ಅತ್ತೆ ಮೆಚ್ಚಿದ ಸೊಸೆಯಾಗುತ್ತಾಳಾ ಪಾರು? ಧಾಮಿನಿ ಕುತಂತ್ರಕ್ಕೆ ಬಲಿಯಾಗುತ್ತಾಳಾ ಜನನಿ?

By ಪೂರ್ವ

ಕಿರುತೆರೆಯಲ್ಲಿ ತನ್ನ ಛಾಪನ್ನು ಮೂಡಿಸಿಕೊಂಡು ಬರುತ್ತಿರುವ ಧಾರವಾಹಿ ಪಾರು. ಇದೀಗ ವೀಕ್ಷಕರ ಮನದಲ್ಲೂ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಮುಗ್ಧ ಮನಸ್ಸಿನ ಪಾರುವಿನ ಗುಣವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಜೊತೆ ಅರಸನಕೋಟೆ ಒಡತಿ ಅಖಿಲಾಂಡೇಶ್ವರಿ ಕೂಡ ಪಾರುವಿನ ಮಾತುಗಾರಿಕೆಗೆ ಶಭಾಶ್ ಗಿರಿ ನೀಡಿದ್ದಾರೆ. ಪಾರು ಈ ಖುಷಿಯ ಸಂಭ್ರಮದಲ್ಲಿ ತೇಲಾಡುತ್ತಿದ್ದಾಳೆ.

ಆದರೆ ಇದಕ್ಕೆಲ್ಲಾ ಅಡ್ಡಗಾಲು ಹಾಕುತ್ತಿದ್ದಾಳೆ ಧಾಮಿನಿ, ಪಾರುವಿನ ಖುಷಿಯನ್ನು ಸಹಿಸಿಕೊಳ್ಳದ ಧಾಮಿನಿ, ಜನನಿ ಮನದಲ್ಲಿ ಅಸಮಾಧಾನದ ಬುಗ್ಗೆ ಏಳುವಂತೆ ಮಾಡಿದ್ದಾಳೆ. ಅಖಿಲಾಂಡೇಶ್ವರಿ ಬಳಿ ಪಾರು ನನ್ನೆಲ್ಲ ಗೆಲುವಿಗೆ ಕಾರಣ ನೀವೇ ಎಂದು ಹೇಳಿರುವ ಪಾರುಗೆ ಸಂಕಷ್ಟ ಎದುರಾಗೊದಂತು ಸತ್ಯ. ಇನ್ನೂ ಪಾರು ಎಲ್ಲರಿಗೂ ಸಿಹಿಯನ್ನು ಹಂಚುತ್ತಿದ್ದಾಳೆ, ತಾನು ಅಖಿಲಾಂಡೇಶ್ವರಿ ಕೊಟ್ಟ ಟಾಕ್ಸ್‌ನಲ್ಲಿ ಗೆದ್ದಿರುವೆ ಎಂದು ಖುಷಿಯಲ್ಲಿ ಎಂಜಾಯ್ ಮಾಡುತ್ತಿದ್ದಾಳೆ.

ಇನ್ನೂ ಇತ್ತ ಕೆಲಸದವರಿಗೆ ಪಾರು ಸಿಹಿಯನ್ನು ಹಂಚುತ್ತಾ ನನ್ನೆಲ್ಲ ಗೆಲುವಿಗೆ ನೀವೂ ಕೂಡ ಕಾರಣಕರ್ತರು ನಿಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲಾದು ನನ್ನೆಲ್ಲ ಖುಷಿಗೆ ನೀವೆಲ್ಲರೂ ಕಾರಣ ಎಂದೆಲ್ಲ ಹೇಳುತ್ತಾ ಸಖತ್ ಆಗಿ ಖುಷಿ ಪಟ್ಟಳು ಪಾರು.

