Puttakkana Makkalu: ಕುಸ್ತಿ ಆಡಲು ಹೊರಟ ಕಂಠಿಗೆ ವಿಘ್ನ, ಎಲ್ಲಾ ಕಷ್ಟಗಳನ್ನು ಮೀರಿ ಕುಸ್ತಿಯಾಡ್ತಾನಾ ಕಂಠಿ..?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಕಂಠಿಗೆ ಕುಸ್ತಿಯಾಡಲು ನಾನಾ ವಿಘ್ನಗಳು ಎದುರಾಗುತ್ತಿದೆ ಎಂದರೆ ತಪ್ಪಾಗದು. ಹೌದು ಕಂಠಿ ಕುಸ್ತಿ ಆಡುತ್ತೇನೆ ಎಂದು ಮೊದಲು ಹೇಳಿದ್ದು ಪುಟ್ಟಕ್ಕಗೆ.
ಆದರೆ, ಪುಟ್ಟಕ್ಕಗೆ ಅಳಿಯಂದಿರಿಗೆ ಏನಾದರು ಆದರೆ ಎನ್ನುವ ಭಯ ಅದಕ್ಕಾಗಿ ಪುಟ್ಟಕ್ಕ ಮೊದಲೇ ಹೇಳಿರುತ್ತಾರೆ. ಹಣದ ಮೋಹಕ್ಕೆ ನೀವು ಈ ಕುಸ್ತಿ ಪಂದ್ಯ ಆಡುವುದಾದರೆ ಈ ಪಂದ್ಯ ಆಡಲೇಬೇಡಿ ಎಂದು ಹೇಳಿ ತನ್ನ ಅಳಿಯನಿಗೆ ತಿಲಕ ಇಟ್ಟು ಶುಭ ಹಾರೈಸುತ್ತಾರೆ. ಇನ್ನೂ ಕಂಠಿ ಕುಸ್ತಿ ಆಡುತ್ತಾ ಇರುವುದು ಸ್ನೇಹಾಗೆ ಹಾಗೂ ಬಂಗಾರಮ್ಮಗೆ ತಿಳಿದೇ ಇಲ್ಲ.

ತನ್ನ ಮಗ ಇದರೆಲ್ಲೆಲ್ಲ ಭಾಗವಹಿಸುತ್ತಾನೆ ಎಂದು ತಿಳಿದರೆ ಬಂಗಾರಮ್ಮಗೆ ಬಹಳ ದುಃಖ ಆಗುತ್ತದೆ. ಆದರೂ ಕಂಠಿ ಕುಸ್ತಿ ಆಡಬೇಕು ಎಂದು ಹೇಳಿ ಹೆಸರು ನೋಂದಾಯಿಸಲು ಹೋಗುತ್ತಾನೆ. ಅಲ್ಲಿ ಹೋದರೆ ಘಟಾನುಘಟಿಗಳು ನಿಂತಿರುತ್ತಾರೆ.
ಕುಸ್ತಿಯಾಡಲು ಹೆಸರು ನೋಂದಾಯಿಸಲು ತೆರಳಿದ ಕಂಠಿ
ಕುಸ್ತಿಯಾಡುವವರನ್ನು ನೋಡಿದ ಕಂಠಿಗೆ ಹೇಗಾದರೂ ಈ ಕುಸ್ತಿಯಲ್ಲಿ ಭಾಗಿಯಾಗಿ ಹತ್ತು ಲಕ್ಷ ತನ್ನದಾಗಿಸಿಕೊಳ್ಳುವ ತವಕದಲ್ಲಿ ಇರುತ್ತಾನೆ. ಇನ್ನೂ ಕಂಠಿ ಹಾಗೂ ಆತನ ಗೆಳೆಯರು ಹೆಸರು ನೋಂದಾಯಿಸುವಲ್ಲಿಗೆ ಬರುತ್ತಾರೆ. ಕಂಠಿಯನ್ನು ನೋಡಿದ ಮುಂಗುಸಿ ಮಾತ್ರ ಕಂಠಿ ಪರವಾಗಿ ಮಾತನಾಡುತ್ತಾ ಇರುತ್ತಾನೆ.
ಕಂಠಿ ಕೊರಳಿಗೆ ಹಾರ ಹಾಕಿ ಖುಷಿಪಟ್ಟ ಸ್ನೇಹಿತರು
ಮತ್ತೊಬ್ಬ ಗೆಳೆಯ ಕಂಠಿ ಕೊರಳಿಗೆ ಹಾರ ಹಾಕಿ ಖುಷಿಪಡುತ್ತಾರೆ. ಇನ್ನೂ ಕುಸ್ತಿ ಆಟಕ್ಕೆ ಹೆಸರು ಕೊಡಬೇಕು ಎಂದು ಹೇಳಿದಾಗ ಹೆಸರು ನೊಂದಾಯಿಸಿಕೊಳ್ಳುವವರು ಕಂಠಿಯ ಹೆಸರು, ಊರು ಹಾಗೂ ತಾವು ಯಾರ ಗರಡಿಯಲ್ಲಿ ಫಳಗಿರುವುದು ಎಂದೆಲ್ಲ ಕೇಳುತ್ತಾನೆ.

