Puttakkana Makkalu : ಪುಟ್ಟಕ್ಕನ ಮಾತು ಕೇಳಿ ಕುಸ್ತಿ ಅಖಾಡಕ್ಕೆ ಇಳಿದ ಕಂಠಿಗೆ ಸಿಗುತ್ತಾ ತಾಯಿ ಮತ್ತು ಹೆಂಡತಿಯ ಪ್ರೋತ್ಸಾಹ?

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ- ಬಂಗಾರಮ್ಮನ ಆಸೆಗೆ ವಿರುದ್ಧವಾಗಿ ಕಂಠಿ ಕುಸ್ತಿ ಅಖಾಡಕ್ಕೆ ಇಳಿದಿದ್ದಾನೆ. ಈತನ ವಿರುದ್ಧವಾಗಿ ಮಾರ ಕುಸ್ತಿಯಲ್ಲಿ ಭಾಗವಹಿಸಲಿದ್ದಾನೆ . ಆದರೆ ಕಂಠಿಗೆ ಮನೆಯಲ್ಲಿ ಯಾರ ಸಪೋರ್ಟ್ ಇರೋದಿಲ್ಲ. ಹೆಂಡತಿ ಹಾಗೂ ತಾಯಿ ಇಬ್ಬರು ಕೂಡ ಕುಸ್ತಿ ಆಟ ಆಡೋದೇ ಬೇಡ ಎಂದು ಹಠ ಹಿಡಿದಿದ್ದಾರೆ.

ಆದರೆ ಪುಟ್ಟಕ್ಕ ಮಾತ್ರ ಕಂಠಿಗೆ ಧೈರ್ಯ ಹೇಳಿದ್ದಾರೆ . ನೀನು ಈ ಕುಸ್ತಿ ಆಟದಲ್ಲಿ ಆಡಲೇಬೇಕು ಹಾಗೆಯೇ ನೀನು ಕೊಟ್ಟಂತಹ ಮಾತನ್ನ ನಡೆಸಿಕೊಡಬೇಕು. ಈ ಕುಸ್ತಿ ಆಟದಲ್ಲಿ ನೀನು ಗೆದ್ದೇ ಗೆಲ್ಲುತ್ತಿಯ ಎಂದೆಲ್ಲಾ ಪ್ರೋತ್ಸಾಹದ ಮಾತುಗಳನ್ನ ಹೇಳಿ ಕಂಠಿಗೆ ಹುರಿದುಂಬಿಸುತ್ತಾಳೆ. ಆದರೆ ಕಂಠಿ ಮಾತ್ರ ತನ್ನ ತಾಯಿ ಹಾಗೂ ಹೆಂಡತಿ ಇಬ್ಬರೂ ಕೂಡ ನನ್ನನ್ನು ಪ್ರೋತ್ಸಾಹಿಸುತ್ತಿಲ್ಲ ಎನ್ನುವ ಬೇಸರ ಕಾಡುತ್ತಿದೆ.

Zee Kannada serial Puttakkana Makkalu written Update on 20th November

ಏನು ಮಾಡುವುದು ಎಂದೆಲ್ಲ ಯೋಚನೆ ಮಾಡಿದಾಗ ತನ್ನ ಅತ್ತೆ ಹೇಳುತ್ತಿರುವುದು ಸತ್ಯ. ನಾನು ಕುಸ್ತಿ ಅಖಾಡಕ್ಕೆ ಇಳಿಯಬೇಕು ಹಾಗೆಯೇ ನಾನು ಉಸ್ತಾದ್‌ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದೆಲ್ಲ ಯೋಚನೆ ಮಾಡುತ್ತಾನೆ. ಕಂಠಿ ಈ ಮೊದಲು ಮಾರನಿಗೆ ಸಾಕಷ್ಟು ಬಾರಿ ಧರ್ಮದೇಟು ಕೊಟ್ಟಿದ್ದಾನೆ. ಆದರೆ ಕಂಠಿಗೆ ಮಾರ ಕುಸ್ತಿ ಪಂದ್ಯಾಟದಲ್ಲಿ ಎದುರಾಳಿಯಾಗಿ ಸಿಗುತ್ತಾನೆ. ಆದರೆ ಈ ಬಗ್ಗೆ ಕಂಠಿಗೆ ಅಂದಾಜು ಇರುವುದಿಲ್ಲ. ಮಾರ ಕುಸ್ತಿ ಆಟದಲ್ಲಿ ಮೇಲುಗೈ ಹೊಂದಿರುತ್ತಾನೆ. ಆದರೆ ಇದೀಗ ಕಂಠಿಯನ್ನು ಕುಸ್ತಿ ಅಖಾಡದಲ್ಲಿ ನೋಡಿ ಹಳೆ ದ್ವೇಷವನ್ನು ತೀರಿಸಿಕೊಳ್ಳಲು ಇದೆ ಸರಿಯಾದ ಸಂದರ್ಭ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ ಮಾರ.