ಬೇಸರದಲ್ಲಿ ಜನನಿ

ಬೇಸರದಲ್ಲಿ ಜನನಿ

ಇನ್ನೊಂದೆಡೆ ಜನನಿ ಮನದಲ್ಲಿ ಧಾಮಿನಿ ಹೇಳಿದ ಮಾತುಗಳು ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡುತ್ತಿದೆ. ನಾವೆಲ್ಲ ಅಷ್ಟು ಕಷ್ಟ ಪಟ್ಟು ಅವರನ್ನು ಗೆಲ್ಲಿಸಿದರೆ ಪಾರು ಮಾತ್ರ ಅಖಿಲಮ್ಮನೇ ಇದಕ್ಕೆಲ್ಲ ಕಾರಣ ಎಂದಿದ್ದಾಳಲ್ಲಾ ನಾವು ಮಾಡಿದ ಕೆಲಸಕ್ಕೆ ಯಾವುದೇ ಮಾತುಗಳನ್ನು ಪಾರು ಹೇಳಲಿಲ್ಲವಲ್ಲ, ಪಾರು ನನ್ನನ್ನ ಬಳಸಿಕೊಂಡಳಾ, ಅವಳಿಗೆ ನನ್ನ ಮೇಲೆ ಕೃತಜ್ಞತ ಭಾವ ಇಲ್ಲವೇ ಎಂದು ಯೊಚಿಸುತ್ತಿರುವಾಗ ಪ್ರೀತು ಬಂದು ಏನು ಘಾಢವಾಗಿ ಯೋಚಿಸುತ್ತಿರುವ ಎಂದು ಕೇಳುತ್ತಾನೆ. ಜನನಿ ಹೇಳುತ್ತಾಳೆ, ನಾವು ಪಾರ್ವತಿ ಅವರಿಗೆ ಇಷ್ಟು ಸಹಾಯ ಮಾಡಿದ್ರು ಅತ್ತೆಯ ಬಳಿ ಒಂದು ಮಾತು ಹೇಳಲಿಲ್ಲ, ನಾನು ಅವರಿಗೋಸ್ಕರ ನಿಮ್ಮಿಂದ ಹೊಡೆಸಿಕೊಂಡಿದ್ದೀನಿ ನಾವು ಇಷ್ಟೆಲ್ಲ ಕಷ್ಟ ಪಟ್ಟರು ಪಾರ್ವತಿ ಮಾತ್ರ ನಮ್ಮ ಹೆಸರನ್ನು ಹೇಳದಿರುವುದರ ಬಗ್ಗೆ ಪ್ರೀತು ಬಳಿ ಬೇಸರಿಸಿಕೊಳ್ಳುತ್ತಾಳೆ.

ಉತ್ತರ ಕೊಡುವ ಪ್ರೀತು

ಉತ್ತರ ಕೊಡುವ ಪ್ರೀತು

ಅದಕ್ಕೆ ಪ್ರೀತು ನನ್ನ ನಿನ್ನ ಹೆಸರು ಮಾತ್ರ ಅಲ್ಲ ಅಣ್ಣನ ಹೆಸರನ್ನು ಪಾರ್ವತಿ ಅತ್ತಿಗೆ ಹೇಳಿಲ್ಲ, ಅಮ್ಮ ಅತ್ತಿಗೆನ ಹೊಗಳಿದ್ದು, ಮುಖಕ್ಕೆ ಮುಖ ಕೊಟ್ಟು ಮಾತನಾಡಿಸಿದ್ದೇ ಇದೇ ಮೊದಲು ಅದರಿಂದ ಅತ್ತಿಗೆ ಬಹಳ ಖುಷಿಯಲ್ಲಿ ಇದ್ದಾರೆ. ಇದರಿಂದ ಅವರು ನಮ್ಮನ್ನು ಮರೆತಿದ್ದಾರೆ ಎಂದಲ್ಲ, ಎಂದು ಜನನಿಯನ್ನು ಸಮಾಧಾನ ಪಡಿಸಿ ಕರೆದುಕೊಂಡು ಬರುತ್ತಿರುವ ವೇಳೆ ಪಾರ್ವತಿ ಜನನಿಯನ್ನು ಹುಡುಕಿಕೊಂಡು ಬರುತ್ತಾಳೆ, ಜನನಿಯನ್ನು ಹೊಗಳಿ ಅಟ್ಟಕ್ಕೇರಿಸುತ್ತಾಳೆ, ಇದರಿಂದ ಜನನಿಗೆ ಬಹಳ ಖುಷಿಯಾಗುತ್ತದೆ,

