ದೇವರ ಎದುರು ಕಣ್ಣೀರಿಡುತ್ತಾ ಪ್ರಮಾಣ ಮಾಡಿದ್ದೇಕೆ ಪುಟ್ಟಕ್ಕ?

By ಪ್ರಿಯಾ ದೊರೆ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸಹನಾಳನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದು, ಮುರಳಿ ಒದ್ದಾಡುತ್ತಿದ್ದಾನೆ. ಏನು ಮಾಡುವುದು ಎಂದು ಗೊತ್ತಾಗದೇ ಸಹಪಾಠಿ ರಾಜಪ್ಪನಿಗೆ ಕೇಳುತ್ತಾನೆ. ಅವನು ಮೊದಲು ಹುಡುಗಿಗೆ ಪ್ರಪೋಸ್ ಮಾಡುವಂತೆ ಹೇಳುತ್ತಾನೆ. ಆತನನ್ನೇ ಸಹನಾ ಎಂದುಕೊಂಡು ಪ್ರಪೋಸ್ ಮಾಡುತ್ತಾನೆ. ಅವನು ವಿಸಿಲ್ ಹಾಕುತ್ತಾನೆ.

ಆದರೆ, ಸಹನಾ ಒಬ್ಬಳೆ ಇರುವುದಿಲ್ಲ ಎಂದಿದ್ದಕ್ಕೆ ಲೆಟರ್ ಬರೆದು ಕರೆಯಿರಿ ಎಂದು ಹೇಳುತ್ತಾನೆ. ಮೊದಲು ರಾಜಪ್ಪನ ಮಾತನನ್ನು ಒಪ್ಪದ ಮುರಳಿ ನಂತರ ಒಪ್ಪಿಕೊಳ್ಳುತ್ತಾನೆ. ಇಷ್ಟರಲ್ಲೇ ಮುರಳಿ ಹಾಗೂ ಸಹನಾ ಭೇಟಿಯಾಗಿ ಇಬ್ಬರೂ ತಮ್ಮ ಪ್ರೀತಿ ನಿವೇದನೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ಯಾವಾಗ ಎಂಬುದು ಗೊತ್ತಿಲ್ಲ.

ಸಹಾಯ ಕೇಳಿದ ಪುಟ್ಟಕ್ಕ

ಸಹಾಯ ಕೇಳಿದ ಪುಟ್ಟಕ್ಕ

ಪುಟ್ಟಕ್ಕ ಗೋಪಾಲನನ್ನು ಕರೆಸಿ ಮಗಳು ಸಹನಾಳನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ. ಮಗಳ ಮದುವೆ ಮಾಡಲು ತಂದೆ ಸ್ಥಾನದಲ್ಲಿ ನಿಲ್ಲು, ಇಲ್ಲ ಎನ್ನಬೇಡ. ಇದೊಂದು ಸಹಾಯ ಮಾಡು ಎಂದು ಕೇಳುತ್ತಾಳೆ. ಇದಕ್ಕೆ ಗೋಪಾಲ ಪುಟ್ಟಕ್ಕನನ್ನು ನನಗೆ ಮನೆ ಹಾಗೂ ಮೆಸ್ ಎರಡನ್ನೂ ಬಿಟ್ಟುಕೊಡು ಎಂದು ಕೇಳುತ್ತಾನೆ. ಇದರಿಂದ ಪುಟ್ಟಕ್ಕ ಶಾಕ್ ಆಗುತ್ತಾಳೆ. ಮಗಳ ಮದುವೆಯಾಗಬೇಕು ಎಂದರೆ, ನಾನು ಕೇಳಿದ್ದನ್ನು ಕೊಡು ಎಂದು ಕೇಳುತ್ತಾನೆ. ಇಲ್ಲದಿದ್ದರೆ ಈ ವಿಚಾರವನ್ನು ಇಲ್ಲಿಗೆ ಬಿಡು ಎನ್ನುತ್ತಾನೆ.

