ಸಂಜನಾ ಬುರ್ಲಿ: ಪುಟ್ಟಕ್ಕನ ಮಗಳು ಸ್ನೇಹಾ ಧಾರಾವಾಹಿಗೂ ಬರುವ ಮುನ್ನ ಹೇಗಿದ್ದರು ಗೊತ್ತಾ..?

By ಎಸ್ ಸುಮಂತ್

ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಅಂದಿಗೂ ಇಂದಿಗೂ ನಂಬರ್ ಒನ್ ಧಾರಾವಾಹಿ. ಪುಟ್ಟಕ್ಕನ ಮೂರು ಮಕ್ಕಳು ಕಣ್ಮಣಿಗಳಿದ್ದಂತೆ. ಅದರಲ್ಲಿ ಸ್ನೇಹಾ ಮಾತ್ರ ಸ್ವಲ್ಪ ಜೋರು ಧ್ವನಿ, ಬಜಾರಿ ಕ್ಯಾರೆಕ್ಟರ್. ತಪ್ಪು ಅಂದಿದ್ದನ್ನು ತಪ್ಪು ಎಂದೇ ಹೇಳುವ ಗಟ್ಟಿಗಿತ್ತಿ. ಹೀಗಾಗಿ ಸ್ನೇಹಾ ಎಲ್ಲರಿಗೂ ಇಷ್ಟವಾಗುತ್ತಾಳೆ. ಆದರೆ ಸ್ನೇಹಾ ಧಾರಾವಾಹಿಗೂ ಬರುವ ಮುನ್ನ ಹೇಗಿದ್ದರು ಎಂಬ ಕುತೂಹಲ ಸಾಮಾನ್ಯವಾಗಿಯೇ ಎಲ್ಲರಿಗೂ ಇದ್ದೆ ಇರುತ್ತೆ. ಆ ಕೌತುಕಕ್ಕೆ ತೆರೆ ಬೀಳುವಂತ ಫೋಟೊವೊಂದನ್ನು ಸ್ನೇಹಾ ಹಂಚಿಕೊಂಡಿದ್ದಾರೆ.

ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯೇ ಮೊದಲು. ಆದರೆ ಆ ಬಳಿಕ ಸಾಕಷ್ಟು ಆಫರ್‌ಗಳು ಬರುತ್ತಿವೆ. ಈಗಾಗಲೇ ಒಂದು ಸಿನಿಮಾವನ್ನು ಕಂಪ್ಲೀಟ್ ಮಾಡಿ ಬಂದಿದ್ದಾರೆ ಸಂಜನಾ ಬುರ್ಲಿ. ಇದೀಗ ಹಳೆಯ ಫೋಟೊ ಒಂದನ್ನು ಹಂಚಿಕೊಂಡಿದ್ದು, ಫ್ಯಾನ್ಸ್ ಖುಷ್ ಆಗಿದ್ದಾರೆ.

ಹಳೆ ಫೋಟೊದಲ್ಲಿ ಕ್ಯೂಟ್

ಹಳೆ ಫೋಟೊದಲ್ಲಿ ಕ್ಯೂಟ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾ ತುಂಬಾ ಸಿಂಪಲ್ ಹುಡುಗಿ. ಯಾವಾಗಲೂ ಚೂಡಿದಾರ್ ಹಾಕಿಕೊಂಡು, ಜಡೆ ಹೆಣೆದುಕೊಂಡು, ಯಾವಾಗಲೂ ಸರಳವಾಗಿರುವ ಹುಡುಗಿ. ಈ ರೀತಿಯ ಲುಕ್‌ನಲ್ಲಿಯೇ ಸ್ನೇಹಾ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ರಿಯಲ್ ಲೈಫ್‌ನಲ್ಲಿಯೇ ಬೇರೆ ರೀತಿಯಲ್ಲಿ ಇದ್ದಾರೆ. ಆದರೆ ಈಗ ಹಳೆಯ ಫೋಟೊವೊಂದನ್ನು ಹಂಚಿಕೊಂಡಿದ್ದು, ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ಕುರ್ತಾ ಹಾಕೊಂಡು, ಕರ್ಲಿ ಹೇರ್ ಬಿಟ್ಟುಕೊಂಡು, ಎಲ್ಲರ ಕಣ್ಣು ಕುಕ್ಕುವಂತಹ ಬ್ಯೂಟಿ ಎದ್ದು ಕಾಣುತ್ತಿದೆ. ಧಾರಾವಾಹಿಗಿಂತ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ.

