ. ಹಾಗಂತ ಇದು ಸುಲಭದ ಹಾದಿಯಾಗಿರಲಿಲ್ಲ. 800 ಎಪಿಸೋಡಿನ ಅದ್ಭುತ ಸಂಚಿಕೆಯನ್ನು ಇತ್ತೀಚೆಗೆ ಜೀ ಕನ್ನಡ ಹಂಚಿಕೊಂಡಿತ್ತು. ಇದರಿಂದ 'ಪಾರು' ಸಾಗಿ ಬಂದ ಹಾದಿಯ ಬಗ್ಗೆ ನಿಮಗೆಲ್ಲಾ ಗೊತ್ತೆ ಇರುತ್ತದೆ. ಈಗ ವಿಚಾರ ಬೇರೆಯದ್ದೇ ಇದು. ಅದು ಪಾರುಗಿರುವ ಅಭಿಮಾನಿ ಬಳಗ.

ಪಾರು ಎಂದರ ಎಲ್ಲರ ನೆಚ್ಚಿನ ಮಗಳು. ಆ ಮುಗ್ಧತೆ ಯಾರಲ್ಲಿಯೂ ಅಷ್ಟು ಸುಲಭಕ್ಕೆ ಬರುವುದಿಲ್ಲ. 'ಪಾರು' ಸದ್ಯಕ್ಕೆ ಎಲ್ಲರನ್ನು ಸೆಳೆದಿರುವುದು ಸರಳತೆ, ಮುಗ್ದತೆಯಿಂದಲೇ. ನಮ್ಮ ಮನೆಯಲ್ಲೂ ಇಂತಹ ಒಬ್ಬಳು ಮಗಳಿರಬಾರದಾ ಎಂಬ ಮಾತುಗಳು ಸಾಕಷ್ಟು ಬಾರಿ ಕೇಳಿ ಬಂದಿರುತ್ತೆ. 'ಪಾರು' ನಿಜವಾದ ಲೈಫ್‌ಗೂ ಧಾರಾವಾಹಿಯಲ್ಲಿನ ಪಾತ್ರಕ್ಕೂ ಕೊಂಚ ಸಾಮ್ಯತೆ ಅಂತು ಇದೆ. ಅದೇ ಕಾರಣಕ್ಕೆ ಪಾರುಗಿರುವ ಅಭಿಮಾನಿ ಬಳಗ ಜಾಸ್ತಿ ಆಗಿದ್ದಾರೆ.

'ಪಾರು'ಗೆ ಇಷ್ಟೊಂದು ಮಂದಿ ಫ್ಯಾನ್ಸ್ ಇದ್ದಾರಾ?

'ಪಾರು'ಗೆ ಇಷ್ಟೊಂದು ಮಂದಿ ಫ್ಯಾನ್ಸ್ ಇದ್ದಾರಾ?

ಈಗ ಕಿರುತೆರೆ, ಹಿರಿತೆರೆ ಎಂಬ ಯಾವ ವ್ಯತ್ಯಾಸವೂ ಇಲ್ಲ. ಈ ಹಿಂದೆ ಹಿರಿತೆರೆಗೆ ಎಂಟ್ರಿಯಾಗುವುದಕ್ಕೆ ಕಿರುತೆರೆ ಮೆಟ್ಟಿಲಾಗಿಸಿಕೊಂಡಿದ್ದರು. ಆದರೀಗ ಕಿರುತೆರೆ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ಬೆಳ್ಳಿತೆರೆಯಲ್ಲಿ ಮಿಂಚಿದವರು ಕೂಡ ಹಿರಿತೆರೆಗೆ ಬಂದು ಅಭಿನಯಿಸಿ ಹೋಗುತ್ತಾರೆ. ಹೀಗಾಗಿ ಕಿರುತೆರೆ ಬಗ್ಗೆ ಈಗ ಅಸಡ್ಡೆ ತೋರುವ ಹಾಗಿಲ್ಲ. ಹಿರಿತೆರೆಯಲ್ಲಿ ಮಿಂಚಿದ ನಟ-ನಟಿಯರಿಗಿರುವಂತೆ ಕಿರುತೆರೆ ನಟ-ನಟಿಯರಿಗೂ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಅದರಲ್ಲೂ ಪಾರುಗಿರುವ ಅಭಿಮಾನಿಗಳನ್ನು ನೋಡಿದರೆ ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ. ಅದಕ್ಕೆ ಈ ವಿಡಿಯೋನೇ ಸಾಕ್ಷಿ.

