ಪುಟ್ಟಕ್ಕನ ಮಕ್ಕಳು: ದೊರೆ ಅರಸಿ ಬಂದ ಸ್ನೇಹಾಗೆ ಕಂಠಿ ನೋಡಿ ಶಾಕ್..!

By ಎಸ್ ಸುಮಂತ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪಾಪ ಪ್ರೇಮಿಗಳು ಪ್ರೀತಿ ಹೇಳಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಹುಡುಗಿ ಕೈಮೀರಿ ಹೋಗುವ ಮೊದಲು ಪ್ರೀತಿ ಹೇಳಿಕೊಳ್ಳಲೇಬೇಕೆಂದು ಮುರುಳಿ ಮೇಷ್ಟ್ರು ತೀರ್ಮಾನ ಮಾಡಿದ್ದಾರೆ. ಅದಕ್ಕೆಂದೇ ಪತ್ರವನ್ನು ಬರೆದು ಸಹನಾಳ ಭೇಟಿಗಾಗಿ ಕಾಯುತ್ತಿದ್ದಾನೆ. ಆದರೆ ಅದ್ಯಾಕೋ ಏನೋ ಸಹನಾ ಮತ್ತು ಮುರುಳಿ ಮೇಷ್ಟ್ರ ಪ್ರೀತಿಗೆ ನೂರೆಂಟು ವಿಘ್ನವೆಂಬಂತೆ ಆಗಿದೆ. ಯಾರೂ ಇಲ್ಲದ ಜಾಗಕ್ಕೆ ಬಂದರೆ ಅಲ್ಲಿಯೇ ಎಲ್ಲರೂ ಬಂದು ನಿಂತಿದ್ದಾರೆ.

ಸಹನಾಗೆ ಈಗ ಧೈರ್ಯ ತೋರಿಸುವ ಸಮಯ. ಅದೇ ಮುಗ್ಧತೆಯಿಂದ ಇದ್ದರೆ ಆಕೆಯ ಪ್ರೀತಿ ಚಿಗುರಿನಲ್ಲೇ ಮೊಟಕುಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಅಮ್ಮನ ಆಶೀರ್ವಾದ ಪಡೆದೆ ಸಹನಾ ಕೂಡ ಹೊರಟಿದ್ದಾಳೆ. ಆದರೆ ಪ್ರೀತಿ ಹೇಳಿಕೊಳ್ಳುವ ಹಾದಿ ಅಷ್ಟು ಸುಗಮವಾಗಿಲ್ಲ. ಕಲ್ಲು ಮುಳ್ಳಿನ ಹಾದಿ ಇದ್ದರೂ ಹೇಗೋ ನಡೆದು ಬಿಡಬಹುದು. ಆದರೆ ಇಲ್ಲಿ ಭಯಬೀಳಿಸುವ ಜನರೇ ತುಂಬಿದ್ದಾರೆ.

ಕಂಠಿ ಗ್ಯಾಂಗ್ ಕಂಡು ಕುಡುಕರು ಎಂದುಕೊಂಡ ಮುರುಳಿ

ಕಂಠಿ ಗ್ಯಾಂಗ್ ಕಂಡು ಕುಡುಕರು ಎಂದುಕೊಂಡ ಮುರುಳಿ

ಸಹನಾಳನ್ನು ಬಾವಿಕಟ್ಟೆ ಬಳಿ ಬರಲು ಹೇಳಿ ಮುರುಳಿ ಮೇಷ್ಟ್ರು ಅಲ್ಲಿ ಹೋಗಿ ಕಾಯುತ್ತಾ ನಿಂತಿದ್ದಾರೆ. ಆದರೆ ಅದಕ್ಕೂ ಮುನ್ನವೇ ಕಂಠಿ ಅಂಡ್ ಗ್ಯಾಂಗ್ ಕೂಡ ಅಲ್ಲಿಯೇ ಬಂದು ನಿಂತಿದೆ. ಇದನ್ನು ಗಮನಿಸಿದ ಮೇಷ್ಟ್ರು ಈ ಕುಡುಕರೆಲ್ಲ ಇಲ್ಲಿ ಯಾಕೆ ಬಂದಿದ್ದಾರೆ. ಇವರೆಲ್ಲಾ ಇಲ್ಲಿ ಇರುತ್ತಾರೆ ಎಂದಿದ್ದರೆ, ನಮ್ಮ ಹುಡುಗಿಯನ್ನು ಇಲ್ಲಿ ಬರುವುದಕ್ಕೆ ಹೇಳುತ್ತಿರಲಿಲ್ಲವಲ್ಲ ಎಂದು ಮನದಲ್ಲಿಯೇ ಶಪಿಸುವಾಗಲೇ ಇವರು ಕೂಡ ಯಾರನ್ನೋ ಕಾಯುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಆ ಕುಡುಕರ ಗ್ಯಾಂಗ್ ಬಂದಿರುವುದು ಮೇಷ್ಟ್ರು ಕೊಟ್ಟ ಪತ್ರದಿಂದಲೇ ಎಂಬುದು ಅವರಿಗೆ ತಿಳಿದಿಲ್ಲ.