ಬಂಗಾರಮ್ಮ ಸ್ನೇಹಾಗೆ ಬುದ್ದಿ ಹೇಳಿದ ಪುಟ್ಟಕ್ಕ

ಇನ್ನು ಪುಟ್ಟಕ್ಕ ಬಂಗಾರಮ್ಮನ ಮನೆಗೆ ಹೋಗುತ್ತಾಳೆ . ನನ್ನ ತಾಯಿಯನ್ನು ನೋಡಿದ ಸ್ನೇಹ ಬಹಳ ಖುಷಿ ಪಡುತ್ತಾಳೆ ಹಾಗೆ ಬಂಗಾರಮ್ಮ ತನ್ನ ಗೆಳತಿಯನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಇನ್ನು ಪುಟ್ಟಕ್ಕ ತನ್ನ ಅಳಿಯ ಮಾಡುತ್ತಿರುವ ಕೆಲಸವನ್ನು ಬಂಗಾರಮ್ಮ ಹಾಗೂ ಸ್ನೇಹಾಗೆ ತಿಳಿ ಹೇಳುತ್ತಿದ್ದಾರೆ. ಯಾಕೆಂದರೆ ಸ್ನೇಹಾ ಈಗಾಗಲೇ ಸಾಕಷ್ಟು ಬಾರಿ ನೀನು ಈ ಕುಸ್ತಿ ಪಂದ್ಯವನ್ನು ಹಣಕ್ಕಾಗಿ ಆಡಬಾರದು. ಹಾಗೆ ನನಗೆ ಕುಸ್ತಿ ಪಂದ್ಯದ ಮೇಲೆ ಬಹಳ ಅಭಿಮಾನವಿದೆ ಎಂದು ಹೇಳುತ್ತಿರುತ್ತಾಳೆ.

Zee Kannada serial Puttakkana Makkalu written Update on 20th November

ಈ ವಿಚಾರವನ್ನು ಹಾಗೆ ಬಂಗಾರಮ್ಮನ ಬಳಿ ಕೂಡ ಹೇಳುತ್ತಾಳೆ ಸ್ನೇಹಾ. ತನ್ನ ತಾಯಿಯ ಒಪ್ಪಿಗೆ ಕೂಡ ಕಂಠಿಗೆ ಸಿಗುವುದಿಲ್ಲ.. ಇನ್ನು ಪುಟ್ಟಕ್ಕ ಬಂಗಾರಮ್ಮ ಹಾಗೂ ಸ್ನೇಹಾಗೆ ತಿಳಿ ಹೇಳುತ್ತಾರೆ .ಕುಸ್ತಿ ಪಂದ್ಯವನ್ನ ಆಡಲೇಬೇಕೆನ್ನುವುದು ಅವರ ಆಸೆ ಅದನ್ನ ನೀವು ಇಬ್ಬರು ನೆರವೇರಿಸಿಕೊಡಬೇಕು. ಯಾಕೆಂದರೆ ಆತನಿಗೆ ನೀವು ಇಬ್ಬರು ಕೊಡುವ ಪ್ರೋತ್ಸಾಹ ಬಹಳ ಇಂಪಾರ್ಟೆಂಟ್ ಆದ ಕಾರಣ ನೀವಿಬ್ಬರೂ ಕೂಡ ಕುಸ್ತಿ ಆಟದ ಬಳಿ ಇದ್ದರೆ ಅಳಿಯಂದಿರಿಗೆ ಬಲ ಇದ್ದ ಹಾಗೆ ಎಂದು ಹೇಳುತ್ತಾಳೆ.

ಪುಟ್ಟಕ್ಕನ ಪ್ರಯತ್ನಕ್ಕೆ ಬೆಂಬಲ ಸಿಗುತ್ತಾ?

ನೀವು ಇಬ್ಬರು ಪ್ರೋತ್ಸಾಹ ಕೊಟ್ಟರೆ ಕಂಠಿಗೆ ಖುಷಿ ಆಗುತ್ತದೆ. ಆತ ಈ ಕುಸ್ತಿ ಪಂದ್ಯವನ್ನು ಆಡೆ ಆಡುತ್ತಾನೆ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಹಾಗೂ ಸ್ನೇಹಾ ಯೋಚನೆ ಮಾಡುತ್ತಾ ಇರುತ್ತಾರೆ. ಇತ್ತ ಮಾರ- ಕಂಠಿ ಕುಸ್ತಿ ಆಟ ನಡೆಯುತ್ತಾ ಇರುತ್ತದೆ. ಇವರಿಬ್ಬರೂ ಬಲಶಾಲಿಗಳು. ಒಬ್ಬರಿಗೊಬ್ಬರು ಬಿಟ್ಟುಕೊಡುವುದಿಲ್ಲ. ಆದರೆ ಇದೀಗ ಕಂಠಿಯನ್ನು ಹೇಗಾದರೂ ಮನಿಸಲೇ ಬೇಕೆಂದು ಪಣ ತೊಟ್ಟಿದಾನೆ ಮಾರ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Puttakkana Makkalu serial 20th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X