ಪುಟ್ಟಕ್ಕನ ಮೂರು ಹೆಣ್ಣು ಮಕ್ಕಳು ಫೋಟೊಶೂಟ್ ಹೇಗಿದೆ ಅಂತ ನೋಡಿದ್ದೀರಾ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮೂವರು ಮುತ್ತಿನಂಥ ಮಕ್ಕಳಿದ್ದಾರೆ. ಅವರ ಹೆಸರು ಸಹನಾ, ಸ್ನೇಹಾ, ಸುಮ. ಈ ಮೂವರು ಹೆಸರಿಗೆ ತಕ್ಕಂತೆ ಅಮ್ಮನಿಗೆ ನೇಮು, ಫೇಮು ತಂದುಕೊಡುವ ಮಕ್ಕಳು. ಸಹನಾ ಸೀರೆ ಬಿಟ್ಟರೆ ಮತ್ಯಾವ ಡ್ರೆಸ್ ತಂಟೆಗೂ ಹೋಗುವುದಿಲ್ಲ. ಇನ್ನು ಸ್ನೇಹಾ ಯವಾಗಲೂ ಚೂಡಿದಾರ, ಸುಮ ಚಿಕ್ಕವಳಲ್ಲವೇ ಅದಕ್ಕೆ ಕುರ್ತಾ ಹಾಕುತ್ತಾಳೆ. ಆಗಾಗ ಕೊಕ್ಕೋ ಡ್ರೆಸ್ ಹಾಕುತ್ತಾಳೆ. ಇದು ಧಾರಾವಾಹಿಯಲ್ಲಿನ ಡ್ರೆಸ್ ಕೋಡ್. ಆದರೆ ಈ ಮೂವರು ಮಕ್ಕಳ ಹೊರಗಿನ ಪ್ರಪಂಚವೇ ಬೇರೆ ಇದೆ.
ಧಾರಾವಾಹಿಯಲ್ಲಿ ಇರುವಂತೆಯೇ ನಿಜ ಜೀವನದಲ್ಲಿ ಯಾರು ಇರುವುದಿಲ್ಲ. ಅದೇ ರೀತಿ ಪುಟ್ಟಕ್ಕನ ಮಕ್ಕಳು ಕೂಡ. ತೆರೆಮೇಲೆ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡವರು ತೆರೆ ಹಿಂದೆ ಕಂಪ್ಲೀಟ್ ಮಾಡರ್ನ್ ಲುಕ್‌ನಲ್ಲಿ ಮಿಂಚುತ್ತಿರುತ್ತಾರೆ. 'ಪುಟ್ಟಕ್ಕನ ಮಕ್ಕಳು' ಅಷ್ಟೇ ಅವರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ.

ಪುಟ್ಟಕ್ಕನ ಮಕ್ಕಳ ಫೋಟೊಶೂಟ್
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭವಾದಾಗಿನಿಂದ ನಂಬರ್ ಒನ್ ಸ್ಥಾನವನ್ನೇ ಕಾಪಾಡಿಕೊಂಡು ಬಂದಿದೆ. ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ತುಂಬಾ ಮುಖ್ಯವಾಗುತ್ತದೆ. ಮೂವರ ಮಕ್ಕಳಿಗಾಗಿಯೇ ನಡೆಯುವ ಕಥೆ ಸುತ್ತ ಬೇರೆ ಯಾರೋ ಸುತ್ತುತ್ತಾರೆ. ಧಾರಾವಾಹಿ ಖ್ಯಾತಿ ಪಡೆದಷ್ಟೇ ನಟಿಯರು ಖ್ಯಾತಿ ಪಡೆಯುತ್ತಿದ್ದಾರೆ. ಸ್ನೇಹಾ, ಸಹನಾ, ಸುಮ ಖ್ಯಾತಿ ಹೆಚ್ಚಾಗಿದ್ದು, ಜಾಹೀರಾತುಗಳ ಪ್ರಚಾರಕರಾಗುತ್ತಿದ್ದಾರೆ. ಇತ್ತೀಚೆಗೆ ಅವರ ಸೋಶಿಯಲ್ ಮೀಡಿಯಾದಲ್ಲಿ ಫೋಟೊಶೂಟ್‌ಗಳೇ ತುಂಬಿ ಹೋಗಿವೆ. ಅದರಲ್ಲೂ ಟ್ರೆಡಿಷನಲ್ ಲುಕ್ಕಿನಲ್ಲಿ ಅನ್ನೋದು ತುಂಬಾ ವಿಶೇಷವಾಗಿದೆ.

