Don't Miss!
- News
ಮಂಗಳೂರು: ಬ್ಯಾನರ್ನಲ್ಲಿ ಗೋಡ್ಸೆ ಫೋಟೋ ಪ್ರತ್ಯಕ್ಷ, ಮತ್ತೊಂದು ವಿವಾದ
- Sports
ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!
- Technology
ಇನ್ಫಿನಿಕ್ಸ್ ನೋಟ್ 12 ಪ್ರೊ 4G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಫಿಕ್ಸ್!
- Lifestyle
ನಿಮ್ಮ ಲೈಫ್ ಪಾರ್ಟನರ್ ಹತ್ರ ಈ ವಿಷಯಗಳನ್ನು ಹೇಳಲೇಬೇಡಿ
- Finance
ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ ಯೋಜನೆ ಇಕೆವೈಸಿ ಮತ್ತೆ ವಿಸ್ತರಣೆ
- Automobiles
ಸ್ಟೈಲಿಶ್ ಲುಕ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ವಿಶೇಷತೆಗಳು
- Education
Online Courses After Class 12 : ಆನ್ಲೈನ್ ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಗಳ ಪಟ್ಟಿ
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಪುಟ್ಟಕ್ಕನ ಮಕ್ಕಳು: ರಾಜೇಶ್ವರಿಗೆ ಸ್ನೇಹಾ ಕೊಟ್ಟ ಗೌರವಕ್ಕೆ ಗೋಪಾಲನ ಮುಖದಲ್ಲಿ ನಗು..!
ಪುಟ್ಟಕ್ಕ ಮತ್ತು ಪುಟ್ಟಕ್ಕನ ಮಕ್ಕಳನ್ನು ಹೇಗಾದರೂ ಮಾಡಿ ಬೀದಿಗೆ ತರಲೇಬೇಕೆಂಬುದು ರಾಜೇಶ್ವರಿಯ ಹಠ. ಆದರೆ ರಾಜೇಶ್ವರಿಯ ಈ ಕೆಟ್ಟು ಹಠ ಅಷ್ಟು ಸುಲಭವಾಗಿ ಕೈಗೂಡುತ್ತಿಲ್ಲ. ಮೊದ ಮೊದಲಿಗೆ ಎಲ್ಲವೂ ರಾಜೇಶ್ವರಿ ಪರವೇ ಇದ್ದರೂ, ಬಳಿಕ ಪುಟ್ಟಕ್ಕನ ಮುಗ್ಧತೆ, ಪುಟ್ಟಕ್ಕನ ಒಳ್ಳೆಯತನಕ್ಕೆ ಗೆಲುವು ಸಿಗುತ್ತಿದೆ. ಎಷ್ಟು ಸಲ ಅವಮಾನವಾದರೂ ಅದನ್ನು ತಲೆಗೆ ಹಾಕಿಕೊಳ್ಳದ ರಾಜೇಶ್ವರಿ ಮತ್ತೆ ಮತ್ತೆ ಪ್ರಯತ್ನ ಪಡುತ್ತಲೇ ಇದ್ದಾಳೆ.
ಸದ್ಯ ಪುಟ್ಟಕ್ಕನ ಮನೆಯಲ್ಲಿ ಸಹನಾ ಮದುವೆ ಮಾಡಬೇಕೆಂಬ ವಿಚಾರ ಗಂಭೀರವಾಗಿ ತಯಾರಿ ನಡೆಯುತ್ತಿದೆ. ಇದಕ್ಕೆ ತಂದೆ ಎನಿಸಿಕೊಂಡವ ಬರಲೇಬೇಕು ಎಂಬುದು ಗಂಡಿನ ಕಡೆಯವರ ಬೇಡಿಕೆ. ಮಕ್ಕಳು ಒಪ್ಪದೆ ಹೋದರು ಹಾಗೋ ಹೀಗೋ ಎಮೋಷನಲ್ ಡೈಲಾಗ್ ಹೊಡೆದು ಪುಟ್ಟಕ್ಕ ಕೂಡ ಗೋಪಾಲ ಬರಲು ಮಕ್ಕಳಿಗೆ ಒಪ್ಪಿಸಿದ್ದಾರೆ. ಆದರೆ ಇದರಲ್ಲೂ ಕಿತಾಪತಿ ತೆಗೆದು ರಾಜೇಶ್ವರಿ ಅವಮಾನ ಎದುರಿಸುವಂತಾಗಿದೆ.
