Sanjana Burli: ಅರೆರೆ.. ಕಂಠಿ ಎಂಗೇಜ್ಮೆಂಟ್ ಆಗಿದ್ದೆ ತಡ.. ಸ್ನೇಹಾ ಬಂಗಾರಮ್ಮನ ಮನೆಗೆ ಎಂಟ್ರಿ!
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇತ್ತಿಚೆಗೆ ಸಿಕ್ಕಾಪಟ್ಟೆ ನೋವು ನೀಡ್ತಾ ಇದೆ ಗುರು. ಇದನ್ನ ನಾವೂ ಹೇಳ್ತಾ ಇರೋದಲ್ಲ ಧಾರಾವಾಹಿಯ ಫಾಲೋವರ್ಸ್ ಹೇಳ್ತಾ ಇರೋದು. ಕಂಠಿ ಅದ್ಯಾವಾಗ ಸ್ನೇಹಾಳಿಗೆ ಪ್ರಪೋಸ್ ಮಾಡಿದನೋ ಆಗ್ಲೇ ನೋಡುಗರ ಕನಸು ಮತ್ತಷ್ಟು ಅರಳಿತು. ಆದ್ರೆ ಈಗ ಪ್ರೀತಿ ಉಲ್ಟಾ ಹೊಡೆದಿದ್ದು, ಎಲ್ಲರೂ ಅಯ್ಯೋ ಪಾಪ ಅಂತಿದ್ದಾರೆ.
ಪುಟ್ಟಕ್ಕನ ಮಕ್ಕಳಲ್ಲಿ ಸ್ನೇಹಾ ಸಿಕ್ಕಾಪಟ್ಟೆ ಸ್ಟ್ರಾಂಗ್. ಓದುವುದರಲ್ಲೂ ಮುಂದು, ಧೈರ್ಯದಲ್ಲೂ ಮುಂದು. ದೊಡ್ಡ ಆಫೀಸರ್ ಆಗಬೇಕು ಅಂತ ದೊಡ್ಡ ಕನಸನ್ನು ಹೊಂದಿದ್ದಾಳೆ. ಅವ್ವ ಎಂದರೆ ಪ್ರಾಣ. ಯಾವತ್ತಿಗೂ ಅವ್ವನ ಮಾತು ಮೀರುವುದಿಲ್ಲ. ಈಗ ಅವ್ವನಿಗಾಗಿಯೇ ತನ್ನ ಪ್ರೀತಿ ತ್ಯಾಗ ಮಾಡಲು ಹೊರಟಿದ್ದಾಳೆ.

ಕಂಠಿಯಿಂದ ದೂರಾಗಿರುವ ಸ್ನೇಹಾ
ಬಂಗಾರಮ್ಮನಿಗೂ ಸ್ನೇಹಾಗೂ ಮೊದಲಿನಿಂದ ಆಗಿ ಬರಲ್ಲ. ಸ್ನೇಹಾಳನ್ನೇ ಮಗ ಲವ್ ಮಾಡ್ತಾ ಇರೋದು ಅಂತ ತಿಳಿಯುತ್ತಿದ್ದಂತೆ ಬಂಗಾರಮ್ಮ ತನ್ನ ಗೇಮ್ ಪ್ಲ್ಯಾನ್ ಶುರು ಮಾಡಿದಳು. ಪುಟ್ಟಕ್ಕನನ್ನು ಹಿಡಿದು ಮಗನಿಂದ ಸ್ನೇಹಾಳನ್ನು ದೂರ ಮಾಡಿದಳು. ಸದ್ಯ ಇಬ್ಬರು ಬೇರೆ ಬೇರೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಆದರೆ ಇಬ್ಬರಿಗೂ ಮನಸ್ಸಿಲ್ಲ. ಇದೊಂದು ಭಾರವಾದ ವಿಚಾರವೇ ಸರಿ.
