Puttakkana Makkalu: ಕುಸ್ತಿ ಪಂದ್ಯವಾಡಲು ಹೊರಟ ಕಂಠಿ, ತಿಲಕವಿಟ್ಟು ಹರಸಿ ಕಳಿಸಿದ ಪುಟ್ಟಕ್ಕ

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇದೀಗ ಕಂಠಿ ಪುಟ್ಟಕ್ಕನ ಮೆಸ್ ಬಳಿ ಬಂದಿದ್ದಾನೆ. ಮೊದಲೆಲ್ಲ ಕಂಠಿ ನಾನು ಮೆಸ್‌ನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದ ಕಂಠಿಗೆ ಬುದ್ದಿ ಮಾತು ಹೇಳುತ್ತ ಇದ್ದರು. ಕಂಠಿ ಮಾತಿಗೆ ಯಾವತ್ತೂ ಪುಟ್ಟಕ್ಕ ಬೇಡ ಎಂದೆಲ್ಲ ಹೇಳುತ್ತಿದ್ದರು.

ಯಾಕೆಂದರೆ ಅಳಿಯ ಬಂದು ಮೆಸ್‌ನಲ್ಲಿ ಕೆಲಸ ಮಾಡಿದರೆ ಇಡೀ ಊರಿನ ಜನ ಏನು ಹೇಳಬಹುದು ಎಂದೆಲ್ಲ ಅಂದುಕೊಂಡು ಬಹಳ ಕೊರಗುತ್ತಾ ಇದ್ದರು. ಇನ್ನೂ ಪುಟ್ಟಕ್ಕ ಕೊಟ್ಟ ಲಂಚದ ಹಣವನ್ನೂ ಮುರಳಿ ಕಾಲೇಜಿಗೆ ಲೆಕ್ಚರ್ ಆಗಿ ಹೋಗಲು ಲಂಚ ಕೇಳಿದ್ದರ ಸಲುವಾಗಿ 10 ಲಕ್ಷ ಹಣವನ್ನು ಕೌಸಲ್ಯ ಕೊಟ್ಟಿದ್ದಾಳೆ. ಆದರೆ ಈ ವಿಚಾರ ಮುರಳಿಗೆ ತಿಳಿದಿಲ್ಲ.

zee-kannada-serial-puttakkana-makkalu

ಆದರೆ ಸಹನಾಗೆ ಕೌಸಲ್ಯ ಹಾಗೂ ಆಕೆಯ ಗಂಡ ಮಾತನಾಡುವುದು ಕೇಳಿಸಿದೆ. ಇದನ್ನು ಕೇಳಿದ ಸಹನಾ ನನ್ನ ತಂಗಿಯ ಫೀಸ್ ಹಣವನ್ನು ಅದರಲ್ಲೇ ಕಟ್ಟಿದರೆ ಹೇಗೆ ಎಂದು ಯೋಚನೆ ಮಾಡುತ್ತಾ ನೆಲ ಒರೆಸುವ ಹಾಗೆ ನಾಟಕ ಮಾಡಿಕೊಂಡು ಕೌಸಲ್ಯ ರೂಮ್‌ಗೆ ಹೋಗಿ ಹಣ ಕದಿಯುತ್ತಾಳೆ.

