ದುಷ್ಟರ ಬಲೆಯಲ್ಲಿ ಸಿಕ್ಕಿಕೊಂಡ ಪಾರು : ಸೊಸೆಯನ್ನು 'ಪಾರು' ಮಾಡ್ತಾರಾ ಅಖಿಲಾಂಡೇಶ್ವರಿ?
ಪಾರುಗಿರುವ ಮುಗ್ಧತೆಯನ್ನು ದುಷ್ಟರು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಕಷ್ಟದಲ್ಲಿದ್ದೀವಿ ಅಂತ ಹೇಳಿ ಪಾರುಳನ್ನು ಸರಿಯಾಗಿಯೇ ಖೆಡ್ಡಾಗೆ ಕೆಡವಿದ್ದಾರೆ. ಪಾರು ಕೂಡ ಹಿಂದೆ ಮುಂದೆ ಯೋಚಿಸದೆ ತಗಲಾಕಿಕೊಂಡಿದ್ದಾಳೆ. ಈಗ ಪಾರು ಕಾಪಾಡಬೇಕಾಗಿರುವುದು ಅಖಿಲಾಂಡೇಶ್ವರಿಯೇ ಸರಿ. ಈಗ ಮನೆ ಮಂದಿಯೆಲ್ಲಾ ಸಂಕಷ್ಟಕ್ಕೆ ಸಿಲುಕುವಂತ ಫ್ಲ್ಯಾನ್ ಮಾಡಿದ್ದಾರೆ ಹಳೆ ಶತ್ರುಗಳು.
ಅಖಿಲಾ ಮತ್ತು ಅಖಿಲಾ ಕುಟುಂಬ ಇದೇ ಶತ್ರುಗಳ ಕೈನಲ್ಲಿ ಸಿಕ್ಕಿಬಿದ್ದಾಗ ಪಾರ್ವತಿ ಕಾಪಾಡಿದ್ದಳು. ಅದಕ್ಕೆ ಅಖಿಲಾ ಕೂಡ ಋಣಿ ಎಂದಿದ್ದರು. ಆದರೆ ಮನಮೆಚ್ಚಿದ ಸೊಸೆ ಸಿಗಲಿಲ್ಲ ಎಂಬ ಒಂದೇ ಒಂದು ಕಾರಣ ಅಖಿಲಾ ಪಾರುಳನ್ನು ಒಪ್ಪಿರಲಿಲ್ಲ. ಆದರೆ ಈಗ ಮನೆಯ ಸೊಸೆ ಸಂಕಷ್ಟದಲ್ಲಿದ್ದಾಳೆ ಎಂದರೆ ಅಖಿಲಾ ಮನಸ್ಸು ಸುಮ್ಮನೆ ಇರುತ್ತದೆಯೇ. ಖಂಡಿತಾ ಪಾರುಳನ್ನು ಕಾಪಾಡುವುದಕ್ಕೆ ಮುಂದಾಗುತ್ತಾರೆ.

ಶತ್ರುಗಳ ಮಾತನ್ನೇ ಪಾಲಿಸಿಬಿಟ್ಟಳಾ ಪಾರು..?
ಪಾರು ಮುಗ್ದತೆ ಇಲ್ಲಿ ಶತ್ರುಗಳಿಗೆ ಚೆನ್ನಾಗಿಯೇ ವರ್ಕೌಟ್ ಆಗಿದೆ. ಇಬ್ಬರು ಬಡ ಹುಡುಗಿಯರಂತೆ ನಟಿಸಿ ಪಾರು ಮನಸ್ಸನ್ನು ಹಾಳು ಮಾಡಿದ್ದಾರೆ. ನಾವೂ ಅನಾಥಶ್ರಮದಿಂದ ಬಂದವರು, ಹಪ್ಪ ಸಂಡಿಗೆ ಹಾಕುತ್ತೇವೆ. ಅದರ ಮೇಲೆ ನಿಮ್ಮದೊಂದು ಫೋಟೊ ಇದ್ದರೆ, ಅದು ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ. ನಮ್ಮ ಅನಾಥಶ್ರಮದ ಮಕ್ಕಳು, ವಿಧವೆಯರಿಗೆ ಅನುಕೂಲವಾಗುತ್ತದೆ ಎಂದು ಯಾಮಾರಿಸಿದ್ದಾರೆ. ಆದರೆ ಈ ವಿಚಾರವನ್ನು ಆದಿಯ ಬಳಿ ಚರ್ಚಿಸುತ್ತೇವೆ ಎಂದಾಗ ಬೇಡವೆಂದು ಹೇಗೊ ಯೋಚನೆಯನ್ನು ಬೇರೆ ಕಡೆಗೆ ತಿರುಗಿಸಿದ್ದಾರೆ. ಪಾರು ಕೂಡ ರಾಣಾ ಹೆಣೆದ ರಣತಂತ್ರದಲ್ಲಿ ಸಖತ್ತಾಗಿನೇ ಲಾಕ್ ಆಗಿದ್ದಾಳೆ. ಅದು ಯಾಮಾರಿಸಿದ ವಿಚಾರ ಮನೆವರೆಗೂ ಬಂದು ತಲುಪಿದೆ.

