Puttakkana Makkalu: ಪುಟ್ಟಕ್ಕನ ಮನೆಯಲ್ಲಿ ಶಶಿಕರ, ರಾಧ: ಕಂಠಿಗೆ ಅನುಮಾನ

By Poorva

ರಾಧಾ ಹಾಗೂ ಶಶಿಕಲಾ ಇಬ್ಬರು ಪುಟ್ಟಕ್ಕನ ಮನೆಯಲ್ಲಿ ಜಾಂಡ ಊರಿದ್ದಾರೆ. ಪಾಪ ಪುಣ್ಯ ನೋಡಿ ಪುಟ್ಟಕ್ಕ ಇವರಿಬ್ಬರಿಗೂ ಜಾಗ ನೀಡಿದ್ದಾರೆ. ಆದರೆ ಇವರಿಬ್ಬರು ಒಳಗಿಂದ ಒಳಗೆ ಏನೋ ಮಸಲತ್ತು ಮಾಡಿಕೊಂಡು ಪುಟ್ಟಕ್ಕನ ಮಕ್ಕಳ ಜೀವನದಲ್ಲಿ ಆಟ ಆಡಲು ಶುರು ಮಾಡಿದ್ದಾರೆ.

ಪುಟ್ಟಕ್ಕನ ಮಕ್ಕಳು ಚೆನ್ನಾಗಿರಬಾರದು ಎನ್ನುವುದು ಶಶಿಕಲಾ ಉದ್ದೇಶ. ಪುಟ್ಟಕ್ಕನ ಮಕ್ಕಳಿಂದಾಗಿ ನನ್ನ ಮಗಳ ಜೀವನ ಹಾಳಾಯಿತು ಎನ್ನುವುದು ಶಶಿಕಲಾ ಮಾತು. ಇದರ ಅರಿವೇ ಇಲ್ಲದೇ ಶಶಿಕಲಾಗೆ ಹಾಗೂ ರಾಧಾಗೆ ಮನೆಯಲ್ಲಿ ಜಾಗ ನೀಡುತ್ತಾಳೆ. ಇನ್ನು ಪುಟ್ಟಕ್ಕನ ಮೆಸ್‌ಗೆ ಕಂಠಿ ಬರುತ್ತಾನೆ. ಕಂಠಿ ಬಂದ ಕೂಡಲೇ ಪುಟ್ಟಕ್ಕಗೆ ಬಹಳ ಖುಷಿಯಾಗುತ್ತದೆ.

Zee Kannada serial puttakkana makkalu written update on 9th November

ಅರೆರೇ ಅಳಿಯಂದಿರು ಬನ್ನಿ ಎಂದು ಸ್ವಾಗತಿಸುತ್ತಾಳೆ. ಕುಡಿಯಲು ಕಾಫಿ ಕೊಡುತ್ತಾಳೆ. ಹಾಗೆಯೇ ಕಂಠಿಯ ಮನದಲ್ಲಿ ನೂರಾರು ಪ್ರಶ್ನೆ ಇರುವುದು ಪುಟ್ಟಕ್ಕ ಕಂಡು ಹಿಡಿಯುತ್ತಾಳೆ. ಹೇಗಾದರೂ ಮಾಡಿ ಕಂಠಿಯ ಮನಸ್ಸನ್ನು ಹಗುರಗೊಳಿಸಬೇಕು, ಜೊತೆಗೆ ಆಡುತ್ತಿರುವ ಕುಸ್ತಿ ಪಂದ್ಯಕ್ಕೆ ತಾನು ಸಪೋರ್ಟ್ ಮಾಡಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ.