ಹಳೇ ಫೋಟೊಗೆ ಅಭಿಮಾನಿಗಳ ಚಪ್ಪಾಳೆ

ಹಳೇ ಫೋಟೊಗೆ ಅಭಿಮಾನಿಗಳ ಚಪ್ಪಾಳೆ

ಸಂಜನಾ ಬುರ್ಲಿಗೆ ಅಭಿಮಾನಿಗಳೇನು ಕಡಿಮೆ ಇಲ್ಲ. ಅದರಲ್ಲೂ ಇನ್ಸ್ಟಾಗ್ರಾಮ್‌ನಲ್ಲಿ 29.9 ಸಾವಿರ ಫಾಲೋವರ್ಸ್ ಇದ್ದಾರೆ. ಸಂಜನಾ ಬುರ್ಲಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೊಗಳನ್ನು ಹಾಕುತ್ತಾ, ಫ್ಯಾನ್ಸ್ ಮನತಣಿಸುತ್ತಿರುತ್ತಾರೆ. ಇದೀಗ ಧಾರಾವಾಹಿಗೆ ಬರುವುದಕ್ಕೂ ಮೊದಲು ತೆಗೆಸಿದ ಫೋಟೊಗೆ ಫ್ಯಾನ್ಸ್ ಕಡೆಯಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಕಮೆಂಟ್ ಬಾಕ್ಸ್ ನಲ್ಲಿ ಎಲ್ಲರೂ ಹಾರ್ಟ್ ಸಿಂಬಲ್ ಹಾಕಿ ಕಮೆಂಟ್‌ ಮಾಡಿದ್ದಾರೆ. ಸಂಜನಾ ಯಾವುದೇ ಫೋಟೊ ಹಾಕಿದರೂ ಅದಕ್ಕೊಂದಿಷ್ಟು ಲೈಕ್ಸ್, ಕಮೆಂಟ್ಸ್ ಬರುತ್ತವೆ. ಹಳೆಯ ಫೋಟೊವನ್ನು ತುಂಬಾ ಇಷ್ಟಪಟ್ಟಂತೆ ಕಾಣುತ್ತಿದೆ.

ಧಾರಾವಾಹಿ ಬಳಿಕ ಹೆಚ್ಚು ಫೇಮಸ್

ಧಾರಾವಾಹಿ ಬಳಿಕ ಹೆಚ್ಚು ಫೇಮಸ್

ಸಂಜನಾ ಬುರ್ಲಿ ಕಿರುತೆರೆಗೆ ಮೊದಲ ಎಂಟ್ರಿ ಕೊಟ್ಟಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಎಲ್ಲರ ಮನವನ್ನು‌ ಮುಟ್ಟಿದ್ದಾರೆ. ಸ್ನೇಹಾ ಅಂತ ಒಬ್ಬ ಮಗಳಿದ್ದಾರೆ ನಮ್ಮ ತಂಟೆಗೆ ಯಾರು ಬರಲ್ಲ ಎಂಬ ಲೆವೆಲ್‌ಗೆ ಎಲ್ಲರ ಮನಸ್ಸನ್ನು ಸ್ನೇಹಾ ಆವರಿಸಿಕೊಂಡಿದ್ದಾಳೆ. ಹೀಗೆ ದಿನೇ ದಿನೆ ಫೇಮಸ್ ಆಗುತ್ತಿರುವ ಕಾರಣ ಅವಕಾಶಗಳು ಕೈತುಂಬಿ ಬರುತ್ತಿವೆ. ಅದರಲ್ಲೂ ಸೀರೆ, ಜ್ಯುವೆಲ್ಲರಿ ಶಾಪ್‌ಗಳ ಪ್ರಚಾರಕಿಯಾಗುತ್ತಿದ್ದಾರೆ. ಇದಕ್ಕಾಗಿಯೇ ಇತ್ತೀಚೆಗೆ ಟ್ರೆಡಿಷನಲ್ ಫೋಟೋಶೂಟ್ ಕೂಡ ಹೆಚ್ಚಾಗಿದೆ. ಜೊತೆಗೆ ಸಿನಿಮಾ ಆಫರ್‌ಗಳು ಕಡಿಮೆ ಏನು ಇಲ್ಲ. ಧಾರಾವಾಹಿ ಜೊತೆ ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಸ್ನೇಹಾ ಕಂಠಿ ಪ್ರೀತಿ ಶುರುವಾಗೋದು ಯಾವಾಗ?

ಸದ್ಯ ಕಂಠಿ ತಾನು ಎಣೆದಿರುವ ಸುಳ್ಳಿನ ಸರಮಾಲೆಯನ್ನು ಮತ್ತೆ ಮತ್ತೆ ಮುಂದುವರೆಸಲು ಸಾಕಷ್ಟು ಕಷ್ಟ ಪಡುತ್ತಿದ್ದಾನೆ. ಅದರಿಂದ ಸ್ವಂತ ತಂಗಿಗೆ ವಿಲನ್ ಆಗಿದ್ದಾನೆ. ಸ್ನೇಹಾಳ ಮುಂದೆ ತಾನೂ ಸ್ವಂತ ಅಣ್ಣಯ್ಯನೆಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ವಸುಗೆ ನನ್ನ ಲೈಫ್ ಹಳ್ಳ ಹಿಡಿದಿದ್ದರು, ತನ್ನ ಪ್ರೀತಿಗಾಗಿ ಸ್ವಾರ್ಥಿಯಾಗಿದ್ದಾನೆಂಬ ಬೇಸರ. ಇದೆಲ್ಲದರ ನಡುವೆ ಸ್ನೇಹಾಗೆ ಕಂಠಿ ಮೇಲೆ ಅಂತ ಯಾವುದೇ ಭಾವನೆ ಇಲ್ಲ. ಬೆಸ್ಟ್ ಫ್ರೆಂಡ್ ಎಂಬುದಷ್ಟೇ. ದೊರೆಯನ್ನು ಮನಸ್ಸಾರೆ ಇಷ್ಟ ಪಡುತ್ತಿರುವ ಸ್ನೇಹಾಗೆ ಕಂಠಿ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೂ ಆಗುತ್ತಿಲ್ಲ. ಅಷ್ಟೇ ಯಾಕೆ ನಾನಾ ಸಮಸ್ಯೆಗಳಿಂದ ಸ್ನೇಹಾಳ ಮುಂದೆ ಸಿಕ್ಕಿ ಬೀಳುವ ಪರಿಸ್ಥಿತಿಯೇ ಎದುರಾಗುತ್ತಿದೆ.

More from Filmibeat

English summary
Zee Kannada Serial Puttakkana Makkalu Actress Sanjana Burli Old Photo Viral . Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X