ಪಾರು ಧಾರಾವಾಹಿಯಲ್ಲಿ ಬಳಸಿದ ಹೆಂಡತಿಯ ಗುಲಾಮ ಪದಕ್ಕೆ ನೆಟ್ಟಿಗರ ಆಕ್ರೋಶ..!

By ಎಸ್ ಸುಮಂತ್

ಪಾರು ಮುಗ್ಧತೆ ಇಂದು ಆಕೆಯ ಜೀವನವನ್ನೇ ಹಾಳುಗೆಡವಿಸಿದೆ. ಮನೆಯವರಿಗೂ ಹೇಳದೆ ಶತ್ರುಗಳ ಯೋಜನೆಗೆ ಬಲಿಯಾಗಿದ್ದಾಳೆ. ರಾಣಿಯಾಗಿ ಮೆರೆಯಬೇಕಾಗಿದ್ದ ಪಾರು ಇದೀಗ ಮತ್ತೆ ಕೆಲಸದಾಳಾಗುತ್ತಿದ್ದಾಳೆ. ಇದರಲ್ಲಿ ಅವಳದ್ದೇನು ತಪ್ಪಿಲ್ಲದೆ ಹೋದರೂ, ಪಾರು ತಾನಿರುವ ಸ್ಥಾನವನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತು. ಯೋಚಿಸಿ ಮುಂದಿನ ಹೆಜ್ಜೆ ಇಡಬೇಕಿತ್ತು. ಆದರೆ ಅದ್ಯಾವುದನ್ನೂ ಮಾಡದೆ, ಅನುಕಂಪದ ಹೆಜ್ಜೆ ಇಟ್ಟು, ಎಲ್ಲರೆದುರೂ ತಲೆತಗ್ಗಿಸಿ ನಿಂತಿದ್ದಾಳೆ.

ಪಾರು ಎಂದರೆ ಸೊಸೆಯನ್ನಾಗಿ ಸ್ವೀಕರಿಸಲು ಅಖಿಲಾಂಡೇಶ್ವರಿಗೆ ಮೊದಲೇ ಆಸಕ್ತಿ ಇರಲಿಲ್ಲ. ಒಂದಷ್ಟು ಸವಾಲುಗಳನ್ನು ನೀಡಿ ಅದರಲ್ಲಿ ಗೆದ್ದ ಮೇಲೆ, ಒಂದಷ್ಟು ನಂಬಿಕೆ ಹುಟ್ಟಿಕೊಂಡಿತ್ತು. ಆಕೆಯ ಗೆಲುವಿಗೆ ಇಡೀ ಮನೆಯವರು ಶ್ರಮಿಸಿದ್ದರು. ಆದರೆ ಪಾರು ಈಗ ಸಿಕ್ಕಿಬಿದ್ದಿರುವ ಸ್ಥಿತಿಗೆ ಮನೆಯವರು ಸಹಾಯ ಮಾಡಲು ಸಾಧ್ಯವಿಲ್ಲ. ಅಂಥಹ ಸ್ಥಿತಿ ತಲುಪಿದ್ದಾಳೆ.

ಮನೆ ಕೆಲಸಕ್ಕೆ ಸೀಮಿತವಾಗುತ್ತಾಳಾ ಪಾರು?

ಮನೆ ಕೆಲಸಕ್ಕೆ ಸೀಮಿತವಾಗುತ್ತಾಳಾ ಪಾರು?

