ಪುಟ್ಟಕ್ಕನ ಮಕ್ಕಳು: ಸಹನಾ-ಮುರುಳಿ ಮೇಷ್ಟ್ರ ಪ್ರೀತಿಗೆ ಸ್ನೇಹಾ ಅಡ್ಡಗಾಲು ಹಾಕುತ್ತಾಳಾ ?
ಇಂದು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ರೋಚಕ ಘಟ್ಟ ಎಂದೇ ಹೇಳಬಹುದು. ಯಾಕೆಂದರೆ ಪ್ರೇಮಿಗಳು ಒಂದು ಕಡೆ ಒಗ್ಗೂಡುತ್ತಿದ್ದಾರೆ. ಅಲ್ಲಿ ಪ್ರೇಮದ ನಿವೇದನೆಯಾಗುತ್ತಾ? ಯುದ್ಧ ಭೂಮಿಯಲ್ಲಿ ನಿಂತಂತೆ ರಣಕಹಳೆ ಊದುತ್ತಾರಾ ಎಂಬುದನ್ನು ನೋಡಬೇಕಿದೆ. ಇದೇ ಕಾರಣಕ್ಕೆ ಇವತ್ತಿನ ಎಪಿಸೋಡ್ ಸಿಕ್ಕಾಪಟ್ಟೆ ಕುತೂಹಲವನ್ನು ಹುಟ್ಟಿಸಿದೆ. ಮುರುಳಿ ಮೇಷ್ಟ್ರ ಪತ್ರ ಎಲ್ಲೋ ಹೋಗಿ, ಇನ್ಯಾರ ಕೈಗೋ ಸಿಕ್ಕಿದೆ. ಇದು ಎಲ್ಲರನ್ನು ರೋಮಾಂಚನಕಾರಿಯನ್ನಾಗಿಸಿದೆ.
ಸದ್ಯ ಪುಟ್ಟಕ್ಕ ತನ್ನ ಹಿರಿಯ ಮಗಳು ಸಹನಾಳಿಗೆ ಮದುವೆ ಮಾಡಬೇಕೆಂದು ಗಂಡನ ಬಳಿಯೂ ಹೋಗಿ ಮಾತಾಡಿ ಬಂದಿದ್ದಾಳೆ. ಮನೆ ಮತ್ತು ಮೆಸ್ ಬರೆದುಕೊಡುವ ನಿರ್ಧಾರಕ್ಕೂ ಬಂದಿದ್ದಾಳೆ. ಅದಕ್ಕೆ ಕಾರಣ ಮೊದಲು ಸಹನಾಳ ಮದುವೆಯಾಗಬೇಕೆಂಬುದು. ಆದರೆ ಸಹನಾಳನ್ನು ದೇವತೆಯಂತೆ ನೋಡಿಕೊಳ್ಳಲು ಮುರುಳಿ ಮೇಷ್ಟ್ರು ರೆಡಿಯಾಗಿದ್ದಾರೆ.

ಪತ್ರ ನೋಡಿ ಸೇರುವವರು ಯಾರು?
ಈ ರೀತಿಯ ದೃಶ್ಯವನ್ನು ಸಿನಿಮಾವೊಂದರಲ್ಲಿ ಸಾಕಷ್ಟು ಬಾರಿ ನೋಡಿ ನಕ್ಕಿರುತ್ತೀವಿ. ಯಾರಿಗೋ ಬರೆದ ಪತ್ರ ಇನ್ಯಾರ ಕೈಗೋ ಸೇರುತ್ತೆ. ಅವರು ಇನ್ನೇನೊ ಅಂದುಕೊಂಡು ಕನಸಿನ ಲೋಕಕ್ಕೆ ಜಾರುತ್ತಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪತ್ರವೊಂದರ ವಿಚಾರ ಈಗ ಎಲ್ಲರ ಮನಸ್ಸನ್ನು ಕಾತುರತೆಗೆ ನೂಕಿದೆ. ಇದು ಕಾಮಿಡಿಯಾಗಿ ತೆಗೆದುಕೊಳ್ಳುವಂತ ವಿಚಾರವಲ್ಲ. ಯಾಕೆಂದರೆ ಸಹನಾ ಎಂಬ ಮುಗ್ಧತೆಗೆ ಮುರುಳಿ ಮೇಷ್ಟ್ರು ಬೆಸ್ಟ್ ಜೋಡಿ. ಆದರೆ ಇಬ್ಬರು ಪ್ರೀತಿ ಹೇಳಿಕೊಳ್ಳುವುದಕ್ಕೆ ಒದ್ದಾಡುತ್ತಿದ್ದಾರೆ. ಆದರೆ ಈಗ ಸಹನಾಳಿಗೆ ಗಂಡಿನ ಕಡೆಯವರು ಬರುತ್ತಿದ್ದಾರೆ ಎಂಬ ಕಾರಣಕ್ಕೆ ಮುರುಳಿ ಮೇಷ್ಟ್ರೇ ಧೈರ್ಯ ಮಾಡಿ ಪ್ರೀತಿ ಹೇಳಿಕೊಳ್ಳಲು ಹೊರಟಿದ್ದಾರೆ. ಅದಕ್ಕೆಂದೇ ಪತ್ರವೊಂದನ್ನು ಬರೆದುಕೊಟ್ಟಿದ್ದಾರೆ. ಈ ಪತ್ರದಿಂದ ಏನೆಲ್ಲಾ ಎಡವಟ್ಟಾಗಿ ಬಿಡುತ್ತೋ ಎಂಬುದು ಪುಟ್ಟಕ್ಕನ ಫ್ರಾನ್ಸ್‌ಗೆ ಟೆನ್ಶನ್ ಆಗಿದೆ.

