ಅಪ್ಪನಿಗೆ ಮನೆ ಕೊಡಿಸುವ ಹಕ್ಕೂ ಇಲ್ಲವೇ? ಪಾರುಗೆ ಅಡ್ಡಗಾಲು ಹಾಕುತ್ತಾಳಾ ಯಾಮಿನಿ?
ಮದುವೆಯಾದ ಮೇಲೆ ತವರು ಮನೆಯೆಂದರೆ ಹೆಣ್ಣು ಮಕ್ಕಳಿಗೆ ಇನ್ನಿಲ್ಲದ ಪ್ರೀತಿ, ಮೋಹ. ಆ ಮನೆಯಲ್ಲಿದ್ದಷ್ಟು ದಿನ ಹೆಣ್ಣು ಮಕ್ಕಳೇ ಕಾವಾಲಾಗಿ ನಿಲ್ಲುತ್ತಾರೆ. ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ತವರಿನದ್ದೇ ಚಿಂತೆಯಾಗಿರುತ್ತೆ. ಮನಸ್ಸು ಆ ಕಡೆಗೆ ವಾಲುತ್ತಿರುತ್ತದೆ. ಪಾರುಗೂ ಈಗ ತಂದೆಯ ಕಷ್ಟ ಅರಿವಿಗೆ ಬಂದಿದೆ. ತಂದೆಯ ಕಷ್ಟಕ್ಕೆ ಪಾರು ಮನಸ್ಸು ಮಿಡಿಯುತ್ತಿದ್ದು, ಏನಾದರೂ ಮಾಡಲೇಬೇಕೆಂದು ಮನಸ್ಸು ಮಾಡಿದ್ದಾಳೆ. ಆದರೆ ಇದು ಅಷ್ಟು ಸುಲಭನಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ಅಪ್ಪನ ಆಸೆಗೆ ಆಸರೆಯಾಗಬೇಕಾಗುತ್ತದೆ.
ಪಾರು ಮದುವೆಯಾಗಿ ಬಂದಾಗಿನಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾಳೆ. ಸವಾಲಿನಲ್ಲಿಯೇ ಸಮಯ ಸವೆಸಿದ್ದಾಳೆ. ಈಗ ಎಲ್ಲವೂ ಸರಿಯಾಗಿದ್ದು, ಅರಸನ ಕೋಟೆಯಲ್ಲಿ ದಿಡ್ಡ ಸೊಸೆಗೆ ಸಿಗಬೇಕಾದ ಗೌರವವೆಲ್ಲಾ ಸಿಕ್ಕಿದೆ. ಈ ಸಮಯದಲ್ಲಿ ತಂದೆಯ ಕಷ್ಟ ಕಣ್ಣೆದುರಿಗೆ ಬಂದಿದೆ. ಹೀಗಾಗಿ ಅಪ್ಪನ ಕಷ್ಟವನ್ನು, ಮನಸ್ಸಿನ ಭಯವನ್ನು ದೂರು ಮಾಡಲು ಪಾರು ಯತ್ನಿಸುತ್ತಿದ್ದಾಳೆ.

