For Quick Alerts
  ALLOW NOTIFICATIONS  
  For Daily Alerts

  ಲಾಯರ್ ಜೊತೆಗೆ ನಾಗವಲ್ಲಿ ಭರ್ಜರಿ ಮದುವೆ ಫಿಕ್ಸ್!

  |

  ನಾಗವಲ್ಲಿ ವಿಧಿಸಿದ್ದ ಮೂವತ್ತು ದಿನಗಳ ಷರತ್ತು ಮುಗಿದಿದೆ. ಲಾಯರ್ ಗುಂಡಣ್ಣ ನಾಗವಲ್ಲಿಗೆ ಹುಡುಗನನ್ನು ಹುಡುಕಲು ವಿಫಲನಾಗಿದ್ದಾನೆ. ಅದರ ಫಲವಾಗಿ ನಾಗವಲ್ಲಿಗೆ 'ಗುಂಡಣ್ಣ'ನೇ 'ಗಂಡ'ನಾಗಬೇಕಾಗಿದೆ. ನಾಗವಲ್ಲಿಯನ್ನು ಮದುವೆಯಾಗದೇ ಇನ್ನೇನೂ ಮಾಡಲಾಗದು ಎಂಬ ಸ್ಥಿತಿ ತಲುಪಿದ್ದಾನೆ ಗುಂಡಣ್ಣ. ನಾಗವಲ್ಲಿಗೆ ಅರ್ಜೆಂಟ್ ಮದುವೆ ಫಿಕ್ಸ್ ಆಗಿದೆ.

  ನಾಗವಲ್ಲಿ ಮದುವೆಗಾಗಿ ಭಾರೀ ಕಲ್ಯಾಣ ಮಂಟಪವನ್ನೇ ಬುಕ್ ಮಾಡಲಾಗಿದೆ. ನಾಲ್ಕು ದಿನಗಳ ಭರ್ಜರಿ ಮದುವೆಯನ್ನು ಏರ್ಪಡಿಸಲಾಗಿದೆ. ಮೊದಲಿನಿಂದಲೂ ಲಾಯರ್ ಗುಂಡಣ್ಣನ ಮೇಲೆ ಕಣ್ಣಿಟ್ಟಿದ್ದ ನಾಗವಲ್ಲಿಗೆ ಈಗ ಷರತ್ತಿನಲ್ಲಿ ಸೋತ ಗುಂಡಣ್ಣನನ್ನೇ ಮದುವೆಯಾಗುವ ಸುಯೋಗ. 'ರೋಗಿ ಬಯಸಿದ್ದೂ ಹಾಲು-ಅನ್ನ, ಡಾಕ್ಟರ್ ಹೇಳಿದ್ದೂ ಅದೇ' ಎಂಬಂತಾಗಿದೆ.

  ಆದರೆ ಲಾಯರ್ ಗುಂಡಣ್ಣನ ಪರಿಸ್ಥಿತ ಮಾತ್ರ ತದ್ವಿರುದ್ಧ. ಹೇಳಾಂಗಿಲ್ಲ. ಬಿಡಾಂಗೂ ಇಲ್ಲ, ಬಾಯಿಗಿಟ್ಟ ಬಿಸಿತುಪ್ಪವಾಗಿದ್ದಾಳೆ ನಾಗವಲ್ಲಿ. ಗುಂಣಣ್ಣನಿಗೀಗ ಗರ ಬಡಿದಂತಾಗಿದೆ. ಯಾಕಾದರೂ ಅವಳ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟೆನೋ ಎಂದು ಗುಂಡಣ್ಣ ಈಗ ಗ್ರಹಚಾರವನ್ನು ಹಳಿಯುತ್ತಿದ್ದಾನೆ. ಆದರೆ ನಾಗವಲ್ಲಿಗೆ ಮಾತ್ರ ಬಯಸಿದ್ದೇ ಸಿಕ್ಕಿದೆ.