ಮುರುಳಿ-ಸಹನಾ ವಿಚಾರ ಕಂಠಿ-ಸ್ನೇಹಾಗೆ ತಿಳಿಯುತ್ತಾ?
ಸಂಜೆ 4 ಗಂಟೆಗೆ ಗುಡ್ಡದ ಮೇಲಿರುವ ದೇವಸ್ಥಾನದ ಬಳಿ ಬನ್ನಿ. ನಿಮ್ಮ ಬಳಿ ಏನನ್ನೋ ಹೇಳಬೇಕು ಎಂದು ಪತ್ರದಲ್ಲಿ ಬರೆದು ಮುರುಳಿ ಮೇಷ್ಟ್ರು ಸಹನಾಗೆ ಕೊಟ್ಟಿದ್ದಾರೆ. ಅದನ್ನ ಓದಿ ಮನಸ್ಸಲ್ಲಿಯೇ ಖುಷಿಪಟ್ಟಿದ್ದಾಳೆ ಸಹನಾ. ಇದೇ ಸಮಯಕ್ಕೆ ಸ್ನೇಹಾ ಮಾತಾಡಿಸಿದಾಗ ಹೆದರಿಕೊಂಡು ಊಟದ ಪಾತ್ರೆಯೊಳಕ್ಕೆ ಪತ್ರ ಬಿದ್ದರು ಗಮನ ಕೊಡದೆ ಹಾಗೇ ನಡೆದುಬಿಟ್ಟಿದ್ದಾಳೆ. ಇದೇ ಪತ್ರವಿರುವ ಊಟವನ್ನು ಸ್ನೇಹಾ ಕಂಠಿಗೆ ಬಡಿಸಿದ್ದಾಳೆ. ಆ ಪತ್ರ ನೋಡಿದ ಕಂಠಿ ಸ್ನೇಹಾನೇ ಕೊಟ್ಟಿದ್ದಾಳೆ, ಪ್ರೀತಿ ಹೇಳಿಕೊಳ್ಳುವುದಕ್ಕೆ ಕರೆದಿದ್ದಾಳೆ ಎಂದುಕೊಂಡಿದ್ದಾನೆ. ಸರಿ ಸಂಜೆ ಆಯ್ತು, 4 ರಷ್ಟರೊಳಗೆ ಅಲ್ಲಿ ಇರಬೇಕು ಎಂದು ಹೊರಟವ, ಲೆಟರ್ ಅನ್ನು ತನ್ನ ಜೇಬಿನಿಂದ ನೆಲಕ್ಕೆ ಬಿದ್ದಿದ್ದನ್ನು ಗಮನಿಸದೇ ಹೊರಟಿದ್ದಾನೆ. ಇದೀಗ ಆ ಪತ್ರ ಸ್ನೇಹಾಳಿಗೂ ಸಿಗಬಹುದು. ಶ್ರೀನೇ ಬರೆದಿರುವುದು ಎಂದು ಭಾವಿಸಿ, ನನ್ನನ್ಯಾಕೆ ಕರೆದ ಎಂದು ಅದೇ ಜಾಗಕ್ಕೆ ಹೋದರೂ ಹೋಗಬಹುದು. ಇಲ್ಲಿ ಟ್ವಿಸ್ಟ್ ಸಿಗಬಹುದು.