ಅಪ್ಪನ ಆಸೆಯಂತೆ ಮನೆ ಕೊಡಿಸುತ್ತಾಳಾ ಪಾರು?
ಪಾರು ಸದ್ಯಕ್ಕೆ ದೊಡ್ಮನೆ ಸೊಸೆಯಾಗಿದ್ದಾಳೆ. ತಂದೆ ದುಡಿದ ಹಣದಲ್ಲಿ ಮಗಳ ಮದುವೆಗಾಗಿ ಒಂದಷ್ಟು ಹಣ ಕ್ರೂಢೀಕರಿಸುತ್ತಿದ್ದರು. ಆದರೆ ಪಾರು ಅರಸನ ಕೋಟೆಗೆ ಸೊಸೆಯಾಗಿ ಬಂದಿದ್ದು, ಸಂಕಷ್ಟದಿಂದ ಹನುಮಂತುನಾ ಪಾರು ಮಾಡಿದೆ. ಮಗಳ ಮದುವೆ, ಮಗನ ಭವಿಷ್ಯ ಈ ಎರಡು ಆಸೆಗಾಗಿ ಹನುಮಂತು ದುಡಿಯುತ್ತಿದ್ದರು. ಅದರಲ್ಲಿ ಮಗಳ ಮದುವೆ ಮುಗಿದಿದೆ. ಗಣಿ ಭವಿಷ್ಯದ ಜೊತೆಗೆ ಸ್ವಂತ ಮನೆ ಮಾಡಿಕೊಳ್ಳಬೇಕೆಂಬ ಬಯಕೆಯೂ ಹನುಮಂತು ಮನಸ್ಸಲ್ಲಿದೆ. ಇದು ಪಾರುಗೆ ಗೊತ್ತಾಗಿದೆ. ಹನುಮಂತುಗೆ ಸ್ವಾಭಿಮಾನ ಸ್ವಲ್ಪ ಜಾಸ್ತಿ. ಹೀಗಾಗಿ ಅಮ್ಮೋರು ಕೊಟ್ಟಿರುವ ಗೆಸ್ಟ್ ಹೌಸ್‌ನಲ್ಲಿ ಕೆಲಸ ಬಿಟ್ಟ ಮೇಲೂ ಇರಲು ಸಾಧ್ಯವಿಲ್ಲ ಎಂದಿದ್ದಾರೆ. ಅಖಿಲಾಂಡೇಶ್ವರಿ ಮನೆಯ ಸೆಕ್ಯೂರಿಟಿ ನೋಡಿರುವ ಮನೆಗೆ ₹60 ಲಕ್ಷ ಹೇಳುತ್ತಿದ್ದಾರೆ. ಇದನ್ನು ಕೇಳಿದ ಹನುಮಂತು ದಂಗಾಗಿದ್ದಾನೆ. ಇದಕ್ಕೆ ಪಾರುನೇ ಪರಿಹಾರ ಹುಡಕಬೇಕಿದೆ.

ಈಡೇರುತ್ತಾ ಹನುಂತು ಕನಸು ?
ಸೆಕ್ಯೂರಿಟಿ ಬಳಿ ಹನುಮಂತು ಮನೆ ವಿಚಾರ ಮಾತನಾಡುತ್ತಿದ್ದದ್ದು ಪಾರು ಕಿವಿಗೆ ಬಿದ್ದಿದೆ. ಪಾರು ಇಷ್ಟು ದಿನ ತನ್ನ ತವರು ಮನೆಯ ಕಷ್ಟ, ಸಮಸ್ಯೆಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ, ಅದೆ ಮನೆಯಲ್ಲಿಕೆಲಸ ಮಾಡುತ್ತಿದ್ದ ಪಾರು ಸಂಸಾರ ತುಂಬಾ ನೆಮ್ಮದಿಯಾಗಿಯೇ ಇತ್ತು. ಈಗಲು ಪಾರು ಹಾಗೇ ಇದ್ದಾಳೆ. ಸ್ಥಾನ ಮಾತ್ರ ಬದಲಾಗಿದೆ. ಜೊತೆಗೆ ಪಾರು ಅರಸನಕೋಟೆಗೆ ಸೊಸೆಯಾಗಿ ಬಂದ ಮೇಲೆ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಆ ಸವಾಲುಗಳನ್ನು ನಿಭಾಯಿಸುವುದಕ್ಕೆ ಸಮಯ ಹೆಚ್ಚಾಗಿ ಬೇಕಾಗಿತ್ತು. ಹೀಗಾಗಿ ಪಾರುಗೆ ತಂದೆಯ ಸಮಸ್ಯೆ ಅಷ್ಟಾಗಿ ಗಮನಕ್ಕೆ ಬಾರಲೇ ಇಲ್ಲ. ಆದರೆ ಇದೀಗ ಸೆಕ್ಯೂರಿಟಿ ಬಳಿ ತಂದೆ ತನ್ನ ಆಸೆಯನ್ನು ಹೇಳಿಕೊಂಡಾಗ ಪಾರು ಮನಸ್ಸು ಕರಗಿದೆ. ಇದನ್ನು ಆದಿಯ ಬಳಿ ಹೇಳಿದ್ದಾಳೆ. ಆದಿಯ ಮನಸ್ಸು ಖಂಡಿತಾ ಒಪ್ಪುತ್ತೆ. ಆದರೆ ಅಖಿಲಾಂಡೇಶ್ವರಿ ಬಳಿ ಹೇಗೆ ಅನುಮತಿ ಪಡೆಯುತ್ತಾಳೆ ಎಂಬುದೇ ಹೊಸ ಸವಾಲು.

ಯಾಮಿನಿಯಿಂದ ಎಡವುತ್ತಾಳಾ ಪಾರು?
ಪಾರು ಅರಸನಕೋಟೆಗೆ ಸೊಸೆಯಾಗಿ ಬಂದಾಗಿನಿಂದ ದೊಡ್ಡ ದುಶ್ಮನ್ ಆಗಿರುವುದು ಯಾಮಿನಿ. ಪ್ರತಿ ಹಂತದಲ್ಲೂ ಪಾರು ಸೋಲನ್ನೇ ಬಯಸುತ್ತಿದ್ದಾಳೆ. ಈಗಂತು ಅಕ್ಕ ತಂಗಿಯಂತಿರುವ ಪಾರು ಮತ್ತು ಜನನಿ ನಡುವೆ ಸಮಸ್ಯೆ ತಂದೊಡ್ಡುವುದಕ್ಕೆ ಕಾಯುತ್ತಿದ್ದಾಳೆ. ಅದರ ಜೊತೆಗೆ ಸಣ್ಣ ತಪ್ಪು ಸಿಕ್ಕಿದರೂ ಪಾರು ವಿರುದ್ಧ ಅಖಿಲಾ ಬಳಿ ಚುಚ್ಚುತ್ತಿರುತ್ತಾಳೆ. ಅಖಿಲಾ ಮನಸ್ಸು ಗೆದ್ದಿದ್ದಕ್ಕೆ ಇನ್ನಷ್ಟು ಕುಪಿತಗೊಂಡು, ಕಿತಾಪತಿ ಮಾಡುತ್ತಿದ್ದಾಳೆ. ಇದೀಗ ಹನುಮಂತು ಮನೆ ತೆಗೆದುಕೊಳ್ಕಬೇಕೆಂಬ ವಿಚಾರವನ್ನು ಕೇಳಿಸಿಕೊಂಡು, ಮತ್ತಷ್ಟು ಕಿತಾಪತಿ ಮಾಡಲು ಫ್ಲ್ಯಾನ್ ಮಾಡುತ್ತಿದ್ದಾಳೆ.

ಅಖಿಲಾ ಗುಣಕ್ಕೆ ಪಾರು-ಹನುಮಂತು ಋಣಿ
ಈ ಬಾರಿ ಗಣಿ ಎಸ್ಎಸ್ಎಲ್‌ಸಿನಲ್ಲಿ ಒಳ್ಳೆ ಅಂಕ ಪಡೆದಿದ್ದಾನೆ. ಹನುಮಂತುಗೆ ಡ್ರೈವರ್ ಕೆಲಸ ಬಿಟ್ಟರೆ ಬೇರೆ ಬರುವುದಿಲ್ಲ. ಗಣಿ ಮುಂದಿನ ಓದಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಇದು ಹನುಮಂತುನನ್ನು ಚಿಂತೆಗೆ ದೂಡಿದೆ. ಆದರೆ ಅಖಿಲಾಂಡೇಶ್ವರಿಗೆ ಈ ಸಮಸ್ಯೆ ಅರ್ಥ ಆಗಲ್ಲ ಅಂತ ಏನಿಲ್ಲ. ಹೀಗಾಗಿ ಹನುಮಂತು ಸಿಹಿ ಹಂಚಲು ಬಂದಾಗಲೇ ಗಣಿಯ ಮುಂದಿನ ಓದಿನ ಜವಾಬ್ದಾರಿ ನನ್ನದು ಎಂದು ಅಖಿಲಾ ಹೇಳಿದ್ದಾರೆ. ಇದು ಹನುಮಂತು ಮತ್ತು ಪಾರುಗೆ ಸಾಕಷ್ಟು ಖುಷಿ ಕೊಟ್ಟಿದೆ.


Click it and Unblock the Notifications











