ಸ್ನೇಹಾ ಮುಂದೆ ಕಂಠಿಯ ನಿಜ ಬಣ್ಣ ಬಯಲು ಮಾಡ್ತಾನಾ ಮುತ್ತಯ್ಯ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಇದೀಗ ನೋಡುಗರ ಮನಸೆಳೆಯುತ್ತಿದೆ. ಕಂಠಿ ಅಭಿನಯ ಹಾಗೂ ಸ್ನೇಹಾಳ ಖಡಕ್ ಮಾತಿಗೆ ಜನ ಮನಸೋತಿದ್ದಾರೆ. ಆದರೆ ಇದೀಗ ನಂಜವ್ವ ವಿಷ ಕುಡಿದು ಆಸ್ಪತ್ರೆಗೆ ಸೇರಿದ್ದಾಳೆ.
ಇತ್ತ ಚಂದ್ರುವಿನ ಜಪ ಮಾಡುತ್ತಿದ್ದಾಳೆ ವಸು. ಚಂದ್ರು ವಸುಗೆ ಕರೆ ಮಾಡಿ ಬಾ ನಾವು ಎಲ್ಲಾದರು ಜೀವನ ನಡೆಸುವ ಎಂದು ಹೇಳುತ್ತಾನೆ ಆದರೆ ಕೊನೆಗಳಿಗೇಲಿ ನಂಜವ್ವ ಮಾತ್ರ ತನ್ನ ಹಠ ಸಾಧಿಸಿಯೇ ಬಿಟ್ಟಳು.
ಇತ್ತ ವಸುಗೆ ತನ್ನ ಅತ್ತೆ ಆಸ್ಪತ್ರೆ ಸೇರಿದ್ದಾರೆ ಎಂದು ಆತಂಕ ಪಡುತ್ತಾಳೆ. ತಾಯಿ ಅಣ್ಣನ ಕರೆದುಕೊಂಡು ಆಸ್ಪತ್ರೆಗೆ ತೆರಳುತ್ತಾಳೆ ವಸು. ವಸು ಬರುವುದರೊಳಗೆ ನಂಜವ್ವ ತನ್ನ ಮಗ ಚಂದ್ರುವಿನ ಬಳಿ ಆಣೆ ಪ್ರಮಾಣವನ್ನು ಮಾಡಿಸಿಕೊಂಡಿರುತ್ತಾಳೆ ಇದರಿಂದ ಚಂದ್ರ ಕಂಗೆಟ್ಟಿದ್ದಾನೆ.
ಇತ್ತ ದಾದಿ ಬಂದು ಬಂಗಾರಮ್ಮ ನಿಮ್ಮನ್ನು ನೋಡಲು ಬಂದಿದ್ದಾರೆ ಎಂದಾಗಂತು ನಂಜವ್ವಗೆ ಬಹಳ ಕೋಪ ಬರುತ್ತದೆ. ಇತ್ತ ಪುಟ್ಟಕ್ಕ ಸ್ನೇಹಾನ ಕರೆದುಕೊಂಡು ಅಲ್ಲಿಂದ ತೆರಳುತ್ತಾಳೆ, ಸ್ನೇಹಾ ಪುಟ್ಟಕ್ಕನ ಬಳಿ ಜಗಳ ಆಡುತ್ತಾಳೆ ಯಾಕೆ ನೀನು ಬಂಗಾರಮ್ಮಗೆ ಇಷ್ಟು ಹೆದರುತ್ತೀಯಾ ಎಂದೆಲ್ಲ ಬಯ್ಯುತ್ತಾಳೆ. ಇತ್ತ ಬಂಗಾರಮ್ಮ ನಂಜಮ್ಮ ಅಡ್ಮಿಟ್ ಆಗಿರುವ ರೂಮಿಗೆ ಬರುತ್ತಾರೆ.

ಕಂಠಿ, ವಾರ್ಡ್ ರೂಮಿಗೆ ಬರಲಿಲ್ಲ ಏಕೆ?