ಪಾರು ವಿರುದ್ಧ ಜನನಿಯನ್ನು ಎತ್ತಿಕಟ್ಟುತ್ತಿರುವ ಧಾಮಿನಿ

ಪಾರು ವಿರುದ್ಧ ಜನನಿಯನ್ನು ಎತ್ತಿಕಟ್ಟುತ್ತಿರುವ ಧಾಮಿನಿ

ಪಾರು ಸ್ವೀಟು ತಿನ್ನಿಸುತ್ತಿರುವ ವೇಳೆಗೆ ಸರಿಯಾಗಿ ಹನುಮಂತು ಅಮ್ಮವರೇ ನನ್ನ ಮಗ ಹತ್ತನೇ ತರಗತಿಯಲ್ಲಿ ಪಾಸಾಗಿ ಬಿಟ್ಟ ಎಂದು ಕಿರುಚಿಕೊಂಡು ಬಂದ ಇದನ್ನು ಕೇಳಿದ ಪಾರು ಜನನಿಗೆ ಸ್ವೀಟು ತಿನ್ನಿಸದೇ ಪಾರು ಖುಷಿಯಲ್ಲಿ ಹಾಗೆಯೇ ಕೆಳಗೆ ಹೋಗಿಬಿಟ್ಟಳು. ಇದೇ ಸಮಯವನ್ನು ಕಾಯುತ್ತಿದ್ದ ಧಾಮಿನಿ ಜನನಿ ಬಳಿ ಬಂದು ನೋಡಿದ್ಯಾ ಜನನಿ ಹೇಗೆ ಪಾರು ಅವಳ ತಮ್ಮ ಎಂದರೆ ಪ್ರಾಣ ಬಿಡುತ್ತಾಳೆ ಎಂದು ಸ್ವಂತದವರು ಯಾವತ್ತು ಸ್ವಂತದವರೇ, ದೂರದವರು ಯಾವತ್ತು ದೂರದವರೇ ಎಂದು ಮನಸ್ತಾಪಕ್ಕೆ ಎಡೆಮಾಡಿಕೊಡುತ್ತಿದ್ದಾಳೆ.

ತಂಗಿಗೆ ಎರೆಡೆರಡು ಬಾರಿ ಸಿಹಿ ತನ್ನಿಸಿದ ಪಾರು

ತಂಗಿಗೆ ಎರೆಡೆರಡು ಬಾರಿ ಸಿಹಿ ತನ್ನಿಸಿದ ಪಾರು

ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಹಾಗೆ ಧಾಮಿನಿ ಮಾತನಾಡುತ್ತಿದ್ದಾಳೆ. ಇನ್ನೂ ಇತ್ತ ಹನುಮಂತು ಅಖಿಲಾಂಡೇಶ್ವರಿಗೆ ಸ್ವೀಟು ನೀಡುತ್ತಾ ನನ್ನ ಮಗ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿ ಬಿಟ್ಟ ಎಂದು ಕುಷಿಯನ್ನು ಹೇಉತ್ತಿರುವ ವೇಳೆ ಪಾರುವನ್ನು ನೋಡಿ ಮುಖ ಗಂಟು ಹಾಕಿಕೊಳ್ಳುತ್ತಾನೆ, ಬಳಿಕ ಎಲ್ಲರಿಗೂ ಸ್ವೀಟು ನೀಡಿ ಮಾತನಾಡುತ್ತಿರುವ ವೇಳೆ ಗಣಿಯ ಮುಂದಿನ ವಿಧ್ಯಾಭ್ಯಾಸದ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ, ಬಳಿಕ ಕೆಲಸಕ್ಕೆ ನಮ್ಮ ಕಂಪನಿಗೆ ಬರಬಹುದು ಎಂದಾಗ ಹನುಮಂತು ಅರಸನ ಕೋಟೆಗೆ ಅವನನ್ನು ಕೆಲಸಕ್ಕೆ ಕಳುಹಿಸುವುದಿಲ್ಲ ಎಂದು ಹೇಳುತ್ತಾನೆ, ನನ್ನಷ್ಟು ನಿಷ್ಟೆ ಪ್ರಾಮಾಣಿಕತೆ ಮಕ್ಕಳಿಗೂ ಬರಬೇಕಲ್ಲ ಎಂದು ಹೇಳುತ್ತಾನೆ ಬಳಿಕ ಹೋಗುತ್ತಾನೆ, ಇನ್ನೂ ಪಾರು ಜನನಿ ಬಳಿ ಓಡಿ ಬಂದು ತನ್ನ ತಮ್ಮ ನಿನ್ನಿಂದಲೇ ಪಾಸ್ ಆಗಿದ್ದು ಜನನಿ ನೀನು ಎರಡೆರಡು ಸ್ವೀಟು ತಿನ್ನಬೇಕು ಎಂದು ಹೇಳಿ ಎರಡು ಸ್ವೀಟು ತಿನ್ನಿಸುತ್ತಾಳೆ, ಇದರಿಂದ ಜನನಿಗೆ ಖುಷಿಯಾಗುತ್ತದೆ. ಇನ್ನೂ ಧಾಮಿನಿ ಅಸಮಾಧಾನದ ಜನನಿ ತಲೆಗೆ ಹುಳಬಿಟ್ಟಿರುವುದಂತು ಖಂಡಿತ.

More from Filmibeat

English summary
Zee kannada serial Paaru Written Update Of May 24. Paaru is an Kannada language television serial. Hear is more details about the serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X