ಬೇರೆ ಕಂಪನಿಯವರ ರಾಯಬಾರಿಯಾದ ಪಾರು
ಅರಸನಕೋಟೆ ಸಂಸ್ಥೆಯಿಂದಲೇ ಸೋಪ್ ಒಂದನ್ನು ಲಾಂಚ್ ಮಾಡುವ ತಯಾರಿ ನಡೆಯುತ್ತಿದೆ. ಅದಕ್ಕೆ ಪಾರುಳನ್ನೆ ರಾಯಬಾರಿಯನ್ನಾಗಿ ಮಾಡುತ್ತಿದ್ದಾರೆ. ಅದಕ್ಕೆ ಅಖಿಲಾಂಡೇಶ್ವರಿಯ ಒಪ್ಪಿಗೆ ಈಗಾಗಲೇ ಸಿಕ್ಕಿದೆ. ಅದಕ್ಕೆಲ್ಲಾ ಈಗಾಗಲೇ ತಯಾರಿಯೂ ನಡೆದಿದೆ. ಆದರೆ ಈ ನಡುವೆ ಪಾರು ತಮ್ಮ ಸಂಸ್ಥೆಯ ಸೋಪು ಬಿಟ್ಟು ಬೇರೆ ಕಂಪನಿಯ ಸೋಪಿಗೆ ರಾಯಬಾರಿಯಾಗಿದ್ದಾಳೆ. ಅದಕ್ಕೆ ಕಾರಣ ಆಕೆಯ ಮುಗ್ಧತೆ. ಅದನ್ನು ಶತ್ರುಗಳು ಬಳಸಿಕೊಂಡು, ಅನಾಥಶ್ರಮಕ್ಕಾಗಿ ಎಂದು ಸುಳ್ಳು ಹೇಳಿಸಿ, ಇಂಗ್ಲಿಷಿನಲ್ಲೇ ಬರೆದ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಇದು ಪಾರುಗೆ ತಿಳಿದಿಲ್ಲ. ಎಲ್ಲರೂ ಮನೆಗೆ ಬಂದಾಗಲೇ ಪಾರುಗೆ ತಾನೂ ಮೋಸ ಹೋಗಿರುವುದು ಗೊತ್ತಾಗಿರುವುದು.

