Don't Miss!
- News
Biography: 'ಬಾಹುಬಲಿ'ಗೆ ಶಕ್ತಿ ತುಂಬಿದ ಕಥೆಗಾರನಿಗೆ ತೆರೆಯಿತು ರಾಜ್ಯಸಭೆ ಬಾಗಿಲು!
- Automobiles
ಬೆಂಗಳೂರಿನಲ್ಲಿ ಪೇಯ್ಡ್ ಪಾರ್ಕಿಂಗ್ - ವಾಹನ ಸವಾರರಿಗೆ ಮತ್ತೆ ಶಾಕ್ ನೀಡಲಿದೆ ಬಿಬಿಎಂಪಿ..!
- Lifestyle
ಮನೆಯಲ್ಲಿ ಮಾಡುವ ಇಂಥಾ ಸಣ್ಣಪುಟ್ಟ ತಪ್ಪುಗಳಿಂದಲೇ ಬೆಂಕಿ ಅವಘಡಗಳು ಸಂಭವಿಸೋದು!
- Sports
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!
- Education
KSSIDC Recruitment 2022 : 7 ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ಪಾರು ಆತ್ಮಸ್ಥೈರ್ಯ ಹೆಚ್ಚಿಸಿದ ಮನೆಯವರು ಅರಸನಕೊಟೆ ಒಡತಿಯಾಗುತ್ತಾಳಾ ಪಾರು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಧಾರವಾಹಿಗಳು ಒಂದನ್ನೊಂದು ಮೀರಿಸುವಂತದ್ದು. ಹಾಗೆಯೇ ಧಾರವಾಹಿಗಳಲ್ಲೂ ಉತ್ತಮ ಪೈಪೋಟಿ ಇದೆ. ಎಲ್ಲಾ ಧಾರವಾಹಿಗಳಿಗಿಂತ ಪಾರು ಧಾರವಾಹಿ ಭಿನ್ನವಾಗಿ ಮೂಡಿಬರುತ್ತಿದೆ.
ಅರಸನ ಕೋಟೆಯ ಸೊಸೆಯಾಗಿ ಪಾರುವನ್ನು ಅಖಿಲಾಂಡೇಶ್ವರಿ ತಿದ್ದುವ ವೈಖರಿ ನೋಡುಗರಿಗೆ ಬಹಳ ಮುದ ನೀಡುತ್ತಿದೆ. ಇನ್ನೂ ಪಾರು ಅರಸನ ಕೋಟೆಯ ಒಡತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ದಾಮಿನಿ ಅಖಿಲಾಂಡೇಶ್ವರಿ ಬಳಿ ಪಾರುವನ್ನು ಎಷ್ಟೆ ದೂರಿದರು ಪಾರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಗೆಯೇ ಮನೆಯವರ ಬೆಂಬಲದಿಂದ ಪಾರು ಆತ್ಮಸ್ಥೈರ್ಯ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಪಾರು ಗಂಡ ಮಾತ್ರ ಪಾರುವಿನ್ನು ಯಾವುದೇ ಕ್ಷಣದಲ್ಲೂ ಬಿಟ್ಟುಕೊಡುವುದಿಲ್ಲ.
