ಅಕ್ಕ–ತಂಗಿಯರ ನಡುವೆ ಬಿರುಕು ಮೂಡುತ್ತಾ..? ಜನನಿ ಹೆಸರೇಳದೆ ತಪ್ಪು ಮಾಡಿದಳಾ ಪಾರು..?

By ಎಸ್ ಸುಮಂತ್

ಪಾರು ಇವತ್ತು ಗೆಲುವಿನ ಹಾದಿಯಲ್ಲಿದ್ದಾಳೆ ಎಂದರೆ, ಅಖಿಲಾಂಡೇಶ್ವರಿ ಕೈನಲ್ಲಿ ಹೊಗಳಿಸಿಕೊಳ್ಳುತ್ತಿದ್ದಾಳೆ ಎಂದರೆ, ಅದಕ್ಕೆಲ್ಲಾ ಕಾರಣ ಮನೆಯವರು. ಅದರಲ್ಲಿ ಒಬ್ಬರು ಇಬ್ಬರಂಥಲ್ಲ ಮನೆಯ ಕೆಲಸದವರು ಕೂಡ ಪಾರುಗೆ ಅಷ್ಟೇ ಬೆಂಬಲವಾಗಿ ನಿಂತಿದ್ದರು. ಇದರಿಂದ ಪಾರು ಇಂದು ಗೆಲುವು ಕಂಡಿದ್ದಾಳೆ.

ಅದರಲ್ಲೂ ಜನನಿಗೆ ಪಾರು ಎಂದರೆ ತುಂಬಾನೇ ಇಷ್ಟ. ನನಗೆ ಆಗಲ್ಲ ಎಂದರೆ ಜನನಿ ಮುಂದೆ ನಿಂತು ನಿಮ್ಮ ಕೈನಲ್ಲಿ ಆಗುತ್ತೆ ಮಾಡಿ ಎಂದು ಹುರಿದುಂಬಿಸುತ್ತಾಳೆ. ಆದರೆ ಇಷ್ಟು ಅನ್ಯೋನ್ಯವಾಗಿದ್ದ ಪಾರು ಮತ್ತು ಜನನಿ ನಡುವೆ ಬಿರುಕು ಮೂಡುವಂತಹ ವಾತಾವರಣ ನಿರ್ಮಾಣವಾಗಲಿದೆ. ಅದು ಧಾಮಿನಿಯಿಂದಾಗಿ.

ಧಾಮಿನಿಯ ಮಾತು ಜನನಿಗೆ ನಾಟಿದೆ

ಧಾಮಿನಿಯ ಮಾತು ಜನನಿಗೆ ನಾಟಿದೆ

ಪಾರು ಅಖಿಲಾಂಡೇಶ್ವರಿ ನೀಡಿದ ಎಲ್ಲಾ ಸವಾಲಿನಲ್ಲೂ ಗೆದ್ದಿದ್ದಾಳೆ. ಆದರೆ ಇಲ್ಲಿಗೆ ಮುಗೀತು ಎನ್ನುವಾಗಲೇ ಮತ್ತೊಂದು ದೊಡ್ಡ ಸವಾಲು ಎದುರಾಗಿತ್ತು. ಅದು ಹೂಡಿಕೆದಾರರನ್ನು ಪಾರ್ವತಿ ಹೇಗೆ ಒಪ್ಪಿಸುತ್ತಾಳೆ ಎಂಬುದು. ಅದರಂತೆ ಹೂಡಿಕೆದಾರರನ್ನು ಅಖಿಲಾಂಡೇಶ್ವರಿ ಮನೆಗೂ ಕರೆಸಿದ್ದಳು. ಆದರೆ ಮೊದಲ ಪ್ರಯತ್ನದಲ್ಲಿಯೇ ಪಾರು ಹೂಡಿಕೆದಾರರ ಜೊತೆ ಮಾತನಾಡುವಾಗ ಸೋತಿದ್ದಳು. ಇದರಲ್ಲಿ ಗೆಲ್ಲಲೇಬೇಕೆಂದು ಮನೆಯವರೆಲ್ಲ ಕೂತು ಫ್ಲ್ಯಾನ್ ಮಾಡಿದ್ದರು. ಈ ಫ್ಲ್ಯಾನ್‌ನಲ್ಲಿ ಅಕ್ಕ ತಂಗಿಯಂತಿರುವ ಜನನಿ ತುಂಬಾ ಸಹಾಯ ಮಾಡಿದ್ದಾಳೆ. ಆದರೆ ಧಾಮಿನಿಯ ಕೆಟ್ಟ ಕಣ್ಣು ಅಕ್ಕ ತಂಗಿಯನ್ನು ದೂರ ಮಾಡುವುದರಲ್ಲಿದೆ.