ಮನೆ, ಮೆಸ್ ಕೇಳಿದ ಗೋಪಾಲ

ಮನೆ, ಮೆಸ್ ಕೇಳಿದ ಗೋಪಾಲ

ಪುಟ್ಟಕ್ಕ ಏನು ಹೇಳಬೇಕು ಎಂದು ಕಣ್ಣೀರಿಡುತ್ತಾಳೆ. ಮನೆ, ಮೆಸ್ ಕೊಟ್ಟರೆ ನಾನು ಜೀವನ ಹೇಗೆ ಮಾಡಲಿ. ಹೊಟ್ಟೆಗೆ ಏನು ತಿನ್ನಲಿ ಎಂದು ಕೇಳುತ್ತಾಳೆ. ಅದಕ್ಕೆ ಗೋಪಾಲ ಊರಲ್ಲಿ ಬಾಡಿಗೆಗೆ ಜಾಗ ತಗೋ. ಮೆಸ್ ನಡೆಸು, ಕೆಲಸ ಗೊತ್ತಿರೋಳಿಗೆ ಕಷ್ಟವೇನಿಲ್ಲ. ಆ ಮೇಲೆ ಆ ಜಾಗವನ್ನು ಸ್ವಂತ ಮಾಡಿಕೋ. ನಿನ್ನ ಎರಡನೇ ಮಗಳು ಒಬ್ಬಳೇ ಸಾಕು ನಿಮ್ಮನ್ನೆಲ್ಲಾ ಸಾಕುತ್ತಾಳೆ ಎಂದು ಹೇಳುತ್ತಾನೆ. ನಿನಗೆ ನಿನ್ನ ಮಗಳ ಜೀವನ ಮುಖ್ಯನಾ? ಇಲ್ಲ ಮನೆ, ಮೆಸ್ ಮುಖ್ಯನಾ ಯೋಚನೆ ಮಾಡು. ಯೋಚನೆ ಮಾಡುವುದಕ್ಕೆ ಹೆಚ್ಚು ಸಮಯವಿಲ್ಲ. ನಾನು ಹೊರಡುತ್ತೀನಿ ಎನ್ನುತ್ತಾನೆ.

ದೇವರ ಮೇಲೆ ಪುಟ್ಟಕ್ಕ ಪ್ರಮಾಣ

ದೇವರ ಮೇಲೆ ಪುಟ್ಟಕ್ಕ ಪ್ರಮಾಣ

ಬೇರೆ ದಾರಿ ಇಲ್ಲದೆ, ಪುಟ್ಟಕ್ಕ ಮನೆ ಹಾಗೂ ಮೆಸ್ ಬಿಟ್ಟುಕೊಡಲು ಒಪ್ಪಿಕೊಳ್ಳುತ್ತಾಳೆ. ಆದರೆ ನನ್ನ ಮಗಳ ಮದುವೆಯಾಗಿ ಅವಳು ಗಂಡನ ಮನೆಗೆ ಹೋದಮೇಲೆ ಎನ್ನುತ್ತಾಳೆ. ಇದಕ್ಕೆ ದೇವರ ಮೇಲೆ ಪ್ರಮಾಣ ಮಾಡುವಂತೆ ಕೇಳುತ್ತಾರೆ. ರಾಜಿ ಬಂದು ಪತ್ರಕ್ಕೆ ಸಹಿ ಹಾಕಿದರೇನೇ ನಂಬಿಕೆ ಎಂದು ಹೇಳುತ್ತಾಳೆ. ಆಗ ಗೋಪಾಲ ಕೆಲಸ ಕೆಡಿಸಬೇಡ, ಪುಟ್ಟಕ್ಕ ದೇವರಿಗೆ ಪ್ರಮಾಣ ಮಾಡಿದರೆ ಸಾಕು ಎಂದು ಹೇಳುತ್ತಾನೆ. ಪತ್ರಕ್ಕೆ ಸಹಿ ಹಾಕಲು ಒಪ್ಪದ ಪುಟ್ಟಕ್ಕ ದೇವರ ಮೇಲೆ ಪ್ರಮಾಣ ಮಾಡುತ್ತಾಳೆ.

ಈ ಬಾರಿಯೂ ಬಚಾವ್ ಆದ ಕಂಠಿ

ಈ ಬಾರಿಯೂ ಬಚಾವ್ ಆದ ಕಂಠಿ

ಇತ್ತ ಸ್ನೇಹ ಪೊಲೀಸ್ ಠಾಣೆಗೆ ಹೋಗಿ ನಕಲಿ ಕಂಠಿ ಇದ್ದಾನಾ ಎಂದು ವಿಚಾರಿಸಿದ್ದಾಳೆ. ಆತನನ್ನು ಚಂದ್ರುಗೆ ತೋರಿಸಿ, ಇವನೇ ತಾನೆ ಬಂಗಾರಮ್ಮನ ಮಗ ಎಂದು ಕೂಡ ಕೇಳಿದ್ದಾಳೆ. ಇದೇ ಸಂದರ್ಭದಲ್ಲಿ ಚಂದ್ರು ಕಂಠಿಗೆ ಕರೆ ಮಾಡಿ ವಿಚಾರ ಕೇಳಿದ್ದಾನೆ. ಕಂಠಿ ಸುಳ್ಳು ಹೇಳುವಂತೆ ಹೇಳಿದ್ದು, ಚಂದ್ರು ಹೇಗೋ ಸ್ನೇಹಳನ್ನು ಯಾಮಾರಿಸಿದ್ದಾನೆ. ಸ್ನೇಹ ಹೋದ ಮೇಲೆ ಕಂಠಿ ಕಡೆಯ ಲಾಯರ್ ಬಂದು ಬೇಲ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಕಂಠಿ ಬಳಿಕ ನಕಲಿ ಕಂಠಿಗೆ ಹಣ ಕೊಟ್ಟು ಕರೆದಾಗ ಬಾ ಎಂದು ಹೇಳಿದ್ದಾನೆ.

More from Filmibeat

English summary
Zee Kannada Serial Puttakkana Makkalu Serial Written Update On June 20th. Gopala And Raji Misuses Puttakka Situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X