ಪಾರು ಇದೀಗ ಅಖಿಲಾಂಡೇಶ್ವರಿ ನೀಡಿರುವ ಸವಾಲಿನ ಕೆಲಸದಲ್ಲಿ ಉತ್ತಿರ್ಣಳಾಗಿದ್ದಾಳೆ. ಹರ್ಬಲ್ ಸೋಪ್ನ್ನು ಮಾರ್ಕೆಟಿಗೆ ಬಿಡುವ ಯೋಚನೆಯಲ್ಲಿದ್ದ ಅಖಿಲಾಂಡೇಶ್ವರಿ 300 ಕೋಟಿ ಹೂಡಿಕೆದಾರರನ್ನು ಹುಡುಕುವ ಕೆಲಸವನ್ನು ನೀಡಿದ್ದರು. ಆ ಕೆಲಸವನ್ನು ಪರಿಪೂರ್ಣವಾಗಿ ಮುಗಿಸಿಕೊಟ್ಟಿದ್ದಾಳೆ ಪಾರು. ಮೊದ ಮೊದಲಿಗೆ ಹೂಡಿಕೆದಾರರ ಪ್ರಶ್ನೆಗೆ ತಬ್ಬಿಬ್ಬಾದ ಪಾರ್ವತಿಗೆ ಏನು ಮಾಡಬೇಕು ಎಂದು ದಿಕ್ಕು ತೊಚದಾಗಿತ್ತು. ಅದೆಷ್ಟೇ ಆದಿ ಬಿಡಿಸಿ ಹೇಳಿದರು ಪಾರುಗೆ ಅರ್ಥೈಸಿಕೊಳ್ಳಲು ಅಸಾಧ್ಯವಾಗುತ್ತಿತ್ತು. ಪಾರು ಬಳಿ ಹೂಡಿಕೆದಾರರು ನಿಮ್ಮನ್ನು ನಂಬಿ ಹೇಗೆ ನಾವು ಅಷ್ಟು ಹಣ ಹೂಡಿಕೆ ಮಾಡುವುದು ಎಂದೆಲ್ಲ ಪ್ರಶ್ನೆ ಕೇಳಿದಾಗ ಪಾರು ಗಲಿಬಿಲಿಗೊಂಡಳು. ಈ ವೇಳೆ ಹೂಡಿಕೆದಾರರು ನಿಮ್ಮನ್ನು ನಂಬಿಕೆ ಕೋಟಿ ಕೋಟಿ ಇನ್ವೆಸ್ಟ್ ಮಾಡಲು ನಂಬಿಕೆ ಬರುತ್ತಿಲ್ಲ, ಸ್ವಲ್ಪ ಸಮಯ ನೀಡಿ ಎಂದು ಹೇಳಿ ತೆರಳುತ್ತಾರೆ. ಈ ವೇಳೆ ಮನೆಯವರಿಗೆ ಕೊಂಚ ಬೇಸರ ತರಿಸಿದೆ.

ಪಾರು ಗೆಲುವಿಗೋಸ್ಕರ ಏನು ಮಾಡಲು ಸಿದ್ದರಿರುವ ಮನೆಯವರು
ಪಾರು ಈ ವೇಳೆ ಬಹಳ ಬೇಸರಿಸಿಕೊಂಡಳು, ನಾನು ಅಖಿಲಾಂಡೇಶ್ವರಿಯವರ ಮಾನ ಮರ್ಯಾದೆ ತೆಗೆದೆ. ಅಖಿಲಾಂಡೇಶ್ವರಿ ಸೊಸೆ ಇಷ್ಟು ದಡ್ಡಿಯ ಎಂದು ಕೊಂಡಿರುತ್ತಾರೆ, ನನಗೆ ಇದೆಲ್ಲ ಬೇಡ, ಇದೆಲ್ಲ ನನಗೆ ಆಗಿ ಬರುವುದಿಲ್ಲ ಎಂದು ಪಾರ್ವತಿ ಕೈ ಚೆಲ್ಲುತ್ತಾಳೆ. ಈ ವೇಳೆ ಆದಿಗೆ ಏನು ಮಾಡಬೇಕು ಎಂದು ದಿಕ್ಕು ತೋಚದಾಗುತ್ತದೆ. ಇದನ್ನು ಕಂಡ ಪ್ರೀತು, ಜನನಿ ಒಂದು ನಾಟಕ ಆಡುತ್ತಾರೆ. ಜನನಿಯ ಕೆನ್ನೆಗೆ ಪ್ರೀತು ಬಾರಿಸುತ್ತಾನೆ ಈ ವೇಳೆ ಆಗಮಿಸಿದ ಆದಿ ಪಾರ್ವತಿ ಇದನ್ನು ತಡೆಯುತ್ತಾಳೆ, ಪ್ರೀತು ಯಾಕೆ ಜನನಿಯ ಮೇಲೆ ಕೈ ಎತ್ತಿದ್ದಾನೆ ಎಂಬುವುದನ್ನು ಪಾರು ಕೇಳುತ್ತಾಳೆ. ಅದಕ್ಕೆ ಜನನಿ ನಾನು ಮಾಡಿದ ಶಾಪಿಂಗ್ ಬಗ್ಗೆ ಲೆಕ್ಕ ನೀಡಬೇಕಂತೆ ನಾನು ನೀಡಿಲ್ಲ ಅದಕ್ಕೆ ಹೊಡೆದರು ಎಂದು ಹೇಳುತ್ತಾಳೆ.