ಪ್ರೇಮಿಗಳು ದೂರಾಗ್ತಿರುವುದನ್ನು ಸಹಿಸುತ್ತಿಲ್ಲ
ಆ ಕಡೆ ಭವಿಷ್ಯದಲ್ಲೂ ಬಂಗಾರಮ್ಮನಿಗೂ ಸೊಸೆ ಸ್ಟ್ರಾಂಗ್ ಆಗಿರುವವಳೇ ಬರುತ್ತಾಳೆ ಎನ್ನುತ್ತಿದೆ. ಇತ್ತ ಸ್ನೇಹಾಳ ಜಾತಕದಲ್ಲೂ ಪ್ರೇಮ ವಿವಾಹವೇ ಆಗುತ್ತೆ ಎಂದು ಹೇಳುತ್ತಿದೆ. ಆದರೆ, ಈ ಇಬ್ಬರು ಪ್ರೇಮಿಗಳು ದೂರವಾಗಿರುವುದಕ್ಕೆ ಪ್ರೇಕ್ಷಕರಿಗೆ ಬೇಸರವಾಗುತ್ತಿದೆ. ಪ್ರೇಕ್ಷಕರುಕೇಳಿಕೊಂಡ ಬಳಿಕ ಇಬ್ಬರು ಪ್ರೇಮಿಗಳಂತೆ ಓಡಾಡಿಕೊಂಡು ಇದ್ರು. ಹಾಡು ಹಾಡುತ್ತಾ, ಕನಸುಗಳಿಗೆ ಜೊತೆಯಾಗಿ ಇದ್ದರು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎನ್ನುವಾಗಲೇ ದೂರವಾಗಿರುವುದು ಎಲ್ಲರಿಗೂ ಬೇಸರ ತರಿಸಿದೆ. ಇಬ್ಬರ ಕಣ್ಣೀರು ನೋಡುವುದಕ್ಕೆ ಆಗದೆ ಪ್ರೇಕ್ಷಕರು ಕೂಡ ಕಣ್ಣೀರು ಹಾಕಿದ್ದಾರೆ. ಆದಷ್ಟು ಬೇಗ ಒಂದಾಗಲಿ ಎಂದು ಬಯಸುತ್ತಿದ್ದಾರೆ.
ಬಂಗಾರಮ್ಮನ ಮನೆಗೆ ಬಂದ್ಲಾ ಸ್ನೇಹಾ
ಆ ಕಡೆ ಇಬ್ಬರು ಪ್ರೇಮಿಗಳು ದೂರವಾಗಿದ್ದಾರೆ ಎಂದು ಪ್ರೇಕ್ಷಕರು ಬೇಸರ ಹೊರ ಹಾಕಿದ್ರೆ, ಈ ಕಡೆ ಸ್ನೇಹಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಖುಷಿ ಅನ್ನೋದು ಆಫ್ ದಿ ಕ್ಯಾಮರಾ. ಕ್ಯಾಮರಾ ಆನ್ ಆದಾಗ ಕಂಠಿಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಲೇ ಇರುತ್ತಾಳೆ. ಆದ್ರೆ, ಈಗ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೋ ನೋಡ್ತಾ ಇದ್ರೆ ಬಂಗಾರಮ್ಮನ ಮನೆ ಎಂದೇ ಎನಿಸುತ್ತಿದೆ. ಕಂಠಿ ಯಾವಾಗಲೂ ಆ ಸ್ಥಳದಲ್ಲಿಯೇ ಬಂದು ನಿಂತು ಮಾತನಾಡುವುದು. ಅದೇ ಜಾಗದಲ್ಲಿ ಈಗ ಸ್ನೇಹಾ ಡ್ಯಾನ್ಸ್ ಮಾಡಿದ್ದಾಳೆ.
ಕಂಠಿ ಮನೆಯಲ್ಲಿ ಡ್ಯಾನ್ಸ್ ಮಾಡಿದ ಸ್ನೇಹಾ
ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ಡ್ಯಾನ್ಸರ್ ಕೂಡ ಹೌದು. ಆಗಾಗ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಳ್ಳುತ್ತಾ ಇರುತ್ತಾರೆ. ಆ ಡ್ಯಾನ್ಸ್ ನೋಡಿದ ಪ್ರೇಕ್ಷಕರು ಈಗ ಹಾಕಿರುವ ಡ್ಯಾನ್ಸ್ ಗೂ ಹೋಲಿಕೆ ಮಾಡುತ್ತಿದ್ದಾರೆ. ಹಳೆಯ ಡ್ಯಾನ್ಸ್ ಗಿಂತ ಈಗಿನ ಡ್ಯಾನ್ಸ್ ನಲ್ಲಿ ಇಂಪ್ರೂಮೆಂಟ್ ಇದೆ ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಸಂಜನಾ ಬುರ್ಲಿಯನ್ನು ಹೊಗಳುತ್ತಿದ್ದಾರೆ. ಇನ್ನು ಬಂಗಾರಮ್ಮನ ಮನೆಯಲ್ಲಿಯೇ ಆ ವಿಡಿಯೋ ಮಾಡಿರುವುದು ಒಂದಷ್ಟು ಸ್ಪೆಷಲ್ ಮೂಮೆಂಟ್ ಕ್ರಿಯೇಟ್ ಮಾಡಿದೆ. ಮತ್ತೆ ಪ್ರೇಮಿಗಳು ಒಂದಾಗಬಹುದು ಎಂಬ ಭರವಸೆಯನ್ನು ಹುಟ್ಟು ಹಾಕಿದೆ.


Click it and Unblock the Notifications