ಕುಸ್ತಿ ಆಡಲು ಹೊರಟ ಕಂಠಿಗೆ ತಿಳಿ ಹೇಳಿದ ಪುಟ್ಟಕ್ಕ

ಕಂಠಿ ಪುಟ್ಟಕ್ಕನ ಬಳಿ ಹೇಳುತ್ತಾನೆ. ಅಲ್ಲ ಅತ್ತೆಯವ್ವ ನಾನು ಮೆಸ್‌ನಲ್ಲಿ ಕೆಲಸ ಮಾಡಲು ಬಂದಿಲ್ಲ. ಈ ಬಾರಿ ದಸರಾ ಹಬ್ಬವನ್ನು ಬಹಳ ಜೋರಾಗಿ ಮಾಡುತ್ತಾರೆ. ಆ ಕಾರಣದಿಂದ ದಸರಾ ಹಬ್ಬದ ಸಲುವಾಗಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿದ್ದಾರೆ. ಗೆದ್ದವರಿಗೆ 10 ಲಕ್ಷ ಕೊಡುತ್ತಾರೆ ಎಂದಾಗ ಪುಟ್ಟಕ್ಕ, ಹೌದು ಗೌಡ ನಾನು ಕೇಳಿದ್ದೇನೆ. ಬಹಳ ಅದ್ದೂರಿಯಾಗಿ ನಡೆಯುತ್ತೆ ಎಂದು ಸ್ನೇಹಾನ ಕರೆದುಕೊಂಡು ಹೋಗಿ ಅಳಿಯಂದಿರೆ ಎಂದು ಹೇಳುತ್ತಾಳೆ.

zee-kannada-serial-puttakkana-makkalu

ದುಡ್ಡಿಗಾಗಿ ಕುಸ್ತಿಯಾಡಲು ಹೊರಟ ಕಂಠಿ

ಪುಟ್ಟಕ್ಕನ ಮಾತು ಕೇಳಿದ ಕಂಠಿ, ನಾನು ಕುಸ್ತಿ ಆಡಲು ಹೋಗುತ್ತಾ ಇರುವುದು ಎಂದಾಗ ಪುಟ್ಟಕ್ಕ ಕಂಠಿಗೆ ಬುದ್ದಿ ಮಾತು ಹೇಳುತ್ತಾರೆ. ನೀನು ಪಂದ್ಯ ಆಡಲು ಹೋಗುವುದಾದರೆ ಸರಿ ಅದು ಬಿಟ್ಟು ಹಣ ಗೆಲ್ಲಲು ಈ ಪಂದ್ಯ ಆಟ ಆಡುವುದು ಸರಿ ಅಲ್ಲ. ಪಂದ್ಯದಲ್ಲಿ ಎಲ್ಲಾದರೂ ನೀನು ಸೋತು ಹೋದರೆ ಅದರ ಬಗ್ಗೆಯೇ ಯೋಚನೆ ಮಾಡುವುದು ಕೂಡ ತಪ್ಪಾಗುತ್ತದೆ ಎಂದೆಲ್ಲ ಹೇಳುತ್ತಾರೆ. ಇದನ್ನು ಎಲ್ಲಾ ಕೇಳಿದ ಕಂಠಿ ಸರಿ ಅತ್ತೆಯಮ್ಮ ಹಾಗೆಯೇ ಆಗಲಿ ಎಂದು ಹೇಳುತ್ತಾನೆ.

ಕಂಠಿಯ ಹಣೆಗೆ ತಿಲಕ ಇಟ್ಟ ಪುಟ್ಟಕ್ಕ

ಇದನ್ನು ಕೇಳಿದ ಪುಟ್ಟಕ್ಕ ಪುರುಷೋತ್ತಮ ಬಳಿ ಹೇಳುತ್ತಾರೆ ಸ್ವಲ್ಪ ಹೋಟೆಲ್ ಕಡೆ ನೋಡಿಕೋ ನಾನು ಈಗ ಬಂದೆ ಎಂದು ಹೇಳಿ ಕಂಠಿಯನ್ನು ಕರೆದುಕೊಂಡು ಹೋಗುತ್ತಾಳೆ. ದೇವರ ಬಳಿ ಪ್ರಾರ್ಥನೆ ಮಾಡಿ ಕಂಠಿಯ ಹಣೆಗೆ ತಿಲಕ ಇಡುತ್ತಾಳೆ. ಇದರಿಂದ ಕಂಠಿಗೆ ಆನೆ ಬಾಲ ಬಂದ ಹಾಗಾಗಿದೆ.

More from Filmibeat

English summary
Puttakkana Makkalu serial 18th October update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X