ಜನನಿ-ಪ್ರೀತು ಆಡಿದ ನಾಟಕ
ಇದನ್ನು ಕೇಳಿದ ಪಾರು ಅವನು ಕೇಳಿದ ಪ್ರಶ್ನೆ ಸರಿಯಾಗಿತ್ತು. ಅದಕ್ಕೆ ಹೇಳಬಹುದಿತ್ತಲ್ಲ ಎಂದಾಗ ಜನನಿ ಹೇಳುತ್ತಾಳೆ, ಅವನು ಲೆಕ್ಕ ಕೇಳಿರುವುದು ನಿಜವಾದರೆ ಹೂಡಿಕೆದಾರರು ಕೇಳಿದ ಪ್ರಶ್ನೆಯೂ ಸರಿಯಾಗಿತ್ತಲ್ಲ, ನೀವು ಯಾಕೆ ಉತ್ತರಿಸಿಲ್ಲ, ಹೂಡಿಕೆದಾರರು ಹೂಡಿಕೆ ಮಾಡುವಾಗ ನಿಮ್ಮನ್ನು ನಂಬಿ ಹೂಡಿಕೆ ಮಾಡಬೇಕಾಗುತ್ತದಲ್ಲ, ನಿಮ್ಮ ಮೇಲೆ ನಂಬಿಕೆ ಇಲ್ಲದೇ ಯಾಕೆ ಅವರು ಹೂಡಿಕೆ ಮಾಡುತ್ತಾರೆ ಎಂದು ಹೇಳುತ್ತಾಳೆ, ಆ ವೇಳೆ ಪಾರುಗೆ ಅರ್ಥವಾಗುತ್ತದೆ, ಪಾರುಗೆ ಇದನ್ನು ಅರ್ಥಮಾಡಿಕೊಳ್ಳಲು ಜನನಿ ಹಾಗೂ ಪ್ರೀತು ನಾಟಕವಾಡಿದ್ದು ಎಂದು. ಇದನ್ನೆಲ್ಲ ನೋಡಿದ ಪಾರ್ವತಿಗೆ ಕುಗ್ಗಿರುವ ಆತ್ಮವಿಶ್ವಾಸ ಇನ್ನೂ ಹೆಚ್ಚಾಗುತ್ತದೆ.

ಅಖಿಲಾಂಡೇಶ್ವರಿ ವಿಶ್ವಾಸಕ್ಕೆ ಪಾತ್ರಳಾಗುತ್ತಾಳಾ ಪಾರು?