ಕಂಠಿಗೆ ಎದುರಾಗಿದೆ ಬಹುದೊಡ್ಡ ಸಂಕಷ್ಟ
ಇದನ್ನು ಕೇಳಿದ ಕಂಠಿ ಮಾತ್ರ ಗರಡಿಯಲ್ಲಿ ಇಲ್ಲ ಎಂದಾಗ ಹೆಸರು ನೋಂದಾಯಿಸಿಕೊಳ್ಳುವಾತ ಹೇಳುತ್ತಾನೆ. ಕುಸ್ತಿ ಆಡಲು ಯಾವ ಗರಡಿ ಎನ್ನುವುದು ಬೇಕು ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ. ಕುಸ್ತಿ ಎಂದರೆ ಸುಮ್ಮನೆ ಅಲ್ಲ. ಅದರಲ್ಲಿ ಸಾಯಲು ಬಹುದು.ಸುಮ್ಮನೆ ನೀವು ಯಾವುದನ್ನು ಸುಲಭವಾಗಿ ತೆಗೆದುಕೊಳ್ಳಬೇಡಿ.. ಅಷ್ಟಕ್ಕೂ ನೀವು ಯಾರ ಗರಡಿಯಲ್ಲಿ ಫಳಗಿದ್ದಿರಿ ಎಂದು ಕೇಳುತ್ತಾನೆ.
ಅಧಿಕಾರಿ ಮಾತಿಗೆ ಸಿದ್ದೇಶ್ ಹೇಳುತ್ತಾನೆ ನಮ್ಮ ಅಣ್ಣ ಅವರೇ ನೋಡಿ ಕುಸ್ತಿ ಕಲಿತಿರುವುದು ಎಂದು ಹೇಳಿದಾಗ ಆತ ಹೇಳುತ್ತಾನೆ. ಹಾಗೆಲ್ಲ ಹೆಸರು ನೋಂದಾಯಿಸಲು ಆಗುವುದಿಲ್ಲ ಎಂದು ಹೇಳಿದಾಗ ಕಂಠಿಗೆ ಏನು ಮಾಡಬೇಕು ಎಂದು ತಿಳಿಯದಂತೆ ಆಗಿದೆ.
ಸಹನಾ ಕೈಯಲ್ಲಿ ಹಣ ನೋಡಿ ಸುಮಾ ಶಾಕ್
ಇತ್ತ, ಸಹನಾ ತನ್ನ ತಂಗಿಯ ಫೀಸ್ ಕಟ್ಟಲು ಓಡೋಡಿ ಬಂದರೆ. ಅದಾಗಲೇ ಫೀಸ್ ಕಟ್ಟಿ ಆಗಿರುತ್ತದೆ.. ಇನ್ನೂ ಸಹನಾ ಕೈಯಲ್ಲಿ ಹಣ ಇರುವುದನ್ನು ನೋಡಿ ಸುಮಾ ಶಾಕ್ ಆಗಿದ್ದಾಳೆ.


Click it and Unblock the Notifications











