ಕಡೆಗೂ ಒಂದಾಗಿಯೇ ಬಿಟ್ಟರು ಸ್ನೇಹಾ ಬಂಗಾರಮ್ಮ : ಆದರೆ ಸೀರಿಯಲ್‌ನಲ್ಲ!

By ಎಸ್ ಸುಮಂತ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿಯ ಪಾಡು ನೋಡಲು ಆಗುತ್ತಿಲ್ಲ. ಅವ್ವ ಎಂದರೆ ಕಂಠಿಯ ಪ್ರಪಂಚವೇ ಆಗಿತ್ತು. ಆದರೆ ಈಗ ಹುಡುಗಿ ಬಂದ ಮೇಲೆ ಅವಳ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೆ ಸಾಹಸ ಮಾಡುತ್ತಿದ್ದಾನೆ. ಇದೇ ಕಾರಣಕ್ಕೆ ಅವ್ವನ ಬಗ್ಗೆಯೂ ವಿಚಾರ ಮುಚ್ಚಿಟ್ಟಿದ್ದಾನೆ. ಮೊದಲು ಪ್ರೀತಿ ಸಾಬೀತು ಆಗಲಿ, ಆಮೇಲೆ ಸತ್ಯ ಹೇಳೋಣಾ ಅಂತ ಸುಮ್ಮನಾಗಿದ್ದಾನೆ.

ಕಂಠಿ ಪ್ರೀತಿ ಹೇಳಿಕೊಳ್ಳುತ್ತಾನೋ ಇಲ್ಲವೋ ಆದರೆ ಬಂಗಾರಮ್ಮ ಸ್ನೇಹಾ ಎದುರು ಬದುರು ಸಿಕ್ಕಾಗ, ಕಂಠಿ ಏನಾದರೂ ಜೊತೆಗಿದ್ದರೆ ಅಲ್ಲಿಗೆ ಈ ಕಥೆ ಮುಗಿಯಿತು ಎಂದು ಹಾಡು ಹೇಳುತ್ತಾ ಕೂರಬೇಕಾಗುತ್ತದೆ. ಹೀಗಾಗಿ ಹಲವು ಸನ್ನಿವೇಶದಲ್ಲೂ ಆ ಭೇಟಿಯನ್ನು ತಡೆದಿದ್ದಾರೆ. ಆದರೆ ಆ ಎಲ್ಲಾ ತಡೆಯುವಿಕೆಯನ್ನು ಮೀರಿ ಇದೀಗ ಬಂಗಾರಮ್ಮ ಮತ್ತು ಸ್ನೇಹಾ ಒಂದಾಗಿದ್ದಾರೆ. ಬಂಗಾರಮ್ಮ ಮಾತಿಗೆ ಬೆಲೆ ಕೊಟ್ಟು ಸ್ನೇಹಾ ಊಟ ಮಾಡಿದ್ದಾರೆ.

ಸ್ನೇಹಾಳ ಜೊತೆ ಕಂಠಿ ಗ್ಯಾಂಗ್ ಕೂಡ ಎಂಟ್ರಿ

ಸ್ನೇಹಾಳ ಜೊತೆ ಕಂಠಿ ಗ್ಯಾಂಗ್ ಕೂಡ ಎಂಟ್ರಿ

ಎಲ್ಲಾ ಸಂಬಂಧಗಳಲ್ಲೂ ಆಗುವುದು ಇದೇ ರೀತಿ. ತೆರೆ ಮೇಲೆ ದುಶ್ಮನ್ ಆಗಿ ಹೊಡೆದಾಡಿಕೊಂಡರು. ತೆರೆ ಹಿಂದೆ ಪಕ್ಕಾ ದೋಸ್ತಿಗಳಾಗಿರುತ್ತಾರೆ. ಇಲ್ಲಿ ಸ್ನೇಹಾ ಮತ್ತು ಬಂಗಾರಮ್ಮನ ವಿಚಾರದಲ್ಲಿಯೂ ಆಗಿರುವುದು ಅದೇ. ತೆರೆ ಮೇಲೂ ಅಷ್ಟೇ, ಬಂಗಾರಮ್ಮ ಕೆಟ್ಟವರಲ್ಲ. ಅದು ಪುಟ್ಟಕ್ಕನಿಗೆ ಗೊತ್ತೆ ವಿನಃ ಸ್ನೇಹಾಳಿಗಲ್ಲ. ಆದರೆ ಬಂಗಾರಮ್ಮ ಹೊರಗಿದ್ದಾಗಲೂ ತುಂಬಾ ಕ್ಲೋಸ್ ಆಗಿರುತ್ತಾರೆ. ತಮ್ಮ ಧಾರಾವಾಹಿ ತಂಡದೊಂದಿಗೆ ಯಾವಾಗಲೂ ನಗು ನಗುತ್ತಾ ಖುಷಿ ಖುಷಿಯಾಗಿರುತ್ತಾರೆ. ಈ ಹಿಂದೆ ಸಮಾಜಸೇವಕಿ ಲಲಿತಾ ಪಾತ್ರದಲ್ಲಿ ಖ್ಯಾತಿ ಪಡೆದ ಸಿಲ್ಲಿಲಲ್ಲಿ ಕೂಡ ಒಂದು. ಆ ಟೀಂನವರ ಜೊತೆಗೂ ಮಂಜು ಭಾಷಿಣಿ ಈಗಲೂ ಸಂಪರ್ಕದಲ್ಲಿದ್ದಾರೆ. ಆಗಾಗ ಔಟಿಂಗ್ ಹೋಗುತ್ತಾರೆ. ಊಟಕ್ಕೆ ಜೊತೆಯಾಗುತ್ತಾರೆ. ಬಂಗಾರಮ್ಮ ಅಲಿಯಾಸ್ ಮಂಜುಭಾಷಿಣಿ ಇಂಥದ್ದೊಂದು ಸ್ನೇಹವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದೀಗ ಆ ಬಾಂಧವ್ಯ ಪುಟ್ಟಕ್ಕನ ಮಕ್ಕಳ ಜೊತೆಗೂ ಮುಂದುವರೆದಿದೆ.