ಸ್ನೇಹಾಗೆ ಪ್ರಪೋಸ್ ಮಾಡಿಯೇ ಬಿಡುತ್ತಾನಾ ಕಂಠಿ?

ಸ್ನೇಹಾಗೆ ಪ್ರಪೋಸ್ ಮಾಡಿಯೇ ಬಿಡುತ್ತಾನಾ ಕಂಠಿ?

ಹೀಗೆ ಎಲ್ಲಾ ಟೆನ್ಶನ್‌ನಿಂದ ಕಾಯುತ್ತಿರುವಾಗಲೇ ಒಬ್ಬರ ಆಗಮನವಾಗಿದೆ. ಅದು ಸ್ನೇಹಾ. ಸ್ನೇಹಾ ಯಾಕೆ ಇಲ್ಲಿಗೆ ಬಂದರು ಎಂಬ ಗೊಂದಲ ಮುರುಳಿ ಮೇಷ್ಟ್ರದ್ದು. ಸ್ನೇಹಾಳನ್ನು ನಮ್ಮ ಹುಡುಗಿ ಜೊತೆಗೆ ಕರೆದುಕೊಂಡು ಬಂದು ಬಿಟ್ಟಳಾ? ಇವಳ ಮುಂದೆ ಪ್ರಪೋಸ್ ಮಾಡೋದು ಹೇಗಪ್ಪ ಎಂದು ಕೊರಗುತ್ತಿರುವಾಗಲೇ, ಎತ್ತ ನೋಡಿದರು ಸಹನಾ ಕಾಣದೆ ಇರುವುದು ಬೇಸರ ತರಿಸಿದೆ. ಇನ್ನು ಕಂಠಿ ಫುಲ್ ಖುಷಿಯಾಗಿದ್ದಾನೆ. ಪತ್ರ ಕೊಟ್ಟಂತೆ, ಸ್ನೇಹಾ ಇದೆ ಜಾಗಕ್ಕೆ ಹೇಳಿದ ಸಮಯಕ್ಕೆ ಬಂದಿದ್ದಾಳೆ ಎಂದು ಖುಷಿ ಪಟ್ಟಿದ್ದಾನೆ.

ದೊರೆಗಾಗಿ ಬಂದ ಸ್ನೇಹಾ ಕಂಠಿ ನೋಡು ಶಾಕ್

ದೊರೆಗಾಗಿ ಬಂದ ಸ್ನೇಹಾ ಕಂಠಿ ನೋಡು ಶಾಕ್

ಸ್ನೇಹಾಳನ್ನು ದೊರೆ ತುಂಬಾ ಡಿಸ್ಟರ್ಬ್ ಮಾಡಿದ್ದಾನೆ. ಮರೆಯಲ್ಲಿಯೇ ನಿಂತು ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದಾನೆ. ಅವ್ವ ಮತ್ತು ಸಹನಾ ಪಂಚಾಯತಿ ಕಟ ಕಟೆಯಲ್ಲಿ ನಿಂತಾಗ ನ್ಯಾಯ ಒದಗಿಸಿದ್ದು ಇದೇ ದೊರೆ. ಎರಡು ಸಾವಿರ ಕೊಟ್ಟು ಒಂದು ರೋಸ್ ಕೊಟ್ಟಿದ್ದು ಇದೇ ದೊರೆ. ಹಿಂದೆ ಹಿಂದೆ ತಿರುಗಿ, ಕಣ್ಣಿಗೆ ಕಾಣದೆ, ಮೆಸೇಜ್‌ನಲ್ಲಿಯೇ ಪ್ರೀತಿ ಹುಟ್ಟಿಸುತ್ತಾ ಇರುತ್ತಾನೆ. ಇದೆಲ್ಲವೂ ಸ್ನೇಹಾಳ ಮನಸ್ಸನ್ನು ಕೊಂಚ ಅಲ್ಲೋಲ ಕಲ್ಲೋಲ ಮಾಡಿದೆ. ಇದೇ ಕಾರಣಕ್ಕೆ ದೊರೆಯನ್ನು ನೋಡಬೇಕು ಎಂದುಕೊಂಡು ಸ್ನೇಹಾ ಮನಸ್ಸು ಚಡಪಡಿಸುತ್ತಿದೆ. ಈ ರೀತಿ ಸರ್ಪೈಸ್ ಕೊಡುವುದು ದೊರೆ ಎಂದೇ ಭಾವಿಸಿದ್ದಾಳೆ ಸ್ನೇಹಾ. ಹೀಗಾಗಿ ಮುರುಳಿ ಮೇಷ್ಟ್ರು ಸಹನಾಳಿಗಾಗಿ ಬರೆದಿದ್ದ, ಸಂಜೆ ನಾಲ್ಕು ಗಂಟೆಗೆ ಬಾವಿ ಕಟ್ಟೆ ಹತ್ರ ಬಂದುಬಿಡು ಎಂಬ ಪತ್ರವನ್ನು ದೊರೆಯೇ ಬರೆದಿದ್ದಾನೆ ಎಂದುಕೊಂಡಿದ್ದಾಳೆ. ಅದಕ್ಕಾಗಿಯೇ ಸಮಯ ಸ್ವಲ್ಪವೂ ವೇಸ್ಟ್ ಮಾಡದೆ ಅದೇ ಸಮಯಕ್ಕೆ ಬಾವಿಕಟ್ಟೆ ಬಳಿ ಹೋಗಿದ್ದಾಳೆ. ಸ್ನೇಹಾಳ ಮುಖದ ಭಾವದಲ್ಲಿಯೇ ದೊರೆಗಾಗಿ ಬಂದಿರುವುದು ಎಂಬುದು ಅರ್ಥವಾಗುತ್ತಿದೆ.