ಪುಟ್ಟಕ್ಕನ ಮಕ್ಕಳಿಗೆ ಸ್ಪಾನ್ಸರ್ ಯಾರು?
ಸಹನಾ, ಸ್ನೇಹಾ, ಸುಮ ಮೂರು ಜನ ಲಂಗ ದಾವಣಿ ಹಾಕಿ ತೆಗೆಸಿಕೊಂಡಿರುವ ಫೋಟೊದಲ್ಲಿ ಮಿಂಚಿದ್ದಾರೆ. ಸಹನಾ ಆರೆಂಜ್ & ಬ್ಲೂ ಕಲರ್ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ. ಗೀತಾ ಸೀಮಾ ಎಂಬ ಜ್ಯುವೆಲ್ಲರಿ ಶಾಪ್‌ನವರು ಸಹನಾಗೆ ಸ್ಪಾನ್ಸರ್ ಮಾಡಿದ್ದಾರೆ. ಇಷ್ಟು ಅಂದವಾಗಿ ಒಂದ್ ಫ್ರೇಮ್ ಫೋಟೊಗ್ರಫಿನವರು ಫೋಟೊ ಕ್ಲಿಕ್ಕಿಸಿದ್ದಾರೆ. ಇನ್ನು ಸ್ನೇಹಾ, ಇತ್ತೀಚೆಗೆ ಸಿನಿಮಾವೊಂದನ್ನು ಮಾಡಿ ಆಗಿದೆ. ಹಬ್ಬ ಹರಿದಿನಗಳಿಗೆ ಒಳ್ಳೊಳ್ಳೆ ಫೋಟೊಶೂಟ್ ಮಾಡಿಸುತ್ತಿರುತ್ತಾರೆ. ಅದರಂತೆ ಲಂಗ ದಾವಣಿಯಲ್ಲೂ ಫೋಟೊ ಶೇರ್ ಮಾಡಿದ್ದಾರೆ. ಸ್ನೇಹಾಗೆ ಹೆಚ್ಚು ಮೇಕವರ್ ಮಾಡುವುದು ಪವಿತ್ರಾ ಅವರೇ. ಇನ್ನು ಸ್ನೇಹಾಗೆ ಜ್ಯುವೆಲ್ಲರಿ ಕೊಡುವುದು ವಿ ಎಸ್ ರೆಂಟಲ್ ಜ್ಯುವೆಲ್ಲರಿಯವರು. ಇನ್ನು ಕೊನೆಯ ಮುದ್ದು ತಂಗಿ ಸುಮ ಲುಕ್ ಎಲ್ಲರಿಗಿಂತಲೂ ಅದ್ಭುತವಾಗಿದೆ. ಗ್ರೀನ್ ಆಂಡ್ ಬ್ಲೂ ಕಲರ್ ಕಾಂಬಿನೇಷನ್‌ನಲ್ಲಿ ಲಂಗ ದಾವಣಿ ಹಾಕಿ ಪೋಸ್ ನೀಡಿದ್ದಾರೆ.

