Puttakkana Makkalu: ಹಣಕ್ಕಾಗಿ ಒದ್ದಾಡುತ್ತಿದ್ದ ಪುಟ್ಟಕ್ಕನ ಕೈ ಹಿಡಿದ ಬಂಗಾರಮ್ಮ!
ಮುರುಳಿ ಮೇಷ್ಟ್ರಿಗೆ ದೊಡ್ಡ ಮನೆಯಿಂದ ಹೆಣ್ಣು ತರಬೇಕು ಎಂಬುದು ಅವರ ಅಪ್ಪ ಅಮ್ಮನ ಆಸೆಯಾಗಿತ್ತು. ಆದ್ರೆ ಮುರುಳಿ, ಸಹನಾಳನ್ನು ಪ್ರೀತಿ ಮಾಡಿದ. ಇದು ಅವರ ಅಪ್ಪ ಅಮ್ಮನಿಗೆ ಸಹಿಸಲು ಸಾಧ್ಯವಾಗಲಿಲ್ಲ. ಮೊದ-ಮೊದಲಿಗೆ ಈ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಮಗನ ಹಠ, ಬಂಗಾರಮ್ಮನ ಮಗನ ಪ್ಲ್ಯಾನ್ ಎಲ್ಲವೂ ಸೇರಿ ಫೈನಲಿ ಪ್ರೀತಿಯ ಸಂಬಂಧ ಮದುವೆ ಮಂಟಪಕ್ಕೆ ಬಂದು ನಿಂತಿದೆ.
ಆದರೆ ಪುಟ್ಟಕ್ಕನನ್ನು ಮುರುಳಿ ಮೇಷ್ಟ್ರ ಮನೆಯವರು ಎಮೋಷನಲಿ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಇದು ಮನೆಯವರಿಗೆ ಯಾರಿಗೂ ಗೊತ್ತಾಗದಂತೆಯೂ ಕಾಪಾಡಿಕೊಂಡಿದ್ದಾರೆ. ಮದುವೆಯೆಲ್ಲಾ ಗಂಡಿನ ಮನೆಯವರೇ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ತೋರಿಸಿಕೊಳ್ಳುತ್ತಿದ್ದು, ಎಲ್ಲಾ ಜವಬ್ದಾರಿಯನ್ನು ಪುಟ್ಟಕ್ಕನ ಮೇಲೆ ಬಿಟ್ಟಿದ್ದಾರೆ.

ಮದುವೆ ಟೆನ್ಶನ್ ನಲ್ಲಿದ್ದಾರೆ ಪುಟ್ಟಕ್ಕ
ಸಹನಾ ಎಷ್ಟು ಮುಗ್ಧೆ ಅನ್ನೋದು ಪುಟ್ಟಕ್ಕನಿಗೆ ಬಹಳ ಗೊತ್ತು. ಏನೇ ಆದರೂ ತನ್ನೆಲ್ಲಾ ನೋವನ್ನು ಒಳಗೆ ತಿನ್ನುತ್ತಾಳೆ ಎಂಬುದು ಗೊತ್ತು. ಇನ್ನಿಬ್ಬರ ಮಕ್ಕಳ ಬಗ್ಗೆ ಪುಟ್ಟಕ್ಕನಿಗೆ ಬಹಳ ಧೈರ್ಯವಿದೆ. ಆದರೆ ಸಹನಾ ಜೀವನ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಅವಳು ಇಷ್ಟಪಟ್ಟ ಹುಡುಗನಿಗೆ ಮದುವೆ ಮಾಡಿ ಕೊಡುತ್ತಿದ್ದಾಳೆ. ಎಷ್ಟೇ ಕಷ್ಟವಾದರೂ ಯಾರ ಬಳಿಯೂ ಹೇಳುತ್ತಿಲ್ಲ. ಈಗ ಗಂಡಿನ ಮನೆಯವರು ಇನ್ನು ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಇಡುತ್ತಿದ್ದಾರೆ. ಅದರ ಚಿಂತೆಯಲ್ಲಿ ಮುಳುಗಿದ್ದಾಳೆ ಪುಟ್ಟಕ್ಕ.

ಮನೆ ಅಡವಿಡಲು ಮುಂದಾದ ಪುಟ್ಟಕ್ಕ
ಮಗಳ ಮದುವೆಯನ್ನು ಯಾವುದೇ ತೊಂದರೆ ಇಲ್ಲದೆ ಮಾಡಬೇಕು ಎಂಬ ಪಣ ತೊಟ್ಟಿದ್ದಾಳೆ ಪುಟ್ಟಕ್ಕ. ಅದಕ್ಕಾಗಿ ತಾನು ಕೂಡಿಟ್ಟ ಹಣದಲ್ಲಿ ಎಲ್ಲವನ್ನು ನಿಭಾಯಿಸುತ್ತಿದ್ದಾಳೆ. ಆದರೆ ಇನ್ನು ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ ಮುರುಳಿ ತಾಯಿ. ಏನು ಮಾಡುವುದು ಎಂಬುದು ಗೊತ್ತಾಗದೆ ಶಾಂತಾಳನ್ನು ಕರೆದುಕೊಂಡು ಹೋಗಿ ಮನೆಯ ಪತ್ರವನ್ನು ಸೇಟು ಅಂಗಡಿಗೆ ಇಡಲು ಹೋಗಿದ್ದಾರೆ. ಆದರೆ ಪುಟ್ಟಕ್ಕನ ಮನೆಯ ಪತ್ರವಿಟ್ಟುಕೊಂಡು ಹಣ ಕೊಡುವುದಕ್ಕೆ ಆಗುವುದಿಲ್ಲ ಎಂದು ಸೇಠು ನೇರವಾಗಿ ಹೇಳಿಬಿಟ್ಟಿದ್ದಾನೆ.

