Puttakkana Makkalu: ರಾಧ, ಆಕೆಯ ತಾಯಿಯ ಪತ್ತೆಗೆ ಮುಂದಾದ ಬಂಗಾರಮ್ಮ, ಕಂಠಿ ಹೆಗಲಿಗೆ ಜವಾಬ್ದಾರಿ!
ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹಾಗೆ ಕನಸಲ್ಲಿ ರಾಜಿ ಹಾಗೂ ಆಕೆಯ ತಂದೆ ಕಾಣಿಸಿಕೊಂಡು ನೀನು ಕಲೆಕ್ಟರ್ ಆಗಬೇಕು ಎಂದೆಲ್ಲಾ ಹೇಳುತ್ತಿದ್ದೆ. ಆದರೆ ಇದೀಗ ನೀನು ಮಾಡುತ್ತಿರುವ ಕೆಲಸ ಏನು ನೀನು ಬಂಗಾರಮ್ಮನವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೀಯಾ ನೀನು ಯಾವತ್ತೂ ಕಲೆಕ್ಟರ್ ಆಗುವುದಿಲ್ಲ ಎಂದು ರಾಜಿ ಹೀಯಾಳಿಸಿ ಮಾತನಾಡುತ್ತಾಳೆ.
ಆದರೆ ಸ್ನೇಹಾಗೆ ಬಹಳ ಕಿರಿಕಿರಿ ಉಂಟಾಗುತ್ತದೆ ಹಾಗೆ ಜೋರಾಗಿ ಕಿರುಚಿದಾಗ ಅಲ್ಲಿ ರಾಜಿ ಹಾಗೂ ಗೋಪಾಲ ಇರುವುದಿಲ್ಲ. ಬಳಿಕ ಇನಾನು ತಹಶೀಲ್ದಾರ್ ಆಗಲೇಬೇಕು ನನ್ನ ತಾಯಿಯ ಕನಸನ್ನ ನನ್ನ ಗುರಿಯನ್ನು ನಾನು ಸಾಧಿಸಬೇಕು ಎಂದು ಯೋಚನೆ ಮಾಡುತ್ತಾಳೆ. ಇತ್ತ, ಬಂಗಾರಮ್ಮ ರಾಧಾ ಹಾಗೂ ರಾಧಾಳ ತಾಯಿಯನ್ನು ಹುಡುಕುತ್ತಿರುತ್ತಾರೆ.

