ಮುರಳಿ ಮೇಷ್ಟ್ರನ್ನು ಮದುವೆಯಾಗ್ತಾಳಾ ಸಹನಾ? ಅಕ್ಕನ ಪರಿಸ್ಥಿತಿ ಕಂಡು ಮರುಗಿದ ಸುಮಾ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿಯಲ್ಲಿ ಇದೀಗ ಸಹನಾಳ ಪ್ರೀತಿ ಬಯಲಾಗುವ ಸಮಯ ಬಂದೇ ಬಿಟ್ಟಿದೆ. ಈಗ ಸಹನಾ ತನ್ನ ಮನದರಸನ ಬಗ್ಗೆ ಪುಟ್ಟಕ್ಕನ ಬಳಿ ಹೇಳುತ್ತಾಳಾ? ಸಹನಾಳನ್ನು ಗಂಡಿನವರ ಕಡೆಯವರು ಒಪ್ಪಿಕೊಂಡಿದ್ದಾರೆ ಆದರೆ ಸಹನಾ ಈ ಪ್ರಪೋಸಲ್‌ ಅನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಮುರಳಿ ಸರ್ ಮೇಲಿರುವ ಪ್ರೀತಿಯನ್ನು ತನ್ನ ಕುಟುಂಬದವರ ಮುಂದೆ ಹೇಳುತ್ತಾಳ ಅಥವಾ ಪುಟ್ಟಕ್ಕ ನೋಡಿದ ಗಂಡನ್ನೆ ಮದುವೆಯಾಗುತ್ತಾಳ? ಏನಾಗಲಿದೆ ಮುಂದೆ.

ಮುರಳಿ ಮೇಷ್ಟ್ರಿಗೆ ಕಾಲೇಜಿನಲ್ಲಿ ಎಲ್ಲಿ ನೋಡಿದರು ಸಹನಾ ಕಾಣುತ್ತಿದ್ದಾಳೆ. ಇದರಿಂದ ಅನೇಕ ವಿದ್ಯಾರ್ಥಿಗಳು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಇದರಿಂದ ಸುಮಾಗೆ ಸ್ವಲ್ಪ ಇರಿಸುಮುರಿಸು ಆಗಿದೆ. ಅದ್ಯಾಕೋ ಸಹನಾ ಮುರಳಿ ಸರ್‌ನ್ನು ಬಹುವಾಗಿ ಕಾಡುತ್ತಿದ್ದಾಳೆ. ಆದರೆ ಇದೀಗ ದಿಢೀರ್ ಸಹನಾಗೆ ಗಂಡು ನೋಡಲು ಬಂದಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾಳೆ.

ಪುಟ್ಟಕ್ಕ, ಸ್ನೇಹಾಳ ಬಳಿ ನಿಮ್ಮ ಅಕ್ಕನಿಗೆ ಒಂದು ಪ್ರಪೋಸಲ್ ಬಂದಿದೆ. ಹುಡುಗ ಬಹಳ ಚೆನ್ನಾಗಿದ್ದಾನೆ, ಒಳ್ಳೆಯ ಮನೆತನದವನು, ಒಳ್ಳೆ ಗುಣ ಇದೆ. ಸರ್ಕಾರಿ ಉದ್ಯೋಗದವನು ಆಗಿದ್ದಾನೆ, ಬಹಳ ಒಳ್ಳೆಯ ಸಂಬಂಧ ಎಂದೆಲ್ಲ ಹೇಳುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡ ಸಹನಾಗೆ ಏನು ಮಾಡಬೇಕು ತಿಳಿಯುತ್ತಿಲ್ಲ. ನನಗೆ ಆ ಸಂಬಂಧ ಬೇಡ ಎಂದು ಹೇಳಲು ಸರಿಯಾದ ಕಾರಣ ಕೂಡ ಇಲ್ಲ. ಅದೇಕೋ ಸಹನಾ ಮನಸ್ಸು ಬಹಳ ಬೇಸರಗೊಂಡಿತು. ಈ ವೇಳೆ ಸ್ನೇಹಾ ಗಂಡಿನ ಪೋಟೋ ನೋಡುತ್ತಾಳೆ ಬಹಳ ಚೆನ್ನಾಗಿದ್ದಾನೆ ಎಂದೆಲ್ಲ ಹೇಳುತ್ತಾಳೆ.

