ಮಕ್ಕಳಿಗೆ ಮದುವೆ ಮಾಡಲು ನಿರ್ಧರಿಸಿದ ಪುಟ್ಟಕ್ಕ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮತ್ತೊಂದು ಟ್ವಿಸ್ಟ್‌ಗೆ ರೆಡಿಯಾಗಿದೆ. ಪುಟ್ಟಕ್ಕ ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ನಿಶ್ಚಯಿಸಿದ್ದಾರೆ. ಮೇಷ್ಟ್ರು-ಸಹನಾ ಲವ್ ಸ್ಟೋರಿ ಅತ್ತ ಸ್ನೇಹಾ ಹಾಗೂ ದೊರೆ ಲವ್ ಕೆಮೆಸ್ಟ್ರಿ ವರ್ಕ್ ಔಟ್ ಆಗುತ್ತಿರುವ ಹೊತ್ತಿನಲ್ಲೇ ಪುಟ್ಟಕ್ಕನ ನಿರ್ಧಾರ ಮಾಡಿದ್ದಾಳೆ.
ಪುಟ್ಟಕ್ಕ ತನ್ನ ಮೊದಲಿಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡುವ ವಿಚಾರದಲ್ಲಿ ಮಗ್ನಳಾಗಿದ್ದಾಳೆ, ''ನನ್ನಿಬ್ಬರು ಮಕ್ಕಳು ನನ್ನ ಮಾತನ್ನು ಎಂದಿಗೂ ತೆಗೆದು ಹಾಕುವುದಿಲ್ಲ'' ಎಂಬ ನಂಬಿಕೆಯಿಂದ ಪುಟ್ಟಕ್ಕ ಮದುವೆಯ ಯೋಚನೆ ಮಾಡಿದ್ದಾರೆ.
ಇತ್ತ ಸಹನಾ ಮುರಳಿ ಮೇಷ್ಟ್ರಿಗೆ ಊಟ ಕೊಡಲು ಹೋದಾಗ ಮೇಷ್ಟ್ರು ಸಹನಾಳಿಗೆ ಏನೋ ಹೇಳಲು ಮುಂದಾಗುತ್ತಿದ್ದನ್ನು ಸಹನಾ ಗೆಳತಿ ಗೌರಿ ನೋಡಿದ್ದಾಳೆ. ಸಹನಾ ಯಾರನ್ನು ಅಷ್ಟು ಬೇಗ ಹಚ್ಚಿಕೊಳ್ಳುವುದಿಲ್ಲ, ಅಂತಹದ್ದರಲ್ಲಿ ಮೇಷ್ಟ್ರಿಗೆ ಊಟ ಕೊಡಲು ಆಗಮಿಸಿದ್ದನ್ನು ನೋಡಿ ಕುತೋಹಲ ವ್ಯಕ್ತಪಡಿಸುತ್ತಾಳೆ, ಮೇಷ್ಟ್ರಿಗೆ ಊಟ ಕೊಟ್ಟ ಬಳಿಕ ಸಹನಾ ಹೊರಡುತ್ತಾಳೆ ಈ ವೇಳೆ ಇದನ್ನೆ ಕಾಯುತ್ತಿದ್ದ ಗೌರಿ ಸಹನಾಳನ್ನು ಕಾಲೆಳೆಯುತ್ತಾಳೆ.

ಮೇಷ್ಟ್ರನ್ನು ಪ್ರೀತಿಸುತ್ತಿದ್ದಾಳಾ ಸಹನಾ?
''ಅದೆಷ್ಟು ಬಾರಿ ಕೆಣಕಿ ಕೇಳಿದರು ಸಹನಾ ಮಾತ್ರ ಏನು ಹೇಳದೇ ನಾಚಿಕೊಂಡೇ ಮುಂದೆ ಸಾಗುತ್ತಿದ್ದಳು ಆದರೆ ಇದನ್ನೆಲ್ಲ ನೋಡಿದ ಗೌರಿಗೆ ಅನುಮಾನ ಬಲವಾಗಿದೆ. ಮೇಷ್ಟ್ರು ಹಾಗೂ ಸಹನಾ ಮಧ್ಯ ಪ್ರೀತಿಯಾಗಿದೆ ಎಂದು ಖಚಿತ ಪಡಿಸಿಕೊಂಡ ಆಕೆ ಸಹನಾ ಬಳಿ ಕೇಳಿದರೂ ಹೇಳದೇ ಇದ್ದರು ಆಕೆಯ ಕಣ್ಣುಗಳು ಮಾತ್ರ ಎಲ್ಲ ಸತ್ಯ ಹೇಳಿದಂತೆ ಇತ್ತು.

