Paaru: ಪಾರುಗೆ ಅವಮಾನ ಮಾಡಲು ಬಂದ ರತ್ನವೇಣಿಗೆ ಪಾಠ ಕಲಿಸುತ್ತಾಳಾ ಅಖಿಲಾ? ಮುಂದೇನು?

By Poorva

'ಪಾರು' ಧಾರಾವಾಹಿ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಆದಿ ಪಾರುವೀನ ಆರೈಕೆಯಲ್ಲಿ ಇದ್ದಾನೆ. ಪಾರು ಅಂಗಳ ಸಾರಿಸಿ ರಂಗೋಲಿ ಇಡಲು ಹೋಗುತ್ತಾಳೆ. ಆದರೆ ಆಗ ಓಡಿ ಬಂದ ಆದಿ ಪಾರುವನ್ನು ಆಯಾಸಗೊಳ್ಳಲು ಬಿಡುವುದಿಲ್ಲ.

ಆದಿ ಮಾತ್ರ "ನನಗೆ ಸವಾಲು ಹಾಕುತ್ತ ಇರುತ್ತಿಯಾ. ಸರಿ, ನಾನೇ ಇನ್ನೂ ಮುಂದೆ ರಂಗೋಲಿ ಇಡುತ್ತೇನೆ " ಎಂದು ಹೇಳುತ್ತಾನೆ. ಇದನ್ನು ಕೇಳಿದ ಪಾರು ನಗುತ್ತಾಳೆ. ಆತ ಸರಿಯಾಗಿ ರಂಗೋಲಿ ಬಿಡಿಸದ್ದನ್ನು ನೋಡಿ ನಗುತ್ತಿದ್ದ ವೇಳೆ ಅಲ್ಲಿಗೆ ಹನುಮಂತು ಬರುತ್ತಾನೆ .ಆದಿ ಬಳಿ ಬಂದು ಗುಟ್ಟಲ್ಲಿ ಏನೋ ಹೇಳುತ್ತಾನೆ. ಅದನ್ನು ಕೇಳಿದ ಆದಿ ಆ ಬಳಿಕ ಬಹಳ ಸುಂದರವಾದ ರಂಗೋಲಿ ಬಿಡಿಸುತ್ತಾರೆ. ಇದನ್ನು ನೋಡಿದ ಪಾರು ಆವಕ್ಕಾಗಿ ನಿಂತು ಬಿಡುತ್ತಾಳೆ.

Zee Kannada Serial Paaru written updated on April 26th

ಆದಿ ಬಿಡಿಸಿದ ರಂಗೋಲಿ ಕಂಡು ಪಾರು ಶಾಕ್

ಆದಿ, ಪಾರುನಾ ನೋಡಿ "ಹೇಗೆ ಗೆದ್ದು ಬೀಗಿದೆ ನೋಡು" ಎಂದು ಹೇಳುತ್ತಾನೆ. ಇನ್ನೂ ಜನನಿ ಚಿಕ್ಕಮ್ಮ ರತ್ನವೇಣಿ ಆಗಮಿಸಿದ್ದಾರೆ. ಜನನಿ ಹಾಗೂ ಪಾರುವನ್ನು ಹೇಗಾದರೂ ಮಾಡಿ ದೂರ ಮಾಡಲೇ ಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಆದರೂ, ಜನನಿ ಮಾತ್ರ ಆಕೆಯ ಮಾತನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಿರುವುದಿಲ್ಲ. ಇನ್ನು ಜನನಿ ಮಾತ್ರ ರತ್ನವೇಣಿ ತಂದಿದ್ದ ತಿಂಡಿ ಹಾಗೂ ಹಣ್ಣು ಹಂಪಲುಗಳನ್ನು ಸಮಾನವಾಗಿ ಹಂಚುತ್ತಾ ರತ್ನವೇಣಿ ಯಾಕೆ ಹೀಗೆ ಮಾಡುತ್ತಾ ಇದ್ದಾಳೆ? ಎಂದು ಕೆಲ ಕಾಲ ಯೋಚನೆ ಮಾಡಿದ ಆ ಬಳಿಕ ಜನನಿ ಬಳಿಗೆ ಬರುತ್ತಾಳೆ ರತ್ನವೇಣಿ.