ಪಾರುಳನ್ನು ತಪ್ಪಾಗಿ ಅರ್ಥೈಸಿಕೊಂಡಳಾ ಜನನಿ?

ಪಾರುಳನ್ನು ತಪ್ಪಾಗಿ ಅರ್ಥೈಸಿಕೊಂಡಳಾ ಜನನಿ?

ಪಾರು ಏನು ಎಂಬುದು ಜನನಿಗಿಂತ ಚೆನ್ನಾಗಿ ಬೇರೆ ಯಾರು ಅರ್ಥೈಸಿಕೊಳ್ಳುತ್ತಾರೆ. ಯಾಕೆಂದರೆ ಜನನಿ ಮತ್ತು ಪ್ರೀತು ಮದುವೆ ಮುನ್ನುಡಿ ಬರೆದಿದ್ದು ಇದೇ ಪಾರು. ಅವರು ಪ್ರೀತಿ ಮಾಡುತ್ತಿದ್ದಾರೆಂದು ಗೊತ್ತಾದಾಗ ಹಲವು ಸಮಸ್ಯೆಗಳನ್ನು ದಾಟಿ ಅವರಿಬ್ಬರ ಮದುವೆ ಮಾಡಿಸಿದಳು. ಇದೇ ಖುಷಿ, ಇದೇ ಧನ್ಯತಾಭಾವ ಜನನಿ ಮನಸ್ಸಲ್ಲಿ ಇದೆ. ಹೀಗಾಗಿಯೇ ಪಾರುಗೆ ಸದಾ ಬೆಂಬಲವಾಗಿ ನಿಲ್ಲುತ್ತಾಳೆ. ಆದರೆ ಈ ಬಾರಿ ಪಾರುಳನ್ನು ಅಪಾರ್ಥ ಮಾಡಿಕೊಂಡಿದ್ದಾಳೆ. ಗೆದ್ದ ಖುಷಿಯಲ್ಲಿ ಪಾರು ನನ್ನ ಹೆಸರು ಹೇಳಲಿಲ್ಲವಲ್ಲ ಎಂದು ಮನಸ್ಸಲ್ಲಿಯೇ ಕೊರಗಿದ್ದಾಳೆ. ಪಾರುಗಾಗಿ ಕಪಾಳಕ್ಕೆ ತಿಂದಿದ್ದ ಜನನಿ.

ಪ್ರೀತು ಬೇಜಾರಾಯಿತಾ..?

ಪ್ರೀತು ಬೇಜಾರಾಯಿತಾ..?

ಹೂಡಿಕೆದಾರರನ್ನು ಇಂಪ್ರೆಸ್ ಮಾಡಲು ಪಾರು ಸಾಕಷ್ಟು ಶ್ರಮ ಹಾಕಿದ್ದಾಳೆ. ಅದಕ್ಕೆಂದೇ ಮನೆಯವರ ಪರಿಶ್ರಮ ತುಂಬಾ ಇದೆ. ಅಷ್ಟೇ ಪಾರುಗೆ ಅರ್ಥ ಮಾಡಿಸಲು ಜನನಿ ಗಂಡನಿಂದ ಕಪಾಳಕ್ಕೆ ಒದೆ ಕೂಡ ತಿಂದಿದ್ದಳು. ಹೂಡಿಕೆದಾರರು ಬಂದಾಗ ಕಾರಣ ಕೇಳಿದರೆ ಪಾರು ಉತ್ತರ ನೀಡಿರಲಿಲ್ಲ. ಇದು ಹೂಡಿಕೆದಾರರ ಮನಸ್ಸನ್ನು ಬೇಸರಗೊಳಿಸಿತ್ತು. ನಿಮ್ಮ ಕಂಪನಿಯಲ್ಲಿ ನಾವೂ ಹೂಡಿಕೆ ಮಾಡುವುದಿಲ್ಲ ಎಂದಿದ್ದರು. ಇದು ಪಾರ್ವತಿಗಷ್ಟೇ ಅಲ್ಲ ಮನೆ ಮಂದಿಗೆಲ್ಲಾ ಬೇಸರ ತರಿಸಿತ್ತು. ಹೇಗಾದರೂ ಮಾಡಿ ಪಾರ್ವತಿಯ ಮನಸ್ಸು ಬದಲಾಯಿಸಬೇಕು ಎಂದು ಪಣ ತೊಟ್ಟು, ಹೊಸ ಫ್ಲ್ಯಾನ್ ಮಾಡಿದರು. ಈ ಫ್ಲ್ಯಾನ್‌ನಲ್ಲಿ ಜನನಿ ಪ್ರೀತು ಕೈನಲ್ಲಿ ಕಪಾಳಕ್ಕೆ ಒದೆ ತಿಂದಿದ್ದಳು. ಯಾಕೆ ಎಂದು ಕೇಳಿದಾಗ ಕಾರಣ ಹೇಳಿದ ಜನನಿ ಹೂಡಿಕೆದಾರರು ಕೇಳಿದ್ದು ಕೂಡ ಇದನ್ನೇ ಎಂದು ಮನಸ್ಸು ಬದಲಾಯಿಸಿದ್ದಳು. ಆ ಬಳಿಕ ಹೂಡಿಕೆದಾರರ ಗಮನ ಸೆಳೆಯುವಲ್ಲಿ ಪಾರು ಯಶಸ್ವಿಯಾಗಿತ್ತು.

