Paaru Serial: ಅಖಿಲಾಂಡೇಶ್ವರಿ ಸ್ವರೂಪ ಪಡೆದ 'ಪಾರು' ನೋಡಿ ವಿನಯ್ ಪ್ರಸಾದ್ ಹೇಳಿದ್ದೇನು?

By ಎಸ್ ಸುಮಂತ್

ಹಬ್ಬದ ನೆಪ ಒಡ್ಡಿ ವೀರಯ್ಯ ಎಲ್ಲರನ್ನೂ ಮನೆಗೆ ಕರೆದಿದ್ದಾರೆ. ಅಲ್ಲಿ ಆಗೊಂದು ಹೀಗೊಂದು ಅಂತ ಅತ್ತೆ ಸೊಸೆ ಜೊತೆಗೂಡಿ ಕೆಲಸ ಮಾಡುವಂತ ಸ್ಥಿತಿ ಒದಗಿ ಬರುತ್ತಿದೆ. ಇದು ಪ್ರೇಕ್ಷಕರಿಗೂ ಅತ್ತೆ ಸೊಸೆ ಒಂದಾಗುವ ಮುನ್ಸೂಚನೆ ನೀಡಿದಂತೆ ಕಾಣುತ್ತಿದೆ. ಅಟ್ ದಿ ಸೇಮ್ ಟೈಮ್ ತಲೆಗೆ ಬರೋದು ಅಖಿಲಾಂಡೇಶ್ವರಿ ಕೋಪ. ಯಾವುದೇ ಕಾರಣಕ್ಕೂ ಅಖಿಲಾಂಡೇಶ್ವರಿ ಸೋಲಲ್ಲ ಅನ್ನೋದು ಮನವರಿಕೆಯಾಗುತ್ತೆ.

ಅತ್ತೆಯಂತಾಗಲೂ 'ಪಾರು' ಸರ್ಕಸ್

ಅತ್ತೆ ತಮ್ಮ ಮದುವೆಯನ್ನು ಒಪ್ಪಿಲ್ಲ. ಆದರೆ ಪಾರುಗೆ ತಾಳ್ಮೆ ಸಿಕ್ಕಾಪಟ್ಟೆ ಇದೆ. ಹೇಗಾದರೂ ಮಾಡಿ ಅತ್ತೆಯನ್ನು ಒಪ್ಪಿಸಲೇ ಬೇಕು. ಅವರ ಮನಸ್ಸನ್ನು ತನ್ನಂತೆ ಮಾಡಿಕೊಳ್ಳಲೇಬೇಕು ಎಂಬ ಸ್ವಾಭಿಮಾನ. ಇದಕ್ಕಾಗಿಯೆ ಪಾರು ಅತ್ತೆಯ ಕೋಪಕ್ಕೆ ಆಗಾಗ ಗುರಿಯಾಗುತ್ತಿದ್ದರು ಸಹ ಸಹನಾಭೂತಿಯಿಂದಲೇ ಕ್ಷಮೆಯಾಚಿಸುತ್ತಿದ್ದಾಳೆ. ಈ ಮಧ್ಯೆ ಅತ್ತೆ ಮೆಚ್ಚಿಸುವ ಸೊಸೆಯಾಗಬೇಕೆಂಬ ಹಠ ತೊಟ್ಟು, ಅದಕ್ಕೆ ಬೇಕಾದ ತಯಾರಿ, ತರಬೇತಿಯನ್ನು ಪಡೆಯುತ್ತಿದ್ದಾಳೆ. ಇದಕ್ಕೆಲ್ಲಾ ಚಿಕ್ಕತ್ತೆಯೇ ಒಲ್ಲದ ಮನಸ್ಸಿನಿಂದ ಗುರುವಾಗಿದ್ದಾಳೆ.

ಅಖಿಲಾಂಡೇಶ್ವರಿ ಮನಸ್ಸು ಗೆಲ್ಲುತ್ತಾಳಾ ಪಾರು..?