ಸಹನಾ ಪ್ರೀತಿಗೆ ಕಲ್ಲು ಹಾಕಿದ ಕಂಠಿ

ಹಾಗೋ ಹೀಗೋ ಪಾಪ ಮುಗ್ಧ ಜೀವಗಳು ಪ್ರೀತಿ ಹೇಳಿಕೊಳ್ಳಲು ರೆಡಿಯಾಗಿದ್ದವು. ಆ ಪತ್ರವೊಂದು ಹರಾಜು ಆಗಿಲ್ಲವಾಗಿದ್ದರೆ ಇಂದು ಒಂದೊಳ್ಳೆ ಲವ್ ಪ್ರಪೋಸಲ್ ನೋಡುವ ಭಾಗ್ಯ ವೀಕ್ಷಕರದ್ದಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಯಾರ ಯಾರ ಕೈಗೋ ಸೇರಿ, ಇಬ್ಬರೇ ಇರಬೇಕಾದ ಸ್ಥಳದಲ್ಲಿ ಐದಾರು ಜನ ಸೇರಿದ್ದಾರೆ. ಈಗಾಗಲೇ ಮುರುಳಿ ಮೇಷ್ಟ್ರು ಇವರನ್ನೆಲ್ಲಾ ನೋಡಿ ಅವಿತು ಕುಳಿತಿದ್ದಾರೆ. ಇನ್ನು ಸಹನಾ ಏನಾದರೂ ಬಾವಿಕಟ್ಟೆ ಬಳಿ ಸ್ನೇಹಾಳನ್ನು ನೋಡಿದರೆ ಮುಗೀತು. ರನ್ನಿಂಗ್ ರೇಸ್‌ನಲ್ಲಿ ಸ್ಪರ್ಧೆಗೆ ಇಳಿದವರಂತೆ, ಉಟ್ಟಿರುವುದು ಸೀರೆಯನ್ನು ಎಂಬುದನ್ನು ನೆನಪಿಟ್ಟುಕೊಳ್ಳದೆ ಓಡಿ ಹೋಗುತ್ತಾಳೆ. ಈ ಮೂಲಕ ಕಂಠಿ ತನ್ನ ಪ್ರೀತಿ ಎಕ್ಸ್‌ಪ್ರೆಸ್‌ ಮಾಡುವ ಸಾಹಸಕ್ಕೆ ಬಿದ್ದು, ಅಮಾಯಕರ ಪ್ರೀತಿಯನ್ನು ಬಲಿ ಪಡೆಯುತ್ತಿದ್ದಾನೆ. ಒಂದು ವೇಳೆ ಇಂದು ಪ್ರೀತಿ ಹೇಳಿಕೊಳ್ಳದೆ ಹೋದರೆ ನಾಳೆ ಹೊಸ ಸಂಬಂಧ ಸಹನಾಳ ಬದುಕಿಗೆ ಎಂಟ್ರಿಯಾಗುವ ಸಾಧ್ಯತೆ ಇದೆ.

More from Filmibeat

English summary
Zee Kannada Serial Puttakkana Makkalu Written Update On June 23rd Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X