For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಶ್ರುತಿ ನಾಯ್ಡು 'ಪುನರ್ ವಿವಾಹ'

  By Rajendra
  |

  ಅವನ ಪುಟ್ಟ ಮಗಳಿಗೆ ಅಮ್ಮ ಬೇಕು. ಅವಳ ಪುಟ್ಟ ಮಗನಿಗೆ ಅಪ್ಪ ಬೇಕು! ಇವರಿಬ್ಬರ ಸಮಸ್ಯೆಗಳಿಗೆ ಒಂದೇ ಪರಿಹಾರ. ಅದೇ 'ಪುನರ್ ವಿವಾಹ'. ಚಿಕ್ಕ ವಯಸ್ಸಿನಲ್ಲಿಯೇ ಮುರಿದು ಬೀಳುವ ದಾಂಪತ್ಯ, ಗಂಡನನ್ನು ಕಳೆದುಕೊಂಡು ಒಂಟಿಯಾಗುವ ಹೆಣ್ಣು ಎರಡನೆ ಮದುವೆಯಾದರೆ ತಪ್ಪೇ?

  ಜೀ ಕನ್ನಡ ವಾಹಿನಿಯ ನೂತನ ಧಾರಾವಾಹಿ 'ಪುನರ್ ವಿವಾಹ' ಕಥಾವಸ್ತು ಇದು. ಶ್ರುತಿ ನಾಯ್ಡು ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ಧಾರಾವಾಹಿ ಇದಾಗಿದೆ. ಇಂದಿನಿಂದ (ಏ.8) ರಾತ್ರಿ 9.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದತನಕ.

  'ಹೊಸ ಬದುಕು ಹೊಸ ಪ್ರೀತಿ' ಎಂಬುದು ಧಾರಾವಾಹಿಯ ಟ್ಯಾಗ್ ಲೈನ್. ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗುತ್ತದೆ. ಜೀವನದಲ್ಲಿ ಒಂದೇ ಸಲ ಮದುವೆ ನಡೆಯುವುದು ಎನ್ನುತ್ತಾರೆ. ಆದರೆ ಬದುಕು ಇಂಥಹ ನಂಬಿಕೆಗಳಲ್ಲಿಯೇ ಕಳೆದುಹೋಗಬೇಕೆ?

  ಗಂಡನ ಕಳೆದುಕೊಂಡ ಹೆಣ್ಣು, ಹೆಂಡತಿಯನ್ನು ಕಳೆದುಕೊಂಡ ಗಂಡ 'ಪುನರ್ ವಿವಾಹ'ದಲ್ಲಿ ಒಂದಾಗಿ ನೆಮ್ಮದಿಯ ಬದುಕು ನಡೆಸಿದರೆ ತಪ್ಪೇನು? ಎಂಬ ಪ್ರಶ್ನೆಗಳ ಹುಡುಕಾಟವೇ ಈ ಧಾರಾವಾಹಿ. ಈ ವಿನೂತನ ಕಥಾಹಂದರ ಧಾರಾವಾಹಿಗೆ ಶೀರ್ಷಿಕೆ ಗೀತೆಯನ್ನು ಜಯಂತ್ ಕಾಯ್ಕಿಣಿ ಅವರು ರಚಿಸಿದ್ದಾರೆ.

  ಸತ್ಯ ಹೆಗಡೆ ಅವರ ಛಾಯಾಗ್ರಹಣ, ಗೋಪಿ ಸಂಗೀತ ಸಂಯೋಜನೆ ಶೀರ್ಷಿಕೆ ಗೀತೆಗಿದೆ. ತಾರಾಬಳಗದಲ್ಲಿ ಜಗನ್, ಅಂಬುಜಾ, ಅನೂಷಾ, ಪದ್ಮಾ ಕುಮುಟಾ, ಅಂಬುಜಾ, ಆಶಾಲತಾ, ನಿತಿನ್, ಶಿವಾಜಿ ರಾವ್ ಜಾಧವ್, ಕೀರ್ತಿರಾಜ್, ಅರುಣ್, ಗೀತಾ, ಸೂರ್ಯವಂಶಿ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  'Punar Vivaha' new tele serial being aired on Zee Kannada from 8th April, 2013. The serial starts at 9.3 pm from Monday to Friday. Serial directed and produced by Shruti Naidu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X