ನಟರಿಗಿರುವಂತೆ ಪಾರುಗಿದ್ದಾರೆ ಅಭಿಮಾನಿಗಳು

ಸಾಮಾನ್ಯವಾಗಿ ಸಿಕ್ಕಾಪಟ್ಟೆ ಅಭಿಮಾನಿ ಬಳಗವನ್ನು ಹೊಂದಿರುವುದು ಸ್ಟಾರ್ ನಟರು. ಸ್ಟಾರ್ ನಟರು ಸಾರ್ವಜನಿಕ ಸ್ಥಳಕ್ಕೆ ಬರುತ್ತಿದ್ದಾರೆ ಎಂದರೆ ಅಲ್ಲಿ ಅಭಿಮಾನಿಗಳ ದಂಡೇ ಹರಿದು ಬಂದಿರುತ್ತದೆ. ಜೈಕಾರ, ಲವ್ ಕಾರ ಎಲ್ಲವೂ ಮೊಳಗುತ್ತಿರುತ್ತದೆ. ಆದರೆ ಇಂಥ ದೃಶ್ಯವನ್ನು ನಾವೂ ಪಾರು ಅಭಿಮಾನಿ ಬಳಗದಲ್ಲೂ ನೋಡುತ್ತೇವೆ ಎಂದರೆ ಖುಷಿ, ಆಶ್ಚರ್ಯ ಎಲ್ಲವೂ ಆಗುತ್ತೆ. ಹೌದು, ಇತ್ತೀಚೆಗೆ ಪಾರು ಮದುವೆಯಾಗಿದೆ. ಆದಿ ಮತ್ತು ಯಾಮಿನಿ ಮದುವೆಗೂ ಮುನ್ನ ಶ್ರೀನಿವಾಸ ಕಲ್ಯಾಣ ಮಾಡಿಸಲಾಗಿತ್ತು. ಅದಕ್ಕೆಂದೆ ಇಡೀ ಟೀಂ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿ ಪಾರು ನೋಡುವುದಕ್ಕೆ ಅಂತಾನೆ ಎಲ್ಲಾ ವಯೋಮಾನದವರು ಕಾದು ಕುಳಿತಿದ್ದರು. ಪಾರು ಜೊತೆಗಿನ ಫೋಟೋಗಾಗಿ ಪಾರು ಪಾರು ಅಂತ ಕೂಗುತ್ತಾ ಇದ್ದರು. ಈ ವಿಡಿಯೋವನ್ನು ಮೋಕ್ಷಿತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟು ಜನ ಫ್ಯಾನ್ಸ್ ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಮನಗರಕ್ಕೆ ಹೋಗಿದ್ದ ಪಾರು ಗ್ಯಾಂಗ್

ರಾಮನಗರಕ್ಕೆ ಹೋಗಿದ್ದ ಪಾರು ಗ್ಯಾಂಗ್

'ಪಾರು' ಧಾರಾವಾಹಿಯಲ್ಲಿ ಪಾರುಗೆ ಅನುಷ್ಕಾ ಪಕ್ಕಾ ದುಷ್ಮನ್ ಆಗಿದ್ದಳು. ಆದರೆ ಧಾರಾವಾಹಿಯಿಂದ ಹೊರಗಡೆ ಪಾರು ಮತ್ತು ಅನುಷ್ಕಾ ಅಲಿಯಾಸ್ ಮಾನ್ಸಿ ಜೋಶಿ ಫುಲ್ ಕ್ಲೋಸ್. ಇತ್ತೀಚೆಗೆ ಅವರ ಗ್ಯಾಂಗ್ ಎಲ್ಲಾ ಫ್ಲ್ಯಾನ್ ಮಾಡಿಕೊಂಡು ಪ್ರವಾಸ ಕೂಡ ಹೋಗಿ ಬಂದಿದ್ದಾರೆ. ರಾಮನಗರದ ರೆಸಾರ್ಟ್ ಒಂದಕ್ಕೆ ಹೋಗಿ ಅಡ್ವೆಂಚರಸ್ ಗೇಮ್ಸ್ ಆಡಿ, ಫೈರ್ ಕ್ಯಾಂಪ್ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಸುಂದರ ಪರ್ವತಗಳನ್ನು ಹತ್ತಿ ಅದ್ಭುತ ಟ್ರೆಕ್ಕಿಂಗ್ ಕೂಡ ಮುಗಿಸಿ ಬಂದಿದ್ದಾರೆ. ಅಲ್ಲಿ ಏನೆಲ್ಲಾ ಮಾಡಿದೆವು. ಏನೆಲ್ಲಾ ತಿಂದೆವು ಎಂಬ ಖುಷಿ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಪಾರು-ಜನನಿ ನಡುವೆ ಯಾಮಿನಿಯೇ ವಿಲನ್

ರಿಯಲ್ ಲೈಫ್‌ನಲ್ಲಿ ಇಷ್ಟೆಲ್ಲ ಎಂಜಾಯ್ ಮಾಡುತ್ತಿರುವ 'ಪಾರು' ಧಾರಾವಾಹಿಯಲ್ಲೂ ಸಖತ್ ಟ್ವಿಸ್ಟ್ ಸಿಗುತ್ತಿದೆ. ಈಗಷ್ಟೇ ಅತ್ತೆ ಕೊಟ್ಟ ಸವಾಲುಗಳನ್ನು ಗೆದ್ದು ಸೊಸೆ ಪಟ್ಟ ಗಿಟ್ಟಿಸಿಕೊಳ್ಳುತ್ತಿರುವ ಪಾರುಗೆ, ಯಾಮಿನಿ ಅಡಿಯಾಗುತ್ತಿದ್ದಾಳೆ. ಸ್ವಂತ ಅಕ್ಕ-ತಂಗಿಯಂತಿರುವ ಪಾರು ಮತ್ತು ಜನನಿ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾಳೆ ಯಾಮಿನಿ. ಇದರಿಂದ ಇಬ್ಬರ ಮನಸ್ಸಲ್ಲೂ ವಿಷ ಬೀಜ ಬಿತ್ತುತ್ತಿದ್ದಾಳೆ. ಅತ್ತೆ ಬಳಿ ಭೇಷ್ ಎನಿಸಿಕೊಂಡ ಪಾರುಗೆ ಇದೀಗ ಜನನಿಯ ಸಂಬಂಧ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

More from Filmibeat

English summary
Zee Kannada, Zee Kannada Paaru Serial, Paaru Fans Video, Paaru And Aadhi Marriage Video, Paaru Serial Shooting In Chamarajanagara, Mokshitha Pai Instagram,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X