ಪುಟ್ಟಕ್ಕನ ಬಳಿ ಹೇಳಿಕೊಳ್ಳುತ್ತಿಲ್ಲವೇಕೆ?

ಪುಟ್ಟಕ್ಕನ ಬಳಿ ಹೇಳಿಕೊಳ್ಳುತ್ತಿಲ್ಲವೇಕೆ?

ಆ ಪೋಟೋವನ್ನು ಸುಮಾ ಸಹನೋಡುತ್ತಾಳೆ, ಆದರೆ ಅಕ್ಕನ ಸಪ್ಪೆ ಮುಖ ನೋಡಿದ ತಂಗಿ ಸುಮಾಗೆ ಎಲ್ಲಾ ಅರ್ಥವಾಗುತ್ತದೆ. ಯಾಕೆ ಅಕ್ಕ ಅಮ್ಮನ ಬಳಿ ತನ್ನ ಪ್ರೀತಿ ವಿಚಾರ ಹೇಳುತ್ತಿಲ್ಲ, ಎಲ್ಲ ಹೇಳಿಕೊಂಡು ಬಿಟ್ಟರೆ ಒಳ್ಳೆಯದಿತ್ತು ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ ಬಳಿಕ ಸಹನಾಳಿಗೆ ಫೋಟೋ ತೋರಿಸುತ್ತಾ ಅಕ್ಕ ನೀನು ಗಂಡಿನ ಫೋಟೋ ನೋಡಿದ್ದಿಯಾ ಎಂದು ಹೇಳಿ ಗಂಡಿನ ಪೋಟೋವನ್ನು ಸುಮಾ ಕೈಗೆ ನೀಡುತ್ತಾಳೆ ಅದನ್ನು ನೋಡಿದ ಸಹನಾಳಿಗೆ ಏನು ಹೇಳಬೇಕು ಗೊತ್ತಾಗುವುದಿಲ್ಲ.

ಗಂಡಿನವರ ಕಂಡಿಷನ್ ಕಂಡು ಸ್ನೇಹಾ ಕೆಂಡಾಮಂಡಲ

ಗಂಡಿನವರ ಕಂಡಿಷನ್ ಕಂಡು ಸ್ನೇಹಾ ಕೆಂಡಾಮಂಡಲ

ಬಳಿಕ ಅದನ್ನು ನೋಡಿದ ಸುಮಾ, ಅಕ್ಕ ಗಂಡು ಇಷ್ಟ ಆಯ್ತಾ ಎಂದು ಕೇಳುತ್ತಾಳೆ ಸಹನಾ ಸುಮ್ಮನಾಗುತ್ತಾಳೆ ಈ ವೇಳೆ ಪುಟ್ಟಕ್ಕ ಯಾಕೆ ಇಷ್ಟವಾಗುವುದಿಲ್ಲ, ಇಷ್ಟ ಆಗಲ್ಲ ಎಂದು ಹೇಳಲು ಏನು ಕಾರಣ ಇಲ್ಲ. ಇಷ್ಟ ಆಗಲೇ ಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಸಹನಾಗೆ ಏನು ಹೇಳಬೇಕೋ ತಿಳಿಯುವುದಿಲ್ಲ ಬಳಿಕ ಹೇಳುತ್ತಾಳೆ. ಅವ್ವ ನಿಮಗೆ ಒಪ್ಪಿಗೆ ಆದರೆ ನನಗೂ ಒಪ್ಪಿಗೆ ಆದ ಹಾಗೆಯೇ ಎಂದು ಹೇಳುತ್ತಾಳೆ ಇದನ್ನು ಕೇಳಿದ ಸುಮಾಳಿಗೆ ಶಾಕ್ ಆಗುತ್ತದೆ ಆದರೆ ಪುಟ್ಟಕ್ಕ ಹಾಗೂ ಸ್ನೇಹಾನಿಗೆ ಖುಷಿಯಾಗುತ್ತದೆ. ಪುಟ್ಟಕ್ಕ ಮನದಲ್ಲಿ ಇದೀಗ ಒಂದೇ ಒಂದು ಪ್ರಶ್ನೆ ತನ್ನ ಗಂಡ ಮಗಳ ಸಂಬಂಧ ಕುದುರಿಸಲು ಬರುತ್ತಾನಾ? ಇದಕ್ಕೆಲ್ಲ ರಾಜೇಶ್ವರಿ ಒಪ್ಪಿಗೆ ಕೊಡುತ್ತಾಳ?