ರಾಘವೇಂದ್ರ
ರಾಜ್ಕುಮಾರ್
ನಿರ್ಮಾಣದಲ್ಲಿ
'ವಿಜಯದಶಮಿ'
ಧಾರಾವಾಹಿ:
ಯಾವ
ಸಿನಿಮಾಗೂ
ಕಮ್ಮಿಯಿಲ್ಲ!

ಪ್ಲ್ಯಾನ್ ಮಾಡಿಕೊಂಡು ಬಂದ ರಾಜೇಶ್ವರಿ
ಪುಟ್ಟಕ್ಕ ಮನೆ, ಮನಸ್ಸು ಬರೆದುಕೊಡ್ತೀನಿ, ಸಹನಾಳ ಮದುವೆಯನ್ನು ನಿಂತು ಮಾಡು ಎಂದಿದ್ದೆ ತಡ, ರಾಜೇಶ್ವರಿಯ ಸಂತಸಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಅದೇ ಖುಷಿಯಲ್ಲಿ ಪುಟ್ಟಕ್ಕನ ಮನೆಗೆ ಹೊಸ ಬಟ್ಟೆಯ ಸಮೇತ ಬಂದಿದ್ದಾಳೆ. ಪಾಪ ಪುಟ್ಟಕ್ಕ ಹೆದರಿಕೊಂಡೆ ಮಾತನಾಡಿಸುತ್ತಿದ್ದಾರೆ. ರಾಜವ್ವ ಇಲ್ಲಿಂದ ಹೊರಟು ಬಿಡು ಸ್ನೇಹಾ ಬಂದರೆ ಚೆನ್ನಾಗಿರುವುದಿಲ್ಲ. ಮದುವೆ ಮಾತುಕತೆಯ ದಿನ ಬರುವಂತೆ ಎಂದರೆ ಕಿತಾಪತಿ ಮಾಡುವುದಕ್ಕೆ ಬಂದವಳು ಅದೇಗೆ ಹೊರಡುತ್ತಾಳೆ. ಹಾಗೇನು ಇಲ್ಲ ಪುಟ್ಟಕ್ಕ ನಾವೇನು ಕಿತ್ತಾಡುವುದಕ್ಕೆ ಬಂದಿದ್ದೀವಾ. ಇಲ್ಲ ತಾನೇ. ಮಕ್ಕಳು ಬರ್ಲಿ ಎಲ್ಲರಿಗೂ ಹೇಳಿನೇ ಹೋಗುತ್ತೇವೆ ಎನ್ನುತ್ತಿದ್ದಾಳೆ.
DKD:
ಶಶಾಂಕ್
-
ತ್ರಿಶಾ
ಪರ್ಫಾಮೆನ್ಸ್ಗೆ
ಬೆಚ್ಚಿಬಿದ್ದ
ಶಿವಣ್ಣ,
ಚಿನ್ನಿ
ಮಾಸ್ಟರ್,
ರಕ್ಷಿತಾ!