ಹಣ್ಣು ಹಂಪಲುನ್ನೂ ಹಂಚುತ್ತಿರೋ ಜನನಿ

ಇನ್ನು ರತ್ನ ವೇಣಿ ಬರುವುದನ್ನು ನೋಡಿದ ಜನನಿ ಮಾತ್ರ ಬನ್ನಿ ಚಿಕ್ಕಮ್ಮ ಎಂದು ಕರೆಯುತ್ತಾಳೆ. ರತ್ನವೇಣಿ ಅಲ್ಲಿಗೆ ಬಂದು ಜನನಿ ಬಳಿ ಕೇಳುತ್ತಾಳೆ "ಏನಮ್ಮ ಇದು ನಾನು ತಂಡ ಹಣ್ಣು ಹಂಪಲುಗಳನ್ನು ಸಮವಾಗಿ ಹಂಚಿಕೆ ಮಾಡುತ್ತಾ ಇದ್ದೀರಿ ಅಲ್ವಾ?" ಎಂದಾಗ ಜನನಿ ಹೇಳುತ್ತಾಳೆ "ಒಂದು ನನಗೆ.. ಒಂದು ಪಾರು ಅಕ್ಕಗೆ.. ನನ್ನ ತಂದೆ ಕೂಡ ನನಗೆ ಹೀಗೆ ಹಣ್ಣು ಹಂಪಲು ತಂದಿದ್ದರೂ ಕೂಡ ಮೊದಲು ಪಾರು ಅಕ್ಕಗೆ ಕೊಡುತ್ತಾ ಇದ್ದೆ" ಎಂದು ಹೇಳುತ್ತಾಳೆ. ನಾನು ನನ್ನ ತಂದೆಯ ಗುಣವನ್ನು ಸ್ವಲ್ಪ ಮೈ ಗೂಡಿಸಿಕೊಂಡು ಇರಬೇಕು ಎಂದು ಇರುತ್ತಾಳೆ. ಆದರೆ, ಆಕೆಯ ಉತ್ತರ ರತ್ನವೇಣಿಗೆ ಹಿಡಿಸುವುದಿಲ್ಲ.

ಜನನಿ ಬಳಿ ಕೊಂಕು ತೆಗೆದ ರತ್ನ

ಆಕೆ ಮಾತ್ರ ಜನನಿಗೆ ಏನೋ ಹೇಳಬೇಕು ಎಂದು ಬರುತ್ತಾಳೆ. ಆದರೆ ಏನೂ ಹೇಳದೆ ಸುಮ್ಮನೆ ಇರುತ್ತಾಳೆ. ಆ ವೇಳೆ ಅಖಿಲ ಹಾಗೂ ರಘು ಜನನಿ ಹೇಳಿದ ಮಾತು ಕೇಳಿಸಿಕೊಳ್ಳುತ್ತಾ ಇರುತ್ತಾರೆ. ಆಗ ರತ್ನವೇಣಿಗೆ ಏನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನೆ ಅಖಿಲಗೆ ಮೆಚ್ಚಿಸುವ ಹಾಗೆ ಮಾತನಾಡುತ್ತಾಳೆ. ಹೌದು, ಪಾರು ಕೂಡ ಗರ್ಭಿಣಿ ಅಲ್ವಾ ಅವಳಿಗೆ ನಾನೇ ತೆಗೆದುಕೊಂಡು ಹೋಗಿ ಇದನ್ನು ಕೊಡುತ್ತೇನೆ ಎಂದು ಹೇಳಿದಾಗ ಜನನಿ ಬಹಳ ಖುಷಿಯಿಂದ ಒಪ್ಪಿಕೊಂಡು ಇರುತ್ತಾಳೆ. ಇದನ್ನೆಲ್ಲ ನೋಡಿದ ಅಖಿಲ ಮಾತ್ರ ಬಹಳ ಖುಷಿಯಿಂದ ಮಾತನಾಡುತ್ತಾ ಇರುತ್ತಾಳೆ .

Zee Kannada Serial Paaru written updated on April 26th

ಜನನಿ ಮಾತನಾಡಿದ ರೀತಿ ಕಂಡು ಖುಷಿ

ನೋಡಿ ನಮ್ಮ ಜನನಿಯ ಗುಣ ಎಂಥದ್ದು ಎಂದು ವೀರಣ್ಣ ಜನನಿಗೆ ಎಂಥ ಸಂಸ್ಕಾರ ನೀಡಿದ್ದಾನೆ ಎಂದು ಬಹಳ ಖುಷಿ ಪಟ್ಟುಕೊಂಡು ಇರುತ್ತಾಳೆ. ಇನ್ನೂ ರತ್ನವೇಣಿ ಪಾರು ಮನೆಗೆ ಬರುತ್ತಾಳೆ. ಆಕೆ ಬರುವುದನ್ನು ನೋಡಿದ ಪಾರುಗೆ ಬಹಳ ಖುಷಿ ಆಗುತ್ತದೆ. ಬಳಿಕ ಆಕೆಯ ಜೊತೆ ಕ್ಷಮಾಪಣೆ ಕೇಳುತ್ತಾ ಇರುತ್ತಾಳೆ. ಇನ್ನು ರತ್ನವೇಣಿ ಮಾತ್ರ ಎದುರಿಗೆ ಬಹಳ ನಾಟಕ ಅಡುತ ಇರುತ್ತಾಳೆ . ಆದಿಯನ್ನು ನೋಡಿದ ಕೂಡಲೇ "ನೀನು ಆದಿ ಅಲ್ವಾ?" ಎಂದಾಗ ಹೌದು ಹೇಳತ್ತಾನೆ. ಇನ್ನು ಅವರೆಲ್ಲ ತಡವಾಯಿತು ಎಂದು ಹೇಳಿ ಎಲ್ಲರೂ ಕೆಲಸಕ್ಕೆ ಹೋಗುತ್ತಾರೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಎಂದು ನೋಡಬೇಕಿದೆ.

More from Filmibeat

English summary
Zee Kannada Serial Paaru written updated on April 26th. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X