ಬಂಗಾರಮ್ಮ ಮನೆಗೆ ಗ್ಯಾಂಗ್ ಜೊತೆ ಬಂದ ಸ್ನೇಹಾ

ಬಂಗಾರಮ್ಮ ಮನೆಗೆ ಗ್ಯಾಂಗ್ ಜೊತೆ ಬಂದ ಸ್ನೇಹಾ

ಪಾಪ ಬಂಗಾರಮ್ಮನಿಗೆ ಸ್ನೇಹಾ ಮಾಡಿದ ಸಾಧನೆ ಹೆಮ್ಮೆ ಎನಿಸಿದೆ. ಇದೇ ಕಾರಣಕ್ಕೆ ಎಲ್ಲರನ್ನು ಊಟಕ್ಕೆ ಕರೆದಿದ್ದರು. ಆದರೆ ಸ್ನೇಹಾ ಬಂಗಾರಮ್ಮನ ಮನೆಗೆ ಊಟಕ್ಕೆ ಬಾರದೆ, ಉಳಿದು ಬಿಟ್ಟಳು. ಪುಟ್ಟಕ್ಕ ಮತ್ತು ಇನ್ನಿಬ್ಬರು ಮಕ್ಕಳು ಹೋಗಿದ್ದರು. ಆದರೆ ಅದು ಕೇವಲ ತೆರೆಯ ಮೇಲಷ್ಟೇ. ತೆರೆಯ ಹಿಂದೆ ಏನಾಗಿದೆ ಎಂಬುದು ನಿಮಗೆ ಗೊತ್ತಾ? ಮಂಜು ಭಾಷಿಣಿ ಅವರ ಮನೆಗೆ ಸ್ನೇಹಾ ಹೆದರದೆ ಧೈರ್ಯವಾಗಿ ಊಟಕ್ಕೆ ಹೋಗಿದ್ದಾಳೆ. ಅಷ್ಟೇ ಅಲ್ಲ ಕಂಠಿ, ನಾಗ, ಮುಂಗುಸಿ ಎಲ್ಲರೂ ಹೋಗಿ ಚೆನ್ನಾಗಿ ಬಾರಿಸಿಕೊಂಡು ಬಂದಿದ್ದಾರೆ. ಈ ಸುಂದರ ದೃಶ್ಯಗಳನ್ನು ಸೆರೆಹಿಡಿದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಂಜುಭಾಷಿಣಿ. ನಿಮ್ಮ ಸಹಕಲಾವಿದರ ಜೊತೆ ಒಳ್ಳೆ ಸ್ನೇಹ ಹೊಂದಿದ್ದರೆ ನೀವೇ ಲಕ್ಕಿ. ಅವರನ್ನು ಅಪ್ಪಿಕೊಂಡು, ಪ್ರೀತಿಯನ್ನು ಹಂಚಿ. ಬಂದಿದ್ದಕ್ಕೆ ಧನ್ಯವಾದಗಳು Guys ಎಂದು ಬರೆದುಕೊಂಡಿದ್ದಾರೆ.

ಮಂಜು ಭಾಷಿಣಿಗೆ ನೆಟ್ಟಿಗರು ಕೇಳಿದ್ದೇನು?

ಮಂಜು ಭಾಷಿಣಿಗೆ ನೆಟ್ಟಿಗರು ಕೇಳಿದ್ದೇನು?