ಮನೆಯವರಿಗೆಲ್ಲಾ ಇದು ಮಹಾದಾಸೆ. ಹೇಗಾದರೂ ಮಾಡಿ ಪಾರುಳನ್ನು ಸೊಸೆಯಾಗಿ ಸ್ಚೀಕರಿಸುವಂತೆ ಮಾಡಬೇಕು. ಹೀಗಾಗಿಯೇ ನಾನಾ ಪ್ರಯತ್ನಗಳು ನಡೆಯುತ್ತಿವೆ. ಮನೆಯಲ್ಲಿ ಮುದ್ದಿನ ಮಗನ ಜೊತೆಗೂ ಮಾತುಕತೆ ಇಲ್ಲದಂತಾಗಿದೆ. ಹೀಗಾಗಿ ಸೊಸೆ ಮಾತ್ರವಲ್ಲ ಮಗ ಕೂಡ ಕೊರಗುತ್ತಿದ್ದಾನೆ, ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಈ ಮಧ್ಯೆ ತನ್ನ ಹಿರಿ ಸೊಸೆ ಹೀಗೆ ಇರಬೇಕು ಅನ್ನೋ ಆಸೆ ಅಖಿಲಾಂಡೇಶ್ವರಿಗೆ ಇತ್ತು. ತನ್ನಂತೆ ಗತ್ತು ಗಾಂಭೀರ್ಯ ಇರಬೇಕು. ವಿದ್ಯಾವಂತೆಯಾಗಿರಬೇಕು. ತನ್ನ ನಂತರದಲ್ಲಿ ಎಲ್ಲಾ ಅಧಿಕಾರವನ್ನು ಅವಳೇ ನೋಡಿಕೊಳ್ಳಬೇಕು. ಆದರೆ ಇದೀಗ ಎಲ್ಲವೂ ಉಲ್ಟಾ ಆಗಿದೆ. ಅಖಿಲಾಂಡೇಶ್ವರಿ ಬಯಸಿದ ಒಂದೇ ಒಂದು ಗುಣವೂ ಅವಳಲ್ಲಿ ಇಲ್ಲ. ಇದು ದೊಡ್ಡ ಆಘಾತವನ್ನೇ ತಂದೊಡ್ಡಿದೆ ಅಖಿಲಾಂಡೇಶ್ವರಿಗೆ. ಆದರೆ ಪಾರು ಈ ಎಲ್ಲವನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಅಖಿಲಾಂಡೇಶ್ವರಿ ಅಮ್ಮ ಮೆಚ್ಚುವ ಸೊಸೆಯಾಗಲೆಂದೆ ತನ್ನ ವೇಷಭೂಷಣವನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದಾಳೆ.

Zee Kannada Serial Paaru Written Update On Special video

ಪಾರು ಶೇರ್ ಮಾಡಿದ ಆ ವಿಡಿಯೋದಲ್ಲೇನಿದೆ ?

ಪಾರು ಅಖಿಲಾಂಡೇಶ್ವರಿ ಆಗಿ ಬದಲಾಗುತ್ತಿರುವುದನ್ನು ಇತ್ತೀಚೆಗೆ ನೀವೂ ನೋಡಿದ್ದೀರಿ. ಅಂದು ಅಖಿಲಾಂಡೇಶ್ವರಿ ಮನೆಯಲ್ಲಿರಲಿಲ್ಲ. ಪ್ರೀತು ತಮ್ಮ ಚಿಕ್ಕಮ್ಮನಿಗೆ ಮಸ್ಕಾ ಹೊಡೆದು ಫೈನಲಿ ಅಮ್ಮನ ಗತ್ತು ಗಾಂಭಿರ್ಯದ ನಡೆಯನ್ನು ಹೇಳಿಕೊಡಲು ತಿಳಿಸಿದನು. ಆಸೆ ಬುರುಕಿ ಚಿಕ್ಕತ್ತೆ ಅಂಬಾಸಿಡರ್ ಆಗುವ ಭ್ರಮೆಯಲ್ಲೇ ಪಾರುಗೆ ಟ್ರೈನಿಂಗ್ ಕೊಟ್ಟಿದ್ದಳು. ಆಗ ಪಾರು ಅತ್ತೆಯಂತೆ ಸೀರೆಯುಟ್ಟು, ಒಡವೆ ತೊಟ್ಟು, ಜಡೆ ಕಟ್ಟಿ, ಹೂ ಮುಡಿದು ಬರ ಬರ ಎಂದು ನಡೆದು ಬಂದಳು. ಮೊದಲ ಪ್ರಯತ್ನದಲ್ಲಿಯೇ ಪಾಪ ಪಾರು ಸೋತಿದ್ದಳು. ಎರಡನೇ ಬಾರಿ ಮಂದಾಕಿನಿಯ ಟ್ರೈನಿಂಗ್ ಇದೆಯಲ್ಲ, ವಾಟ್ ಎ ಟ್ರೈನಿಂಗ್ ಅನ್ನೋ ಲೆವೆಲ್ ಗೆ ಅಖಿಲಾಂಡೇಶ್ವರಿ ಯಾವ ನಡೆ ಬಯಸಿದ್ದಳೋ ಆ ಗುಣ ಪಾರುನಲ್ಲಿ ರಿಫ್ಳೆಕ್ಟ್ ಆಗುವಂತೆ ತಯಾರಿ ಮಾಡಿದ್ದರು. ಆದರೆ ಈಗ ಅದಲ್ಲ ಪಾರು ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದು ಫನ್ನಿ ವಿಡಿಯೋ. ಅಖಿಲಾಂಡೇಶ್ವರಿಯಂತೆ ಕಾಣುವ ಪಾರು ನೋಡಿ ವಿನಯ್ ಪ್ರಸಾದ್ ಕೊಂಚ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲ ಫುಲ್ ಖುಷಿ ಪಟ್ಟು ಹೊಗಳಿದ್ದಾರೆ.

More from Filmibeat

English summary
Zee Kannada Serial Paaru Written Update On Special video. Here is the details about Paaru share new video with Akhilandeshwari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X