ಕಂಠಿ ಹೇಳುತ್ತಾನೆ ನೀವು ರೂಮಿಗೆ ಹೋಗಿರಿ ನಾನು ಮತ್ತೆ ಬರುತ್ತೇನೆ ಎಂದು. ಬಳಿಕ ಬಂಗಾರಮ್ಮ ಕೋಣೆಯ ಒಳಗೆ ಹೋಗುತ್ತಾರೆ ಇದನ್ನು ನೋಡಿದ ವಸು, ಯಾಕಾಣ್ಣ ಸ್ನೇಹ ವಾಪಸ್ ಬರುತ್ತಾಳೆ ಅಂತನಾ ಎಂದು ಕೇಳಿ ಅಲ್ಲಿಂದ ಅವಳು ಕೋಣೆಗೆ ಹೋಗುತ್ತಾಳೆ ಇತ್ತ ಬಂಗಾರಮ್ಮನನ್ನು ನೋಡಿದ ನಂಜವ್ವ ಹೋ ಬಂಗಾರಮ್ಮನವರು ಬಂದ್ರಾ ಎಂದೆಲ್ಲ ಹೇಳುತ್ತಾಳೆ ಇದಕ್ಕೆ ಬಂಗಾರಮ್ಮ, ನಂಜವ್ವ ನಿನ್ನನ್ನು ನೋಡಲು ನಾನು ಇಲ್ಲಿ ಬಂದಿಲ್ಲ ನಿನ್ನ ಮಗ ಚಂದ್ರು ಬಳಿ ಮಾತನಾಡಲು ಬಂದಿದ್ದೀನಿ ನಿನ್ನ ಮಗ ನನ್ನ ಮಗಳ ಹತ್ತಿರ ಏನೋ ಹೇಳಿದ್ದಾನಂತೆ ಅದೇನುಂತ ತಿಳಿದುಕೊಂಡು ಹೊಗೋಣ ಅಂತ ಬಂದಿದ್ದೀನಿ ಎಂದು ಹೇಳುತ್ತಾಳೆ.

ಸಪ್ಪೆ ಮೋರೆ ಹಾಕಿದ ಚಂದ್ರು ಕಂಡು ಕೆಂಡಾಮಂಡಲ
ಬಳಿಕ ಬಂಗಾರಮ್ಮ ಅಳಿಯಂದಿರೆ ಏನೋ ನನ್ನ ಮಗಳ ಹತ್ತಿರ ಹೇಳಿದ್ರಲ್ಲ ಅದನ್ನ ನನ್ನ ಎದುರಲ್ಲಿ ಹೇಳಿ ಬಳಿಕ ಆಕೆಯನ್ನು ಧಾರಳವಾಗಿ ಕರೆದುಕೊಂಡು ಹೋಗಿ ಎಂದಾಗ ಚಂದ್ರ ಮಾತನಾಡದೇ ಇರುವುದನ್ನು ಕಂಡು ವಸುಗೆ ದುಃಖ ಉಮ್ಮಳಿಸಿ ಬರುತ್ತದೆ. ವಸು ಎಷ್ಟೆ ಅತ್ತರು ಚಂದ್ರು ಮಾತ್ರ ಒಂದು ಮಾತು ಆಡದೇ ಇರುವುದನ್ನು ಕಂಡ ಬಂಗಾರಮ್ಮಗೆ ಏನು ಮಾಡುವುದು ಎಂದು ತಿಳಿಯದೇ ನೋಡುತ್ತಾ ನಿಂತುಬಿಡುತ್ತಾಳೆ. ಇತ್ತ ಇದನ್ನೆಲ್ಲ ಕೇಳಿಸಿಕೊಂಡಿದ್ದ ಕಂಠಿ ಒಳಗೆ ಬರುತ್ತಾನೆ ಬಾವ ಅಕ್ಕನ ಬಳಿ ಏನು ಹೇಳಿದ್ರೊ ಅದನ್ನ ಈಗ ಹೇಳಿ ಎಂದು ಹೇಳುತ್ತಾನೆ ಆದರೆ ಚಂದ್ರು ಮಾತ್ರ ಮಾತನಾಡದೇ ಮೌನಕ್ಕೆ ಶರಣಾಗುತ್ತಾನೆ.