ಇನ್ನೂ ಪುನಃ ಪಾರು ಹೂಡಿಕೆದಾರರನ್ನು ಮನೆಗೆ ಕರೆಯಿಸಿಕೊಂಡು ಮೀಟಿಂಗ್ ಮಾಡುತ್ತಾಳೆ. ಇದನ್ನೆಲ್ಲ ಅಖಿಲಾಂಡೇಶ್ವರಿ ಮರೆಯಲ್ಲಿ ಕುಳಿತು ನೋಡುತ್ತಿರುತ್ತಾಳೆ. ಹೂಡಿಕೆದಾರರು ಕೇಳುತ್ತಾರೆ ನಾವು ಯಾಕೆ ನೀವು ತಯಾರಿಸುವ ಪ್ರೊಡಕ್ಟ್ ಮೇಲೆ ಹಣ ಇನ್ವೆಸ್ಟ್ ಮಾಡಬೇಕು ಎಂದಾಗ ಪಾರು ಹೇಳುತ್ತಾಳೆ ಹಣ ಗಳಿಸುವುದಕ್ಕೋಸ್ಕರ ಎಂದು ಅದಕ್ಕೆ ಇನ್ನೊಬ್ಬರು ಕೇಳುತ್ತಾರೆ ದುಡ್ಡೆ ಮುಖ್ಯಾಂತನ ನಿಮ್ಮ ಮಾತಿನ ಅರ್ಥ ಎಂದಾಗ, ಪಾರು ಅಲ್ಲ ಆದ್ರೆ ನಂಬಿಕೆ ವ್ಯವಹಾರ ಇದ್ರು ಕೊನೆಗೆ ಬೇಕಾಗುವುದು ಹಣ ಅಲ್ವಾ ಎನ್ನುತ್ತಾಳೆ. ನಾವು ಮುಖದ ಮೇಲಿನ ಬಂಗು ಮೊಡವೇ ನಿವಾರಿಸಲು ಸೋಪ್ ರೆಡಿ ಮಾಡುತ್ತಿದ್ದೇವೆ, ಅದಕ್ಕೆ ಬೇಕಾಗುವ ಎಲ್ಲದರ ಜವಾಬ್ದಾರಿಯೂ ನಮ್ಮದೇ ಆಗಿರುತ್ತದೇ. ಪ್ರಾರಂಭದ ಹೂಡಿಕೆಯೂ ನಮ್ಮದೇ ಆಗಿರುತ್ತದೆ. ಏನೆ ಸಮಸ್ಯೆ ಆದ್ರೂ ನಾವೆ ಜವಾಬ್ದಾರಿ, ಈ ವ್ಯಾಪರದಲ್ಲಿ ನಷ್ಟ ಆದ್ರೂ ಅದರ ಹೊಣೆ ನಮ್ಮದಾಗಿರುತ್ತದೆ. ನೀವು ಹಾಕುವ ಹಣನ ನಾವೂ ವಾಪಸ್ ಮಾಡುತ್ತೇವೆ. ಅಂಥಹ ಸಂದರ್ಭ ಬರುವುದಿಲ್ಲ.

ಹೂಡಿಕೆದಾರರಿಗೆ ಧೈರ್ಯ ನೀಡುವ ಪಾರು
ಉತ್ಪದನೆಗೆ ಬಳಸುವ ಎಣ್ಣೆ ಪರಿಶುದ್ಧವಾಗಿರುತ್ತದೆ. ಗುಣಮಟ್ಟದಾಗಿರುತ್ತದೆ. ಈಗ ಹೇಳಿ ಹಣ ಹೂಡಿಕೆ ಮಾಡುತ್ತಿರಾ, ಒಪ್ಪಿಕೊಂಡರೇ ಖುಷಿ ಬಂದ ಲಾಭದಲ್ಲಿ 60% ನಿಮ್ಮದಾಗುತ್ತದೆ. ಹೂಡಿಕೆ ಮಾಡಿದ್ರೆ ಖುಷಿ, ಇಲ್ಲವಾದರೆ ಬೇರೆಯವರು ನಿಮ್ಮ ಜಾಗದಲ್ಲಿ ಕೂರುತ್ತಾರೆ ಎಂದು ಪಾರು ಖಡಕ್ ಆಗಿ ಹೇಳುತ್ತಾಳೆ, ಇದನ್ನು ಕೇಳಿದ ಹೂಡಿಕೆದಾರರು ಚಪ್ಪಾಳೆ ತಟ್ಟುತ್ತಾರೆ. ಪಾರು ಬಳಿ ಇರುವ ಪಾಡೆಕ್ಟ್ಗೆ ಇನ್ವೆಸ್ಟ್ ಮಾಡಲು ಒಪ್ಪಿಕೊಳ್ಳುತ್ತಾರೆ. ಇದನ್ನು ಕಂಡ ಅಖಿಲಾಂಡೇಶ್ವರಿಗೆ ಬಹಳ ಖುಷಿಯಾಗುತ್ತದೆ.