ಸಹನಾಳ ಪ್ರೀತಿಗೆ ಪುಟ್ಟಕ್ಕನ ಆಶೀರ್ವಾದ
ಪುಟ್ಟಕ್ಕನಿಗೆ ಮೂರು ಮಕ್ಕಳನ್ನು ಕಂಡರೂ ಪ್ರೀತಿ, ಕಾಳಜಿ ಇದ್ದೆ ಇದೆ. ಆದರೆ ಸಹನಾ ಮೇಲೆ ಕೊಂಚ ಹೆಚ್ಚು ಪ್ರೀತಿ. ಯಾಕೆಂದರೆ ಸಹನಾ ಅವ್ವನ ಕಷ್ಟಗಳಿಗೆ ಜೊತೆಯಾದವಳು, ತನ್ನೆಲ್ಲಾ ಸಂತಸ, ಖುಷಿ, ಓದು ಬಿಟ್ಟು ಅವ್ವನ ಜೊತೆಗೆ ಮೆಸ್ ಒಳಗೆ ಸೌಟು ಹಿಡಿದವಳು. ಹೀಗಾಗಿ ಆ ಮುಗ್ಧತೆಯನ್ನು ಪುಟ್ಟಕ್ಕ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾಳೆ. ಹೀಗಾಗಿಯೇ ಸಹನಾ ಏನೇ ಕೇಳಿದರು ಇಲ್ಲ ಎನ್ನಲ್ಲ. ಈಗ ಸಹನಾ ಸಿಕ್ಕಾಪಟ್ಟೆ ಗೊಂದಲದಲ್ಲಿದ್ದಾಳೆ. ಮುರುಳಿ ಮೇಷ್ಟ್ರು ಕರೆದಿದ್ದಾರಲ್ಲ ಹೋಗುವುದಾ ಬೇಡವಾ ಎಂದು ಅರಿಶಿನ ಮತ್ತು ಕುಂಕುಮ ಪಾಕೇಟ್ ಮಾಡಿ ದೇವರ ಮುಂದೆ ಇಟ್ಟಿದ್ದಾಳೆ. ಅದೇ ಸಮಯಕ್ಕೆ ಬಂದ ಪುಟ್ಟಕ್ಕನ ಬಳಿಯೇ ಅದರಲ್ಲಿ ಒಂದನ್ನು ತೆಗೆಯಲು ಹೇಳಿದ್ದಾಳೆ. ಅರಿಶಿನ ಬಂದರೆ ಅವ್ವ ಹೇಳಿದ ಹುಡುಗನನ್ನೇ ಮದುವೆಯಾಗುವುದು ಕುಂಕುಮ ಬಂದರೆ ಮುರುಳಿ ಮೇಷ್ಟ್ರನ್ನು ಭೇಟಿ ಮಾಡಲು ಮನಸ್ಸಲ್ಲಿಯೇ ತಯಾರಿ ನಡೆಸಿದ್ದಾಳೆ ಸಹನಾ.
ಸ್ನೇಹಾ ಕಣ್ಣಿಗೆ ಪ್ರೇಮಿಗಳು ಬಿದ್ದರೆ ಏನಾಗುತ್ತೆ?
ಸ್ನೇಹಾ ಸ್ವಲ್ಪ ಪ್ರಾಕ್ಟಿಕಲ್ ಹುಡುಗಿ. ಅಷ್ಟು ಸುಲಭದಲ್ಲಿ ಯಾರನ್ನು ನಂಬುವುದಿಲ್ಲ. ಹಾಗೇ ಪ್ರೀತಿಯಲ್ಲಿಯೂ ಬೀಳುವುದು ಅಷ್ಟು ಸುಲಭವಲ್ಲ. ಆದರೆ ಸಹನಾಗೆ ಪ್ರೀತಿ ಆಗಿದೆ. ಪತ್ರದ ಸ್ಥಳಕ್ಕೆ ಹೋದರೆ ಅಲ್ಲಿ ಮುರುಳಿ ಮೇಷ್ಟ್ರು ಮತ್ತು ಸಹನಾಳನ್ನು ನೋಡಿದರೆ ಸ್ನೇಹಾ ಗಲಾಟೆ ಮಾಡಬಹುದು. ಯಾಕೆಂದರೆ ಸುಮಾ ಗೆಲುವು ಸಾಧಿಸಿದಾಗ ಮುರುಳಿ ಮೇಷ್ಟ್ರು ಮನೆಗೆ ಬಂದಾಗಲೇ ಸ್ನೇಹಾಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಇನ್ನು ಮುರುಳಿಯ ನಿಜವಾದ ಪ್ರೀತಿಯನ್ನು ಅನುಮಾನಿಸಿ, ನಮ್ಮ ಅಕ್ಕನ ತಲೆಯನ್ನು ಕೆಡಿಸುತ್ತಿದ್ದಾರೆ ಎಂದು ಜೋರು ಗಲಾಟೆ ಮಾಡುವ ಸಾಧ್ಯತೆಯೂ ಇದೆ. ಆದರೆ ಆದಷ್ಟು ಬೇಗ ಮುರುಳಿ ಮೇಷ್ಟ್ರು ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯ.


Click it and Unblock the Notifications