ಇದು ಎಲ್ಲರಿಗೂ ಬರುವಂತಹ ಸಹಜವಾದ ಅನುಮಾನವೇ ಸರಿ. 'ಸಿಲ್ಲಿ ಲಲ್ಲಿ'ಯಲ್ಲಿಯೂ ಮಂಜುಭಾಷಿಣಿ ಎಂದರೆ ಯಾವಾಗಲೂ ಸೀರೆಯಲ್ಲಿ, ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ಬಂಗಾರಮ್ಮನ ಅವತಾರದಲ್ಲಿ ಗ್ರ್ಯಾಂಡ್ ಆಗಿ ಸೀರೆಯನ್ನು ಉಟ್ಟು, ಒಂದಿಷ್ಟು ಒಡವೆ ತೊಟ್ಟು, ಗತ್ತು ಗಾಂಭೀರ್ಯವನ್ನೇ ಮೈ ತುಂಬಿಕೊಂಡಿರುವ ಮಹಿಳೆ. ಒಂದು ಕ್ಷಣ ಅವರನ್ನು ಕಂಡರೆ ಊರಿನ ಜನ ಹೆದರುತ್ತಾರೆ. ಇದು ತೆರೆ ಮೇಲಿನ ಬಂಗಾರಮ್ಮ. ಆದರೆ ತೆರೆ ಹಿಂದೆ ಮಂಜು ಭಾಷಿಣಿ ಫುಲ್ ಮಾಡರ್ನ್. ಬಂಗಾರಮ್ಮ ವೇಷದಲ್ಲಿ ಸ್ವಲ್ಪ ದಪ್ಪ ಕಾಣುವ ಮಂಜು ಭಾಷಿಣಿ ಅದೇ ಮಾಡರ್ನ್ ಲುಕ್‌ನಲ್ಲಿ ಪರ್ಫೆಕ್ಟ್ ನಟಿ. ಇವರೇನಾ ಬಂಗಾರಮ್ಮ ಎಂಬ ಅನುಮಾನ ಮೂಡದೇ ಇರುವುದಿಲ್ಲ. ಮಂಜು ಭಾಷಿಣಿ ಹಂಚಿಕೊಂಡಿರುವ ಫೋಟೊಗಳಿಗೂ ಇದೇ ಕಮೆಂಟ್ಸ್ ಹೆಚ್ಚಾಗಿ ಬರುತ್ತಿವೆ.

ಕಂಠಿ ಪ್ರೀತಿ ಗೆಲ್ಲಲೇ ಬೇಕು

ಕಂಠಿ ಮತ್ತು ಸ್ನೇಹಾ ಪ್ರೀತಿಗೆ ಈಗ ದೊಡ್ಡ ವಿಲನ್ ಆಗಿ ಕಾಡುತ್ತಿರುವುದು ಹೊಸದಾಗಿ ಬಂದಿರುವ ಪೊಲೀಸ್. ಕಂಠಿಯನ್ನು ಅರೆಸ್ಟ್ ಮಾಡಲೇ ಬೇಕೆಂದು ಬಂಗಾರಮ್ಮನ ಮನೆಯ ಕಡೆಗೆ ಪಯಣ ಬೆಳೆಸಿದ್ದಾನೆ. ಅದು ಸ್ನೇಹಾ ಮತ್ತು ಕಂಠಿಯನ್ನು ಜೊತೆಗೆ ಕೂರಿಸಿಕೊಂಡು. ಏನೇ ಫ್ಯ್ಲಾನ್ ಮಾಡಿದರು ಪೊಲೀಸ್ ತನ್ನ ಹಠ ಬಿಡುತ್ತಿಲ್ಲ. ಕಂಠಿಗೆ ಮನೆಯ ಬಳಿ ಯಾವುದೇ ಕಾರಣಕ್ಕೂ ಪೊಲೀಸ್ ಹೋಗುವುದು ಇಷ್ಟವಿಲ್ಲ. ಅದಕ್ಕಾಗಿಯೇ ಪೊಲೀಸಪ್ಪನನ್ನು ಹೇಗಾದರೂ ಮಾಡಿ ಮಾರ್ಕೆಟ್‌ಗೆ ಕರೆ ತಂದು ರುಚಿ ತೋರಿಸಿದ್ದಾನೆ. ಕಡೆಗೂ ಬಂಗಾರಮ್ಮ ಮತ್ತು ಸ್ನೇಹಾ ಮುಖಾ ಮುಖಿಯನ್ನು ತಪ್ಪಿಸಿದ್ದಾನೆ.

More from Filmibeat

English summary
Zee Kannada Serial Puttakkana Makkalu Serial Actors Met Bangaramma Fame Manju Bashini. Here is the details about Sneha and Kanti gang visit Bangaramma house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X