Puttakkana Makkalu Ugadi Jatre : ಮದ್ದೂರಿನಲ್ಲಿ 'ಪುಟ್ಟಕ್ಕನ ಮಕ್ಕಳು' ಕುಟುಂಬದಿಂದ ಯುಗಾದಿ ಜಾತ್ರೆ

By ಎಸ್ ಸುಮಂತ್

'ಪುಟ್ಟಕ್ಕನ ಮಕ್ಕಳು' ಜಾತ್ರೆ ಮದ್ದೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಇಡೀ ಕುಟುಂಬದವರು ಮದ್ದೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಮದ್ದೂರಿನ ಜನ ಪ್ರೀತಿಯಿಂದ ಸ್ವಾಗತಿಸಿದ್ದಾರೆ‌. ತಬ್ಬಿ ಪ್ರೀತಿ ತುಂಬಿದ್ದಾರೆ. ಅದ್ದೂರಿ ಜಾತ್ರೆಯಲ್ಲಿ ಪುಟ್ಟಕ್ಕನ ಮಕ್ಕಳು ಕೂಡ ಊರಿನ ಜನರ ಜೊತೆಗೆ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಯುಗಾದಿ ಸಂಭ್ರಮವನ್ನು ಬರಮಾಡಿಕೊಂಡಿದ್ದಾರೆ.

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ ಅನ್ನೋ ಮಾತಿನಂತೆ ಯುಗಾದಿ ಹಬ್ಬ ಮತ್ತೆ ಬಂದಿದೆ. ಅದೇ ಸಂಭ್ರಮ ಅದೇ ಸಡಗರ. ಯುಗಾದಿ ಹಬ್ಬದ ಬೇವು ಬೆಲ್ಲ ತಿನ್ನೋದಕ್ಕೆ ಮನೆ ಮಂದಿಯೆಲ್ಲಾ ರೆಡಿಯಾಗಿದ್ದಾರೆ. ಅದರಂತೆ ಪುಟ್ಟಕ್ಕನ ಮಕ್ಕಳು ಸಹ ಬೇವು ಬೆಲ್ಲ ಹಂಚುವುದಕ್ಕೆ ಮಂಡ್ಯದ ಮದ್ದೂರಿಗೆ ಲಗ್ಗೆ ಇಟ್ಟಿದ್ದಾರೆ. ಅದೆಷ್ಟು ಖುಷಿ, ಅದೆಷ್ಟು ಪ್ರೀತಿ ಮದ್ದೂರಿನ ಜನತೆಗೆ. ತನ್ನವರಂತೆಯೇ ಅಭಿಮಾನದ ಸ್ವಾಗತ ಕೋರಿದ್ದಾರೆ.

ವೇದಿಕೆ ಏರಿದ ಸಂಭ್ರಮಿಸಿದ 'ಪುಟ್ಟಕ್ಕನ ಮಕ್ಕಳು'

ವೇದಿಕೆ ಏರಿದ ಸಂಭ್ರಮಿಸಿದ 'ಪುಟ್ಟಕ್ಕನ ಮಕ್ಕಳು'

ಈಗ ಟ್ರೆಂಡಿಂಗ್‌ನಲ್ಲಿರುವಂತೆ ಧಾರಾವಾಹಿಗಳು ಜಾತ್ರೆ ಹೊರಡೋದು ಕಾಮನ್. ಅದರಂತೆ ಪುಟ್ಟಕ್ಕನ ಮಕ್ಕಳ ಇಡೀ ತಂಡ ಮಂಡ್ಯ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ. ಮದ್ದೂರಿನಲ್ಲಿ ದೊಡ್ಡ ವೇದಿಕೆ ಸಿದ್ಧ ಮಾಡಿದೆ. ಅಷ್ಟೇ ಅಲ್ಲ, ಯುಗಾದಿ ಬಂಪರ್ ಆಫರ್‌ನಂತೆ ನೆರೆದಿದ್ದ ಜನತೆಗೆ ಫುಲ್ ಮೀಲ್ಸ್ ಮನರಂಜನೆಯನ್ನು ಪುಟ್ಟಕ್ಕನ ಮಕ್ಕಳು ನೀಡಿದ್ದಾರೆ. ಅದೇನು ಡಾನ್ಸು, ಅದೇನು ಸ್ಟೆಪ್ಸು ವಾರೆ ವ್ಹಾ.. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ನಿಂತಿದ್ದವರೆಲ್ಲಾ ಮಂಕಾಗಿ ಹೋಗಿದ್ದರು.