ತಿಂಡಿ ತಿನ್ನಲು ಒತ್ತಾಯ ಮಾಡಿದ ಪುಟ್ಟಕ್ಕ

ಕಂಠಿಯ ಬಳಿ ತಿಂಡಿ ತಿಂತೀಯಾ? ಎಂದು ಕೇಳಿದಾಗ ಕಂಠಿ ಬೇಡ ಎಂದು ಹೇಳಿದರೂ ಪುಟ್ಟಕ್ಕ ತಿಂಡಿ ಮಾಡಿಕೊಡುತ್ತಾರೆ. ಯಾಕೆ ಅಳಿಯಂದ್ರೆ ತಿಂಡಿ ತಿನ್ನುವುದಿಲ್ಲ, ತಿಂಡಿ ನೀವೇ ಮಾಡಿ ತಿನ್ನಬೇಕು ಎನ್ನುವುದನ್ನು ನಿಮ್ಮ ಉಸ್ತಾದ್ ಹೇಳಿರಬೇಕಲ್ಲ ಎಂದು ಪುಟ್ಟಕ್ಕ ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಹೌದು ಎಂದು ಹೇಳುತ್ತಾನೆ. ಬಳಿಕ ಸುಮ್ಮನಾಗುತ್ತಾರೆ.

ದಿನಸಿ ಮನೆಯೊಳಗೆ ಒಯ್ದ ಕಂಠಿ

ಅಷ್ಟರಲ್ಲಿ ಅಲ್ಲಿಗೆ ದಿನಸಿ ಸಾಮಗ್ರಿಗಳು ಬರುತ್ತದೆ. ಕಂಠಿ ಆ ದಿನಸಿ ಸಾಮಾಗ್ರಿಯನ್ನೆಲ್ಲ ತಾನೇ ಮನೆಯೊಳಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ ತಿಳಿಸಿ ಸಾಮಗ್ರಿಗಳನ್ನ ಮನೆ ಒಳಗೆ ತೆಗೆದುಕೊಂಡು ಹೋಗುತ್ತಾನೆ. ಅಷ್ಟರಲ್ಲಿ ಪುಟ್ಟಕ್ಕನಿಗೆ ನೆನಪಾಗುತ್ತದೆ. ಮನೆಯೊಳಗೆ ಶಶಿಕರ ಹಾಗೂ ರಾಧ ಇರುವುದು. ಪುಟ್ಟಕ್ಕಗೆ ಏನು ಮಾಡಬೇಕೆಂದು ತಿಳಿಯದೇ ಕಂಠಿಯ ಬಳಿ ಓಡೋಡಿ ಬರುತ್ತಾಳೆ.

Zee Kannada serial puttakkana makkalu written update on 9th November

ಕಂಠಿಯನ್ನು ನೋಡಿ ಬೆಚ್ಚಿ ಬಿದ್ದ ಶಶಿಕಲಾ

ಅಷ್ಟರಲ್ಲಾಗಲೇ ಕಂಠಿ ಮನೆಯ ಒಳಗೆ ಹೋಗಿರುತ್ತಾನೆ. ಇನ್ನು ಮನೆಯೊಳಗೆ ಪಿಸು ಪಿಸು ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಕಂಠಿ ಮನೆ ಒಳಗೆ ಯಾರೋ ಇದ್ದಾರೆ ಅನ್ನುವಂತ ಅನುಮಾನ ಮೂಡುತ್ತದೆ. ಅಷ್ಟರಲ್ಲಿ ಅಲ್ಲಿಗೆ ಪುಟ್ಟಕ್ಕ ಬರುತ್ತಾಳೆ. ಬಳಿಕ ತನ್ನ ಅಳಿಯಂದಿರ ಬಳಿ ಯಾಕೆ ಈ ದಿನಸಿ ಸಾಮಗ್ರಿಗಳನ್ನು ನೀವು ಹೊತ್ತುಕೊಂಡು ಬಂದ್ರಿ? ಎಂದು ಹೇಳಿ ಕಂಠಿಯನ್ನು ಮನೆಯಿಂದ ಹೊರಗೆ ಕಳುಹಿಸುತ್ತಾಳೆ.

More from Filmibeat

English summary
Puttakkana makkalu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X