ಪಾರು ಕಾಪಾಡಲು ಅಖಿಲಾಗೆ ಮಾತ್ರ ಸಾಧ್ಯ
ಇತ್ತ ಬೇರೆ ಕಂಪನಿಯವರೆಲ್ಲಾ ಪಾರು ಭೇಟಿ ಮಾಡಲು ಮನೆಗೆ ಬಂದಿದ್ದಾರೆ. ಅದನ್ನು ಕಂಡು ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಎಲ್ಲರೂ ಒಟ್ಟಿಗೆ ಬಂದಿದ್ದರ ಹಿಂದಿನ ಕಾರಣ ಕೇಳಿದ್ದಾರೆ. ಪಾರ್ವತಿ ನಮ್ಮ ಬ್ರಾಂಡ್‌ಗೆ ರಾಯಬಾರಿಯಾಗಿದ್ದಾಳೆಂದು ಕೇಳಿ ಆದಿ ಶಾಕ್ ಆಗಿದ್ದಾನೆ. ಪೇಪರ್‌ನಲ್ಲಿ ಬಂದ ಫೋಟೊ ಕಂಡು ಪಾರ್ವತಿ ದಂಗಾಗಿದ್ದಾಳೆ. ಅಗ್ರಿಮೆಂಟ್‌ಗೆ ಸಹಿ ಕೂಡ ಹಾಕಿದ್ದಾಳೆ. ಆ ಅಗ್ರಿಮೆಂಟ್ ಪ್ರಕಾರ 60 ಲಕ್ಷ ಹಣ ನೀಡಲಾಗುತ್ತಿದೆ ಎಂದಿದೆ. ಇದನ್ನು ಕೇಳಿ ಅಖಿಲಾ ದಿಗ್ಬ್ರಾಂತಳಾಗಿದ್ದಾಳೆ. ಆದರೆ ಇದೆಲ್ಲವನ್ನೂ ಕಂಡ ಪಾರ್ವತಿ ಮೂಕಳಾಗಿದ್ದಾಳೆ. ನನ್ನದೇನು ತಪ್ಪಿಲ್ಲ ಎಂದು ಅಸಹಾಯಕಳಂತೆ ನಿಂತಿದ್ದಾಳೆ. ಇಂಥ ಸಂದರ್ಭದಲ್ಲಿ ಅಖಿಲಾ ತನ್ನ ಸೊಸೆ ಪಾರ್ವತಿ ಜೊತೆ ನಿಂತಾಗ ಮಾತ್ರ ಈ ಎಲ್ಲಾ ಸಮಸ್ಯೆ ಪರಿಹಾರವಾಗುತ್ತೆ.

ಜನನಿ ತಾನು ನೋಡಿದ್ದನ್ನು ಹೇಳುತ್ತಾಳಾ?
ಅಂದು ಪಾರ್ವತಿ ದೇವಸ್ಥಾನಕ್ಕೆ ಹೊರಟಾಗ ತಾನು ಬರುತ್ತೇನೆಂದು ಜನನಿ ಹೊರಟಿದ್ದಳು. ಪ್ರೀತು ಕೂಡ ಜನನಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದ. ಆದರೆ ಪಾರ್ವತಿ ಜನನಿ ಬಳಿ, ನೋಡಿ ನಾನು ದೇವಸ್ಥಾನ ಅಂತ ಸುಳ್ಳು ಹೇಳಿ ಯಜಮಾನರ ಜೊತೆ ಸುತ್ತಾಡುವುದಕ್ಕೆ ಹೋಗುತ್ತೀನಿ ಎಂದಿದ್ದಳು. ಇದನ್ನು ಹಿಂಬಾಲಿಸಿಕೊಂಡು ಹೋದಾಗ ಪಾರ್ವತಿ ಇನ್ಯಾರನ್ನೋ ಭೇಟಿ ಮಾಡಿದ್ದು ಯಾಮಿನಿ ಕಣ್ಣಿಗೆ ಕಂಡಿತ್ತು. ಹೀಗಾಗಿ ಅಂದು ತಾನು ನೋಡಿದ ಸತ್ಯವನ್ನು ಎಲ್ಲರ ಮುಂದೆ ಜನನಿ ಹೇಳುತ್ತಾಳಾ ಎಂಬ ಅನುಮಾನ. ಒಂದು ವೇಳೆ ಈ ಸತ್ಯವನ್ನು ಎಲ್ಲರ ಮುಂದೆ ಜನನಿ ಹೇಳಿದರೆ, ಪಾರು ಮೋಸ ಹೋಗಿದ್ದನ್ನು ಎಲ್ಲರಿಗೂ ಹೇಳಬಹುದು. ಇಲ್ಲವಾದರೆ ಜನನಿ ಅದನ್ನೇ ಮನಸ್ಸಲ್ಲಿಟ್ಟುಕೊಂಡು ಕೋಪವನ್ನು ಹೆಚ್ಚು ಮಾಡಿಕೊಳ್ಳಬಹುದು.


Click it and Unblock the Notifications