ತಂದೆಯ ಬಳಿಗೆ ಹೋಗುತ್ತಾಳ ಸ್ನೇಹಾ?

ತಂದೆಯ ಬಳಿಗೆ ಹೋಗುತ್ತಾಳ ಸ್ನೇಹಾ?

ಇದನ್ನು ಈಗಾಗಲೇ ಮಂಜಮ್ಮ, ರಾಜೇಶ್ವರಿ ಕಿವಿಗೆ ಊದಿದ್ದಾಳೆ ಕೂಡ ಆದರೆ ಪುಟ್ಟಕ್ಕ ಇನ್ನೂ ಇದನ್ನು ಯಾರ ಬಳಿಯೂ ಹೇಳಿಲ್ಲ ಆದರೆ ಇದೀಗ ಸ್ನೇಹಾ ಬಳಿ ಹೇಳುತ್ತಾಳೆ, ಸಂಬಂಧ ಮಾತನಾಡಲು ಬರುವಾಗ ನಿಮ್ಮ ಅಪ್ಪಯ್ಯನು ಇರಬೇಕಂತೆ ಹಾಗಂತ ಗಂಡಿನ ಕಡೆಯವರು ಹೇಳಿದ್ದಾರಂತೆ ಆಚಾರ್ಯರು ಹೇಳಿದರು ಎಂದು ಹೇಳುವಾಗ ಸ್ನೇಹಾಳ ಕೋಪ ಮಿತಿಮೀರುತ್ತದೆ. ಇನ್ನೂ ಇದಕ್ಕೆಲ್ಲ ಸ್ನೇಹಾ ಒಪ್ಪಿಕೊಳ್ಳುತ್ತಾಳ, ತನ್ನ ಅಕ್ಕನಿಗಾಗಿ ಅಪ್ಪನನ್ನು ಬರ ಹೇಳುತ್ತಾಳಾ ಸ್ನೇಹಾ ಎಂಬುವುದನ್ನು ಕಾದು ನೋಡಬೇಕಿದೆ,. ಇನ್ನೂ ಇತ್ತ ಕಂಠಿ ವಿರುದ್ಧ ವಸು ಕೋಪದಲ್ಲಿ ಕೆಂಡಾಮಂಡಲವಾಗಿದ್ದಾಳೆ.

ತಂಗಿ ವರ್ತನೆಗೆ ಕಂಠಿ ಬೇಸರ

ತಂಗಿ ವರ್ತನೆಗೆ ಕಂಠಿ ಬೇಸರ

ಕಂಠಿ ತಾನು ಮಾತನಾಡಿದರೆ ವಸು ಲೈಫ್ ಹಾಳಾಗುತ್ತದೆ ಎಂದು ಭಾವಿಸಿ ಅವನು ಆ ಸಂದರ್ಭ ಮಾತನಾಡದೇ ಕುಳಿತಿದ್ದ ಆದರೆ ಈಗ ವಸು ಅಣ್ಣಯ್ಯನನ್ನು ಸ್ವಲ್ಪವೂ ಅರ್ಥ ಮಾಡಿಕೊಳ್ಳದೇ ಚೆನ್ನಾಗಿ ಬಯ್ಯುತ್ತಾಳೆ. ಇದಕ್ಕೆ ಬೇಸರಗೊಂಡ ಕಂಠಿ ಮುಂದೇನು ಮಾಡುತ್ತಾರೆ ಎಂಬುವುದನ್ನು ಕಾದುನೋಡಬೇಕಿದೆ. ಇತ್ತ ಸ್ನೇಹ ಜೈಲಲ್ಲಿರುವುದು ಕಂಠಿಯೋ ಅಥವಾ ಬೇರೆಯವನೋ ಎಂಬುವುದನ್ನು ಖಾತ್ರಿ ಪಡಿಸಿಕೊಳ್ಳಲು ಸ್ನೇಹಾ ಜೈಲಿನತ್ತ ತೆರಳುತ್ತಿದ್ದಾಳೆ. ಇನ್ನೇನು ಕಂಠಿ ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.

English summary
Zee kannada serial Puttakkana Makkalu written update on 13th June. Hear is more details about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X