ರಾಜೇಶ್ವರಿ ಕೆಟ್ಟತನಕ್ಕೆ ಬಂಗಾರಮ್ಮ ಅಡ್ಡಗಾಲು..!
ಪುಟ್ಟಕ್ಕನಿಂದ ಮನೆ ಮತ್ತು ಮೆಸ್ಸು ಕಿತ್ತುಕೊಳ್ಳಲೇಬೇಕೆಂಬುದು ರಾಜೇಶ್ವರಿ ಕೆಟ್ಟ ಆಸೆಯಾಗಿದೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ಶ್ರಮವಹಿಸಿದ್ದಾಳೆ. ಆ ಎಲ್ಲಾ ಪ್ಲ್ಯಾನ್ ಗಳು ಕೂಡ ಫೇಲ್ ಆಗಿವೆ. ಆದರೆ ಇದೀಗ ರಾಜೇಶ್ವರಿ ಕೈನಲ್ಲಿ ಮುರುಳಿ, ತಾಯಿ ತಗಲಾಕಿಕೋಂಡಿದ್ದಾರೆ. ಅವರನ್ನು ಇಟ್ಟುಕೊಂಡು ಪುಟ್ಟಕ್ಕನನ್ನು ಆಟವಾಡಿಸುತ್ತಿದ್ದಾಳೆ ರಾಜೇಶ್ವರಿ. ಹಣಕ್ಕಾಗಿ ಪೀಡಿಸುವಂತೆ ಮಾಡುತ್ತಿದ್ದಾಳೆ. ಮುರುಳಿ ತಾಯಿ ಕೂಡ ಹಣಕ್ಕೆ ಬೇಡಿಕೆ ಇಟ್ಟು ಇಟ್ಟು ಈಗ ಪುಟ್ಟಕ್ಕ ಫೈನಲಿ ತನ್ನ ಮನೆಯನ್ನು ಅಡವಿಡುವುದಕ್ಕೆ ಹೊರಟಿದ್ದಾರೆ. ಆದರೆ ಅಲ್ಲಿಯೂ ಬಂಗಾರಮ್ಮನೆ ಕಾಪಾಡಿದ್ದಾಳೆ.

ಪುಟ್ಟಕ್ಕನ ಕೈಬಿಡದ ಬಂಗಾರಮ್ಮ
ಪುಟ್ಟಕ್ಕನನ್ನು ಸ್ವಂತದವರಂತೆ ಕಾಣುತ್ತಾಳೆ ಬಂಗಾರಮ್ಮ. ಅದಕ್ಕೆಂದೆ ಪುಟ್ಟಕ್ಕನ ಮನೆಯ ಮದುವೆ ಕಾರ್ಯಕ್ಕೆ ಕಂಠಿಯನ್ನು ಫ್ರಿಯಾಗಿ ಬಿಟ್ಟುಬಿಟ್ಟಿದ್ದಾಳೆ. ಮನೆಯಲ್ಲಿ ಮಗ ಸಪೋರ್ಟ್ ಮಾಡುತ್ತಿದ್ದರೆ ಪುಟ್ಟಕ್ಕನ ಕಷ್ಟ ಅರಿತು ಬಂಗಾರಮ್ಮ ಸಹಾಯಕ್ಕೆ ನಿಂತಿದ್ದಾಳೆ. ನಾನು ನನ್ನ ಮಗಳು ಎಂದುಕೊಂಡು ಮದುವೆಯನ್ನು ಅದ್ದೂರಿಯಾಗಿ ಮಾಡುತ್ತೇನೆ. ನೀನು ಯಾವುದಕ್ಕೂ ಚಿಂತೆ ಮಾಡಬೇಡ ಪುಟ್ಟಕ್ಕ ಎಂದಾಗ ಪುಟ್ಟಕ್ಕ ಎಮೋಷನಲ್ ಆಗಿದ್ದಾರೆ. ನನಗೆ ಹಣಕ್ಕಿಂತ ನಿಮ್ಮ ನಂಟು ಮುಖ್ಯ ಕಣವ್ವ ಎಂದಿದ್ದಾರೆ. ಈ ಮಾತನ್ನು ಕೇಳಿದ ಬಂಗಾರಮ್ಮನಿಗೆ ಮನಸ್ಸು ತುಂಬಿ ಬಂದಿದೆ.


Click it and Unblock the Notifications