ಪಾರು ಮಾತು ಜನನಿಗೆ ಕೇಳಿಸಲಿಲ್ಲ

ಪಾರು ಮಾತು ಜನನಿಗೆ ಕೇಳಿಸಲಿಲ್ಲ

ಈ ಘಟನೆಯಾದ ಮೇಲೆ ಅಖಿಲಾಂಡೇಶ್ವರಿ ಪಾರುಳನ್ನು ಹೊಗಳಿದರು ಈ ವೇಳೆ ಇದೆಲ್ಲ ಅನುಭವ ಕಲಿಸಿದ ಪಾಠ, ಎಲ್ಲಾ ನಿಮಗೆ ಸೇರಬೇಕು ಎಂದಳು. ಆದರೆ ಇದಕ್ಕೂ ಮುನ್ನ ಪ್ರೀತು ಜನನಿಗೆ ತುಂಬಾ ಹೊಗಳಿದ್ದ. ಅಮ್ಮ ಅತ್ತಿಗೆಯನ್ನು ಹೊಗಳಿದಾಗ, ಅತ್ತಿಗೆ ನಿನ್ನ ಹೊಗಳುತ್ತಾರೆ ಎಂದು ಜನನಿ ಕೂಡ ಅದೇ ಖುಷಿಯಲ್ಲಿ ತೇಲುತ್ತಿದ್ದಳು. ಆದರೆ ಇದೆಲ್ಲವೂ ಉಲ್ಟವೇ ಆಗಿ ಹೋಯಿತು. ಪಾರು ಅಖಿಲಾಂಡೇಶ್ವರಿ ಮುಂದೆ ಎಲ್ಲವೂ ಅನುಭವದ ಪಾಠ ಎಂದು ಹೇಳಿ ಮುಗಿಸಿದ್ದಳು. ಇದಕ್ಕೆ ಕಾಯುತ್ತಿದ್ದ ಧಾಮಿನಿ, ಜನನಿ ಬಳಿ ಬಂದು ನೀನು ಪಟ್ಟ ಶ್ರಮಕ್ಕೆ ಸಾರ್ಥಕತೆ ಏನಾದರೂ ಸಿಕ್ಕಿತಾ ಎಂದು ಕೇಳಿದಳು. ಇದು ಜನನಿಯ ತಲೆಯಲ್ಲಿ ಹುಳ ಹೊಕ್ಕಂತೆ ಹೊಕ್ಕಿತು. ಇದರಿಂದ ಯೋಚನೆಯಲ್ಲಿ ಮುಳುಗಿದ್ದಾಳೆ. ಆದರೆ ಪಾರು ಮನೆ ಕೆಲಸದವರ ಬಳಿ ಹೇಳುವಾಗ ಇದು ಜನನಿಯ ಬೆಂಬಲದಿಂದ ಸಾಧ್ಯವಾಗಿದ್ದು ಎಂದು ಖುಷಿಯಿಂದ ಹೇಳಿಕೊಂಡಿದ್ದಾಳೆ. ಆದರೆ ಇದು ಜನನಿಗೆ ಕೇಳಿಸಿಲ್ಲ.

More from Filmibeat

English summary
Zee Kannada Serial Paaru Written Update On May 24th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X