ಪುಟ್ಟಕ್ಕನ ಮಕ್ಕಳು ರೀಲ್ಸ್‌ನಲ್ಲಿ ಬ್ಯುಸಿ
'ಪುಟ್ಟಕ್ಕನ ಮಕ್ಕಳ'ನ್ನು ನೋಡುತ್ತಿದ್ದರೆ ವಾವ್ ನಮ್ಮನೆಯ ಹೆಣ್ಣು ಮಕ್ಕಳು ಹೀಗೆಯೆ ಇರಬಾರದ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಯಾಕೆಂದರೆ ಕಷ್ಟ ಎಂದರೆ ಮೂವರು ಒಗಟ್ಟಾಗುತ್ತಾರೆ. ಅಮ್ಮನ ಸಹಾಯಕ್ಕೆ ನಿಲ್ಲುತ್ತಾರೆ. ಇದು ಧಾರಾವಾಹಿಯ ಕಥೆಯಾದರೆ, ಸೀನ್ ಮುಗಿದು ಗ್ಯಾಪ್ ಸಿಕ್ಕಿದರೆ ಸಾಕು ಅಷ್ಟೇ ಎಂಜಾಯ್ ಮಾಡುತ್ತಾರೆ. ರೀಲ್ಸ್ ಮಾಡುತ್ತಾ, ಖುಷಿ ಹಂಚಿಕೊಳ್ಳುತ್ತಾರೆ. ಸ್ನೇಹಾ ಹಾಗೂ ಸುಮ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸಹನಾ ಧಾರಾವಾಹಿಯಲ್ಲಿರುವಂತೆ ಕೊಂಚ ಹಿಂಜರಿಕೆಯ ಸ್ವಭಾವ ಇದ್ದರು ಇರಬಹುದು. ಯಾಕೆಂದರೆ ಹೆಚ್ಚು ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಅಭಿಮಾನಿ ಬಳಗ ಯಾರಿಗೆ ಹೆಚ್ಚು?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಾಗಿನಿಂದ ಕಂಠಿ ಮತ್ತು ಸ್ನೇಹಾ ಪ್ರೀತಿಗೆ ಸಿಕ್ಕಾಪಟ್ಟೆ ಸಫೋರ್ಟ್ ಮಾಡುವವರು ಹುಟ್ಟಿಕೊಂಡಿದ್ದಾರೆ. ಅವರಿಬ್ಬರ ಜೋಡಿಯನ್ನು ಆಗಾಗ ಎಡಿಟ್ ಮಾಡಿ ಹಾಕುತ್ತಿರುತ್ತಾರೆ. ಈಗ ಸಹನಾಳಿಗೂ ಬಾಯ್ ಫ್ರೆಂಡ್ ಸಿಕ್ಕಂತೆ ಆಗಿದೆ. ಹೀಗಾಗಿ ಮುರುಳಿ ಪ್ರೊಫೆಸರ್ ಹಾಗೂ ಸಹನಾಳ ವಿಡಿಯೋಗಳನ್ನು ಎಡಿಟ್ ಮಾಡಿ ಹಾಕುತ್ತಿರುತ್ತಾರೆ. ಇನ್ನು ಸುಮ ಚಿಕ್ಕ ಹುಡುಗಿ. ಆದರೆ ಸುಮಾಳಿಗೂ ಫ್ಯಾನ್ಸ್ ಇಲ್ಲ ಎಂಬಂತಿಲ್ಲ. ಆಕೆಗೂ ಫ್ಯಾನ್ಸ್ ಬಳಗ ಹೆಚ್ಚಾಗಿದ್ದು, ಆಕೆಯ ರೀಲ್ಸ್, ಬ್ಯೂಟಿಫುಲ್ ಫೋಟೊಗಳನ್ನು ಟ್ಯಾಗ್ ಮಾಡುತ್ತಾ ಇರುತ್ತಾರೆ. ಪುಟ್ಟಕ್ಕನ ಮೂವರು ಮುದ್ದು ಮಕ್ಕಳಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಹೆಚ್ಚಾಗಿದ್ದಾರೆ.


Click it and Unblock the Notifications











