Puttakkana Makkalu: ಅತ್ತ ಉಸ್ತಾದ್ ಮತ್ತು ಕುಸ್ತಿ...ಇತ್ತ ಹತ್ತಿರವಾಗುತ್ತಿರುವ ಸ್ನೇಹಾ...! ಕಂಠಿಯ ಸ್ಥಿತಿ ಅಯೋಮಯ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಕುಸ್ತಿ ಸ್ಪರ್ಧೆಯಲ್ಲಿ ಆಟ ಆಡಲೇಬೇಕೆಂದು ನಿರ್ಧಾರ ಮಾಡಿದಂತಿದೆ. ತನ್ನ ಹೆಂಡತಿಯಿಂದ ದೂರ ಇರುವಂತೆ, ಆತನೇ ಅಡುಗೆ ಮಾಡಿಕೊಳ್ಳಬೇಕು ಎಂದು ಈಗಾಗಲೇ ಉಸ್ತಾದ್ ಹೇಳಿದ್ದಾರೆ. ಹೀಗಾಗಿ ಹೆಂಡತಿಯ ಹತ್ತಿರ ಸುಳಿಯುತ್ತಿಲ್ಲ ಕಂಠಿ.
ಕಂಠಿಯನ್ನು ಕರೆದು ಉಸ್ತಾದ್ ಇನ್ನು ಮುಂದೆ ಬಹಳ ಆಸಕ್ತಿಯಿಂದ ಕುಸ್ತಿ ಅಭ್ಯಾಸ ಮಾಡಬೇಕು. ಹಾಗೆಯೇ ಯಾವುದೇ ರೀತಿಯ ಮೈಲಿಗೆಗಳು ಆಗಬಾರದು. ಮನಸ್ಸು ಆಕಡೆ ಈಕಡೆ ತಿರುಗಬಾರದು ಹಾಗೆಯೇ ನಿನ್ನ ಅಡುಗೆಯನ್ನು ನೀನೆ ಮಾಡಿಕೊಳ್ಳಬೇಕು ಹೀಗಿದ್ದರೆ ಮಾತ್ರ ಕುಸ್ತಿ ಪಂದ್ಯದಲ್ಲಿ ಆಡಿ ಗೆಲ್ಲುವುದಕ್ಕೆ ಸಾಧ್ಯ ಎಂದು ಕಂಠಿಗೆ ಕಿವಿ ಮಾತನ್ನು ಹೇಳುತ್ತಾರೆ.

ಮನೆಗೆ ಹೋದರೆ ಹೆಂಡತಿಯೊಂದಿಗೆ ಸರಿಯಾಗಿ ಮಾತನಾಡದಿದ್ದರೆ. ಆಕೆಗೂ ನೋವಾಗುತ್ತದೆ. ಆದರೂ ಸರಿಯೇ ನಾನು ಗೆಲ್ಲಲೇ ಬೇಕು ಎಂದು ತೀರ್ಮಾನ ಮಾಡಿದ್ದಾನೆ. ಇನ್ನು ಕಂಟಿ ಮನೆಗೆ ಬರುತ್ತಾನೆ ಬೆಡ್‌ರೂಂಗೆ ಬಂದು ಸೋಫಾದ ಕೆಳಗೆ ಚಾಪೆಯಲ್ಲಿ ಮಲಗುತ್ತಾನೆ .
ಉಸ್ತಾದ್ ಮಾತುಗಳ ನೆನಪಲ್ಲಿ ಕಂಠಿ
ಇನ್ನು ಕಂಠಿಗೆ ಉಸ್ತಾದ್ ಹೇಳಿದ ಎಲ್ಲ ಮಾತುಗಳು ನೆನಪಿಗೆ ಬರುತ್ತಿರುತ್ತದೆ . ಹೆಂಡತಿ ಜೊತೆ ಮಲಗಬಾರದು. ಮನೆಯಲ್ಲಿ ಮಾಡಿದ ಅಡುಗೆಯನ್ನು ತಿನ್ನಬಾರದು. ಎಲ್ಲರಿಂದಲೂ ದೂರ ಇರಬೇಕು ಎಂದು ಉಸ್ತಾದ್ ಹೇಳುತ್ತಿರುವುದು ಕಂಠಿಗೆ ನೆನಪಾಗುತ್ತದೆ. ಅಷ್ಟಲ್ಲಿ ಸ್ನೇಹಾ ನಿದ್ದೆಯಿಂದ ಏಳುತ್ತಾಳೆ.