ಅನಾಥಶ್ರಮದಲ್ಲಿ ಸಾಕಷ್ಟು ಅನಾಥರಿದ್ದೇವೆ. ನಿಮ್ಮ ಒಂದು ಫೋಟೊಶೂಟ್ ನಮ್ಮ ಹಪ್ಪಳ, ಸಂಡಿಗೆಯ ಮಾರಾಟಕ್ಕೆ ಉಪಯೋಗವಾಗುತ್ತೆ ಎಂದು ಶತ್ರುಗಳ ಹೆಲ್ಪ್ ಹೇಳಿದಾಗ, ಇದೇ ಸತ್ಯ ಎಂದು ನಂಬಿದ್ದಳು ಪಾರು. ಆ ಹಿಂದೆಯೇ ಫೋಟೊಶೂಟ್ ಕೂಡ ಮಾಡಿಸಿದಳು. ಅರ್ಥವಾಗದೆ ಇರುವ ಅಗ್ರಿಮೆಂಟ್‌ಗೆ ಸಹಿಯನ್ನು ಹಾಕಿದ್ದಳು. ಈ ಅವಾಂತರ ಮನೆಯವರೆಗೂ ಬಂದು ಇದ್ದಬದ್ದ ಸಂಬಂಧವನ್ನೆಲ್ಲ ಹಾಳುಗೆಡವಿತ್ತು. ಇದರ ಪರಿಣಾಮ ಎಷ್ಟಿದೆ ಎಂದರೆ, ಪಾರು ಮತ್ತೆ ಮನೆ ಕೆಲಸಕ್ಕೆ ತೆರಳಿದ್ದಾಳೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕಲು ಹೊರಟ ಅಖಿಲಾ ತಾನೂ ಮತ್ತೆ ಅಧಿಕಾರವಹಿಸಿಕೊಳ್ಳಲು ನಿರ್ಧರಿಸಿದ್ದಾರೆ. ಮತ್ತೆ ಅದೇ ಘನತೆ, ಗಾಂಭೀರ್ಯದಿಂದ ಮನೆಯವರೆದುರು ಕುಳಿತು ತನ್ನ ಸ್ಥಾನಕ್ಕೆ ಮರಳಿ ಬಂದಿದ್ದೇನೆ, ಅವಳು ಆಕೆಯ ಸ್ಥಾನಕ್ಕೆ ಮರಳಲಿ ಎಂದಿದ್ದಾರೆ.

ಪಾರ್ವತಿ ವಿಚಾರದಲ್ಲಿ ಯಾರ ಮಾತು ಕೇಳುತ್ತಿಲ್ಲ

ಪಾರ್ವತಿ ವಿಚಾರದಲ್ಲಿ ಯಾರ ಮಾತು ಕೇಳುತ್ತಿಲ್ಲ

ಪಾರ್ವತಿ ತಾನು ಮೆಚ್ಚಿದ ಸೊಸೆಯಲ್ಲ. ಆದರೂ ಆದಿ ಮೆಚ್ಚಿದ ಹೆಂಡತಿ. ಹೀಗಾಗಿ ಒಂದಷ್ಡು ಸವಾಲಿನ ನಡುವೆ ಅರಸನ ಕೋಟೆಯ ಸೊಸೆಯನ್ನಾಗಿ ಒಪ್ಪಿಕೊಂಡರು. ಆದರೆ ಇತ್ತೀಚೆಗೆ ನಡೆದ ಘಟನೆ ಎಲ್ಲರನ್ನು ದಿಗ್ಬ್ರಾಂತಗೊಳಿಸಿದೆ. ಅಖಿಲಾಂಡೇಶ್ವರಿ ಎಲ್ಲವನ್ನು ಮರೆತು ಕುಳಿತರಾ ಎಂಬ ಪಾಪ ಪ್ರಜ್ಞೆ ಕಾಡುವಂತೆ ಮಾಡಿದೆ. ಅದಕ್ಕಾಗಿಯೇ ಇದೀಗ ಅತ್ತೆ ಅಖಿಲಾಂಡೇಶ್ವರಿ ತನ್ನ ಸ್ಥಾನಕ್ಕೆ ಮರಳಿದ್ದಾರೆ. ಆದರೆ ಈ ಮಧ್ಯೆ ಆದಿ ತನ್ನ ಹೆಂಡತಿಯ ಪರ ಮಾತನಾಡಲು ಯತ್ನಿಸಿದ್ದಾನೆ. ಅಖಿಲಾಗೆ ಯಾವುದನ್ನೂ ಕೇಳುವ ತಾಳ್ಮೆ ಇಲ್ಲ. ಹೀಗಾಗಿಯೇ ಆದಿಯನ್ನು ಗದರಿದ್ದಾಳೆ. ಬಾಯಿ ಮುಚ್ಚು ಹೆಂಡತಿಯ ಗುಲಾಮ ಎಂದಿದ್ದಾಳೆ.

ಅಖಿಲಾ ಮಾತಿಗೆ ನೆಟ್ಟುಗರು ಏನಂದ್ರು?

ಅಖಿಲಾ ಮಾತಿಗೆ ನೆಟ್ಟುಗರು ಏನಂದ್ರು?

ಆದಿ ಮದುವೆಯಾದಾಗಿನಿಂದ ತನ್ನ ಹೆಂಡತಿ ಪರ ವಕಾಲತ್ತು ವಹಿಸಿದ್ದಾನೆ. ಅದು ನ್ಯಾಯ ಕೂಡ. ಆದಿಯೂ ಕೈಬಿಟ್ಟಿದ್ದರೆ ಅಲ್ಲಿ ಪಾರುಗೆ ತನ್ನ ಮೇಲೆಯೇ ಜಿಗುಪ್ಸೆ ಬರುತ್ತಿತ್ತು. ಆದಿ ಜೊತೆಗೆ ಮನೆಯವರೆಲ್ಲರೂ ಪಾರು ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಈ ಮಧ್ಯೆ ಅಖಿಲಾಂಡೇಶ್ವರಿ ಹೇಳಿದ ಹೆಂಡತಿಯ ಗುಲಾಮ ಪದಕ್ಕೆ ನೆಟ್ಟಿಗರಿಂದ ಬೇಸರ ವ್ಯಕ್ತವಾಗಿದೆ. ನಿಮ್ಮದೇ ಆಡಳಿತ ನಡೆಯಬೇಕು ಅಂತೀರಲ್ಲ. ಹಾಗಾದ್ರೆ, ನಿಮ್ಮ ಗಂಡನು ಹೆಂಡತಿಯ ಗುಲಾಮನಾ..? ಹೆಂಡತಿಯನ್ನು ಪ್ರೀತಿ ಮಾಡಿದರೆ ಹೆಂಡತಿಯಾ ಗುಲಾಮನಾಗುತ್ತಾನಾ..? ಹೆಂಡತಿಯ ಗುಲಾಮ ಎಂದಿದ್ದು ಸರಿಯಲ್ಲ ಎಂದು ಹಲವಾರು ರೀತಿ ಕಮೆಂಟ್ ಹಾಕುತ್ತಿದ್ದಾರೆ.

ಪಾರುಗೆ ಮತ್ತೆ ಅಧಿಕಾರ ಬರಲ್ವಾ?

ಪಾರುಗೆ ಮತ್ತೆ ಅಧಿಕಾರ ಬರಲ್ವಾ?

ಮನೆಯಲ್ಲಿಯೇ ದೊಡ್ಡ ಶತ್ರು ಇದ್ದಾಳೆ. ಹೊರಗಿನ ಶತ್ರುವನ್ನು ಗಮನಿಸಬಹುದು. ಆದರೆ ಒಳಗಿನ ಶತ್ರು ಕಂಡು ಹಿಡಿಯಲು ಆಗಲ್ಲ ಎಂಬ ಮಾತಿದೆ. ಅದರಂತೆ ದಾಮಿನಿ ಕೂಡ. ಶತ್ರುಗಳಿಗೆ ಮನೆಯಲ್ಲಿ ನಡೆಯುತ್ತಿರುವ ಇಂಚಿಂಚು ಮಾಹಿತಿ, ತಾನಾಕಿರುವ ಸರದಿಂದ ಹೋಗುತ್ತಿದೆ. ಈಗ ಪಾರು ತಪ್ಪಿತಸ್ಥಳನ್ನು ಎಂಬುದನ್ನು ಪ್ರೂವ್ ಮಾಡಲು ಆ ಡಾಲರ್ ಅನ್ನೊಮ್ಮೆ ಪರೀಕ್ಚಿಸಬೇಕಾಗುತ್ತದೆ. ಆದರೆ ಅಷ್ಟು ಸುಲಭದ ದಾರಿ ಇದು ಎಂಬುದು ಗೊತ್ತಿಲ್ಲ. ಆದರೆ ಪಾರುಗೆ ಮತ್ತೆ ಸೊಸೆಯ ಅಧಿಕಾರ ಬೇಕೆಂದರೆ ಇದರ ಅನಿವಾರ್ಯತೆ ಇದೆ.

More from Filmibeat

English summary
Zee Kannada Serial Paaru Written Update on June 15th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X