ರಾಜವ್ವನಿಗೆ 40 ಸಾವಿರದ ಬಟ್ಟೆ ಬೇಕಂತೆ
ಗಂಡಿನ ಕಡೆಯವರು ಬಂದಾಗ ಬನ್ನಿ ಎಂದದ್ದು, ಗೋಪಾಲನಿಗೆ ಮಾತ್ರ. ಆದರೆ ರಾಜೇಶ್ವರಿ ನಾನು ಬರುತ್ತೇನೆ ಎಂದು ಹೊರಟು ನಿಂತಿದ್ದಾಳೆ. ಖುಷಿ ಖುಷಿಯಾಗಿಯೇ ಮದುವೆ ಮಾಡಿಕೊಡೋಣಾ ಎಂದು ನಿರ್ಧರಿಸಿದ್ದಾಳೆ. ಅದಕ್ಕೆಂದೆ ಮನೆಗೆ ಬಂದ ರಾಜೇಶ್ವರಿ ಪುಟ್ಟಕ್ಕನಿಗೆ ಬಿಗ್ ಶಾಕ್ ಕೊಟ್ಟಿದ್ದಾಳೆ. ಒಂದು ರೇಷ್ಮೇ ಸೀರೆ, ಪಂಚೆ ಶರ್ಟ ಅನ್ನು ತಂದಿದ್ದಾಳೆ. ನೋಡಿದವರಿಗೆಲ್ಲಾ ಇದು ಸಹನಾಗೆ ತಂದಿರಬೇಕು ಎನಿಸಿತು. ಆದರೆ ಅದನ್ನು ತಂದಿದ್ದು, ತನಗೆ ಹಾಗೂ ತನ್ನ ಗಂಡನಿಗೆ. ಪುಟ್ಟಕ್ಕ ಅದನ್ನು ಕೊಟ್ಟು ಶಾಸ್ತ್ರಬದ್ಧವಾಗಿ ಕರೆಯಬೇಕಂತೆ. ಅಷ್ಟೇ ಅಲ್ಲ. ಅದರ ಶಾಪಿಂಗ್ ಹಣವನ್ನು ಸಂಪೂರ್ಣವಾಗಿ ಕೊಡಬೇಕಂತೆ. ಇದು ರಾಜೇಶ್ವರಿಯ ಡಿಮ್ಯಾಂಡ್.

ರಾಜೇಶ್ವರಿಯ ಆಗಮನದಿಂದ ಸ್ನೇಹಾ ಕೆಂಡಾಮಂಡಲ
ಒಂದು ಲೆಟರ್ನಿಂದ ಪ್ರೀತಿ ಮಾಡುವವರೆಲ್ಲಾ ಒಟ್ಟಿಗೆ ಸೇರಿದ್ದರು. ಯಾರು ಯಾರಿಗೂ ಪ್ರಪೋಸ್ ಮಾಡುವುದಕ್ಕೆ ಆಗಲಿಲ್ಲ. ದೊರೆ ಎಂದುಕೊಂಡು ಸ್ನೇಹಾ ಬಂದರೆ, ಸ್ನೇಹಾ ಪ್ರಪೋಸ್ ಮಾಡುತ್ತಾಳೆ ಎಂಬ ಆಸೆಯಿಂದ ಕಂಠಿ ಬಂದಿದ್ದ. ಆದರೆ ರಿಯಲ್ ಆಗಿ, ಪ್ರೀತಿ ಹೇಳಿಕೊಳ್ಳಲು ಬಂದಿದ್ದ ಸಹನಾ ಮತ್ತು ಮುರುಳಿ ಮೇಷ್ಟ್ರಿಗೆ ಈ ಎಲ್ಲರ ಆಗಮನದಿಂದ ಪ್ರೀತಿ ಹೇಳಿಕೊಳ್ಳಲು ಆಗಲೇ ಇಲ್ಲ. ಆದರೆ ಕಂಠಿ ಇನ್ನೇನು ಪ್ರೀತಿ ಹೇಳಿಕೊಳ್ಳಬೇಕು ಎನ್ನುವಾಗಲೇ ಚಂದ್ರು ಅಲ್ಲಿಗೆ ಬಂದಾಯ್ತು. ವಸು ಇಲ್ಲ ಎಂಬುದನ್ನು ಕೇಳಿ ಎಲ್ಲರೂ ಗಾಬರಿಯಾಗಿದ್ದರು. ವಸುನಾ ಹುಡುಕಬೇಕು ಎನ್ನುವಷ್ಟರಲ್ಲಿ ಮನೆಗೆ ರಾಜೇಶ್ವರಿ ಬಂದಿದ್ದು ಗೊತ್ತಾದ ಸ್ನೇಹಾ ಅಲ್ಲಿಂದ ಅಕ್ಕ-ತಂಗಿಯನ್ನು ಕರೆದುಕೊಂಡು ಹೊರಟಳು. ದಾರಿ ಮಧ್ಯೆ ಸಿಕ್ಕ ವಸು ಬಳಿ ಸುಮಾಳನ್ನು ಬಿಟ್ಟು ಸ್ನೇಹಾ ಮತ್ತು ಸಹನ ಮನೆಯ ಹಾದಿ ಹಿಡಿದರು. ಅಲ್ಲಿ ರಾಜೇಶ್ವರಿಯನ್ನು ಕಂಡು ಕೆಂಡಾಮಂಡಲಳಾಗಿದ್ದ ಸ್ನೇಹಾಳನ್ನು ಸಹನಾಳೇ ಸಮಾಧಾನ ಮಾಡಿದ್ದಳು.
ತಾಯಿ
ಆಗಿಲ್ಲ
ಏಕೆ
ಎಂದವರಿಗೆ
ತಕ್ಕ
ಉತ್ತರ
ಕೊಟ್ಟ
ನಟಿ
ಸ್ನೇಹಾ ಕೊಟ್ಟ ಗೌರವಕ್ಕೆ ಗೋಪಾಲ ಹ್ಯಾಪಿ?
ಮನೆಗೆ ಬಂದವರಿಗೆ ಗೌರವಯುತವಾಗಿ ಪುಟ್ಟಕ್ಕ ನೀರು ಕೊಟ್ಟು ಸತ್ಕರಿಸಿದರು. ಸ್ನೇಹಾ ಬರುವುದಕ್ಕೂ ಮುನ್ನ ಜಾಗ ಖಾಲಿ ಮಾಡಿ ಅಂತಾನು ಹೇಳಿದರು. ಆದರೆ ಪುಟ್ಟಕ್ಕನ ಮಾತನ್ನು ರಾಜವ್ವ ಕೇಳಬೇಕಲ್ಲವೆ. ಸ್ನೇಹಾ ಕೂಡ ಅದೇ ಸಮಯಕ್ಕೆ ಬಂದಳು. ಓ ಎರಡನೇ ಮಗಳು ಬಂದಳು ಎಂದು ಅಣಕಿಸಿದಳು. ಸ್ನೇಹಾ ಸೀದಾ ಬಂದವಳೆ ಅವ್ವನ ಬಳಿಯೇ ಯಾಕಂತೆ ಬಂದಿರುವುದು ಎಂದು ಕೇಳಿದಳು. ಸುಮ್ಮನೆ ಕೂರದ ರಾಜೇಶ್ವರಿ ಏನೇ ಎರಡನೆಯವಳೇ, ಮನೆಗೆ ಬಂದವರಿಗೆ ಹೇಗೆ ಗೌರವ ಕೊಡಬೇಕು ಅಂತ ಗೊತ್ತಿಲ್ವಾ ಅನ್ನೋದಾ. ಅದಕ್ಕೆ ಸ್ನೇಹಾ ನಮಸ್ಕಾರ ಎರಡನೇಯವಳೆ ಅಂದಿದ್ದೆ ತಡ ಗೋಪಾಲನಿಗೆ ನಗು ತಡೆಯೋದಕ್ಕೆ ಆಗಿಲ್ಲ. ಮುಖದ ಮೇಲೆ ಕೈ ಹಿಡಿದುಕೊಂಡು, ಮೀಸೆ ಮರೆಯಲ್ಲಿಯೇ ನಗುತ್ತಿದ್ದಾನೆ.