ಮನೆಯ ಹೊರಗೆ ಮಲಗಲು ಹೊರಟ ಕಂಠಿ
ಸ್ನೇಹಾ ಎಚ್ಚರ ಆಗಿದ್ದನ್ನು ನೋಡಿ ಕಂಠಿ ರೂಮಿನಿಂದ ಆಚೆ ಹೋಗಲು ತಯಾರಾಗುತ್ತಾನೆ. ಅದಕ್ಕೆ ಸ್ನೇಹಾ ಯಾಕೆ ರೂಮಿನಿಂದ ಹೊರಗೆ ಹೋಗುವುದು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಕಂಠಿ ನನಗೆ ಇಲ್ಲಿ ಬಹಳ ಸೆಖೆಯಾಗುತ್ತಿದೆ ಅದಕ್ಕೆ ನಾನು ಹೊರಗೆ ಮಲಗುತ್ತೇನೆ ಎಂದು ಹೇಳುತ್ತಾನೆ. ಆದರೆ, ಸ್ನೇಹಾ ತಡೆಯುತ್ತಾಳೆ ಅರರೇ ಸೆಖೆ ಆದರೆ ಫ್ಯಾನ್ ಹಾಕಿ ಮಲಗಿ ನಾನೇನಾದ್ರೂ ಬೇಡ ಎಂದು ಹೇಳುತ್ತೇನೆ ಎಂದು ಹೇಳುತ್ತಾಳೆ. ಆಗ ಕಂಠಿಗೆ ಏನು ಮಾತನಾಡಲು ಆಗುವುದಿಲ್ಲ. ಕಂಠಿ ಬಳಿ ಅದೆಷ್ಟೇ ಹೇಳಿದರು ಕಂಠಿ ಮಾತ್ರ ಮನೆಯ ಹೊರಗಡೆ ಹೋಗುವುದಾಗಿ ಹೇಳುತ್ತಾನೆ.
ಸ್ನೇಹಾ ಮಾತಿಗೆ ಭಯಪಟ್ಟ ಕಂಠಿ
ಕಂಠಿ ನಡವಳಿಕೆ ನೋಡಿ ನನ್ನ ಮಾತಿಗೆ ಬೆಲೆ ಇಲ್ಲವೇ ಎಂದು ಸ್ನೇಹಾ ಕೇಳುತ್ತಾಳೆ. ಇದನ್ನು ನೋಡಿದ ಕಂಠಿ ಬಹಳ ಭಯಪಡುತ್ತಾನೆ. ಸ್ನೇಹಾ ಜೊತೆ ಸರಿಯಾಗಿ ಮಾತನಾಡಲು ಆಗದೆ ಕಂಠಿಯ ಬಾಯಿ ಕಟ್ಟಿ ಹೋಗುತ್ತದೆ. ಬಳಿಕ ಸ್ನೇಹಾಳಿಂದ ಕೊಂಚ ದೂರ ಸರಿದು ಮಾತನಾಡುತ್ತಾನೆ. ಇದನ್ನು ಗಮನಿಸಿದ ಆಕೆ ಯಾಕೆ ನನ್ನಿಂದ ಇಷ್ಟು ದೂರ ಹೋಗುತ್ತಿದ್ದಿರಾ ಎಂದು ತನ್ನ ಗಂಡನ ಬಳಿ ಕೇಳುತ್ತಾಳೆ. ಆಗ ಕಂಠಿ ಏನು ಮಾತನಾಡಿದೆ ಸರಿ ನಾನು ಇಲ್ಲಿ ಮಲಗುತ್ತೇನೆ ಎಂದು ಹೇಳಿ ರೂಮಿನ ಒಳಗೆ ಚಾಪೆ ಹಾಕಿ ಮಲಗುತ್ತಾನೆ. ಇನ್ನು ಕಂಠಿ ಈ ರೀತಿ ನಡೆದುಕೊಳ್ಳುವುದನ್ನು ನೋಡಿ ಏನು ಮಾಡಬೇಕು ಎಂದು ತಿಳಿಯದೆ ಆಕೆ ಸುಮ್ಮನಾಗಿ ಬಿಡುತ್ತಾಳೆ.


Click it and Unblock the Notifications