ಧಾರಾವಾಹಿ ಕಲಾವಿದರೆಲ್ಲಾ ಒಂದೊಂದು ಹಾಡಿಗೆ ಹೆಜ್ಜೆ ಹಾಕಿ, ನೋಡುಗರ ಮನತಣಿಸಿದ್ದಾರೆ. ಇಷ್ಟದ ಧಾರಾವಾಹಿ ನಟ-ನಟಿಯರ ಕುಣಿತ ಕಂಡು ನಿಂತಲ್ಲಿಯೇ ಅಭಿಮಾನಿಗಳು ಕೂಡ ಒಂದೆರಡು ಸ್ಟೆಪ್ಸ್ ಹಾಕಿದ್ದಾರೆ. ಅದ್ದೂರಿ ಜಾತ್ರೆಯ ಸಣ್ಣ ಝಲಕ್ ಒಂದನ್ನು ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಸಣ್ಣ ಝಲಕ್ ಈ ರೇಂಜಿಗೆ ಇರುವಾಗ ಇನ್ನು ಫುಲ್ ಪ್ರೋಗ್ರಾಂ ಜನರಿಗೆ ಮನರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ.

ಸ್ನೇಹ ಮತ್ತು ಕಂಠಿ ಪ್ರೀತಿ ಪಾತ್ರಗಳು

ಸ್ನೇಹ ಮತ್ತು ಕಂಠಿ ಪ್ರೀತಿ ಪಾತ್ರಗಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಗಮನ ಸೆಳೆಯುತ್ತವೆ. ಅದರಲ್ಲಿ ಟರ್ನಿಂಗ್ ಪಾಯಿಂಟ್ ತೆಗೆದುಕೊಳ್ಳುವುದು ಸ್ನೇಹ ಮತ್ತು ಕಂಠಿ ಪ್ರೀತಿಯ ಪಾತ್ರಗಳು. ಮುಂಗುಸಿ ಮತ್ತು ನಾಗನಿಗೆ ಮಾತ್ರವಲ್ಲ. ಆಲ್ ಮೋಸ್ಟ್ ಧಾರಾವಾಹಿ ನೋಡುಗರಿಗೂ ಇವರು ಅಣ್ಣ ಅತ್ತಿಗೆಯೆ. ಈ ಇಬ್ಬರ ಜೋಡಿ ನೋಡುವಾಗ ನೋಡೊ ಅಣ್ಣ ಅತ್ತಿಗೆ ಬಂದ್ರು ಅಂತಾನೆ ಸಾಕಷ್ಟು ಜನ ಮನಸ್ಸಲ್ಲಿ ಅಂದುಕೊಳ್ಳುವುದು.