ದೊರೆನಾ ಇಷ್ಟಪಡುತ್ತಿದ್ದಾಳಾ ಸ್ನೇಹಾ?
ಸ್ನೇಹಾ ದೊರೆಯನ್ನು ಇಷ್ಟಪಡತೊಡಗಿದ್ದಾಳ ಎಂಬ ಅನುಮಾನ ಬಲವಾಗುತ್ತಿದೆ. ಸ್ನೇಹಾಗೆ ಮೆಸೇಜ್ ಮೂಲಕ ಆಟ ಆಡಿಸುತ್ತಿರುವ ದೊರೆ ಸ್ನೇಹಾಗೋಸ್ಕರ ಹೂ ಮಾರುವವಳ ಬಳಿ 2000 ರೂ ಕೊಟ್ಟು ಒಂದು ಕೆಂಪು ಬಣ್ಣದ ಗುಲಾಬಿಯನ್ನು ಸ್ನೇಹಾಗೆ ಕೊಡಲು ಹೇಳಿದ್ದಾನೆ. ಇದನ್ನು ಸ್ನೇಹಾಗೆ ಮೆಸೇಜ್ ಮಾಡಿ ಹೇಳುತ್ತಾನೆ, ಅವಳು ಓಡುತ್ತಾ ಹೂ ಮಾರುವವಳಲ್ಲಿಗೆ ಬಂದಾಗ ಆಕೆ ಹೇಳುತ್ತಾಳೆ, ನೀನಮ್ಮ ಯಾರೋ ಒಬ್ಬ ಮುಖ ಮುಚ್ಚಿಕೊಂಡು ಬಂದು 2000 ರೂ ಕೊಟ್ಟು ಈ ರೋಸ್‌ನ ಕೊಡಕ್ಕೇಳಿದ ಎಂದು ಹೇಳಿ ಆಕೆಗೆ ಗುಲಾಬಿ ಕೊಡುತ್ತಾಳೆ, ಇದನ್ನೆಲ್ಲ ಮರೆಯಲ್ಲೇ ನೋಡುತ್ತಿದ್ದ ಕಂಠಿ ಹಾಗೂ ಆತನ ಗೆಳೆಯರು ಸ್ನೇಹಾ ಗುಲಾಬಿ ತೆಗೆದುಕೊಳ್ಳುತ್ತಾಳಾ ಎಂಬುವುದನ್ನು ನೋಡುತ್ತಿದ್ದರು, ಸ್ನೇಹಾ ಗುಲಾಬಿ ತೆಗೆದುಕೊಳ್ಳುತ್ತಿರುವುದನ್ನು ನೋಡಿದ ಕಂಠಿಗೆ ಬಹಳ ಸಂತೋಷವಾಗುತ್ತದೆ.

ಮದುವೆ ಮಾತುಕತೆಗೆ ಆಗಮಿಸಿದ ಪೂಜಾರಪ್ಪ
ಪುಟ್ಟಕ್ಕನ ಬಳಿಗೆ ಮದುವೆ ಮಾತುಕತೆಗೆ ಪೂಜಾರಪ್ಪ ಬರುತ್ತಾರೆ. ಈ ವೇಳೆ ಒಂದು ಕವರ್‌ನಲ್ಲಿ ವರನ ಜಾತಕವನ್ನು ಕೊಡುತ್ತಾರೆ, ಈ ವೇಳೆ ಪುಟ್ಟಕ್ಕ ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ತೆಗೆದುಕೊಳ್ಳುತ್ತಾಳೆ, ಪೂಜಾರಪ್ಪ ಹೇಳುತ್ತಾರೆ ಇಬ್ಬರು ಮಕ್ಕಳಿಗೆ ವರ ನೋಡಲು ಬರಲು ಹೇಳುತ್ತೇನೆ ಯಾವಾಗ ಹೇಳಬೇಕು ಅದನ್ನೆಲ್ಲ ನೀನೇ ಹೇಳು ಪುಟ್ಟಕ್ಕ, ಮಕ್ಕಳ ಬಳಿಯೂ ಒಂದು ಮಾತು ಹೇಳಿಬಿಡು ಎಂದು ಹೇಳುತ್ತಾರೆ.

ಪುಟ್ಟಕ್ಕನಿಗೆ ಕಂಡಿಷನ್ ಹಾಕಿದ ಪೂಜಾರಪ್ಪ
ಬಳಿಕ ಒಂದು ಕಂಡಿಷನ್ ಇದೆ ಪುಟ್ಟಕ್ಕ ಮದುವೆ ಮಾತುಕತೆಗೆ ನಿನ್ನ ಗಂಡ ಬರುತ್ತಾರಲ್ಲ ಎಂದು ಹೇಳಿದಾಗ ಪುಟ್ಟಕ್ಕಾಗೆ ಏನು ಹೇಳಬೇಕು ಎಂದು ತೋಚದಾಗುತ್ತದೆ, ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ. ಪುಟ್ಟಕ್ಕ ತನ್ನ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಾಳ. ಅಥವಾ ಪುಟ್ಟಕ್ಕನ ತನ್ನ ಮಕ್ಕಳ ಪ್ರೀತಿಗೆ ಒಪ್ಪಿಗೆ ನೀಡುತ್ತಾಳಾ ಕಾದು ನೋಡಬೇಕಿದೆ.


Click it and Unblock the Notifications