  ನಾಗವಲ್ಲಿ ಮದುವೆಗೆ ಗುಂಡಣ್ಣನೂ ಸಿದ್ಧವಾಗಲೇಬೇಕಾಗಿದೆ. ಪಾರ್ವತಿ ಪರಮೇಶ್ವರದ ಇಡೀ ಪರಿವಾರ ಈ ಮದುವೆಗೆ ಸಕಲರೀತಿಯಲ್ಲೂ ಸಜ್ಜಾಗಿದೆ. ಧಾರಾವಾಹಿ ತಂಡವೀಗ ಕಲ್ಯಾಣ ಮಂಟಪದಲ್ಲಿ ಬೀಡುಬಿಟ್ಟಿದೆ. ಲಾಯರ್ ಗುಂಡಣ್ಣನ ಹೆಂಡತಿ ಸ್ಥಿತಿಗೆ ಎಲ್ಲರೂ ಅಯ್ಯೋ ಪಾಪ! ಎನ್ನುತ್ತಿದ್ದಾರೆ. ಆದರೇನು ಪ್ರಯೋಜನ, ನಾಗವಲ್ಲಿ ಮದುವೆ ನಡೆಯಲೇಬೇಕಾಗಿದೆ.

  ಅಂದಹಾಗೆ, ಪಾರ್ವತಿ ಪರಮೇಶ್ವರ ನಿರ್ದೇಶಕರಾಗಿರುವ ಸಿಹಿಕಹಿ ಚಂದ್ರು, ಈ ಧಾರಾವಾಹಿಗೆ ಬುಕ್ ಮಾಡಿದ್ದ ಕಲ್ಯಾಣ ಮಂಟಪ ಹಾಗೂ ಗ್ರಾಂಡ್ ಸಿದ್ದತೆಯ ಸೆಟ್ ನೋಡಿ, "ನಿಜವಾದ ಪ್ರೇಮಿಗಳ ಜೋಡಿಯೊಂದು ಸಿಕ್ಕರೆ ಮದುವೆ ಮಾಡಿಬಿಡುತ್ತಿದ್ದೆ" ಎಂದರಂತೆ. ಈ ಮಾತು ಸಿಹಿಕಹಿ ಬಾಯಲ್ಲಿ ಬಂದಿರುವುದರಿಂದ ಅದನ್ನೂ ಒಂದು ಹಾಸ್ಯ ಚಟಾಕಿಯೆಂದೇ ಪ್ರೇಕ್ಷಕರು ಭಾವಿಸಬಹುದು.

  ಕಲ್ಯಾಣ ಮಂಟಪ 'ದೇವಲೋಕ' ಎಂದು ಭಾಸವಾಗುವಂತೆ ಸಜ್ಜಾಗಿದೆ. ನಾಲ್ಕು ದಿನ ಭರ್ಜರಿಯಾಗಿ ನಡೆಯಲಿರುವ ಈ ಮದುವೆ, ಸೋಮವಾರದಿಂದ ಗುರುವಾರ ರಾತ್ರಿ 10.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಲಾರ್ ಗುಂಡಣ್ಣನಿಗೂ ನಾಗವಲ್ಲಿಗೂ ಮದುವೆ ನಡೆಯಿತೇ? ಅಥವಾ ಇನ್ನೇನಾದರೂ ತಿರುವು ಪಡೆಯಿತೇ ಎಂಬುದನ್ನು ಜೀ ವಾಹಿನಿಯಲ್ಲಿ ತಪ್ಪದೇ ನೋಡಿ.... (ಒನ್ ಇಂಡಿಯಾ ಕನ್ನಡ)

  English summary
  Parvathi Parameshwara Serial Special Episodes Telecasts on 25th June 2012, Monday to 28th June 2012 at Zee Kannada Channel. Nagavlli Marriage special episode will be very grand one and special comedy piece. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X