ಕಂಠಿ ಮಾತಿಗೆ ಶಿಳ್ಳೆ ಚಪ್ಪಾಳೆಯ ಸುರಿಮಳೆ

ಕಂಠಿ ಮಾತಿಗೆ ಶಿಳ್ಳೆ ಚಪ್ಪಾಳೆಯ ಸುರಿಮಳೆ

ಇಷ್ಟು ಇಷ್ಟ ಪಡುವ ಜೋಡಿ ವೇದಿಕೆ ಮೇಲೆ ರೊಮ್ಯಾಂಟಿಕ್ ಮೂಡಿನಲ್ಲಿ ರೋಮ್ಯಾಂಟಿಕ್ ಸಾಂಗಿಗೆ ಕುಣಿದರೆ ನಮ್ಮ ಮದ್ದೂರಿನ ಹೈಕ್ಳ ಹೃದಯ ಹೇಗಿರಬೇಡ. ಅಂತಹ ಮನರಂಜನೆಯನ್ನು ಈ ಜೋಡಿ ನೀಡಿದೆ. ಕಂಠಿ ವೇದಿಕೆ ಮೇಲೆ ಬಂದ ಕೂಡಲೇ ಓಓ ಅಂತ ಚೀರಾಡುವ ಹುಡುಗರಿಗೆ ಕಂಠಿ ಖಡಕ್ ಡೈಲಾಗ್ ಹೊಡೆದು ತಂಪು ಮಾಡಿದ್ದಾರೆ. ಬಡ್ಡಿ ಮಗ ಅಲ್ಲ ಕಲಾ ಬಡ್ಡಿ ಬಂಗಾರಮ್ಮನ ಮಗ ಅನ್ನೋ ಡೈಲಾಗ್ ಫುಲ್ ಶಿಳ್ಳೆ ಚಪ್ಪಾಳೆ ಸುರಿದಿದೆ.

ಪುಟ್ಟಕ್ಕನ ಮಕ್ಕಳಂತೆ ಮದ್ದೂರಲ್ಲೂ ಇದೆ ಕುಟುಂಬ

ಪುಟ್ಟಕ್ಕನ ಮಕ್ಕಳಂತೆ ಮದ್ದೂರಲ್ಲೂ ಇದೆ ಕುಟುಂಬ

ಸಿನಿಮಾಗಳು, ಧಾರಾವಾಹಿಗಳು ಕೆಲವೊಮ್ಮೆ ನೈಜ ಘಟನೆಯನ್ನು ಆಧರಿಸಿ ಮಾಡಿರುತ್ತಾರೆ. ಇನ್ನು ಕೆಲವೊಂದು ಸೀರಿಯಲ್, ಸಿನಿಮಾದಲ್ಲಿ ಬರುವಂತಹ ದೃಶ್ಯಗಳು ಅದೆಷ್ಟೊ ಜನಕ್ಕೆ ಕನೆಕ್ಟ್ ಆಗುತ್ತವೆ. ಹೌದು, ಅಲ್ವಾ ಇಂಥದ್ದೇ ಘಟನೆ ನನ್ನ ಜೀವನದಲ್ಲೂ ನಡೆದಿತ್ತು ಅಲ್ವಾ ಎಂಬಂತ ಸಿಹಿ ಕಹಿ ನೆನಪುಗಳು ಆಗಾಗ ಬಂದು ಹೋಗುತ್ತವೆ. ಹೌದು ಜೀ ಕನ್ನಡದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎಲ್ಲರ ಮೆಚ್ಚುಗೆ ಗಳಿಸಿದೆ. ಗಂಡ ಬಿಟ್ಟು ಹೋದ ಹೆಣ್ಣು ತನ್ನ ಮೂವರು ಹೆಣ್ಣು ಮಕ್ಕಳನ್ನು ಛಲದಿಂದ ಬೆಳೆಸಿ, ಬದುಕು ಅಂದರೆ ಏನು ಎಂಬುದನ್ನು ಸಾಬೀತು ಮಾಡಿದ್ದಾಳೆ. ಈಗ ಮದ್ದೂರಿನಲ್ಲೂ ಅಂತದ್ದೇ ಕುಟುಂಬವೊಂದು ಜೀ ಕನ್ನಡ ತಂಡದ ಕಣ್ಣಿಗೆ ಬಿದ್ದಿದೆ. ವೇದಿಕೆ ಮೇಲೆ ಕಣ್ಣೀರಿನ ಕಥೆಯನ್ನು ತೋರಿಸಲಿದೆ. ಯುಗಾದಿ ಹಬ್ಬದಂದು( ಏಪ್ರಿಲ್ 2-3) ಈ ವಿಶೇಷ ಸಂಚಿಕೆಯಲ್ಲಿ ನೋಡಬಹುದಾಗಿದೆ.

More from Filmibeat

English summary
Zee Kannada serial Puttakkana Makkalu Ugadi festival Jathre In Mandya. Here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X