ಅದಕ್ಕಾಗಿ ರೌಡಿಗಳನ್ನು ಕೂಡ ಕರೆಸಿಕೊಂಡಿರುತ್ತಾರೆ. ಅವರಿಬ್ಬರನ್ನ ಹುಡುಕಿ ತರಬೇಕು ಎಲ್ಲಿದ್ದರೂ ಸರಿ ನೀವು ಒಬ್ಬೊಬ್ಬರು ಒಂದೊಂದು ಭಾಗದಲ್ಲಿ ಅವರಿಬ್ಬರನ್ನ ಹುಡುಕಬೇಕು ಎಂದು ಹೇಳುತ್ತಿರುತ್ತಾಳೆ. ಇದನ್ನು ಕೇಳಿದ ಆ ರೌಡಿಗಳು ಆಯಿತು ಎಂದೆಲ್ಲ ಹೇಳುತ್ತಾರೆ. ಬಳಿಕ ಅವರಿಬ್ಬರಿಗೂ ಫೋಟೋವನ್ನು ಕೊಟ್ಟು ಇವರೇ ರಾಧ ಹಾಗೂ ಅವಳ ತಾಯಿ ಇವರಿಬ್ಬರನ್ನ ಹುಡುಕಿ ಕೊಡಬೇಕು ಎಂದು ಆದೇಶಿಸುತ್ತಾಳೆ.
ರೌಡಿಗಳಿಗೆ ನೋಟಿನ ಕಂತೆ ಕೊಟ್ಟ ಬಂಗಾರಮ್ಮ
ಅಮ್ಮನ ಮಾತಿಗೆ ಅಸ್ತು ಎಂದ ಕಂಠಿ
ಬಂಗಾರಮ್ಮ ಬಳಿಕ ನೋಟಿನ ಕಂತೆಯನ್ನು ಆ ರೌಡಿಗಳಿಗೆ ಕೊಡುತ್ತಾರೆ. ಇನ್ನು ತಾಯಿ ಏನೋ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಂಠಿ ದೂರದಿಂದಲೇ ನೋಡುತ್ತಿರುತ್ತಾನೆ. ರೌಡಿಗಳು ಹೋದ ಬಳಿಕ ತನ್ನ ತಾಯಿಯ ಬಳಿ ಬಂದು ಏನೆಂದು ಕೇಳುತ್ತಾನೆ. ಆಗ ಬಂಗಾರಮ್ಮ ರಾಧ ಹಾಗೂ ನಿಮ್ಮತ್ತೆ ಇಬ್ಬರು ಕಾಣಿಸುತ್ತಿಲ್ಲ ಅವರಿಬ್ಬರು ತಪ್ಪಿಸಿಕೊಂಡಿದ್ದಾರೆ ಅದಕ್ಕಾಗಿ ಅವರನ್ನು ಹುಡುಕಲು ಹೇಳುತ್ತಿದ್ದೇನೆ ಎಂದು ಹೇಳುತ್ತಾಳೆ.
ಅಮ್ಮನ ಮಾತಿಗೆ ಕಂಠಿ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ಇದನ್ನು ನೋಡಿದ ಬಂಗಾರಮ್ಮ ಹೇಳುತ್ತಾರೆ ನಾವು ರಾಧನಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ಆದರೆ ರಾಧಾ ಹಾಗೂ ನಿಮ್ಮ ಅತ್ತೆಯನ್ನು ಹುಡುಕಿ ಕೊಡು ಅವರಿಬ್ಬರು ಎಲ್ಲಿದ್ದಾರೆ ಎಂದೆಲ್ಲ ನನಗೆ ತಿಳಿಯಬೇಕು ಎಂದು ಹೇಳಿ ಅಲ್ಲಿಂದ ಬಿರಬಿರನೇ ಮನೆಯ ಒಳಗೆ ಹೋಗುತ್ತಾಳೆ. ಇನ್ನು ಕಂಠಿ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಸುಮ್ಮನಿರುತ್ತಾನೆ.

ಪೇಪರ್ ನೋಡಿ ಕಿಡಿ ಕಾರಿದ ರಾಜಿ
ಇನ್ನು ರಾಜಿಗೆ ಕಂಠಿ ಹಾಗೂ ಬಂಗಾರಮ್ಮ ಕುಟುಂಬ ಹಾಗೆ ಪುಟ್ಟಕ್ಕನನ್ನು ಪೇಪರ್‌ನಲ್ಲಿ ನೋಡಿ ಬಹಳ ಕೋಪ ಬರುತ್ತದೆ. ಇವರನ್ನು ಹೇಗಾದರೂ ದೂರ ಮಾಡಬೇಕು ಎಂದು ಅಂದುಕೊಂಡಿದ್ದೆ. ಆದರೆ ಇವರು ದಿನ ಹೋಗುತ್ತಿದ್ದಂತೆ ಹತ್ತಿರ ಆಗುತ್ತಿದ್ದಾರೆ. ಇವರನ್ನು ದೂರು ಮಾಡಬೇಕು, ಇಲ್ಲ ಬಹಳ ಕಷ್ಟವಿದೆ ಎಂದು ಪೇಪರನ್ನು ಹರಿದು ಕೋಪವನ್ನು ಹೊರ ಹಾಕುತ್ತಾ ಇರುತ್ತಾಳೆ.


Click it and Unblock the Notifications