ಕಳ್ಳಾಟವಾಡುತ್ತಿರುವವರ ಮಾಹಿತಿ ನೀಡಿದ ರಾಜೇಶ್ವರಿ ಮಗ
ಇನ್ನು ಕಂಠಿಯನ್ನು ನೋಡಿದ ನಂಜವ್ವ ಕಂಠಿ ನೀನೇನು ಇಲ್ಲಿ, ಜೈಲಿಂದ ಯಾವಾಗ ಬಂದೆ ಎಂದೆಲ್ಲ ಹೇಳುತ್ತಾಳೆ, ಆದರೆ ಈ ಬಗ್ಗೆ ಯಾರು ಅಷ್ಟು ಗಮನ ಹರಿಸಲಿಲ್ಲ. ಆದರೆ ಮಸು ಮಾತ್ರ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಇತ್ತ ಪುಟ್ಟಕ್ಕ ಸ್ನೇಹಾನ ಧರಧರನೇ ಎಳೆದುಕೊಂಡು ಬರುತ್ತಾಳೆ ಬಳಿಕ ದೊಡ್ಡೋರ ಬಳಿ ಮಾತನಾಡುವಾಗ ಸರಿಯಾಗಿ ಮಾತನಾಡಬೇಕು ಎಂದೆಲ್ಲ ಉಪದೇಶ ಮಾಡುತ್ತಾಳೆ. ಆದರೆ ಸ್ನೇಹ ಮಾತ್ರ ಪುಟ್ಟಕ್ಕನ ಮಾತಿಗೆ ಕಿವಿ ಕೊಡದೇ ವಟವಟ ಎನ್ನುತ್ತಿರುತ್ತಾಳೆ. ಪುಟ್ಟಕ್ಕ ಇರುವ ವಿಚಾರ ಶಾಂತಕ್ಕನಿಗೆ ಗೊತ್ತಾಗಿ ಆಕೆಯು ಅಲ್ಲಿಗೆ ಬರುತ್ತಾಳೆ.

ಮಂಜಮ್ಮನ ಕುತಂತ್ರ ಬುದ್ಧಿ ಸುಮಳಿಗೆ ಗೊತ್ತಾಗುತ್ತಾ?
ಇತ್ತ ಪುಟ್ಟಕ್ಕನ ಮೆಸ್ ಬಳಿ ರಾಜೇಶ್ವರಿ ಮಗ ಬರುತ್ತಾನೆ. ಮೆಸ್‌ನಲ್ಲಿ ಸಹನಾ ಹಾಗೂ ಸುಮಾ ಇದ್ದರು. ಇನ್ನು ಈತ ಹೇಳುತ್ತಾನೆ ಇಲ್ಲಿ ಮಾತನಾಡೋ ವಿಚಾರವನ್ನು ಯಾರೋ ಅಮ್ಮನಿಗೆ ಕಾಲ್ ಮಾಡಿ ಹೇಳುತ್ತಾರೆ ಸುಮ ಎಂದು ಹೇಳುತ್ತಾನೆ ಇದನ್ನು ಕೇಳಿಸಿಕೊಂಡ ಮಂಜಮ್ಮಗೆ ಬಹಳ ಭಯವಾಗುತ್ತದೆ. ಇತ್ತ ಶಾಂತಕ್ಕನ ಗಂಡ ಕುಡಿದು ಆಸ್ಪತ್ರೆಯಲ್ಲಿದ್ದಾನೆ ಸ್ನೇಹಾ ಹಾಗೂ ಕಂಠಿ ಆತನನ್ನು ನೋಡಲು ತೆರಳುತ್ತಾರೆ. ಇನ್ನು ಕಂಠಿ ವಿಚಾರವನ್ನು ಸ್ನೇಹ ಬಳಿ ಮುತ್ತಯ್ಯ ಹೇಳುತ್ತಾನಾ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications











